ಸುಲ್ತಾನ್ ಹಸನಲ್ ಬೊಲ್ಕಿಯಾ $5 ಬಿಲಿಯನ್ ಮೌಲ್ಯದ ವಿಶ್ವದ ಅತಿದೊಡ್ಡ ಖಾಸಗಿ ಕಾರುಗಳ ಸಂಗ್ರಹ ಇದೆ. ಈ ಕಾರ್ ಕಲೆಕ್ಷನ್ನಲ್ಲಿ 7 ಸಾವಿರಕ್ಕೂ ಹೆಚ್ಚು ಐಷಾರಾಮಿ ಕಾರುಗಳಿವೆ.
ನವದೆಹಲಿ: ಪ್ರಧಾನಿ ನರೇಂದ್ರ ಮೋದಿ ಅವರು ಇಂದು ಬ್ರೂನೈಗೆ ತೆರಳಲಿದ್ದಾರೆ. ಆಗ್ನೇಯ ಏಷ್ಯಾ ರಾಷ್ಟ್ರಕ್ಕೆ ಭಾರತೀಯ ಪ್ರಧಾನಿಯೊಬ್ಬರು ಮೊದಲ ಬಾರಿಗೆ ಇಲ್ಲಿಗೆ ಭೇಟಿ ನೀಡುತ್ತಿದ್ದಾರೆ. ಎರಡು ದಿನಗಳ ಭೇಟಿಯು ಬ್ರೂನಿಯೊಂದಿಗೆ ಭಾರತದ ಬಾಂಧವ್ಯವನ್ನು ಬಲಪಡಿಸುವ ಗುರಿಯನ್ನು ಹೊಂದಿದೆ. ಜೊತೆಗೆ ಉಭಯ ದೇಶಗಳ ನಡುವಿನ 40 ವರ್ಷಗಳ ರಾಜತಾಂತ್ರಿಕ ಸಂಬಂಧಗಳನ್ನು ಸ್ಮರಿಸುತ್ತದೆ. ಯುಕೆ ರಾಣಿ ಎಲಿಜಬೆತ್ II ರ ನಂತರ ವಿಶ್ವದ ಎರಡನೇ ಅತಿ ದೀರ್ಘಾವಧಿಯ ದೊರೆ ಸುಲ್ತಾನ್ ಹಸನಲ್ ಬೊಲ್ಕಿಯಾ ಅವರ ಆಹ್ವಾನದ ಮೇರೆಗೆ ಪ್ರಧಾನಿ ಮೋದಿ ಬ್ರೂನಿಗೆ ತೆರಳಿಸಿದ್ದಾರೆ.
ಹಸನಲ್ ಬೊಲ್ಕಿಯಾ ಅವರು ತಮ್ಮ ಆಗರ್ಭ ಶ್ರೀಮಂತಿಕೆ ಮತ್ತು ಅತಿರಂಜಿತ ಜೀವನಶೈಲಿಯಿಂದಾಗಿ ಹೆಸರುವಾಸಿಯಾಗಿದ್ದಾರೆ. ಅವರ ಬಳಿ ಮುಖ್ಯವಾಗಿ ಅಂದಾಜು $5 ಬಿಲಿಯನ್ ಮೌಲ್ಯದ ವಿಶ್ವದ ಅತಿದೊಡ್ಡ ಖಾಸಗಿ ಕಾರುಗಳ ಸಂಗ್ರಹ ಇದೆ. ಈ ಕಾರ್ ಕಲೆಕ್ಷನ್ನಲ್ಲಿ 7 ಸಾವಿರಕ್ಕೂ ಹೆಚ್ಚು ಐಷಾರಾಮಿ ಕಾರುಗಳಿವೆ. ಇವುಗಳಲ್ಲಿ, ಅವರು ಸರಿಸುಮಾರು 600 ರೋಲ್ಸ್ ರಾಯ್ಸ್ ಕಾರುಗಳನ್ನು ಹೊಂದಿದ್ದು, ಅಧಿಕೃತ ಗಿನ್ನೆಸ್ ವಿಶ್ವ ದಾಖಲೆ ಅವರ ಹೆಸರಿನಲ್ಲಿದೆ.
ಯಾವೆಲ್ಲಾ ಕಾರುಗಳಿವೆ?
ದಿ ಸನ್ ವರದಿ ಪ್ರಕಾರ, ಕಾರುಗಳ ಸಂಗ್ರಹದಲ್ಲಿ ಸುಮಾರು 450 ಫೆರಾರಿಗಳು ಮತ್ತು 380 ಬೆಂಟ್ಲಿಗಳನ್ನು ಇವೆ. ಕಾರ್ಬಜ್ ಮತ್ತು ದಿ ಸೌತ್ ಚೈನಾ ಮಾರ್ನಿಂಗ್ ಪೋಸ್ಟ್ ಸೇರಿದಂತೆ ಆಟೋಮೋಟಿವ್ ಮೂಲಗಳ ಪ್ರಕಾರ ಅವರು ಪೋರ್ಷೆಸ್, ಲಂಬೋರ್ಘಿನಿಸ್, ಮೇಬ್ಯಾಕ್ಸ್, ಜಾಗ್ವಾರ್ಸ್, ಬಿಎಂಡಬ್ಲ್ಯುಗಳು ಮತ್ತು ಮೆಕ್ಲಾರೆನ್‌ಗಳನ್ನು ಹೊಂದಿದ್ದಾರೆ.
ಹಸ್ಸಾನಲ್ ಬೊಲ್ಕಿಯಾ ಅವರ ಸಂಗ್ರಹಣೆಯಲ್ಲಿನ ಅತ್ಯಂತ ಫೇಮಸ್ ವಾಹನಗಳೆಂದರೆ, ಅಂದಾಜು $80 ಮಿಲಿಯನ್ ಮೌಲ್ಯದ ಬೆಂಟ್ಲಿ ಡಾಮಿನೇಟರ್ SUV, ಹೊರೈಸನ್ ಬ್ಲೂ ಪೇಂಟ್‌ನೊಂದಿಗೆ ಪೋರ್ಷೆ 911 ಮತ್ತು X88 ಪವರ್ ಪ್ಯಾಕೇಜ್ ಮತ್ತು 24-ಕ್ಯಾರೆಟ್ ಚಿನ್ನದ ಲೇಪಿತ ರೋಲ್ಸ್ ರಾಯ್ಸ್ ಸಿಲ್ವರ್ ಸ್ಪರ್ II. ಅವರ ಅಮೂಲ್ಯ ಆಸ್ತಿಗಳಲ್ಲಿ ಒಂದು ಕಸ್ಟಮ್-ವಿನ್ಯಾಸಗೊಳಿಸಿದ ರೋಲ್ಸ್-ರಾಯ್ಸ್ ತೆರೆದ ಛಾವಣಿ ಮತ್ತು ಛತ್ರಿ ಹೊಂದಿರುವ ಕಾರು. ಇದನ್ನು ಚಿನ್ನದಿಂದ ಅದ್ದೂರಿಯಾಗಿ ವಿನ್ಯಾಸಗೊಳಿಸಲಾಗಿದೆ. ಸುಲ್ತಾನನು 2007 ರಲ್ಲಿ ತನ್ನ ಮಗಳು ರಾಜಕುಮಾರಿ ಮಜೆಡೆದಾಳ ವಿವಾಹಕ್ಕಾಗಿ ಕಸ್ಟಮ್ ಚಿನ್ನದ ಲೇಪಿತ ರೋಲ್ಸ್ ರಾಯ್ಸ್ ಅನ್ನು ರೆಡಿ ಮಾಡಿಸಿದ್ದರು. ಕಾರುಗಳು ಮಾತ್ರವಲ್ಲ ಸುಲ್ತಾನರು ಇಸ್ತಾನಾ ನೂರುಲ್ ಇಮಾನ್ ಅರಮನೆಯಲ್ಲಿ ವಾಸಿಸುತ್ತಿದ್ದಾರೆ, ಇದು ವಿಶ್ವದ ಅತಿದೊಡ್ಡ ವಸತಿ ಅರಮನೆ ಎಂಬ ಗಿನ್ನೆಸ್ ವಿಶ್ವ ದಾಖಲೆಯನ್ನು ಹೊಂದಿದೆ. ಇದು ಎರಡು ಮಿಲಿಯನ್ ಚದರ ಅಡಿಗಳಷ್ಟು ವ್ಯಾಪಿಸಿದೆ ಮತ್ತು 22-ಕ್ಯಾರೆಟ್ ಚಿನ್ನದಿಂದ ಅಲಂಕರಿಸಲ್ಪಟ್ಟಿದೆ. ಅರಮನೆಯು ಐದು ಈಜುಕೊಳಗಳು, 1,700 ಮಲಗುವ ಕೋಣೆಗಳು, 257 ಸ್ನಾನಗೃಹಗಳು ಮತ್ತು 110 ಗ್ಯಾರೇಜ್‌ಗಳನ್ನು ಹೊಂದಿದೆ. ಸುಲ್ತಾನ್ ಖಾಸಗಿ ಮೃಗಾಲಯವನ್ನು ಸಹ ಹೊಂದಿದ್ದು, 30 ಬಂಗಾಳ ಹುಲಿಗಳು ಮತ್ತು ವಿವಿಧ ಪಕ್ಷಿ ಪ್ರಭೇದಗಳು ಇವೆ. ಅವರು ಬೋಯಿಂಗ್ 747 ವಿಮಾನವನ್ನು ಸಹ ಹೊಂದಿದ್ದಾರೆ.

Post a Comment