ತಿರುಮಲ
ಸಂಬಂಧಿತ ವಿಡಿಯೋ
Tirumala: ಮುಖ್ಯ ದೇವಾಲಯ ಅದರಲ್ಲೂ ಪೀಠಾಧಿಪತಿಯ ಗರ್ಭಗುಡಿಗೆ ಸಂಬಂಧಿಸಿದ ಆತಂಕಗಳನ್ನು ನಿವಾರಿಸುವ ಸಲುವಾಗಿ ನ್ಯೂಸ್ 18 ತಿರುಮಲ ತಿರುಪತಿ ದೇವಸ್ಥಾನದ (ಟಿಟಿಡಿ) ಪ್ರಧಾನ ಅರ್ಚಕ ವೇಣುಗೋಪಾಲ್ ದೀಕ್ಷಿತುಲು ಅವರನ್ನು ಸಂಪರ್ಕಿಸಿದ್ದು, ಸತ್ಯಾ ಸತ್ಯನೆಗಳು ಇಲ್ಲಿದೆ. ಇತ್ತೀಚಿನ ದಿನಗಳಲ್ಲಿ ಸಾಮಾಜಿಕ ಜಾಲತಾಣಗಳಲ್ಲಿ (Social Media) ಶ್ರೀ ವೆಂಕಟೇಶ್ವರ ಸ್ವಾಮಿಯ (Venkataeshwara Swamy)cಆವಾಸಸ್ಥಾನವಾದ ತಿರುಮಲದ (Tirumala) ಕುರಿತು ಹಲವು ರೀತಿಯ ಪೋಸ್ಟ್‌ಗಳು ಹರಿದಾಡುತ್ತಿದೆ. ಆದರೆ ಅವುಗಳಲ್ಲಿ ನೀಡಿರುವ ಬಹುತೇಕ ಮಾಹಿತಿಗಳು ಸುಳ್ಳಾಗಿದ್ದು, ಇದರಿಂದ ಬಾಲಾಜಿಯ ಭಕ್ತರು ಇದನ್ನು ನಂಬಬೇಕೋ ಬೇಡವೋ ಎಂಬ ಗೊಂದಲದಲ್ಲಿದ್ದಾರೆ. ಮುಖ್ಯ ದೇವಾಲಯ ಅದರಲ್ಲೂ ಪೀಠಾಧಿಪತಿಯ ಗರ್ಭಗುಡಿಗೆ ಸಂಬಂಧಿಸಿದ ಆತಂಕಗಳನ್ನು ನಿವಾರಿಸುವ ಸಲುವಾಗಿ ನ್ಯೂಸ್ 18 ತಿರುಮಲ ತಿರುಪತಿ ದೇವಸ್ಥಾನದ (TTD) ಪ್ರಧಾನ ಅರ್ಚಕ ವೇಣುಗೋಪಾಲ್ ದೀಕ್ಷಿತುಲು ಅವರನ್ನು ಸಂಪರ್ಕಿಸಿದಾಗ ಕೆಲ ನಿಜ ಮಾಹಿತಿಗಳನ್ನ ಬಿಚ್ಚಿಟ್ಟಿದ್ದಾರೆ. ಈ ಬಗ್ಗೆ ಕೆಲ ಮಾಹಿತಿ ಇಲ್ಲಿದೆ1. ಪ್ರಧಾನ ದೇವರಿಗೆ ನೈಸರ್ಗಿಕ ಕೂದಲು ಇದೆಯೇ? ಸಾಮಾಜಿಕ ಜಾಲತಾಣಗಳಲ್ಲಿ ನಡೆಯುತ್ತಿರುವ ಅಪಪ್ರಚಾರ ಎಷ್ಟು ಸತ್ಯ?ಭಗವಾನ್ ಶ್ರೀ ಮಹಾವಿಷ್ಣುವು ಭಗವಾನ್ ಬಾಲಾಜಿಯಾಗಿ ಅವತರಿಸಿದ ಬಗೆ ಎಲ್ಲರಿಗೂ ಗೊತ್ತಿದೆ. ಇನ್ನು ತಿರುಮಲವನ್ನು ಪವಿತ್ರ ವಿಗ್ರಹದ ರೂಪದಲ್ಲಿ ಚಿನ್ನ ಮತ್ತು ವಜ್ರಗಳಿಂದ ಮಾಡಿದ ಆಭರಣಗಳು ಮತ್ತು ಕೂದಲಿನೊಂದಿಗೆ ಎಲ್ಲವನ್ನೂ ಕಲ್ಲಿನಿಂದ ಮಾಡಿದ್ದಾಗಿದೆ. ಹಾಗಾಗಿ ಪ್ರಧಾನ ದೇವರಿಗೆ ನೈಸರ್ಗಿಕ ಕೂದಲು ಇದೆ ಎಂಬುದು ದೊಡ್ಡ ಸುಳ್ಳಾಗಿದೆ.2. ಭಗವಾನ್ ಬಾಲಾಜಿಯ ಭುಜದ ಮೇಲೆ ತೇವವಿದೆಯೇ ಮತ್ತು ಭುಜದ ಮೇಲೆ ಕಿವಿ ಇಟ್ಟುಕೊಂಡರೆ ಸಮುದ್ರದ ಶಬ್ದ ಕೇಳುತ್ತದೆ ಎಂಬುದು ನಿಜವೇ?ಇದು ಸಂಪೂರ್ಣ ಸುಳ್ಳು. ಒಂದಾನೊಂದು ಕಾಲದಲ್ಲಿ ಬಾಲಾಜಿಯ ಪುಣ್ಯ ಪಾದದಲ್ಲಿ ವಿರಜಾ ಎಂಬ ನದಿ ಇತ್ತು ಮತ್ತು ಆ ಪ್ರದೇಶವು ನೀರಿನಿಂದ ತುಂಬಿತ್ತು ಎಂದು ಹೇಳಲಾಗುತ್ತದೆ. ಆದರೆ ಇಂದಿನ ದಿನಗಳಲ್ಲಿ ಗರ್ಭಗುಡಿಯಲ್ಲಿ ನದಿಯ ಝೇಂಕಾರದ ಸದ್ದು ಕೇಳಿಸುತ್ತಿದೆ. 3. ಗರ್ಭಗುಡಿಯಲ್ಲಿ ಸುರಂಗ ಮಾರ್ಗವಿದೆಯೇ? ದೇವರಿಗೆ ಅಲಂಕರಿಸಿದ ಹೂವುಗಳನ್ನು ಸುರಂಗದಲ್ಲಿ ಎಸೆಯಲು ಬಳಸಲಾಗುತ್ತದೆಯಾ?ಇದು ಸಹ ಶುದ್ಧ ಸುಳ್ಳು. ಇಲ್ಲಿ ಸುರಂಗ ಮಾರ್ಗವೇ ಇಲ್ಲ. ಉಚಿತ ಪ್ರಸಾದ ವಿತರಣಾ ಸ್ಥಳದ ಬಳಿ ಇರುವ ಹೂವಿನ ಬಾವಿಯಲ್ಲಿ ಹೂಗಳನ್ನು ವಿಸರ್ಜಿಸಲಾಗುವುದು. ನಂತರ ಹೂವುಗಳನ್ನು ಏಕಾಂತ ಸ್ಥಳದಲ್ಲಿ ಭೂಮಿಯಲ್ಲಿ ಹೂಳಲಾಗುತ್ತದೆ. 4. ಗರ್ಭಗುಡಿಯಲ್ಲಿರುವ ಪ್ರಧಾನ ದೇವರ ಹಿಂದೆ ಹೋಗಲುಸಾಧ್ಯವಿಲ್ಲ ಮತ್ತು ಅದರ ಹಿಂದಿನ ಕಾರಣವೇನು?ದು ಕೂಡ ನಿಜವಲ್ಲ. ನಾವು ಪ್ರತಿನಿತ್ಯ ಶುಕ್ರವಾರ ಅಭಿಷೇಕ ಸೇವೆ ಸೇರಿದಂತೆ ವಿವಿಧ ಸೇವೆಗಳನ್ನು ಮಾಡುವಾಗ ಇತರ ಅರ್ಚಕರು ದೇವರ ಹಿಂದೆ ಇರುತ್ತಾರೆ.ಇದನ್ನೂ ಓದಿ: ಬೌಲಿಂಗ್ ಮೂಲಕ ವಿಶ್ವಕಪ್ನಲ್ಲಿ ಮೋಡಿ ಮಾಡ್ತಾರಾ ಬುಮ್ರಾ? ಜಸ್ಪ್ರೀತ್ ಜಾತಕ ಹೀಗಿದೆ5. ಬಾಲಾಜಿ ದೇವರನ್ನು ಅಲಂಕರಿಸಲು ಬಳಸುವ ಹೂವುಗಳನ್ನು ತಿರುಮಲದಿಂದ 12.8 ಕಿಮೀ ದೂರದಲ್ಲಿರುವ ರಹಸ್ಯ ಗ್ರಾಮದಿಂದ ತರಲಾಗುತ್ತದೆ ಎಂಬುದು ನಿಜವೇ?ಈ ವಿಚಾರ ಸಹ ಸಂಪೂರ್ಣವಾಗಿ ಮನುಷ್ಯ ರಚಿಸಿದ ಕಥೆ ಮತ್ತು ಅದು ನಿಜವಲ್ಲ. ಚೆನ್ನೈ, ಬೆಂಗಳೂರು ಮತ್ತು ಇತರ ಸ್ಥಳಗಳಿಂದ ಭಕ್ತರು ಬಾಲಾಜಿ ದೇವರಿಗೆ ದೇಣಿಗೆಯಾಗಿ ಹೂವುಗಳನ್ನು ಕಳುಹಿಸುತ್ತಾರೆ ಮತ್ತು ಉದ್ಯಾನದಲ್ಲಿ ಕೆಲಸ ಮಾಡುವ ಸಿಬ್ಬಂದಿ ಭಕ್ತರಿಂದ ಪಡೆದ ಹೂವುಗಳಿಂದ ಮಾಲೆಗಳನ್ನು ಮಾಡುತ್ತಾರೆ. ಇನ್ನು ಅರ್ಚಕರು ಮಾಲೆಯಿಂದ ಪ್ರಧಾನ ದೇವರನ್ನು ಅಲಂಕರಿಸುತ್ತಾರೆ.
Post a Comment