ಸಾಂದರ್ಭಿಕ ಚಿತ್ರ
ಬಾಲಕಿ ಇದೀಗ ಕಾನೂನು ಸೇವಾ ಪ್ರಾಧಿಕಾರದ ಕಾರ್ಯದರ್ಶಿಗೆ ಪತ್ರ ಬರೆದು ನ್ಯಾಯಕ್ಕಾಗಿ ಮನವಿ ಮಾಡಿದ್ದಾಳೆ. ಪ್ರಕರಣವನ್ನು ಅರಿತು, ಕಾರ್ಯದರ್ಶಿ ಯುವತಿಯನ್ನು ಮಹಿಳಾ ಪೊಲೀಸ್ ಠಾಣೆಯ ಉಸ್ತುವಾರಿಗೆ ಒಪ್ಪಿಸಿದ್ದು, ಪ್ರಕರಣ ದಾಖಲಿಸಿ ಕ್ರಮ ಕೈಗೊಳ್ಳುವಂತೆ ಸೂಚಿಸಿದ್ದಾರೆ. ಅಜಂಗಢ: ಅಪ್ರಾಪ್ತ ವಯಸ್ಸಿನ ಮಗಳ ಮೇಲೆ ಸ್ವಂತ ತಂದೆಯೇ ಎರಡು ವರ್ಷಗಳ ಕಾಲ ಅತ್ಯಾಚಾರವೆಸಗಿದ್ದಲ್ಲದೇ, ನಂತರ ಮದುವೆಯ ಹೆಸರಲ್ಲಿ 2.5 ಲಕ್ಷ ರೂಪಾಯಿಗೆ ಮಾರಾಟ ಮಾಡಿರುವ ನಾಚಿಕೆಗೇಡಿನ (Shocking News) ಪ್ರಕರಣವೊಂದು ಬೆಳಕಿಗೆ ಬಂದಿದೆಉತ್ತರ ಪ್ರದೇಶದ ಅಜಂಗಢ ಜಿಲ್ಲೆಯ ತರ್ವಾನ್ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಈ ಕೃತ್ಯ ನಡೆದಿದ್ದು, 2.5 ಲಕ್ಷ ರೂ.ಗೆ ಮಾರಾಟ ಮಾಡಿದ ಬಳಿಕ ಪತಿಯೂ ಆಕೆಯನ್ನು ವೇಶ್ಯಾವಾಟಿಕೆಗೆ ಒತ್ತಾಯಿಸಲು ಆರಂಭಿಸಿದ್ದಾನೆ ಎಂಬ ಆಘಾತಕಾರಿ ವಿಷಯ ತಿಳಿದು ಬಂದಿದೆ. ಬಾಲಕಿ ಗರ್ಭಿಣಿಯಾದಾಗ ಪತಿ ಆಕೆಯನ್ನು ಬಿಟ್ಟು ಓಡಿ ಹೋಗಿದ್ದು, ತಂದೆ ಆಕೆಯನ್ನು ಮನೆಗೆ ಸೇರಿಸಿಕೊಳ್ಳಲು ನಿರಾಕರಿಸಿದ್ದ. ಬಾಲಕಿ ಇದೀಗ ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರದ ಮೊರೆ ಹೋಗಿದ್ದು, ನ್ಯಾಯಕ್ಕಾಗಿ ಮನವಿ ಮಾಡಿದ್ದಾಳೆ.ಪ್ರೇಯಸಿ ಜೊತೆ ಸೇರಿ ಕೋಟಿ ಲೂಟಿ; ದೋಚಿದ ಹಣ ಅನಾಥಶ್ರಮಕ್ಕೂ ದಾನ! ಕೊನೆಗೆ ಖಾಕಿ ಕೈಲಿ ಲಾಕ್Hassan: ಮಾವನನ್ನೇ ಚಾಕುವಿನಿಂದ ಇರಿದು ಬರ್ಬರವಾಗಿ ಕೊಲೆಗೈದ ಅಳಿಯBengaluru: ಲುಲು ಮಾರ್ಟ್‌ನಲ್ಲಿ ಕಾಮುಕನ ಅಸಭ್ಯ ವರ್ತನೆ; ಚಪಲ ಚೆನ್ನಿಗರಾಯನ ಪತ್ತೆ ಹಚ್ಚಿದ ಖಾಕಿ!ಬಿಜೆಪಿಯ ಪ್ರಭಾವಿ ಶಾಸಕನ ಪತ್ನಿ ಏಕಾಏಕಿ ನಾಪತ್ತೆ! ಹುಡುಕಾಟಕ್ಕೆ 6 ಪೊಲೀಸರ ತಂಡ ರಚನೆಇದನ್ನೂ ಓದಿ: Shocking Story: ಅಪರೂಪದಲ್ಲಿ ಅಪರೂಪ, ಏಕಕಾಲದಲ್ಲಿ ಮೂರು ಕರುಗಳಿಗೆ ಜನ್ಮ ನೀಡಿದ ಹಸು!ಗುರುವಾರ ಸಂಜೆ ಮಹಿಳಾ ಪೊಲೀಸ್ ಠಾಣೆಗೆ ಹುಡುಗಿಯೊಬ್ಬಳು ಬಂದಿದ್ದಾಳೆ. ಪೊಲೀಸರಿಗೆ ನೀಡಿರುವ ದೂರಿನಲ್ಲಿ ಬಾಲಕಿಯು, ತನ್ನ ತಂದೆ ತನ್ನನ್ನು ಬಲವಂತವಾಗಿ ತನ್ನ ಬಳಿಯೇ ಇಟ್ಟುಕೊಂಡಿದ್ದ. ನಾನು 10 ನೇ ತರಗತಿಯಲ್ಲಿ ಓದುತ್ತಿದ್ದಾಗ, ತಂದೆ ನನಗೆ ಕೆಲವು ಔಷಧಿಯನ್ನು ನೀಡಲು ಪ್ರಾರಂಭಿಸಿದರು, ಇದರಿಂದಾಗಿ ನಾನು ಆಲಸ್ಯವನ್ನು ಅನುಭವಿಸಲು ಪ್ರಾರಂಭಿಸಿದೆ. ಈ ಸಮಯದಲ್ಲಿ ತಂದೆ ನನ್ನ ಮೇಲೆ ಅತ್ಯಾಚಾರ ಮಾಡಲು ಆರಂಭಿಸಿದ್ದರು. ತಂದೆ ನನಗೆ ಎರಡು ವರ್ಷಗಳ ಕಾಲ ದೈಹಿಕ ಹಿಂಸೆ ನೀಡಿದರು ಎಂದು ದೂರಿದ್ದಾಳೆ. ಇದರ ನಂತರ, ತಂದೆ 2022 ರ ಡಿಸೆಂಬರ್‌ನಲ್ಲಿ ನನ್ನನ್ನು ಗಾಜಿಪುರ ಜಿಲ್ಲೆಯ ನಿವಾಸಿಯೊಂದಿಗೆ ವಿವಾಹ ಮಾಡಿಸಿದರು. ನಂತರ ಪತಿ ಕೂಡ ನನ್ನನ್ನು ವೇಶ್ಯಾವಾಟಿಕೆಗೆ ಒತ್ತಾಯಿಸಲು ಆರಂಭಿಸಿದ್ದ. ನಾನು ಗರ್ಭಿಣಿಯಾದಾಗ, ಪತಿ ನನಗೆ ಗರ್ಭನಿರೋಧಕ ಮಾತ್ರೆಗಳನ್ನು ಕೊಟ್ಟನು, ಆದರೆ ನನಗೆ ಗರ್ಭಪಾತವಾಗಲಿಲ್ಲ. ಬಳಿಕ ಪತಿ ತಂದೆಗೆ ಕರೆ ಮಾಡಿ ಮದುವೆ ವೇಳೆ ನೀಡಿದ 2.5 ಲಕ್ಷ ರೂ. ತಂದೆ ಕೊಡಲು ಕೇಳಿದದ್ದಾನೆ. ಆದರೆ ತಂದೆ ನಿರಾಕರಿಸಿದಾಗ ನನ್ನನ್ನು ರಾಯ್‌ಪುರ ಮಾರುಕಟ್ಟೆಯಲ್ಲಿ ಬಿಟ್ಟು ಹೋಗಿದ್ದಾನೆ. ಹೇಗೋ ಅಪ್ಪನ ಮನೆ ತಲುಪಿದಾಗ ಅವನೂ ನನ್ನನ್ನು ತನ್ನ ಬಳಿ ಇಟ್ಟುಕೊಳ್ಳಲು ಒಪ್ಪಲಿಲ್ಲ ಎಂದಿದ್ದಾಳೆ.ಇದನ್ನೂ ಓದಿ: Crime News: ಬಂದೂಕು ತೋರಿಸಿ ಬುದ್ದಿಮಾಂದ್ಯ ಬಾಲಕಿಯ ಮೇಲೆ ಅತ್ಯಾಚಾರ, ಕಾಮುಕನ ಮನೆಗೆ ನುಗ್ಗಿ ಥಳಿಸಿದ ಸ್ಥಳೀಯರುಬಾಲಕಿ ಇದೀಗ ಕಾನೂನು ಸೇವಾ ಪ್ರಾಧಿಕಾರದ ಕಾರ್ಯದರ್ಶಿಗೆ ಪತ್ರ ಬರೆದು ನ್ಯಾಯಕ್ಕಾಗಿ ಮನವಿ ಮಾಡಿದ್ದಾಳೆ. ಪ್ರಕರಣವನ್ನು ಅರಿತು, ಕಾರ್ಯದರ್ಶಿ ಯುವತಿಯನ್ನು ಮಹಿಳಾ ಪೊಲೀಸ್ ಠಾಣೆಯ ಉಸ್ತುವಾರಿಗೆ ಒಪ್ಪಿಸಿದ್ದು, ಪ್ರಕರಣ ದಾಖಲಿಸಿ ಕ್ರಮ ಕೈಗೊಳ್ಳುವಂತೆ ಎಸ್‌ಒ ತರವಾನ್ ಅವರಿಗೆ ಸೂಚಿಸಿದ್ದಾರೆ. ಸಂತ್ರಸ್ತೆ ದೂರಿನ ಮೇರೆಗೆ ಆಕೆಯ ತಂದೆ ಹಾಗೂ ಪತಿ ವಿರುದ್ಧ ಮಹಿಳಾ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ ಎಂದು ನಗರ ಎಸ್ಪಿ ಶೈಲೇಂದ್ರ ಲಾಲ್ ತಿಳಿಸಿದ್ದಾರೆ. ಇಬ್ಬರನ್ನೂ ವಶಕ್ಕೆ ತೆಗೆದುಕೊಳ್ಳಲಾಗಿದೆ. ಸಂತ್ರಸ್ತೆಯ ಹೇಳಿಕೆ ಆಧರಿಸಿ ಕ್ರಮ ಕೈಗೊಳ್ಳಲಾಗುವುದು ಎಂದು ಅಧಿಕಾರಿಗಳು ತಿಳಿಸಿದ್ದಾರೆ.
Post a Comment