ಡ್ರಗ್ಸ್ ಪ್ರಕರಣದ ಮಾಸ್ಟರ್ ಮೈಂಡ್ ತುಷಾರ್ ಗೋಯಲ್
ಪ್ರಕರಣದ ಕುರಿತು ಬಿಜೆಪಿ ಸಂಸದ ಸುಧಾಂಶು ತ್ರಿವೇದಿ ಅವರು ಕಾಂಗ್ರೆಸ್‌ಗೆ ಮೂರು ಪ್ರಶ್ನೆಗಳನ್ನು ಹಾಕಿದ್ದಾರೆ. ಕಾಂಗ್ರೆಸ್ ಪಕ್ಷವು ಚುನಾವಣಾ ಉದ್ದೇಶಕ್ಕಾಗಿ ಡ್ರಗ್ಸ್ ಹಣವನ್ನು ಬಳಸಿಕೊಂಡಿದೆಯೇ ಎಂದು ಕೇಳಿದರು.
ದೆಹಲಿ ಪೊಲೀಸರು (Delhi Police) 560 ಕೆಜಿ ಕೊಕೇನ್ (Cocaine) ಮತ್ತು 40 ಕೆಜಿ ಹೈಡ್ರೋಪೋನಿಕ್ ಗಾಂಜಾವನ್ನು (Hydroponic Marijuana) ಹೊಂದಿದ್ದ 22 ಪೆಟ್ಟಿಗೆಗಳನ್ನು ಪತ್ತೆಮಾಡಿದ್ದು, ಇದರ ಮೌಲ್ಯ ಒಟ್ಟು 6,500 ಕೋಟಿ ರೂಪಾಯಿ ಎಂದು ಅಂದಾಜು ಮಾಡಲಾಗಿದೆ. ಇದೀಗ ಈ ಪ್ರಕರಣದ ಮಾಸ್ಟರ್ ಮೈಂಡ್ ತುಷಾರ್ ಗೋಯಲ್ (Tushar Goyal) ಹೆಸರನ್ನು ಪೊಲೀಸರು ಬಹಿರಂಗಪಡಿಸಿದ್ದು, ಇವರು ಕಾಂಗ್ರೆಸ್ ಪಕ್ಷಕ್ಕೆ ಸೇರಿದವರಾಗಿದ್ದಾರೆ.
ಗೋಯಲ್ ಕಾಂಗ್ರೆಸ್ ಪಕ್ಷದ ಸದಸ್ಯರಾಗಿದ್ದು, 2022 ರವರೆಗೆ ಪಕ್ಷದ ದೆಹಲಿ ರಾಜ್ಯ ಘಟಕದ RTI ಸೆಲ್‌ನ ಅಧ್ಯಕ್ಷರಾಗಿದ್ದರು. ವರದಿಯ ಪ್ರಕಾರ ಅವರ ಸಾಮಾಜಿಕ ಮಾಧ್ಯಮ ಪ್ರೊಫೈಲ್ ಈಗಲೂ RTI ಸೆಲ್ ಅಧ್ಯಕ್ಷ, ದೆಹಲಿ ಪ್ರದೇಶ ಕಾಂಗ್ರೆಸ್ ಎಂದು ಬರೆದುಕೊಂಡಿದ್ದಾರೆ. RTI ಎಂದರೆ ಮಾಹಿತಿ ಹಕ್ಕು ಕಾಯಿದೆ.
ಇದನ್ನೂ ಓದಿ: ಒಂದು ಲೋಟ ನೀರು ಕುಡಿಯಿರಿ ನಮ್ಮೆಲ್ಲಾ ಮತ ಪಡೆಯಿರಿ! ಅಭ್ಯರ್ಥಿಗಳಿಗೆ ಹರಿಯಾಣ ಮತದಾರರಿಂದ ಚಾಲೆಂಜ್
ಆರೋಪಿಗೂ ಕಾಂಗ್ರೆಸ್ ಪಕ್ಷಕ್ಕೂ ಏನು ಸಂಬಂಧ?
ಪ್ರಕರಣದ ಕುರಿತು ಬಿಜೆಪಿ ಸಂಸದ ಸುಧಾಂಶು ತ್ರಿವೇದಿ ಅವರು ಕಾಂಗ್ರೆಸ್‌ಗೆ ಮೂರು ಪ್ರಶ್ನೆಗಳನ್ನು ಹಾಕಿದ್ದಾರೆ. ಕಾಂಗ್ರೆಸ್ ಪಕ್ಷವು ಚುನಾವಣಾ ಉದ್ದೇಶಕ್ಕಾಗಿ ಡ್ರಗ್ಸ್ ಹಣವನ್ನು ಬಳಸಿಕೊಂಡಿದೆಯೇ ಎಂದು ಕೇಳಿದರು. ‘ಡ್ರಗ್ ಸಿಂಡಿಕೇಟ್‌ನ ಪ್ರಮುಖ ಆರೋಪಿ ಮತ್ತು ಕಿಂಗ್‌ಪಿನ್, ತುಷಾರ್ ಗೋಯಲ್ ಅವರು ಭಾರತೀಯ ಯುವ ಕಾಂಗ್ರೆಸ್ ಆರ್‌ಟಿಐ ಸೆಲ್‌ನ ಮುಖ್ಯಸ್ಥರಾಗಿದ್ದಾರೆ. ಕಾಂಗ್ರೆಸ್ ಪಕ್ಷವು ತುಷಾರ್ ಗೋಯಲ್ ಜೊತೆ ಯಾವ ರೀತಿಯ ಸಂಬಂಧವನ್ನು ಹೊಂದಿದೆ’ ಎಂದು ತ್ರಿವೇದಿ ಪತ್ರಿಕಾಗೋಷ್ಠಿಯಲ್ಲಿ ಪ್ರಶ್ನಿಸಿದರು.
ಯುಪಿಎ ಸರ್ಕಾರದ ಅವಧಿಯಲ್ಲಿ ಕೇವಲ 768 ಕೋಟಿ ರೂಪಾಯಿ ಮೌಲ್ಯದ ಡ್ರಗ್ಸ್ ಪತ್ತೆಯಾಗಿದ್ದರೆ, ಬಿಜೆಪಿ ಪಕ್ಷದ ಸರ್ಕಾರವು 22,000 ಕೋಟಿ ರೂಪಾಯಿ ಮೌಲ್ಯದ ಡ್ರಗ್ಸ್ ವಶಪಡಿಸಿಕೊಂಡಿದೆ ಎಂದು ತ್ರಿವೇದಿ ತಿಳಿಸಿದರು. ಬಿಜೆಪಿ ಸಂಸದರು ತಮ್ಮ ಪತ್ರಿಕಾಗೋಷ್ಠಿಯಲ್ಲಿ ಆರೋಪಿ ತುಷಾರ್ ಗೋಯಲ್, ಹರಿಯಾಣದ ಮಾಜಿ ಮುಖ್ಯಮಂತ್ರಿ ದೀಪೇಂದರ್ ಹೂಡಾ ಮತ್ತು ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಕೆ ಸಿ ವೇಣುಗೋಪಾಲ್ ಅವರೊಂದಿಗೆ ಇರುವ ಫೋಟೋಗಳನ್ನು ಪ್ರದರ್ಶಿಸಿದ್ರು.
ಕಾಂಗ್ರೆಸ್ನಿಂದ ಡ್ರಗ್ಸ್ ಹಣ ಚುನಾವಣೆಗೆ ಬಳಕೆ?
‘2014-2022ರ ಅವಧಿಯಲ್ಲಿ ಬಿಜೆಪಿ ಸರ್ಕಾರವು 22,000 ಕೋಟಿ ರೂಪಾಯಿ ಮೌಲ್ಯದ ಡ್ರಗ್ಸ್ ವಶಪಡಿಸಿಕೊಂಡಿದೆ. ಡ್ರಗ್ಸ್ ಸಿಂಡಿಕೇಟ್‌ನ ಪ್ರಮುಖ ಆರೋಪಿ ಮತ್ತು ಕಿಂಗ್‌ಪಿನ್, ತುಷಾರ್ ಗೋಯಲ್ ಭಾರತೀಯ ಯುವ ಕಾಂಗ್ರೆಸ್ ಆರ್‌ಟಿಐ ಸೆಲ್‌ನ ಮುಖ್ಯಸ್ಥರಾಗಿದ್ದಾರೆ. ಕಾಂಗ್ರೆಸ್ ಪಕ್ಷವು ಅವರೊಂದಿಗೆ ಯಾವ ಸಂಬಂಧವನ್ನು ಹೊಂದಿದೆ. ಈ ಹಣವನ್ನು ಕಾಂಗ್ರೆಸ್ ಪಕ್ಷವು ಚುನಾವಣೆಯಲ್ಲಿ ಬಳಸುತ್ತಿದೆಯೇ?’ ಎಂದು ಪ್ರಶ್ನಿಸಿದರು.
ದೆಹಲಿ ಪೊಲೀಸರು ಬುಧವಾರ ನಗರದ ಇತಿಹಾಸದಲ್ಲೇ ಅತಿ ದೊಡ್ಡ ಡ್ರಗ್ಸ್ ದಂಧೆ ಮೇಲೆ ದಾಳಿ ನಡೆಸಿದ್ದು, ಸುಮಾರು 6,500 ಕೋಟಿ ಮೌಲ್ಯದ 560 ಕಿಲೋಗ್ರಾಂಗಳಷ್ಟು ಕೊಕೇನ್ ಮತ್ತು 40 ಕಿಲೋಗ್ರಾಂಗಳಷ್ಟು ಹೈಡ್ರೋಪೋನಿಕ್ ಗಾಂಜಾವನ್ನು ವಶಪಡಿಸಿಕೊಂಡಿದ್ದಾರೆ. ದೆಹಲಿ ಪೊಲೀಸ್ ವಿಶೇಷ ಕೋಶದ ತಂಡವು ದಕ್ಷಿಣ ದೆಹಲಿಯ ಮಹಿಪಾಲ್‌ಪುರದಲ್ಲಿ ನಾಲ್ವರನ್ನು ಬಂಧಿಸಿದೆ ಮತ್ತು 602 ಕಿಲೋಗ್ರಾಂಗಳಷ್ಟು ತೂಕದ ಒಟ್ಟು ಸರಕುಗಳನ್ನು ವಶಪಡಿಸಿಕೊಂಡಿದೆ ಎಂದು ಅಧಿಕಾರಿಗಳು ವರದಿ ಮಾಡಿದ್ದಾರೆ.

Post a Comment