ವೇಗವಾಗಿ ತೂಕ ಕಳೆದುಕೊಳ್ಳಲು ಸ್ಕ್ವಾಟ್ ಬಹುಮುಖ್ಯವಾಗಿರುವ ಒಂದು ವ್ಯಾಯಾಮ, ಇದ್ರಲ್ಲೂ ಬೇರೆ ಬೇರೆ ರೀತಿ ಸ್ಕ್ವಾಟ್ ಇದ್ದು, ನಿಮಗೆ ಬೇರೆ ಬೇರೆ ರೀತಿಯ ಪ್ರಯೋಜನಗಳನ್ನು ನೀಡುತ್ತದೆ.
ವೇಗವಾಗಿ ತೂಕ ಕಳೆದುಕೊಳ್ಳಲು (Weight Loss) ಸ್ಕ್ವಾಟ್ ಬಹುಮುಖ್ಯವಾಗಿರುವ ಒಂದು ವ್ಯಾಯಾಮ (Exercise), ಇದ್ರಲ್ಲೂ ಬೇರೆ ಬೇರೆ ರೀತಿ ಸ್ಕ್ವಾಟ್ ಇದ್ದು, ನಿಮಗೆ ಬೇರೆ ಬೇರೆ ರೀತಿಯ ಪ್ರಯೋಜನಗಳನ್ನು ನೀಡುತ್ತದೆ.
ತೂಕ ಇಳಿಕೆಗೆ ಸ್ಕ್ವಾಟ್ಸ್
ಸ್ಕ್ವಾಟ್ ವ್ಯಾಯಾಮವು ದೇಹದ ಕೆಳಭಾಗದ ದೊಡ್ಡ ಸ್ನಾಯುಗಳಾದ ಕ್ವಾಡ್ರೈಸ್ಪ್ಸ್, ಹ್ಯಾಮ್ಸ್ಟ್ರಿಂಗ್ಸ್ ಮತ್ತು ಗ್ಲುಟ್ಸ್‌ಗಳ ಮೇಲೆ ಹೆಚ್ಚು ಪರಿಣಾಮ ಬೀರುತ್ತದೆ. ಇದು ಕ್ಯಾಲೊರಿ ಕಡಿಮೆಯಾಗಲು ಸಹಾಯ ಮಾಡುತ್ತದೆ.ನೀವು ಯಾವುದೇ ಸಾಧನಗಳಿಲ್ಲದೇ ಇದನ್ನು ಮಾಡಬಹುದು.
ಇದರಲ್ಲಿ ನಿಮ್ಮ ಕೈ-ಕಾಲು, ಬೆನ್ನು, ಸೊಂಟ ಎಲ್ಲ ಅಂಗಗಳನ್ನು ತೊಡಗಿಸಿಕೊಳ್ಳುವ ಮೂಲಕ ಇಡೀ ದೇಹವನ್ನು ವರ್ಕೌಟ್‌ನಲ್ಲಿ ತೊಡಗಿಸಿಕೊಳ್ಳಬಹುದು. ಸ್ಕ್ವಾಟ್‌ಗಳನ್ನು ಮಾಡೋದರಿಂದ ಚಯಾಪಚಯ ದರ ಹೆಚ್ಚಾಗುತ್ತದೆ. ಈ ಹೆಚ್ಚಿದ ಚಯಾಪಚಯ ದರವು ಬೇಗ ಕೊಲೆಸ್ಟ್ರಾಲ್ ಅನ್ನು ಬರ್ನ್ ಮಾಡಲು ಸಹಾಯ ಮಾಡುತ್ತದೆ. ಇದು ಕೊಬ್ಬನ್ನು ಕಡಿಮೆ ಮಾಡುವ ಜೊತೆಗೆ ದೈಹಿಕ ಸಾಮರ್ಥ್ಯವನ್ನೂ ಹೆಚ್ಚಿಸುತ್ತದೆ.
ಇದನ್ನೂ ಓದಿ: ಬಾದಾಮಿಯನ್ನು ತಿನ್ನುವ ಮುಂಚೆ ಎಷ್ಟು ಸಮಯ ನೀರಿನಲ್ಲಿ ನೆನೆಸಿಡಬೇಕು? ನೆನೆಸಿದ ಬಾದಾಮಿಯಿಂದಾಗುವ ಪ್ರಯೋಜನಗಳೇನು?
ದೇಹದ ಕೊಬ್ಬನ್ನು ಕಡಿಮೆ ಮಾಡಲು ಸಹಾಯ ಮಾಡುವ ಕೆಲವು ಸ್ಕ್ವಾಟ್ಸ್
1. ಗೋಬ್ಲೆಟ್ ಸ್ಕ್ವಾಟ್‌ಗಳು: ಡಂಬ್‌ಬೆಲ್ ಅಥವಾ ಕೆಟಲ್‌ಬೆಲ್‌ನಂತಹ ಹೆಚ್ಚುವರಿ ತೂಕವನ್ನು ಹಿಡಿದುಕೊಂಡು ಮಾಡುವುದು ಗೋಬ್ಲೆಟ್ ಸ್ಕ್ವಾಟ್. ಈ ಸ್ಕ್ವಾಟ್ ನಿಮಗೆ ಒಳ್ಳೆಯ ಶೇಪ್ ನೀಡುತ್ತದೆ. ಗೋಬ್ಲೆಟ್ ಸ್ಕ್ವಾಟ್‌ಗಳು ಪ್ರತಿರೋಧವನ್ನು ಸೇರಿಸುವ ಮೂಲಕ ಸ್ನಾಯು ಸಕ್ರಿಯಗೊಳಿಸುವಿಕೆಯನ್ನು ಹೆಚ್ಚಿಸುತ್ತವೆ. ಬೆನ್ನಿನ ಸ್ನಾಯುಗಳನ್ನು ಸಕ್ರಿಯಗೊಳಿಸುವ ಮೂಲಕ ನಿಮಗೆ ಮಸಲ್ ಹೆಚ್ಚು ಮಾಡಲು ಮತ್ತು ಒಟ್ಟಾರೆ ತೂಕ ಇಳಿಕೆಗೆ ಸಹಾಯ ಮಾಡುತ್ತದೆ.
ಈ ವ್ಯಾಯಾಮ ಮಾಡಲು ನೀವು ಕೈಯಲ್ಲಿ ಭಾರವಾದ ಡಂಬ್ಬೆಲ್ ಅಥವಾ ಕೆಟಲ್ಬೆಲ್‌ನಂತಹ ತೂಕವನ್ನು ಹಿಡಿದುಕೊಳ್ಳಬೇಕು. ನಂತರ ನಿಮ್ಮ ಪಾದಗಳನ್ನು ಸ್ವಲ್ಪ ಅಗಲಿಸಿ, ನಿಮ್ಮ ಸೊಂಟವನ್ನು ಹಿಂದಕ್ಕೆ ತಳ್ಳುವ ಮೂಲಕ ಮತ್ತು ನಿಮ್ಮ ಮೊಣಕಾಲುಗಳನ್ನು ಬಗ್ಗಿಸುವ ಮೂಲಕ ಸ್ಕ್ವಾಟ್ ಅನ್ನು ಪ್ರಾರಂಭಿಸಿ.
2. ಬಾಡಿವೇಟ್ ಸ್ಕ್ವಾಟ್‌ಗಳು: ಇದೊಂದು ಸ್ಕ್ವಾಟಿಂಗ್‌ನ ಸರಳವಾದ ರೂಪ, ಬಾಡಿವೇಟ್ ಸ್ಕ್ವಾಟ್‌ಗಳು, ತಮ್ಮ ಫಿಟ್‌ನೆಸ್ ಪ್ರಯಾಣವನ್ನು ಪ್ರಾರಂಭಿಸುವ ಹೊಸಬರಿಗೆ ಸೂಕ್ತವಾಗಿವೆ. ಕೆಳ ದೇಹದ ಭಾಗಗಳಿಗೆ ಹೆಚ್ಚು ಶಕ್ತಿ ಮತ್ತು ಸಹಿಷ್ಣುತೆಯನ್ನು ನಿರ್ಮಿಸಲು ಹೆಚ್ಚು ಪರಿಣಾಮಕಾರಿಯಾಗಿದೆ.
ಇದನ್ನು ಮಾಡಲು ಸಹ ಮೊದಲು ಪಾದಗಳನ್ನು ಹಿಪ್-ಅಗಲದಲ್ಲಿ ಇರಿಸಿ ನೇರವಾಗಿ ನಿಂತುಕೊಳ್ಳಿ. ಈಗ ನಿಮ್ಮ ಮೊಣಕಾಲುಗಳನ್ನು ಬಗ್ಗಿಸಿ, ಚೇರ್ ಆಕಾರದಲ್ಲಿ ಕುಲಿತುಕೊಳ್ಳಿ. ಹೀಗೆ ಮೇಲಕ್ಕೆಳುವುದು ಮತ್ತು ಕುಳಿತುಕೊಳ್ಳುವುದೇ ಬಾಡಿವೇಟ್ ಸ್ಕ್ವಾಟ್‌ಗಳು.
ಬಾಡಿವೇಟ್ ಸ್ಕ್ವಾಟ್‌ಗಳು ಕ್ವಾಡ್ರೈಸ್ಪ್‌ಗಳು, ಹ್ಯಾಮ್‌ಸ್ಟ್ರಿಂಗ್‌ಗಳು, ಗ್ಲುಟ್ಸ್ ನಲ್ಲಿ ಕೆಲಸ ಮಾಡುವ ಮೂಲಕ ಕೆಳಗಿನ ದೇಹ ಮತ್ತು ಕೋರ್‌ನಲ್ಲಿ ಶಕ್ತಿಯನ್ನು ಹೆಚ್ಚಿಸುತ್ತವೆ. ಈ ವ್ಯಾಯಾಮ ಸಲಕರಣೆಗಳ ಅಗತ್ಯವಿಲ್ಲದೆ ಒಟ್ಟಾರೆ ಚಲನೆಯ ದಕ್ಷತೆಯನ್ನು ಸುಧಾರಿಸುತ್ತದೆ.
3. ಸುಮೋ ಸ್ಕ್ವಾಟ್‌ಗಳು: ಈ ಸ್ಕ್ವಾಟ್‌ಗಳು ಗ್ಲುಟ್ಸ್ ಮತ್ತು ಒಳ ತೊಡೆಗಳಿಗೆ ಹೇಳಿಮಾಡಿಸಿದ ವ್ಯಾಯಾಮ. ಇಲ್ಲಿ ಕಾಲನ್ನು ಮಾಮೂಲಿ ಸ್ಕ್ವಾಟ್ ಮಾಡುವುದಕ್ಕಿಂತ ಸ್ವಲ್ಪ ಹೆಚ್ಚು ಸಗಲಿಸಿ, ಬಾಗಿದ ಮೊಣಕಾಲುಗಳ ಮೇಲೆ ನೀವು ತಿಂತುಕೊಳ್ಳಬೇಕು.ನಿಮ್ಮ ಸೊಂಟವನ್ನು ಹಿಂದಕ್ಕೆ ತಳ್ಳುವ ಮೂಲಕ ಮತ್ತು ನಿಮ್ಮ ಮೊಣಕಾಲುಗಳನ್ನು ಬಗ್ಗಿಸುವ ಮೂಲಕ ಈ ಸ್ಕ್ವಾಟ್ ಅನ್ನು ಮಾಡಬಹುದು.
ಸುಮೋ ಸ್ಕ್ವಾಟ್‌ಗಳು ನಿರ್ದಿಷ್ಟವಾಗಿ ಒಳ ತೊಡೆಗಳನ್ನು ಗುರಿಯಾಗಿಸುತ್ತದೆ ಮತ್ತು ಸಾಮಾನ್ಯ ಸ್ಕ್ವಾಟ್‌ಗಳಿಗಿಂತ ಹೆಚ್ಚಾಗಿ ಆಡ್ಕ್ಟರ್‌ಗಳು ಮತ್ತು ಗ್ಲುಟ್‌ಗಳನ್ನು ತೊಡಗಿಸುತ್ತದೆ. ಇದು ಕ್ವಾಡ್ರೈಸ್ಪ್ಸ್, ಹ್ಯಾಮ್ಸ್ಟ್ರಿಂಗ್ಸ್ ಮತ್ತು ಗ್ಲುಟ್ಸ್ನಲ್ಲಿ ಬಲವನ್ನು ನಿರ್ಮಿಸುವಾಗ ಸೊಂಟದಲ್ಲಿ ನಮ್ಯತೆ ಮತ್ತು ಚಲನಶೀಲತೆಯನ್ನು ಸುಧಾರಿಸುತ್ತವೆ.
ಈ ರೀತಿಯ ಸ್ಕ್ವಾಟ್‌ಗಳು ನಿಮ್ಮ ಮಸಲ್ ಅನ್ನು ಬಿಲ್ಡ್ ಮಾಡುತ್ತವೆ, ದೇಹಕ್ಕೆ ಒಂದೊಳ್ಳೆ ಆಕಾರ ನೀಡುತ್ತದೆ, ಹೆಚ್ಚುವರಿ ಕೊಲೆಸ್ಟ್ರಾಲ್ ಅನ್ನು ಬರ್ನ್ ಮಾಡುವ ಮೂಲಕ ನಿಮ್ಮ ದೇಹದ ತೂಕವನ್ನು ಇಳಿಸಲು ಸಹಕಾರಿಯಾಗಿವೆ.

Post a Comment