Modi Meets Team India: ವಿಶ್ವ ಚಾಂಪಿಯನ್ನರೊಂದಿಗೆ ಮೋದಿ; ಟೀಂ ಇಂಡಿಯಾ ಆಟಗಾರರಿಗೆ ಪ್ರಧಾನಿ ಹೇಳಿದ್ದೇನು?


 ಮೋದಿ ಜೊತೆ ಟೀಂ ಇಂಡಿಯಾ

PM Modi Meets Indian Cricket Team: ನಾಯಕ ರೋಹಿತ್ ಶರ್ಮಾ, ಬ್ಯಾಟ್ಸ್‌ಮನ್ ವಿರಾಟ್ ಕೊಹ್ಲಿ, ಆಲ್‌ರೌಂಡರ್ ಹಾರ್ದಿಕ್ ಪಾಂಡ್ಯ, ಸೂರ್ಯಕುಮಾರ್ ಯಾದವ್ ಮತ್ತು ರಿಷಬ್ ಪಂತ್ ಮತ್ತು ಕೋಚ್ ರಾಹುಲ್ ದ್ರಾವಿಡ್ ಸೇರಿದಂತೆ ಎಲ್ಲಾ 15 ಆಟಗಾರರು ಪ್ರಧಾನಿ ಮೋದಿ ಅವರನ್ನು ಅವರ ನಿವಾಸದಲ್ಲಿ ಭೇಟಿಯಾಗಿರುವುದು ವೀಡಿಯೊದಲ್ಲಿ ಕಂಡುಬಂದಿದೆ.ನವದೆಹಲಿ: ಟಿ20 ವಿಶ್ವಕಪ್ (T20 World Cup) ಗೆದ್ದ 5 ದಿನಗಳ ನಂತರ ಟೀಂ ಇಂಡಿಯಾ ವಿಶ್ವಕಪ್ ಟ್ರೋಫಿಯೊಂದಿಗೆ (Team India) ಭಾರತದ ನೆಲಕ್ಕೆ ಬಂದಿಳಿದೆ. ಗೋಲ್ಡನ್ ಟ್ರೋಫಿಯೊಂದಿಗೆ ಇಂದಿರಾಗಾಂಧಿ ಅಂತರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಬಂದಿಳಿದ ರೋಹಿತ್ (Rohit Sharma) ಮತ್ತು ತಂಡ ಇದೀಗ ಪ್ರಧಾನಿ ನರೇಂದ್ರ ಮೋದಿ ಅವರನ್ನು ಭೇಟಿ ಮಾಡಿದೆ.ನಾಯಕ ರೋಹಿತ್ ಶರ್ಮಾ, ಬ್ಯಾಟ್ಸ್‌ಮನ್ ವಿರಾಟ್ ಕೊಹ್ಲಿ, ಆಲ್‌ರೌಂಡರ್ ಹಾರ್ದಿಕ್ ಪಾಂಡ್ಯ, ಸೂರ್ಯಕುಮಾರ್ ಯಾದವ್ ಮತ್ತು ರಿಷಬ್ ಪಂತ್ ಮತ್ತು ಕೋಚ್ ರಾಹುಲ್ ದ್ರಾವಿಡ್ ಸೇರಿದಂತೆ ಎಲ್ಲಾ 15 ಆಟಗಾರರು ಪ್ರಧಾನಿ ಮೋದಿ ಅವರನ್ನು ಅವರ ನಿವಾಸದಲ್ಲಿ ಭೇಟಿಯಾಗಿರುವುದು ವೀಡಿಯೊದಲ್ಲಿ ಕಂಡುಬಂದಿದೆ. ಈ ವೇಳೆ ಆಟದ ಅನುಭವದ ಬಗ್ಗೆ ಪ್ರಧಾನಿ ಮೋದಿ ಅವರು ಟೀಂ ಇಂಡಿಯಾ ಆಟಗಾರರ ಜೊತೆ ಚರ್ಚೆ ನಡೆಸಿದ್ದಾರೆ.ಸಂಬಂಧಿತ ಸುದ್ದಿವಾಂಖೆಡೆ ಮೈದಾನದಲ್ಲಿ ವಿರಾಟ್‌‌-ರೋಹಿತ್‌ ಭರ್ಜರಿ ಸ್ಟೆಪ್ಸ್! ಇನ್ನೆಂದೂ ಇಂಥ ಕ್ಷಣ ಮರುಕಳಿಸಲ್ಲ!ಅವಮಾನಿಸಿದ್ದಲ್ಲೇ, ಅವಮಾನಿಸಿದ್ದವರಿಂದಲೇ ಹಾರ್ದಿಕ್‌ಗೆ ಜೈಕಾರ! ವಿಡಿಯೋ ನೋಡಿ ಖುಷಿಯಾಗುತ್ತೆTeam India: ಗೆದ್ದ ಮೇಲೆ ಟ್ರೋಫಿ ಮೇಲೆ ಕಾಲಿಡೋದಲ್ಲ, ನಮ್ಮ ಪ್ಲೇಯರ್ಸ್ ನೋಡಿ ಹೇಗೆ ಎಂಜಾಯ್‌ ಮಾಡಿದ್ದಾರೆಅಂದು ಸೋತಾಗ.. ಇಂದು ಗೆದ್ದಾಗ..! ಸದಾ ಜೊತೆಗಿದ್ದ ಲೀಡರ್; ಟೀಂ ಇಂಡಿಯಾಕ್ಕೆ ಪ್ರಧಾನಿ ಮೋದಿ ಹೇಳಿದ್ದೇನು?!ಇದನ್ನೂ ಓದಿ: Hathras Stampede: ಹತ್ರಾಸ್ ಕಾಲ್ತುಳಿತದಲ್ಲಿ ಮೃತರ ಸಂಖ್ಯೆ 121ಕ್ಕೆ ಏರಿಕೆ! ಸಾಕ್ಷ್ಯವನ್ನು ಮರೆಮಾಚಲು ಬಾಬಾನ ಸೇವಕರಿಂದ ಹೀನಕೃತ್ಯ!ಭಾರತ ಕ್ರಿಕೆಟ್ ತಂಡದ ಜೊತೆ ಮಾತನಾಡುವಾಗ ಪ್ರಧಾನಿ ಮೋದಿ ತುಂಬಾ ನಗು ನಗುತ್ತಾ ಖುಷಿಯಿಂದ ಕಂಡುಬಂದಿದ್ದಾರೆ. ಈ ವೇಳೆ ಪ್ರಧಾನಿ ಮೋದಿ ವಿಶ್ವಕಪ್ ಟ್ರೋಫಿಯನ್ನು ಆಟಗಾರರಿಂದ ತಮ್ಮ ಕೈಗೆ ತೆಗೆದುಕೊಂಡು ಸಂಭ್ರಮಿಸಿದರು. ಆಟಗಾರರು ಪ್ರಧಾನಿ ಮೋದಿ ಅವರ ಜೊತೆ ತಮ್ಮ ಐತಿಹಾಸಿಕ ಅನುಭವವನ್ನು ಹಂಚಿಕೊಂಡರು. ಮೋದಿ ಜತೆಗಿನ ಸಭೆ ವೇಳೆ ಪ್ರಧಾನಿ ಆಟಗಾರರ ಜೊತೆ ಹರಟೆ ಮೋಜು ಮಾಡಿರುವುದು ಕಂಡು ಬಂತು. ವಾಸ್ತವವಾಗಿ, ಪ್ರಧಾನಿ ಮೋದಿ ಅವರು ಉಪಹಾರಕ್ಕಾಗಿ ಭಾರತೀಯ ತಂಡವನ್ನು ಆಹ್ವಾನಿಸಿದ್ದರು.ಕ್ರಿಕೆಟ್ ತಂಡವು ಪ್ರಧಾನಿ ಮೋದಿ ಜೊತೆಗಿನ ಸಭೆ ಬಳಿಕ ಮುಂಬೈಗೆ ತೆರಳಲಿದೆ, ಅಲ್ಲಿ ನಾರಿಮನ್ ಪಾಯಿಂಟ್‌ನಿಂದ ವಾಂಖೆಡೆವರೆಗೆ ರೋಡ್ ಶೋ ಏರ್ಪಡಿಸಲಾಗಿದೆ, ಇದರಿಂದಾಗಿ ಅಭಿಮಾನಿಗಳು ವಿಶ್ವಕಪ್‌ನೊಂದಿಗೆ ತಮ್ಮ ತಾರೆಯರನ್ನು ಹತ್ತಿರದಿಂದ ವೀಕ್ಷಿಸಬಹುದು. ಇದಾದ ಬಳಿಕ ಟೀಂ ಇಂಡಿಯಾ ಆಟಗಾರರಿಗೆ ವಾಂಖೆಡೆ ಕ್ರೀಡಾಂಗಣದಲ್ಲಿ ಅಭಿನಂದನಾ ಸಮಾರಂಭವನ್ನು ಏರ್ಪಡಿಸಲಾಗಿದೆ.ಇಂದಿನ ಟೀಂ ಇಂಡಿಯಾದ ಸಂಪೂರ್ಣ ವೇಳಾಪಟ್ಟಿ:ಟಿ20 ವಿಶ್ವಕಪ್ ಗೆದ್ದ ಭಾರತೀಯ ಆಟಗಾರರನ್ನು ಹೊತ್ತ ಏರ್ ಇಂಡಿಯಾದ ವಿಶೇಷ ಚಾರ್ಟರ್ ವಿಮಾನವು ಇಂದು ಬೆಳಿಗ್ಗೆ 6.20 ರ ಸುಮಾರಿಗೆ ರಾಷ್ಟ್ರ ರಾಜಧಾನಿ ದೆಹಲಿಗೆ ಬಂದಿಳಿದಿದೆ. ಬಹುದೂರ ಕ್ರಮಿಸಿದ್ದರಿಂದ ಟೀಂ ಇಂಡಿಯಾ ಆಟಗಾರರು ಸ್ವಲ್ಪ ಸಮಯ ವಿಶ್ರಾಂತಿ ಪಡೆದರು. ನಂತರ ಬೆಳಗ್ಗೆ 11 ಗಂಟೆ ನಂತರ ಪ್ರಧಾನಿ ನರೇಂದ್ರ ಮೋದಿ ಅವರೊಂದಿಗೆ ವಿಶೇಷ ಸಭೆ ನಡೆಸಿದರು. ಇದನ್ನೂ ಓದಿ: School Holiday: ಪೋಷಕರೇ ಗಮನಿಸಿ, ಇಂದು ರಾಜ್ಯದ ಈ ತಾಲೂಕುಗಳ ಪ್ರಾಥಮಿಕ-ಪ್ರೌಢ ಶಾಲೆಗಳಿಗೆ ರಜೆ ಘೋಷಣೆ!ಪ್ರಧಾನಿ ನರೇಂದ್ರ ಮೋದಿ ಅವರನ್ನು ಭೇಟಿ ಮಾಡಿದ ನಂತರ, ಆಟಗಾರರು ಸಂಜೆ 4 ಗಂಟೆಗೆ ರಾಜಧಾನಿ ದೆಹಲಿಯಿಂದ ವಾಣಿಜ್ಯ ನಗರಿ ಮುಂಬೈಗೆ ತೆರಳಲಿದ್ದಾರೆ. ಇಲ್ಲಿ ಸಂಜೆ 5 ರಿಂದ 7 ರ ಸುಮಾರಿಗೆ ತೆರೆದ ಬಸ್‌ನಲ್ಲಿ ವಿಜಯೋತ್ಸವ ಮೆರವಣಿಗೆ ನಡೆಯಲಿದೆ. ಆಟಗಾರರನ್ನು ಸ್ವಾಗತಿಸುವ ಕಾರ್ಯಕ್ರಮ ಇಲ್ಲಿಗೆ ನಿಲ್ಲುವುದಿಲ್ಲ. ಸುಮಾರು ಅರ್ಧ ಗಂಟೆ ನಂತರ ಅಂದರೆ ಸಂಜೆ 7.30ಕ್ಕೆ ವಾಂಖೆಡೆ ಕ್ರೀಡಾಂಗಣದಲ್ಲಿ ಅಭಿನಂದನಾ ಕಾರ್ಯಕ್ರಮವನ್ನೂ ಆಯೋಜಿಸಲಾಗಿದೆ. ಈ ಕಾರ್ಯಕ್ರಮದ ವೇಳೆಯೇ ತಂಡಕ್ಕೆ 125 ಕೋಟಿ ರೂಪಾಯಿ ಬಹುಮಾನ ನೀಡಲಿದ್ದು, ಇದಾದ ನಂತರ ಎಲ್ಲಾ ಆಟಗಾರರು ತಮ್ಮ ತಮ್ಮ ಹೋಟೆಲ್‌ಗಳಿಗೆ ತೆರಳುತ್ತಾರೆ. ಇಂದಿನ ಪೂರ್ಣ ವೇಳಾಪಟ್ಟಿಬೆಳಿಗ್ಗೆ 6.20ಕ್ಕೆ ನವದೆಹಲಿಗೆ ಆಗಮನಬೆಳಿಗ್ಗೆ 11 ಗಂಟೆಗೆ ಪ್ರಧಾನಿ ಮೋದಿ ಭೇಟಿಸಂಜೆ 4 ಗಂಟೆಗೆ ಮುಂಬೈಗೆ ಆಗಮನತೆರೆದ ಬಸ್ ಮೆರವಣಿಗೆ ಸಂಜೆ 5 ರಿಂದ 7 ರವರೆಗೆವಾಂಖೆಡೆಯಲ್ಲಿ ಸಂಜೆ 7.30ರವರೆಗೆ ಅಭಿನಂದನಾ ಕಾರ್ಯಕ್ರಮಈ ಕಾರ್ಯಕ್ರಮದಲ್ಲಿ ತಂಡಕ್ಕೆ 125 ಕೋಟಿ ರೂಪಾಯಿ ಬಹುಮಾನ ವಿತರಣೆನಂತರ ಆಟಗಾರರು ಆಯಾ ಹೋಟೆಲ್‌ಗಳಿಗೆ ವಾಪಸ್ಇಂದು ದೆಹಲಿಯಲ್ಲಿ ರೋಹಿತ್ ಶರ್ಮಾ ನೇತೃತ್ವದ ಟೀಂ ಇಂಡಿಯಾದ ಆಟಗಾರರು ದೇಶದ ಪ್ರಧಾನಿ ನರೇಂದ್ರ ಮೋದಿ ಅವರನ್ನು ಭೇಟಿ ಮಾಡುವ ವೇಳೆ ಮೋದಿ ಅವರೊಂದಿಗೆ ಉಪಹಾರ ಸೇವಿಸಿದರು.

Post a Comment

Previous Post Next Post