ಮಥುರಾ ಕೃಷ್ಣ ಜನ್ಮಭೂಮಿ
ಮಥುರಾ ಶ್ರೀ ಕೃಷ್ಣ ಜನ್ಮಭೂಮಿ ವಿವಾದ ಪ್ರಕರಣದಲ್ಲಿ ಹಿಂದೂ ಅರ್ಜಿದಾರರು ಸಲ್ಲಿಸಿದ 15 ಮೊಕದ್ದಮೆಗಳನ್ನು ಪ್ರಶ್ನಿಸಿ ಶಾಹಿ ಈದ್ಗಾ ಮಸೀದಿಯ ಮನವಿಯನ್ನು ಅಲಹಾಬಾದ್ ಹೈಕೋರ್ಟ್ ವಜಾಗೊಳಿಸಿ ಮಹತ್ವದ ಆದೇಶವನ್ನು ಹೊರಡಿಸಿದೆ. ನವದೆಹಲಿ(ಮಾ.19): ಮಥುರಾ ಶ್ರೀ ಕೃಷ್ಣ ಜನ್ಮಭೂಮಿ ವಿವಾದ ಪ್ರಕರಣದಲ್ಲಿ ಹಿಂದೂ ಅರ್ಜಿದಾರರು ಸಲ್ಲಿಸಿದ 15 ಮೊಕದ್ದಮೆಗಳನ್ನು ಪ್ರಶ್ನಿಸಿ ಶಾಹಿ ಈದ್ಗಾ ಮಸೀದಿಯ ಮನವಿಯನ್ನು ಅಲಹಾಬಾದ್ ಹೈಕೋರ್ಟ್ ವಜಾಗೊಳಿಸಿ ಮಹತ್ವದ ಆದೇಶವನ್ನು ಹೊರಡಿಸಿದೆ. ಇನ್ನು ಈ ಪ್ರಕರಣದ ಕುರಿತು ನ್ಯಾಯಮೂರ್ತಿ ಮಯಾಂಕ್ ಕುಮಾರ್ ಜೈನ್ ಅವರ ಏಕಸದಸ್ಯ ಪೀಠ ಗುರುವಾರ ತೀರ್ಪು ನೀಡಿದೆ.ಕಳೆದ ತಿಂಗಳು ಅನಿರೀಕ್ಷಿತ ಬೆಳವಣಿಗೆಯಲ್ಲಿ ಹೈಕೋರ್ಟ್ ಈ ಪ್ರಕರಣದ ವಿಚಾರಣೆಯನ್ನು ಮರು ತೆರೆದ ನಂತರ ಇಂದು ಈ ಆದೇಶ ಹೊರಬಿದ್ದಿದೆ. ಈ ವೇಳೆ ಹಿಂದೂ ಪರ ವಕೀಲ ವಿಷ್ಣು ಶಂಕರ್ ಜೂನ್ ಪ್ರಕರಣಕ್ಕೆ ಸಂಬಂಧಿಸಿ ಸುಪ್ರೀಂ ಕೋರ್ಟ್ಗೆ ಮೇಲ್ಮನವಿ ಸಲ್ಲಿಸಿದರೆ ಅದನ್ನೂ ವಾದಿಸಲು ನಾವು ಸಿದ್ದರಿದ್ದೇವೆ ಎಂದು ಹೇಳಿದ್ದಾರೆ. ಗಡ್ಡ ಬಿಟ್ಟಿದ್ದಕ್ಕೆ ಮೇಲಾಧಿಕಾರಿಗಳಿಂದಲೇ ಪೊಲೀಸ್ಗೆ ಶಿಕ್ಷೆ! ಹೈಕೋರ್ಟ್ ಇದನ್ನು ತಡೆಹಿಡಿದಿದ್ದೇಕೆ?ಬಿಹಾರದ ಮುಸ್ಲಿಮರ ಬಗ್ಗೆ ಪ್ರಶಾಂತ್ ಕಿಶೋರ್ ಹೇಳಿದ್ದೇನು? ಲಾಲು-ನಿತೀಶ್ ಗರಂ ಆಗೋದು ಪಕ್ಕಾ!ಹಿಂದೂ-ಮುಸ್ಲಿಂ ಭಾವೈಕ್ಯತೆಯ ಹಬ್ಬ ಮೊಹರಂ, ಇದನ್ನು ಆಚರಿಸೋ ಹಿನ್ನೆಲೆ ಏನು ಗೊತ್ತಾ?ರತ್ನ ಭಂಡಾರ ಓಪನ್ ಮಾಡುತ್ತಿದ್ದ ಹಾಗೇ ಮೂರ್ಛೆ ಹೋದ ಎಸ್‌ಪಿ! ಅಲ್ಲಿದ್ದವ್ರೆಲ್ಲಾ ಬೆಚ್ಚಿಬಿದ್ರು!ಇದನ್ನೂ ಓದಿ: 7 ಕೋಟಿ ಮೌಲ್ಯದ ಜಮೀನು 4 ಲಕ್ಷ ರೂಗೆ ಡೀಲ್: ಇದು ಲಾಟರಿಯಲ್ಲ, ಖರೀದಿದಾರರಿಗೆ ಸಿಕ್ಕ ನ್ಯಾಯಹಿಂದೂಗಳಿಗೆ ಮತ್ತೆ ಮುನ್ನಡೆ!ನ್ಯಾಯಮೂರ್ತಿ ಮಯಾಂಕ್ ಕುಮಾರ್ ಜೈನ್ ಅವರ ಈ ಆದೇಶವು ಹಿಂದೂಗಳ ಪಾಲಿಗೆ ದೊಡ್ಡ ಸಮಾಧಾನ ತಂದಿದೆ ಅಂತಾನೇ ಹೇಳಬಹುದು. ಶಾಹಿ ಈದ್ಗಾ ಮಸೀದಿಯ ರಚನೆಯನ್ನು ತೆಗೆದುಹಾಕುವುದು, ಭೂಮಿಯನ್ನು ಹಸ್ತಾಂತರಿಸುವುದು ಮತ್ತು ದೇವಾಲಯದ ಪುನರ್ನಿರ್ಮಾಣಕ್ಕಾಗಿ ಒತ್ತಾಯಿಸಿ ಹಿಂದೂ ಅರ್ಜಿದಾರರು ಮೊಕದ್ದಮೆಯನ್ನು ದಾಖಲಿಸಿದ್ದರು. ಇದಕ್ಕೆ ಪ್ರತಿಯಾಗಿ ಅದೇ ಸಮಯದಲ್ಲಿ ಶಾಹಿ ಈದ್ಗಾ ಮಸೀದಿ ವಕ್ಫ್ ಕಾಯಿದೆ ಇತ್ಯಾದಿಗಳನ್ನು ಉಲ್ಲೇಖಿಸಿ ಹಿಂದೂ ಕಡೆಯ ಅರ್ಜಿಗಳನ್ನು ತಿರಸ್ಕರಿಸಲು ವಾದ ಮಂಡಿಸಿದ್ದಾರೆ. ಮಾಲೀಕತ್ವದ ಹಕ್ಕುಗಳ ಕುರಿತು ಹಿಂದೂ ಕಡೆಯ ಅರ್ಜಿಗಳು ವಿಚಾರಣೆಗೆ ಅರ್ಹವಾಗಿವೆ ಎಂದು ಹೈಕೋರ್ಟ್ ತನ್ನ ತೀರ್ಪಿನಲ್ಲಿ ಹೇಳಿದೆ. ಇವುಗಳ ವಿಚಾರಣೆ ಮುಂದುವರಿಯಲಿದೆ. ನ್ಯಾಯಾಲಯವು ಮುಸ್ಲಿಂ ಪರ ಅರ್ಜಿಯನ್ನು ವಜಾಗೊಳಿಸಿದೆ. ಮುಂಬರುವ ದಿನಗಳಲ್ಲಿ ಎಲ್ಲಾ ಮೊಕದ್ದಮೆಗಳು ವಿಚಾರಿಸಲಾಗುವುದು ಎಂದು ಹೇಳಿದ್ದಾರೆ. ಹಿಂದೂ ಪಕ್ಷಗಳ ವಾದಈದ್ಗಾದ ಸಂಪೂರ್ಣ ಎರಡೂವರೆ ಎಕರೆ ಪ್ರದೇಶವು ಶ್ರೀಕೃಷ್ಣನ ಗರ್ಭಗುಡಿಯಾಗಿದೆ.ಶಾಹಿ ಈದ್ಗಾ ಮಸೀದಿ ಸಮಿತಿಯ ಬಳಿ ಜಮೀನಿನ ಯಾವುದೇ ದಾಖಲೆ ಇಲ್ಲ.ಶ್ರೀ ಕೃಷ್ಣ ದೇವಾಲಯವನ್ನು ಕೆಡವಿ ಶಾಹಿ ಈದ್ಗಾ ಮಸೀದಿಯನ್ನು ನಿರ್ಮಿಸಲಾಗಿದೆ.ಮಾಲೀಕತ್ವದ ಹಕ್ಕುಗಳಿಲ್ಲದೆ, ವಕ್ಫ್ ಮಂಡಳಿಯು ಯಾವುದೇ ಕಾನೂನು ಪ್ರಕ್ರಿಯೆಗಳಿಲ್ಲದೆ ಈ ಭೂಮಿಯನ್ನು ವಕ್ಫ್ ಆಸ್ತಿ ಎಂದು ಘೋಷಿಸಿದೆ ಎಂದು ವಾದಿಸಿದ್ದಾರೆ1968ರಲ್ಲಿ ಈ ಭೂಮಿಯಲ್ಲಿ ಎರಡು ಪಕ್ಷಗಳ ನಡುವೆ ಒಪ್ಪಂದವಾಗಿತ್ತು ಎಂಬುದು ಮುಸ್ಲಿಂ ಪಕ್ಷಗಳ ವಾದ. 60 ವರ್ಷಗಳ ನಂತರ ಒಪ್ಪಂದವನ್ನು ತಪ್ಪು ಎಂದು ಕರೆಯುವುದು ಸರಿಯಲ್ಲ. ಆದ್ದರಿಂದ ಪ್ರಕರಣವನ್ನು ನಿರ್ವಹಿಸಲಾಗುವುದಿಲ್ಲ.
ಪೂಜಾ ಸ್ಥಳಗಳ ಕಾಯಿದೆ 1991 ರ ಅಡಿಯಲ್ಲಿ ಪ್ರಕರಣವನ್ನು ನಿರ್ವಹಿಸಲಾಗುವುದಿಲ್ಲ.
ಧಾರ್ಮಿಕ ಸ್ಥಳದ ಗುರುತು ಮತ್ತು ಸ್ವರೂಪವು ಆಗಸ್ಟ್ 15, 1947 ರಂದು ಇದ್ದಂತೆ ಉಳಿಯುತ್ತದೆ. ಅಂದರೆ ಅದರ ಸ್ವರೂಪವನ್ನು ಬದಲಾಯಿಸಲು ಸಾಧ್ಯವಿಲ್ಲ.
ಈ ವಿವಾದವನ್ನು ವಕ್ಫ್ ನ್ಯಾಯಮಂಡಳಿಯಲ್ಲಿ ವಿಚಾರಣೆ ನಡೆಸಬೇಕು. ಇದು ಸಿವಿಲ್ ನ್ಯಾಯಾಲಯದಲ್ಲಿ ಕೇಳುವ ವಿಷಯವಲ್ಲ ಎಂದು ವಾದ ಮಾಡಿದ್ದಾರೆ.

Post a Comment