HD Kumaraswamy: ಒಬ್ಬರು TCM, ಒಬ್ಬರು DCM; ಸಿದ್ದು, ಎಚ್​ಡಿಕೆಗೆ ಹೊಸ ಹೆಸರು ಕೊಟ್ಟ ಕುಮಾರಸ್ವಾಮಿ


 ಕಾಂಗ್ರೆಸ್​​​ನಲ್ಲಿ ನಡೆಯುತ್ತಿರುವ ಸಿಎಂ ಕುರ್ಚಿ ಕಿತ್ತಾಟದ ಬಗ್ಗೆಯೂ ವ್ಯಂಗ್ಯವಾಡಿದ ಎಚ್​ಡಿಕೆ, ಈ ಸರ್ಕಾರದಲ್ಲಿ ಎಷ್ಟು ಜನ ಸಿಎಂ ಆಗ್ತಾರೋ ಗೊತ್ತಿಲ್ಲ. ಕಾಂಗ್ರೆಸ್ ಸರ್ಕಾರದಲ್ಲಿ TCM ಅಂಡ್ DCM ಇದ್ದಾರೆ. TCM ಎಂದರೇ Tempravory Chief Minister, DCM ಎಂದರೇ Duplicate Chief Minister ಎಂದು ಕೈ ನಾಯಕರ ಕಿತ್ತಾಟದ ಬಗ್ಗೆ ವ್ಯಂಗ್ಯವಾಡಿದ್ದಾರೆ.ಬೆಂಗಳೂರು: ರಾಜ್ಯದಲ್ಲಿ ತೀವ್ರ ಬರ ಹಿನ್ನೆಲೆ ವಿಪಕ್ಷ ಬಿಜೆಪಿ (BJP) ವಿವಿಧ ಜಿಲ್ಲೆಗಳಲ್ಲಿ ತಂಡ ಕಟ್ಟಿಕೊಂಡು ಬರ ಅಧ್ಯಯನ ಪ್ರವಾಸ (Drought Study) ಆರಂಭಿಸಿದ್ದಾರೆ. ಇದರ ಬೆನ್ನಲ್ಲೇ ಜೆಡಿಎಸ್ (JDS)​ ಕೂಡ ಬರಗಾಲ ಅಧ್ಯಯನಕ್ಕೆ ತಂಡ ರಚನೆ ಮಾಡಿದೆ. ಇಂದು ಮಾಜಿ ಸಿಎಂ, ಜೆಡಿಎಸ್ ರಾಜ್ಯಾಧ್ಯಕ್ಷ ಎಚ್​ಡಿ ಕುಮಾರಸ್ವಾಮಿ (HD Kumaraswamy) ಅವರು ಜೆಡಿಎಸ್ ಶಾಸಕರು ಹಾಗೂ ಕೋರ್ ಕಮಿಟಿ ಅಧ್ಯಕ್ಷರು ಹಾಗೂ ಪದಾಧಿಕಾರಿಗಳು, ಜಿಲ್ಲಾ ಅಧ್ಯಕ್ಷರುಗಳ ಸಭೆ ನಡೆಸಿ ಬರಗಾಲ ಅಧ್ಯಯನಕ್ಕೆ ತಂಡ ರಚನೆ ಮಾಡಿ ಮಾಹಿತಿ ಹಂಚಿಕೊಂಡಿದ್ದಾರೆ.ರಾಜ್ಯದ 31 ಜಿಲ್ಲೆಗಳಲ್ಲಿ ಬರ ಆಧ್ಯಯನಕ್ಕೆ ಜೆಡಿಎಸ್​ 24 ತಂಡ ರಚನೆ ಮಾಡಿದೆಮೈಸೂರಿಗೆ; ಜಿ.ಡಿ ದೇವೇಗೌಡ, ಸಾರಾ ಮಹೇಶ್, ಮಹದೇವ್,ಅಶ್ವಿನ್ ಕುಮಾರ್, ಮಂಜುನಾಥಮಂಡ್ಯ; ಮಾಜಿ ಶಾಸಕರಾದ ಟಿ.ಸಿ.ತಮಣ್ಣ, ಸಿಎಸ್ ಪುಟ್ಟರಾಜ,,ಡಾ.ರವೀಂದ್ರ ಶ್ರೀಕಂಠಯ್ಯ,ಸುರೇಶ್ ಗೌಡಹಾಸನ; ಶಾಸಕರಾದ ಎ.ಮಂಜು, ಸ್ವರೂಪ್,ಸಿ.ಎನ್.ಬಾಲಕೃಷ್ಣಶಿವಮೊಗ್ಗ; ಶಾಸಕರಾದ‌ ಶಾರದ ಪಿ ನಾಯ್ಕ್, ಪ್ರಸನ್ನ ಕುಮಾರ್ಚಿಕ್ಕಮಗಳೂರು; ವೈಎಸ್ ವಿ ದತ್ತ, ಬೋಜೆಗೌಡ,ಸುಧಾಕರ್ ಶೆಟ್ಟಿಬೆಂಗಳೂರು; ರಮೇಶ್ ಗೌಡ, ದಾಸರಹಳ್ಳಿ ಮಂಜುನಾಥ, ಶರವಣ, ಜವರಾಯಿಗೌಡ ಸೇರಿ 31ಜಿಲ್ಲೆಯ ಬರ ಅಧ್ಯಯನ ತಂಡ ರಚನೆ ಮಾಡಲಾಗಿದೆ. ಬರ ಪರಿಹಾರ ಕೇಳಿದರೆ ಕೇಂದ್ರದ ಕಡೆ ಬೊಟ್ಟು ಮಾಡಿದ ರಾಜ್ಯಸರ್ಕಾರಈ ಕುರಿತಂತೆ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಎಚ್​ಡಿ ಕುಮಾರಸ್ವಾಮಿ, ಮಳೆ ಅಭಾವ ದಿಂದ ರೈತರು ಸಂಕಷ್ಟಕ್ಕೆ ಒಳಗಾಗಿದ್ದಾರೆ. ಸರ್ಕಾರ ಹೇಳಿದೆ ನಮ್ಮ ಸಚಿವರು ಜಿಲ್ಲಾ ಪ್ರವಾಸ ಮಾಡಿದ್ದಾರೆ, ಪರಿಹಾರಕ್ಕೆ ಕೇಂದ್ರಕ್ಕೆ ಮನವಿ ಕೊಟ್ಟಿದ್ದೇವೆ ಅಂತ ಕೇಂದ್ರ ಕಡೆ ಬೊಟ್ಟು ಮಾಡುತ್ತಿದ್ದಾರೆ. ಈ ರೀತಿಯ ಬರಗಾಲ ನಾವು ಕಂಡಿರಲಿಲ್ಲ. ರಾಜ್ಯದಲ್ಲಿ ಸುಮಾರು 63 ಲಕ್ಷ ಹೆಕ್ಟರ್ ಪ್ರದೇಶದಲ್ಲಿ ಬೆಳೆ ಹಾನಿಯಾಗಿದೆ. 216 ತಾಲೂಕುಗಳಲ್ಲಿ ಬರ ಇದೆ ಅಂತ ಕೇಂದ್ರಕ್ಕೆ ವರದಿ ಕೊಟ್ಟಿದ್ದಾರೆ. ಬರ ಪರಿಹಾರದ ನಿಯಮ ಬದಲಾವಣೆ ಮಾಡುವಂತೆಯೂ ಕೇಂದ್ರಕ್ಕೆ ಮನವಿ ಮಾಡಿದ್ದಾರೆ.ಯಾವ ಆಧಾರದ ಮೇಲೆ ಪರಿಹಾರ ಕೇಳಿದ್ದೀರಿ?ಆದರೆ, ಮೊದಲು 30 ಸಾವಿರ ಕೋಟಿಯಷ್ಟು ಬೆಳೆ ನಷ್ಟ ಆಗಿದೆ ಅಂತ ಹೇಳಿದ್ದರು. ಆರಂಭದಲ್ಲಿ 4 ಸಾವಿರ ಕೋಟಿ ರೂಪಾಯಿ ಪರಿಹಾರ ನೀಡಿ ಅಂತ ಕೇಂದ್ರಕ್ಕೆ ಮನವಿ ಮಾಡಿದ್ದರು. ಇತ್ತೀಚೆಗೆ 3 ಮಂತ್ರಿಗಳು ಹೋಗಿ, ಕೇಂದ್ರ ಸರ್ಕಾರದ ಕಾರ್ಯದರ್ಶಿಗೆ ಮನವಿ ಕೊಟ್ಟು ಬರುವ ಪರಿಸ್ಥಿತಿ ನಿರ್ಮಾಣ ಮಾಡಿಕೊಂಡಿದ್ದಾರೆ. ಈಗಾಗಲೇ ಕೇಂದ್ರದ ತಂಡಗಳು ಬಂದು ಸಮೀಕ್ಷೆ ಮಾಡಿ ಹೋಗಿದ್ದಾರೆ. ಈಗ ಈ ಮೂವರು ಮಂತ್ರಿಗಳು ಹೋಗಿ 17 ಸಾವಿರ ಕೋಟಿ ರೂಪಾಯಿ ಪರಿಹಾರ ಕೇಳಿದ್ದಾರೆ.ನಾವು ಜನರ ಗುಲಾಮರು ಅನ್ನೋದನ್ನ ಮರೆಯಬಾರದುನಾನು ನನ್ನ ರಾಜಕೀಯ ಅನುಭವದಲ್ಲಿ ನೋಡೋದಾದ್ರೆ, ಇಷ್ಟು ದೊಡ್ಡ ಮೊತ್ತದ ನೆರವನ್ನು ಯಾವ ರಾಜ್ಯಗಳು ಕೇಳಿಲ್ಲ. ಪರಿಹಾರ ಕೇಳುವುದಕ್ಕೂ ಹಲವು ನಿಯಮಗಳಿವೆ. ಅದರ ಗಂಭೀರತೆ ಸರ್ಕಾರಕ್ಕೆ ಇಲ್ಲ. ವಿದ್ಯುತ್ ವಿಚಾರ, ಅಕ್ಕಿ ವಿಚಾರದಲ್ಲೂ ಕೇಂದ್ರದ ಕಡೆ ಬೊಟ್ಟು ಮಾಡ್ತಾರೆ. ಪದೇ ಪದೇ ಕಾಂಗ್ರೆಸ್ ನವರು ನಾವು ಗುಲಾಮರಲ್ಲ ಅಂತ ಹೇಳ್ತಾರೆ, ಆದರೆ ನಾವು ಜನರ ಗುಲಾಮರು ಅನ್ನೋದನ್ನ ಮರೆಯಬಾರದು. ರಾಜ್ಯದಲ್ಲಿ ಕಷ್ಟದ ಪರಿಸ್ಥಿತಿ ಇರುವಾಗ, ಸಿಎಂ ಆದವರು ಹೇಗೆಲ್ಲ ಮಾತನಾಡ್ತಾರೆ ಅನ್ನೋದನ್ನು ನಾನು ನೋಡಿದ್ದೇನೆ ರಾಜ್ಯ ಸರ್ಕಾರ ನಡೆಯ ಬಗ್ಗೆ ಕೆಂಡಕಾರಿದರು.ಜೆಡಿಎಸ್​​ನಿಂದ ರೈತ ಸಾಂತ್ವನ ಯಾತ್ರೆನಾನು ಡಿಸೆಂಬರ್ ನಲ್ಲಿ ಅಧಿವೇಶನ ಮುಗಿದ ಬಳಿಕ ಜಿಲ್ಲಾ ಪ್ರವಾಸ ಹೋಗುತ್ತೇನೆ. ರೈತ ಸಾಂತ್ವನ ಯಾತ್ರೆ ಹಮ್ಮಿಕೊಳ್ಳುತ್ತೇನೆ. ನನ್ನ ನೇತೃತ್ವದಲ್ಲಿ ಯಾತ್ರೆ ಆರಂಭವಾಗುತ್ತದೆ. ಬಸ್ ಮೂಲಕ 25 ಕ್ಕೂ ಹೆಚ್ಚು ನಾಯಕರು ಪ್ರವಾಸ ಹೋಗುತ್ತೇವೆ ಎಂದು ಇದೇ ವೇಳೆ ಎಚ್​ಡಿಕೆ ತಿಳಿಸಿದ್ದಾರೆ.ಸಿಎಂ, ಡಿಸಿಎಂಗೆ ಹೊಸ ಹೆಸರು ಕೊಟ್ಟ ಎಚ್​​​ಡಿಕೆಇನ್ನು, ಕಾಂಗ್ರೆಸ್​​​ನಲ್ಲಿ ನಡೆಯುತ್ತಿರುವ ಸಿಎಂ ಕುರ್ಚಿ ಕಿತ್ತಾಟದ ಬಗ್ಗೆಯೂ ವ್ಯಂಗ್ಯವಾಡಿದ ಎಚ್​ಡಿಕೆ, ಈ ಸರ್ಕಾರದಲ್ಲಿ ಎಷ್ಟು ಜನ ಸಿಎಂ ಆಗ್ತಾರೋ ಗೊತ್ತಿಲ್ಲ. ಕಾಂಗ್ರೆಸ್ ಸರ್ಕಾರದಲ್ಲಿ TCM ಅಂಡ್ DCM ಇದ್ದಾರೆ. TCM ಎಂದರೇ Tempravory Chief Minister, DCM ಎಂದರೇ Duplicate Chief Minister ಎಂದು ಕೈ ನಾಯಕರ ಕಿತ್ತಾಟದ ಬಗ್ಗೆ ವ್ಯಂಗ್ಯವಾಡಿದ್ದಾರೆ. ಸುದ್ದಿಗೋಷ್ಠಿ ವೇಳೆ ಕುಮಾರಸ್ವಾಮಿ ವ್ಯಂಗ್ಯಕ್ಕೆ ಜೆಡಿಎಸ್​ ಶಾಸಕರು, ಮುಖಂಡರು ಬಿದ್ದು ಬಿದ್ದು ನಕ್ಕಿದ್ದಾರೆ.

Post a Comment

Previous Post Next Post