HD Devegowda: ಡಿಕೆಶಿಗೆ ಎಚ್ಚರಿಕೆ ನೀಡಿ ಡಿಚ್ಚಿ ಕೊಟ್ಟ ದೊಡ್ಡಗೌಡರು!


 ಡಿಕೆಶಿ ವಿರುದ್ಧ ಹೆಚ್ಡಿಡಿ ಗುಡುಗು

Operation Congress: ನಮ್ಮ ಪಕ್ಷವನ್ನು ಯಾರಿಂದಲೂ ದುರ್ಬಲಗೊಳಿಸಲು ಸಾಧ್ಯವಿಲ್ಲ. ಒಂದು ಹಾಗೇನಾದ್ರೂ ಅಂದುಕೊಂಡಿದ್ರೆ ಅದು ಭ್ರಮೆ ಎಂದು ಡಿಕೆ ಶಿವಕುಮಾರ್ ವಿರುದ್ಧ ಗುಡುಗಿದರು.ಬೆಂಗಳೂರು: ಜೆಡಿಎಸ್ (JDS) ಭದ್ರಕೋಟೆ ಅಂತಾನೇ ಬಿಂಬಿತವಾಗಿರುವ ವಿಧಾನಸಭಾ ಕ್ಷೇತ್ರಗಳಲ್ಲಿ ಆಪರೇಷನ್ ಹಸ್ತಕ್ಕೆ (Operation Congress) ಮುಂದಾಗಿರುವ ಡಿಸಿಎಂ ಡಿಕೆ ಶಿವಕುಮಾರ್ (DCM DK Shivakumar) ಅವರಿಗೆ ಮಾಜಿ ಪ್ರಧಾನಿ, ಜೆಡಿಎಸ್ ವರಿಷ್ಠ ಹೆಚ್ಡಿ ದೇವೇಗೌಡರು (Former Minister HD Devegowda) ಎಚ್ಚರಿಕೆ ನೀಡಿದ್ದಾರೆ. ಮಿಸ್ಟರ್ ಡಿಕೆಶಿ ಯೂ ಕೆನ್ ನಾಟ್ ಮೇಡ್ ಪಾಲಿಟಿಕ್ಸ್. ನಾನಿನ್ನೂ ಬದುಕಿದ್ದೇನೆ, ನಮ್ಮ ಪಕ್ಷವನ್ನ ಏನೂ ಮಾಡಲು ಸಾಧ್ಯವಿಲ್ಲ ಎಂದು ಎಚ್ಚರಿಕೆ ನೀಡಿದ್ದಾರೆ. ಭಾನುವಾರ ಮಾಜಿ ಸಿಎಂ ಹೆಚ್ಡಿ ಕುಮಾರಸ್ವಾಮಿ (Former CM HD Kumaraswamy) ಅವರ ತೋಟದ ಮನೆಯಲ್ಲಿ ಅಸಮಾಧಾನಿತ ನಾಯಕರು ಸಭೆಯನ್ನು ಕರೆಯಲಾಗಿತ್ತು. ಈ ಸಭೆ ಬಹುತೇಕ ಯಶಸ್ವಿಯಾಗಿದ್ದು, ಎಲ್ಲರ ಮನವೊಲಿಸುವಲ್ಲಿ ದಳಪತಿಗಳು ಸಕ್ಸಸ್ ಆಗಿದ್ದಾರೆ ಎಂದು ತಿಳಿದು ಬಂದಿದೆ. ಕುಮಾರಸ್ವಾಮಿ ಅವರು ಪಕ್ಷದ ಶಕ್ತಿ ಏನು ಎಂದು ತೋರಿಸಿದ್ದಾರೆ. ಡಿಕೆ ಶಿವಕುಮಾರ್ ಅವರೇ ನಿಮ್ಮ ಕೆಟ್ಟ ರಾಜಕೀಯ ಆಟ ನನ್ನ ಬಳಿ ನಡೆಯಲ್ಲ. ನಮ್ಮ ಪಕ್ಷವನ್ನೂ ಏನು ಮಾಡಲು ಸಾಧ್ಯವಿಲ್ಲ ಎಂಬ ವಿಷಯ ನಿಮಗೆ ಗೊತ್ತಿರಲಿ. ಆ ವ್ಯಕ್ತಿಗೆ ಉತ್ತರ ಕೊಡುವ ಕೆಲಸ ಮಾಡಲಾಗುವುದು.ಡಿಕೆಶಿ ವಿರುದ್ಧ ಗುಡುಗುನಮ್ಮ ಪಕ್ಷವನ್ನು ಯಾರಿಂದಲೂ ದುರ್ಬಲಗೊಳಿಸಲು ಸಾಧ್ಯವಿಲ್ಲ. ಒಂದು ಹಾಗೇನಾದ್ರೂ ಅಂದುಕೊಂಡಿದ್ರೆ ಅದು ಭ್ರಮೆ ಎಂದು ಡಿಕೆ ಶಿವಕುಮಾರ್ ವಿರುದ್ಧ ಗುಡುಗಿದರು.ಜೆಡಿಎಸ್ಸಭೆ ನಾನು ಸಿಎಂ ಇಬ್ರಾಹಿಂ ಬಗ್ಗೆ ಮಾತನಾಡಲ್ಲ. ಭದ್ರಾವತಿಯ ಕಾರ್ಯಕ್ರಮದಲ್ಲಿ ಸಿಕ್ಕ ಅವರನ್ನು ಜೆಡಿಎಸ್ಗೆ ಕರೆ ತಂದು ಪಕ್ಷದ ಅಧ್ಯಕ್ಷರನ್ನಾಗಿ ಮಾಡಿದೆ ಎಂಬ ವಿಷಯವನ್ನು ಬಿಚ್ಚಿಟ್ಟರು. ಅಲ್ಪಸಂಖ್ಯಾತರಿಗೆ ಕಾಂಗ್ರೆಸ್ ಏನು ಮಾಡಿದೆ ಎಂಬುದರ ಬಗ್ಗೆ ಚರ್ಚೆ ಮಾಡೋಣ ಬನ್ನಿ ಎಂದು ಅಹ್ವಾನಿಸಿದರು.ಭಾನುವಾರದ ಸಭೆಗೆ ಭಾಗಿಯಾದವರ ಪಟ್ಟಿಶಸಕರು‌ -ಜಿ ಟಿ ದೇವೌಗೌಡ, ಹೆಚ್.ಡಿ ರೇವಣ್ಣ, ಕರೆಮ್ಮ ಜಿ ನಾಯಕ, ಹರೀಶ್ ಗೌಡ, ಸುರೇಶ್ ಬಾಬು, ಸಮೃದ್ಧಿ ಮಂಜುನಾಥ್, ವೆಂಕಟಶಿವಾರೆಡ್ಡಿ, ಶಾರದ ಪಿ ನಾಯ್ಕ್, ಎಚ್ ಟಿ ಮಂಜುನಾಥ್, ಸ್ವರೂಪ್, ನೇಮಿರಾಜು ನಾಯಕ್, ಎಂ.ಟಿ.ಕೃಷ್ಣಪ್ಪ, ಸೂರಜ್ ನಾಯಕ್, ಭೀಮಾಗೌಡ ಬಸವನಗೌಡ ಪಾಟೀಲ್, ಶಿಢ್ಲಘಟ್ಟ ರವಿಕುಮಾರ್, ಶ್ರವಣಬೆಳಗೊಳ ಬಾಲಕೃಷ್ಣ, ಎ.ಮಂಜು. ಮಾಜಿ ಶಾಸಕರಾದ ಗೌರಿಶಂಕರ್, ಪುಟ್ಟರಾಜು, ಅನ್ನದಾನಿ, ಕೃಷ್ಣಾರೆಡ್ಡಿ, ವೈ ಎಸ್ ವಿ ದತ್ತಾ, ಬಂಡೆಪ್ಪ ಕಾಶೆಂಪುರ್, ಹೆಚ್.ಕೆ.ಕುಮಾರಸ್ವಾಮಿ ಭಾಗಿ. ಜೆಡಿಎಸ್ ಯುವಮುಖಂಡ ನಿಖಿಲ್‌ ಕುಮಾರಸ್ವಾಮಿ ಸೇರಿದಂತೆ ಹಲವು ಮುಖಂಡರು ಭಾಗಿಯಾಗಿದ್ದರು.ಇದನ್ನೂ ಓದಿ: HD DeveGowda: ಮುನಿಸಿಕೊಂಡವರ ಜೊತೆ ದಳಪತಿಗಳ ರಾಜಿ ಸಭೆ! ಇಬ್ರಾಹಿಂ ಗೈರು, ಎಚ್ಡಿಡಿ ಹೇಳಿದ್ದೇನು?ಗೈರಾದವರುಜೆಡಿಎಸ್ ರಾಜ್ಯಾದ್ಯಕ್ಷ ಸಿ.ಎಂ ಇಬ್ರಾಹಿಂ, ಶಾಸಕ ಶರಣ್ ಗೌಡ ಕಂದಕೂರ್ ಹಾಗೂ ಹನೂರು ಶಾಸಕ ಮಂಜುನಾಥ್.

Post a Comment

Previous Post Next Post