ಸಿಟಿ ರವಿ
CT Ravi: ಲಕ್ಷ ಜಮೀರ್ ಅಹ್ಮದ್ ಬರಲಿ ಷರಿಯಾ ನಡೆಯೋಕೆ ಬಿಡಲ್ಲ. ರಾಜ್ಯದಲ್ಲಿ ಸಂವಿಧಾನ ದೊಡ್ಡದಾ? ಅಥವಾ ಷರಿಯಾ ದೊಡ್ಡದಾ? ಆದರೆ ಈಗ ಜಮೀರ್‌ಗೆ ಷರಿಯಾನೇ ದೊಡ್ಡದಾಗಿದೆ.
ಹಾವೇರಿ: ಷರಿಯಾ (Sharia) ಕಾನೂನು ಇಸ್ಲಾಂ (Islam) ಧರ್ಮದ ಕಾನೂನು (Law) ವ್ಯವಸ್ಥೆಯಾಗಿದೆ. ಕುರಾನ್ ಹಾಗೂ ಇಸ್ಲಾಂ ಧರ್ಮದ ಕೇಂದ್ರ ಪಠ್ಯವಾದ ಫತ್ವಾಗಳಿಂದ ವಿಭಾಗಿಸಲಾಗಿದೆ. ಷರಿಯಾ ಪದ್ಧತಿ ವಿರುದ್ಧ ಬಿಜೆಪಿಯಿಂದ ತೀವ್ರ ವಿರೋಧವಿದ್ದು, ಈ ಕುರಿತು ಇಂದು ಮಾಜಿ ಸಚಿವ ಸಿಟಿ ರವಿ ಗುಡುಗಿದ್ದಾರೆ.
ಜಮೀರ್‌ಗೆ ಎಚ್ಚರಿಕೆ ನೀಡಿದ ಸಿಟಿ ರವಿ
ಷರಿಯಾ ಕುರಿತು ಸವಣೂರಿನಲ್ಲಿ ಮಾತನಾಡಿದ ಸಿಟಿ ರವಿ, ಲಕ್ಷ ಜಮೀರ್ ಅಹ್ಮದ್ ಬರಲಿ ಷರಿಯಾ ನಡೆಯೋಕೆ ಬಿಡಲ್ಲ. ರಾಜ್ಯದಲ್ಲಿ ಸಂವಿಧಾನ ದೊಡ್ಡದಾ? ಅಥವಾ ಷರಿಯಾ ದೊಡ್ಡದಾ? ಆದರೆ ಈಗ ಜಮೀರ್‌ಗೆ ಷರಿಯಾನೇ ದೊಡ್ಡದಾಗಿದೆ. ಅದೇನೇ ಆಗಲಿ ನಾನುನ ಮಾತ್ರ ರಾಜ್ಯದಲ್ಲಿ ಷರಿಯಾ ನಡೆಯೋಕೆ ಬಿಡಲ್ಲ. ಲಕ್ಷ ಜಮೀರ್ ಅಹ್ಮದ್ ಬರಲಿ. ಇಲ್ಲಿ ಷರಿಯಾ ನಡೆಯೋಕೆ ನಾನು ಯಾವುದೇ ಕಾರಣಕ್ಕೂ ಬಿಡಲ್ಲ. ಈಗಾಗಲೇ ಕಾಂಗ್ರೆಸ್‌ನಿಂದ ಮಠ, ಮಾನ್ಯಗಳನ್ನು ಕಬಳಿಸೋ ಕೆಲಸ ನಡೆದಿದೆ. ಜಮೀರ್ ನಂತಹ ಮತಾಂಧರನ್ನು ಬೆಳೆಸಿ, ಕೋಮು ಸಂಘರ್ಷ ಹುಟ್ಟು ಹಾಕೋ ಕೆಲಸ ಕಾಂಗ್ರೆಸ್ ಮಾಡ್ತಿದೆ. ರಾಜ್ಯದಲ್ಲಿ ಷರಿಯಾ ಬಂದರೆ ಮತ್ತೊಂದು ಚಲೇಜಾವ್ ಚಳುವಳಿ ಮಾಡಬೇಕಾಗುತ್ತೆ. ಇಡಿ ದೇಶದಿಂದ ಚಲೇಜಾವ್ ಅನ್ನಬೇಕಾಗುತ್ತೆ ಎಂದು ಸಿಟಿ ರವಿ ಕಾಂಗ್ರೆಸ್‌ಗೆ ಹಾಗೂ ಜಮೀರ್ ಅಹ್ಮದ್‌ಗೆ ವಾರ್ನಿಂಗ್ ನೀಡಿದೆ.
ಷರಿಯಾ ಬೇಕಾದವರು ಪಾಕಿಸ್ತಾನಕ್ಕೆ ಹೋಗಿ
ಕೆಲವು ದಿನಗಳ ಹಿಂದೆ ವಿಧಾನಸೌಧದ ಎದುರು ಸಿಟಿ ರವಿ ಷರಿಯಾ ಕುರಿತು ಮಾತನಾಡಿದ್ದರು. ರಾಜ್ಯದಲ್ಲಿ ಷರಿಯಾ ಕಾನೂನು ಇಲ್ಲ. ಇಲ್ಲಿರೋದು ಸಂವಿಧಾನ ಮಾತ್ರ. ಷರಿಯಾ ಕಾನೂನು ಬೇಕು ಅನ್ನುವವರು ಪಾಕಿಸ್ತಾನಕ್ಕೆ ಓಡಿ ಹೋಗಿದ್ದಾರೆ. ಸಂವಿಧಾನ ಬೇಕು ಅಂದ್ರೆ ಮಾತ್ರ ಇಲ್ಲಿರಿ, ಷರಿಯಾ ಬೇಕು ಅಂದ್ರೆ ಪಾಕಿಸ್ತಾನಕ್ಕೆ ಹೋಗಿ. ಸಂವಿಧಾನದ ಪ್ರಕಾರ ಯಾರದ್ದೋ ಆಸ್ತಿಯನ್ನು ನಮ್ಮ ಅಪ್ಪನ ಆಸ್ತಿ, ವಕ್ಫ್ ಬೋರ್ಡ್ ಆಸ್ತಿ ಅಂತ ಹೇಳಲು ಅವಕಾಶ ಇಲ್ಲ. ವಕ್ಫ್ ತನ್ನದು ಅಂತ ಹೇಳಿಕೊಳ್ಳುವ ಆಸ್ತಿ ಬಗ್ಗೆ ಕೂಲಂಕಷ ಪರಿಶೀಲನೆ ಆಗಬೇಕಿದೆ ಎಂದು ಸಿಟಿ ರವಿ ಆಗ್ರಹಿಸಿದ್ದರು.
ಷರಿಯಾ ಕಾನೂನು ಎಂದರೇನು?
ಅಫ್ಘಾನಿಸ್ತಾನದಲ್ಲಿ ತಾಲಿಬಾನ್ ಈ ಹಿಂದೆ ಆಡಳಿತ ನಡೆಸುತ್ತಿದ್ದ ಸಂದರ್ಭದಲ್ಲಿ ಇದೇ ಷರಿಯಾ ಕಾನೂನುಗಳನ್ನು ಪಾಲನೆ ಮಾಡಲಾಗುತ್ತಿತ್ತು. ಈ ಕಾನೂನುಗಳ ಪ್ರಕಾರ, ಸಾರ್ವಜನಿಕರ ಮರಣ ದಂಡನೆ, ಕೋಲುಗಳಿಂದ ಬಲವಾಗಿ ಹೊಡೆಯುವುದು, ಕೈ-ಕಾಲುಗಳನ್ನು ಛಿದ್ರಗೊಳಿಸುವುದು, ಹೀಗೆ ಒಂದಕ್ಕಿಂತ ಒಂದು ಶಿಕ್ಷೆಯ ವಿಧಾನ ಘೋರವಾಗಿತ್ತು. ಜನರನ್ನು ತಿದ್ದುವುದಕ್ಕಾಗಿ ಇರುವ ಇಸ್ಲಾಮಿಕ್ ಕಾನೂನುಗಳನ್ನು ಉಲ್ಲಂಘಿಸಿ ಅತಿರೇಕದ ಶಿಕ್ಷೆಯನ್ನು ನೀಡಲಾಗುತ್ತಿತ್ತು. ಚಿಕ್ಕದಾಗಿ ಗಡ್ಡ ಬಿಟ್ಟ ಪುರುಷರಿಗೆ ಶಿಕ್ಷೆ ನೀಡುವುದು ಒಂದು ವಿಧಾನವಾಗಿತ್ತು. ಆದರೆ ಮಹಿಳೆಯರಿಗೆ ತೀರಾ ಮುಜುಗರ ಉಂಟು ಮಾಡುವಂತಾ ಶಿಕ್ಷೆಗಳನ್ನು ಈ ಕಾನೂನುಗಳಡಿಯಲ್ಲಿ ನೀಡಲಾಗುತ್ತಿತ್ತು. ಮಹಿಳೆಯರು ಧರಿಸುವ ಬಟ್ಟೆಯಿಂದ ಹಿಡಿದು ನಡವಳಿಕೆವರೆಗೂ ಪ್ರತಿಯೊಂದಕ್ಕೂ ನಿಯಮಗಳ ಪಾಲನೆಯನ್ನು ಕಡ್ಡಾಯಗೊಳಿಸಲಾಗಿತ್ತು.
ಮಹಿಳೆಯರು ಒಬ್ಬರೇ ಓಡಾಡುವಂತಿಲ್ಲ!
ಇನ್ನು ಷರಿಯಾ ಪ್ರಕಾರ, ವಯಸ್ಸಿಗೆ ಬಂದ ಯುವತಿಯರ ಶಿಕ್ಷಣಕ್ಕೆ ನಿರ್ಬಂಧ ವಿಧಿಸಲಾಗುತ್ತೆ. ಸಾರ್ವಜನಿಕವಾಗಿ ಮಹಿಳೆಯರು ಒಬ್ಬರೇ ಓಡಾಡುವಂತಿಲ್ಲ ಹಾಗೂ ಕಡ್ಡಾಯವಾಗಿ ಒಬ್ಬ ಪುರುಷನ ನೆರಳಿನಲ್ಲಿರಬೇಕು. ಬುರ್ಖಾದ ಮೂಲಕ ಮಹಿಳೆಯರು ಕಡ್ಡಾಯವಾಗಿ ತಲೆಯಿಂದ ಪಾದದವರೆಗೂ ಮುಚ್ಚಿಕೊಂಡಿರಬೇಕು ಎಂಬ ಕಟ್ಟುನಿಟ್ಟಾದ ಡ್ರೆಸ್ ಕೋಡ್ ಅನ್ನು ಅಪಘಾನಿಸ್ತಾನದಲ್ಲಿ ಜಾರಿಗೊಳಿಸಲಾಗಿತ್ತು.

Post a Comment