Suresh Kumar: ಮಾಜಿ ಸಚಿವ ಸುರೇಶ್ ಕುಮಾರ್‌ಗೆ ಚಿಕನ್ ಗುನ್ಯಾ ಮ್ಯೂಟೆಂಟ್ ಮಹಾಮಾರಿ; ಬ್ರೈನ್, ಬೆನ್ನುಮೂಳೆಗೂ ಆವರಿಸಿತಾ ಸೋಂಕು?


 ಸುರೇಶ್ ಕುಮಾರ್ (ಸಂಗ್ರಹ ಚಿತ್ರ) ಸುರೇಶ್ ಕುಮಾರ್ ಅವರಿಗೆ ಬ್ರೈನ್ ಮತ್ತು ಸ್ಪೈನಲ್ ಕಾರ್ಡ್ನಲ್ಲಿ ಸಮಸ್ಯೆ ಕಾಣಿಸಿಕೊಂಡಿದೆ ಎನ್ನಲಾಗಿದೆ. ಅಪರೂಪದ ಮ್ಯೂಟೆಂಟ್ ಚಿಕೂನ್ ಗುನ್ಯಾ ಜ್ವರದ ಲಕ್ಷಣ ಕಾಣಿಸಿಕೊಂಡಿದ್ದು, ನಾಲ್ಕುೂವರೆ ಲಕ್ಷದ ನಾಲ್ಕು ಇಂಜೆಕ್ಷನ್ ಪಡೆದಿದ್ದಾರಂತೆ.

 ಬೆಂಗಳೂರು: ಮಾಜಿ ಸಚಿವ, ಬೆಂಗಳೂರಿನ (Bengaluru) ರಾಜಾಜಿನಗರ (Rajajinagar) ಕ್ಷೇತ್ರದ ಹಾಲಿ ಬಿಜೆಪಿ ಶಾಸಕ (BJP MLA) ಸುರೇಶ್ ಕುಮಾರ್ (Suresh Kumar) ಅವರು ಅನಾರೋಗ್ಯಕ್ಕೆ ಒಳಗಾಗಿದ್ದಾರೆ. ಚಿಕೂನ್ ಗುನ್ಯಾದಲ್ಲಿ (Chikoon Gunya) ಕಾಣಿಸಿಕೊಂಡ ಹೊಸ ರೂಪದ ಜ್ವರದಿಂದ (Fever) ಸುರೇಶ್ ಕುಮಾರ್ ಬಳಲುತ್ತಿದ್ದರು ಎನ್ನಲಾಗಿದೆ. ಕಳೆದ 4 ದಿನಗಳ ಹಿಂದೆ ಜ್ವರ ಕಾಣಿಸಿಕೊಂಡಿದ್ದು, ಇಂದು ಮತ್ತಷ್ಟು ಅನಾರೋಗ್ಯಗೊಂಡಿರೋದ್ರಿಂದ ಆಸ್ಪತ್ರೆಗೆ ದಾಖಲಾಗಿದ್ದಾರೆ. ಸದ್ಯ ಅವರು ಬೆಂಗಳೂರಿನ ಶೇಷಾದ್ರಿಪುರಂನಲ್ಲಿರೋ (Seshadripuram) ಅಪೋಲೋ ಆಸ್ಪತ್ರೆಗೆ (Apollo Hospital) ದಾಖಲಾಗಿದ್ದು, ಚಿಕಿತ್ಸೆ ಮುಂದುವರೆದಿದೆ.

ನಾಲ್ಕು ದಿನಗಳ ಹಿಂದೆ ಕಾಣಿಸಿಕೊಂಡಿದ್ದ ಜ್ವರ

ನಾಲ್ಕು ದಿನಗಳ ಹಿಂದೆ ಸುರೇಶ್ ಕುಮಾರ್‌ಗೆ ಜ್ವರ ಕಾಣಿಸಿಕೊಂಡಿತ್ತಂತೆ. ಜ್ವರದ ಬಾಧೆಯಿಂದ ಮಾತನಾಡಲಾಗದೇ, ಸುರೇಶ್ ಕುಮಾರ್ ತೀವ್ರ ಸುಸ್ತಾಗಿದ್ದರು. ಕೆಲ ದಿನಗಳ ಹಿಂದಷ್ಟೇ ಮೈಸೂರು ಪಾದಯಾತ್ರೆ ನಡೆಸಿದ್ದರು. ಬಳಿಕ ತಿರುಪತಿ ಪ್ರವಾಸ ಮಾಡಿದ್ದರು. ಈ ಬಳಿಕ ಅವರಿಗೆ ಜ್ವರ ಕಾಣಿಸಿಕೊಂಡಿದೆ ಎನ್ನಲಾಗಿದೆ.

ಸದ್ಯ ಹೇಗಿದೆ ಸುರೇಶ್ ಕುಮಾರ್ ಆರೋಗ್ಯ?

ಸುರೇಶ್ ಕುಮಾರ್ ಅವರಿಗೆ ಬ್ರೈನ್ ಮತ್ತು ಸ್ಪೈನಲ್ ಕಾರ್ಡ್‌ನಲ್ಲಿ ಸಮಸ್ಯೆ ಕಾಣಿಸಿಕೊಂಡಿದೆ ಎನ್ನಲಾಗಿದೆ. ಅಪರೂಪದ ಮ್ಯೂಟೆಂಟ್ ಚಿಕೂನ್ ಗುನ್ಯಾ ಜ್ವರದ ಲಕ್ಷಣ ಕಾಣಿಸಿಕೊಂಡಿದ್ದು, ನಾಲ್ಕುೂವರೆ ಲಕ್ಷದ ನಾಲ್ಕು ಇಂಜೆಕ್ಷನ್ ಪಡೆದಿದ್ದಾರಂತೆ. ಇನ್ನೂ ಏಳು ದಿನಗಳ ಕಾಲ ಸುರೇಶ್ ಕುಮಾರ್ ಅವರು ಆಸ್ಪತ್ರೆಯಲ್ಲೇ ಚಿಕಿತ್ಸೆ ಪಡೆಯಲಿದ್ದಾರೆ ಅಂತ ಮೂಲಗಳು ತಿಳಿಸಿವೆ.

ಇದನ್ನೂ ಓದಿ: MUDA Scam: ಮುಡಾ ಹಗರಣ ಬಯಲು ಮಾಡಿದ್ದ ಆರ್‌ಟಿಐ ಕಾರ್ಯಕರ್ತನ ಹತ್ಯೆ ಯತ್ನ? ನ್ಯೂಸ್ 18 ಜೊತೆ ಗಂಗರಾಜು Exclusive ಮಾತು

ಸರಳ ಸಜ್ಜನಿಕೆಯ ರಾಜಕಾರಣಿ

ಬಿಜೆಪಿಯ ಹಿರಿಯ ನಾಯಕ, ಮಾಜಿ ಸಚಿವ, ರಾಜಾಜಿನಗರ ಕ್ಷೇತ್ರದ ಹಾಲಿ ಶಾಸಕರಾಗಿರುವ ಎಸ್. ಸುರೇಶ್ ಕುಮಾರ್ ಸರಳ ಸಜ್ಜನಿಕೆಯ ರಾಜಕಾರಣಿ ಎಂದೇ ಹೆಸರು ಪಡೆದಿದ್ದಾರೆ. ಸುರೇಶ್ ಕುಮಾರ್ ಅವರು 11 ನವೆಂಬರ್, 1955ರಂದು ಜನಿಸಿದರು. ಬೆಂಗಳೂರಿನಲ್ಲಿ ಜನಿಸಿದ ಅವರು ಚಿಕ್ಕ ವಯಸ್ಸಿನಿಂದಲೂ ರಾಷ್ಟ್ರೀಯ ಸ್ವಯಂಸೇವಕ ಸಂಘದೊಂದಿಗೆ (RSS) ಗುರುತಿಸಿಕೊಂಡಿದ್ದಾರೆ.

ತುರ್ತು ಪರಿಸ್ಥಿತಿ ವಿರೋಧಿಸಿ ಜೈಲು ಪಾಲು

ಬೆಂಗಳೂರು ವಿಶ್ವವಿದ್ಯಾನಿಲಯದಿಂದ ವಿಜ್ಞಾನದಲ್ಲಿ ಪದವಿ ಪಡೆದಿದ್ದ ಅವರು, ತುರ್ತು ಪರಿಸ್ಥಿತಿಯನ್ನು ವಿರೋಧಿಸಿ, ಹೋರಾಟದಲ್ಲಿ ಪಾಲ್ಗೊಂಡಿದ್ದರು. ಈ ವೇಳೆ ಅವರನ್ನು ಬಂಧಿಸಿ, ಬೆಂಗಳೂರು ಸೆಂಟ್ರಲ್ ಜೈಲಿನಲ್ಲಿ ಇಡಲಾಗಿತ್ತು. ಇದೇ ವೇಳೆ ಅಲ್ಲಿ ಅನೇಕ ರಾಷ್ಟ್ರೀಯ ಮತ್ತು ರಾಜ್ಯ ಮಟ್ಟದ ನಾಯಕರನ್ನು ಬಂಧಿಸಲಾಗಿತ್ತು. ಜೈಲಿನಿಂದ ಹೊರಬಂದ ನಂತರ 1977-1980ರಲ್ಲಿ ಬೆಂಗಳೂರು ವಿಶ್ವವಿದ್ಯಾಲದಲ್ಲಿ ಕಾನೂನು ಪದವಿ ಪಡೆದರು.

 ಮಹಾನಗರಪಾಲಿಕೆಯಿಂದ ವಿಧಾನಸೌಧಕ್ಕೆ

ಸುರೇಶ್ ಕುಮಾರ್ 1981ರಲ್ಲಿ ವಕೀಲರಾಗಿ ತಮ್ಮ ವೃತ್ತಿಜೀವನವನ್ನು ಪ್ರಾರಂಭಿಸಿದರು. 1983ರಲ್ಲಿ ಬಿಜೆಪಿಯಿಂದ ಬೆಂಗಳೂರು ಮಹಾನಗರ ಪಾಲಿಕೆಗೆ ಮೊದಲ ಬಾರಿಗೆ ಆಯ್ಕೆಯಾದರು. ಬಳಿಕ ಸತತ 2 ಅವಧಿಗೆ ಕಾರ್ಪೊರೇಟರ್ ಆಗಿ ಸೇವೆ ಸಲ್ಲಿಸಿದರು. 1994 ಮತ್ತು 1999ರಲ್ಲಿ 2 ಅವಧಿಗೆ ರಾಜಾಜಿನಗರ ಕ್ಷೇತ್ರದಿಂದ ಕರ್ನಾಟಕ ವಿಧಾನಸಭೆಗೆ ಆಯ್ಕೆಯಾಗಿ ಮಾದರಿ ಶಾಸಕರಾಗಿ ಮೆರೆದರು. ಅವರು 2008 ಮತ್ತು 2013 ರ ಚುನಾವಣೆಗಳಲ್ಲಿ ಕರ್ನಾಟಕ ವಿಧಾನಸಭೆಗೆ ಮರು ಆಯ್ಕೆಯಾದರು. ಅಲ್ಲಿಂದ ಶಾಸಕರಾಗಿ, ಸಚಿವರಾಗಿ ವಿವಿಧ ರೀತಿಯ ಕೆಲಸ ಮಾಡಿದ್ದಾರೆ.

Post a Comment

Previous Post Next Post