Jharkhand: ಆಪರೇಷನ್ ಭೀತಿ! ಹೈದರಾಬಾದ್​ ತಲುಪಿದ ಜಾರ್ಖಂಡ್​ನ ಕಾಂಗ್ರೆಸ್​-ಜೆಎಂಎಂ ಶಾಸಕರು


  ಸಿಎಂ ಚಂಪೈ ಸೊರೇನ್- ಹೈದರಾಬಾದ್​ಗೆ ಬಂದ ಜೆಎಂಎಂ ಶಾಸಕರುಹೈದರಾಬಾದ್: ಸಿಎಂ ಹೇಮಂತ್ ಸೊರೇನ್ (Hemant Soren) ಬಂಧನವಾಗುತ್ತಿದ್ದಂತೆ ಜಾರ್ಖಂಡ್ (Jharkhand) ರಾಜಕೀಯದಲ್ಲಿ ಮಹತ್ವದ ಬೆಳವಣಿಗೆ ಕಂಡುಬಂದಿದೆ. ಈಗಾಗಲೇ ಚಂಪೈ ಸೊರೇನ್ (Champai Soren) ಸಿಎಂ ಆಗುವುದು ಖಚಿತವಾಗಿರುವ ಹಿನ್ನಲೆ ಬಹುಮತ ಸಾಬೀತಿಗೂ ಮುನ್ನ ಆಡಳಿತ ಮೈತ್ರಿ ಪಕ್ಷ ತನ್ನ ಶಾಸಕರನ್ನು ಕಾಪಾಡಿಕೊಳ್ಳಲು ಎಲ್ಲಾ ಶಾಸಕರನ್ನು ಹೈದರಾಬಾದ್​ಗೆ ಬಂದಿಳಿದಿದ್ದಾರೆ. ಹಿರಿಯ ಜಾರ್ಖಂಡ್ ಮುಕ್ತಿ ಮೋರ್ಚಾ ನಾಯಕ ಚಂಪೈ ಸೊರೇನ್ ಅವರು 43 ಶಾಸಕರ ಬೆಂಬಲದೊಂದಿಗೆ ಸಿಎಂ ಆಗಿ ಪ್ರಮಾಣ ವಚನ ಸ್ವೀಕರಿಸಲು ರಾಜ್ಯಪಾಲರಿಗೆ ಅನುಮತಿಗೆ ಕಳುಹಿಸಿಕೊಡಲಾಗಿದೆ. ಆಡಳಿತಾರೂಢ ಮೈತ್ರಿಕೂಟದ ಶಾಸಕರಿಂದ ಚಂಪೈ ಸೊರೆನ್ ಅವರನ್ನು ಶಾಸಕಾಂಗ ನಾಯಕರಾಗಿ ಆಯ್ಕೆ ಮಾಡಲಾಗಿದೆ. ಇಂದು ಸಿಎಂ ಆಗಿ ಚಂಪೈ ಸೋರೆನ್ ಪ್ರಮಾಣ ವಚನ ಸ್ವೀಕರಿಸಲಿದ್ದಾರೆ. ಆದರೆ ಬಹುಮತ ಸಾಬೀತಿಗಾಗಿ 10 ದಿನಗಳ ಸಮಯವಿದೆ. ಹೈದರಾಬಾದ್ ತಲುಪಿದ 40 ಶಾಸಕರುಸಂಬಂಧಿತ ಸುದ್ದಿಹೇಮಂತ್ ಸೊರೇನ್​ಗೆ ಶಾಕ್ ಕೊಟ್ಟ ಸುಪ್ರೀಂ ಕೋರ್ಟ್! ED ಬಂಧನ ಪ್ರಶ್ನಿಸಿ ಸಲ್ಲಿಸಿದ್ದ ಅರ್ಜಿ ವಜಾHemant Soren: ಸಿಎಂ ಸ್ಥಾನಕ್ಕೆ ಹೇಮಂತ್‌ ಸೊರೇನ್‌ ರಾಜೀನಾಮೆ; ನೂತನ ಸಿಎಂ ಚಂಪೈ ಸೊರೇನ್!ED Raid ಬಳಿಕ ಜಾರ್ಖಂಡ್ ಸಿಎಂ ಹೇಮಂತ್ ಸೊರೇನ್ ನಾಪತ್ತೆ, ಫೋನ್ ಕೂಡಾ ಸ್ವಿಚ್ ಆಫ್!ರಾಮಮಂದಿರ ಉದ್ಘಾಟನೆಗೂ ಮುನ್ನ ರಾಮ್​ ಕಿ ನಾಮ್ ಸಾಕ್ಷ್ಯಚಿತ್ರ ಪ್ರಸಾರ! 3 ಜನರನ್ನ ಬಂಧಿಸಿದ ಪೊಲೀಸ್​ಜಾರ್ಖಂಡ್‌ನಲ್ಲಿ ಹೊಸ ಸರ್ಕಾರದ ಬಿಕ್ಕಟ್ಟು ಮತ್ತು ಸಸ್ಪೆನ್ಸ್ ನಡುವೆ, ಜೆಎಂಎಂ-ಕಾಂಗ್ರೆಸ್-ಆರ್‌ಜೆಡಿ ಮೈತ್ರಿಕೂಟದ 40 ಶಾಸಕರನ್ನು ಎರಡು ಚಾರ್ಟರ್ಡ್ ವಿಮಾನಗಳ ಮೂಲಕ ಹೈದರಾಬಾದ್‌ ಬಂದಿದ್ದಾರೆ. ವಿಮಾನದೊಳಗಿನ ಫೋಟೋವನ್ನು ಎಎನ್​ಐ ಸುದ್ದಿ ಸಂಸ್ಥೆ ಬಿಡುಗಡೆ ಮಾಡಿದೆ. ಈ ಶಾಸಕರು ಈಗಾಗಲೇ ನಿಯೋಜನೆ ಮಾಡಿರುವ ಎರಡು ಬಸ್‌ಗಳಲ್ಲಿ ಹೈದರಾಬಾದ್​ನಲ್ಲಿ ರೆಸಾರ್ಟ್​ ಒಂದರಲ್ಲಿ ವಾಸ್ತವ್ಯ ಹೂಡಲಿದ್ದಾರೆ.ಇದನ್ನೂ ಓದಿ: ಹೇಮಂತ್ ಸೊರೇನ್​ಗೆ ಶಾಕ್ ಕೊಟ್ಟ ಸುಪ್ರೀಂ ಕೋರ್ಟ್! ED ಬಂಧನ ಪ್ರಶ್ನಿಸಿ ಸಲ್ಲಿಸಿದ್ದ ಅರ್ಜಿ ವಜಾ ಸಚಿವ ಪೊನ್ನಂ ಪ್ರಭಾಕರ್​ಗೆ ಜವಾಬ್ದಾರಿಆಪರೇಷನ್ ಜಾರ್ಖಂಡ್ ಜವಾಬ್ದಾರಿಯನ್ನು ಸಚಿವ ಪೊನ್ನಂ ಪ್ರಭಾಕರ್ ಮತ್ತು ಎಐಸಿಸಿ ಕಾರ್ಯದರ್ಶಿ ಸಂಪತ್ ಕುಮಾರ್ ಅವರಿಗೆ ಟಿಪಿಸಿಸಿ ನೀಡಿದೆ. ಈ ಕ್ರಮದಲ್ಲಿ 43 ಶಾಸಕರನ್ನು ಹೋಟೆಲ್‌ಗಳಿಗೆ ಸೇರಿಸಲು ಸಿದ್ಧಪಡಿಸಲಾಗಿತ್ತು. ಬಹುಮತ ಸಾಬೀತು ಪರೀಕ್ಷೆ ಖಚಿತವಾಗುವವರೆಗೆ ಜಾರ್ಖಂಡ್‌ನ ಎಲ್ಲಾ ಶಾಸಕರು ಹೈದರಾಬಾದ್‌ನಲ್ಲಿಯೇ ಇರಲಿದ್ದಾರೆ.ಆಪರೇಷನ್​ ಕಮಲದ ಭೀತಿಬಹುಮತ ಸಾಬೀತು ಪಡಿಸಲು 10 ದಿನಗಳ ಕಾಲಾವಕಾಶ ನೀಡಲಾಗಿದೆ. ಈ ಅವಧಿಯಲ್ಲಿ ನಾವು ಎದುರಾಳಿ ಪಕ್ಷಗಳಿಗೆ ಯಾವುದೇ ಅವಕಾಶ ನೀಡಲು ಬಯಸಲ್ಲ, ಹಾಗಾಗಿ ಬಿಜೆಪಿ ತಮ್ಮ ಶಾಸಕರನ್ನು ಭೇಟಿ ಮಾಡಲು ಪ್ರಯತ್ನಿಸಬಹುದು. ಈ ಉದ್ದೇಶದಿಂದ ನಾವು ಶಾಸಕರನ್ನ ರೆಸಾರ್ಟ್​ನಲ್ಲಿ ಇರಿಸಲು ತೀರ್ಮಾನಿಸಿದ್ದೇವೆ. ನಾವು ವಿಧಾನಸಭೆಯಲ್ಲಿ ನಾವುಬಹುಮತ ಸಾಬೀತು ಪಡಿಸುವುದನ್ನ ನೀವು ನೋಡುತ್ತೀರಿ ಎಂದು ವಿಶ್ವಾಸ ವ್ಯಕ್ತಪಡಿಸಿದ್ದಾರೆ.ಸೊರೇನ್​ 5 ದಿನಗಳ ಇಡಿ ಕಸ್ಟಡಿಗೆಇನ್ನು ಅಕ್ರಮ ಹಣ ವರ್ಗಾವಣೆ ಪ್ರಕರಣಕ್ಕೆ ಸಂಬಂಧಿಸಿದಂತೆ ಸಿಎಂ ಹೇಮಂತ್ ಸೊರೇನ್​ರನ್ನ ಜನವರಿ 31ರಂದು ಜಾರಿ ನಿರ್ದೇಶನಾಲಯ ಬಂಧಿಸಿದೆ. ಶುಕ್ರವಾರ ಕೋರ್ಟ್​ಗೆ ಹಾಜರು ಪಡಿಸಲಾಗಿದ್ದು, ಕೋರ್ಟ್ 5 ದಿನಗಳ ಇಡಿ ಕಸ್ಟಡಿಗೆ ನೀಡಿದೆ. ತಮ್ಮ ಬಂಧನವನ್ನು ಪ್ರಶ್ನಿಸಿ ಹೇಮಂತ್ ಸಲ್ಲಿಸಿದ್ದ ಅರ್ಜಿಯನನ್ ಸುಪ್ರೀಂ ಕೋರ್ಟ್​ ತಿರಸ್ಕರಿಸಿ, ಹೈಕೋರ್ಟ್​ನಲ್ಲಿ ತಮ್ಮ ಅರ್ಜಿ ಸಲ್ಲಿಸುವಂತೆ ಸೂಚಿಸಿದೆ.

Post a Comment

Previous Post Next Post