Crime: 22ರ ಯುವಕನೊಂದಿಗೆ 30ರ ಮಹಿಳೆ ಸಹಜೀವನ! ಜಗಳದ ಬೆನ್ನಲ್ಲೇ ಪ್ರೇಯಸಿಯನ್ನ ಗೋವಾದಲ್ಲಿ ಕೊಂದು ಮಹಾರಾಷ್ಟ್ರದಲ್ಲಿ ಎಸೆದ ಪ್ರೇಮಿ!


 ಸಾಂದರ್ಭಿಕ ಚಿತ್ರ ಗುರುವಾರ ಪೋರ್ವೊರಿಮ್‌ನಲ್ಲಿರುವ ತನ್ನ ಮನೆಯಲ್ಲಿ ಕಾಮಾಕ್ಷಿಯನ್ನು ಬರ್ಬರವಾಗಿ ಚಾಕುವಿನಿಂದ ಇರಿದು ಕೊಂದಿರುವುದಾಗಿ ಒಪ್ಪಿಕೊಂಡ ನಂತರ ಪ್ರಕಾಶ್ ಸುಂಚ್‌ವಾಡ್ನನ್ನು ಬಂಧಿಸಲಾಗಿದೆ ಎಂದು ಹಿರಿಯ ಪೊಲೀಸ್ ಅಧಿಕಾರಿಯೊಬ್ಬರು ಮಾಧ್ಯಮಗಳಿಗೆ ತಿಳಿಸಿದ್ದಾರೆ.ಗೋವಾ: ತನ್ನ ಜೊತೆ ಸಹಜೀವನವನ್ನು (Live-in Relationship) ಮುಂದುವರಿಸಲು ನಿರಾಕರಿಸಿದ ಗೆಳತಿಯನ್ನ (Lover) ಕೊಲೆ ಮಾಡಿ ಮೃತದೇಹವನ್ನು ಕಾಡಿನಲ್ಲಿ (forest) ಎಸೆದಿರುವ ಘಟನೆ ಗೋವಾದಲ್ಲಿ (Goa) ನಡೆದಿದೆ. 30 ವರ್ಷದ ಮಹಿಳೆ ಕಾಮಾಕ್ಷಿ ನಾಯಕ್ (30) ಎಂಬಾಕೆ 22 ವರ್ಷದ ಪ್ರಕಾಶ್ ಸುಂಚ್ವಾಡ್ ಎಂಬಾತನೊಂದಿಗೆ ಲಿವ್ ಇನ್ ರಿಲೇಷನ್ಷಿಪ್ನಲ್ಲಿದ್ದರು. ಆದರೆ ಆರೋಪಿ ಮತ್ತು ಸಂತ್ರಸ್ತೆ ಮಧ್ಯೆ ಮನಸ್ತಾಪ ಉಂಟಾಗಿದ್ದು, ಇದು ಪೊಲೀಸರ ದೂರಿನ ತನಕ ಹೋಗಿದೆ. ಇದರಿಂದ ಕೋಪಗೊಂದ ಪ್ರಕಾಶ್ ಮಹಿಳೆಯ ಜೀವವನ್ನೇ ತೆಗೆದಿದ್ದಾನೆ. ಗುರುವಾರ ಪೋರ್ವೊರಿಮ್‌ನಲ್ಲಿರುವ ತನ್ನ ಮನೆಯಲ್ಲಿ ಕಾಮಾಕ್ಷಿಯನ್ನು ಬರ್ಬರವಾಗಿ ಚಾಕುವಿನಿಂದ ಇರಿದು ಕೊಂದಿರುವುದಾಗಿ ಒಪ್ಪಿಕೊಂಡ ನಂತರ ಪ್ರಕಾಶ್ ಸುಂಚ್‌ವಾಡ್ನನ್ನು ಬಂಧಿಸಲಾಗಿದೆ ಎಂದು ಹಿರಿಯ ಪೊಲೀಸ್ ಅಧಿಕಾರಿಯೊಬ್ಬರು ಮಾಧ್ಯಮಗಳಿಗೆ ತಿಳಿಸಿದ್ದಾರೆ. ಕೊಲೆಗೆ ಕಾರಣವೇನು?ಗೋವಾದಲ್ಲಿ ನೆಲೆಸಿರುವ ಪ್ರಕಾಶ್ ಸುಂಚ್‌ವಾಡ್ ಹಾಗೂ ಕಾಮಾಕ್ಷಿ ಇಬ್ಬರೂ ತುಂಬಾ ದಿನಗಳಿಂದ ಸಹಜೀವನದಲ್ಲಿದ್ದರು. ಆದರೆ ಇವರ ಸಂಬಂಧದಲ್ಲಿ ಮನಸ್ಥಾಪ ಬಂದು ಇಬ್ಬರೂ ಜಗಳ ಮಾಡಿಕೊಂಡಿದ್ದಾರೆ. ಪ್ರತಿದಿನ ಜಗಳ ನಡೆಯುತ್ತಿದ್ದರಿಂದ ಕಾಮಾಕ್ಷಿ ತನ್ನ ಪ್ರೇಮ ಸಂಬಂಧದಿಂದ ಹೊರ ಹೋಗಲು ನಿರ್ಧರಿಸಿದ್ದಾರೆ. ಆದರೆ ಪ್ರಕಾಶ್ಗೆ ಈ ನಿರ್ಧಾರದಿಂದ ಕೋಪ ಬಂದಿದ್ದು, ಆಕೆಯ ಮೇಲೆ ದೌರ್ಜನ್ಯ ಎಸಗಲು ಶುರು ಮಾಡಿದ್ದಾರೆ.ಇದನ್ನೂ ಓದಿ: Fitness: 76ರ ವಯಸ್ಸಲ್ಲೂ ತಗ್ಗದ ಗ್ಲಾಮರ್! 36 ವರ್ಷದಿಂದ ಆ ಪದಾರ್ಥ ತಿನ್ನದಿರುವುದೇ ಯೌವನದ ಗುಟ್ಟಂತೆ!ಪೊಲೀಸರಿಗೆ ದೂರು ನೀಡಿದ ಮಹಿಳೆಪ್ರಕಾಶನ ಕಿರುಕುಳ ತಾಳಲಾರದೆ ಕಾಮಾಕ್ಷಿ ನೇರವಾಗಿ ಪಾಪುಸಾ ಪೊಲೀಸ್ ಠಾಣೆಯಲ್ಲಿ ಪ್ರಕಾಶ್ ವಿರುದ್ಧ ದೂರು ದಾಖಲಿಸಿದ್ದಾರೆ. ತಕ್ಷಣ ಪೊಲೀಸರು ಪ್ರಕಾಶ್ ಕರೆಸಿ ಬುದ್ದಿ ಹೇಳಿದ್ದಾರೆ.ಮ ತನ್ನಿಂದ ಮಹಿಳೆಗೆ ಯಾವುದೇ ರೀತಿಯ ಸಮಸ್ಯೆ ಆಗುವುದಿಲ್ಲ ಎಂದು ಆತನಿಂದ ಲಿಖಿತ ಭರವಸೆ ಪಡೆದುಕೊಂಡಿದ್ದಾರೆ. ನಂತರ, ಪ್ರಕಾಶ್ನನ್ನು ಬಂಧನದಿಂದ ಬಿಡುಗಡೆ ಮಾಡಲಾಗಿದೆ. ಆದರೆ, ಸ್ವಲ್ಪ ದಿನಗಳ ನಂತರ ಕಾಮಾಕ್ಷಿ ಇದ್ದಕ್ಕಿದ್ದಂತೆ ಕಾಣೆಯಾಗಿದ್ದು, ಕೊಲೆಯಾಗಿರಬಹುದೆಂಬ ಅನುಮಾನ ಶುರುವಾಗಿದೆ. ಅಲ್ಲದೆ ಮನೆಯಲ್ಲಿ ರಕ್ತದ ಕಲೆಗಳು ಕಂಡುಬಂದಿದ್ದರಿಂದ ಕೊಲೆಯಾಗಿರಬಹುದೆಂಬ ಅನುಮಾನ ಹೆಚ್ಚಾಗಿದೆ. ಪ್ರೇಯಸಿಯ ಕತ್ತು ಸೀಳಿ ಕೊಂದು ಪ್ರಿಯಕರಇದ್ದಕ್ಕಿದ್ದಂತೆ ಕಾಮಾಕ್ಷಿ ನಾಪತ್ತೆಯಾಗಿದ್ದರಿಂದ ಕುಟುಂಬಸ್ಥರು ಆಗಸ್ಟ್ 30ರಂದು ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಎರಡು ದಿನಗಳ ತನಿಖೆಯ ನಂತರ, ಆಕೆಯ ಮೊಬೈಲ್ ಸಿಂಧುರ್ಗ್ ಜಿಲ್ಲೆಯ ಅಂಬೋಲಿ ಘಾಟ್ನಲ್ಲಿ ಟ್ರೇಸ್ ಅಗಿದೆ. ಇದರಿಂದ ಪೊಲೀಸರಿಗೆ ಆಕೆಯ ಪ್ರಿಯತಮನ ಮೇಲೆ ಅನುಮಾನ ಬಂದಿದೆ. ಆತನ್ನು ವಶಕ್ಕೆ ಪಡೆದುಕೊಂಡು ಅಂಬೋಲಿ ಘಾಟ್ಗೆ ಕರೆತಂದು ಹುಡುಕಾಟ ನಡೆಸಿ ಮೃತದೇಹವನ್ನು ಪತ್ತೆ ಹಚ್ಚಿದ್ದಾರೆ.ಇದನ್ನೂ ಓದಿ: Rajasthan: ಮಣಿಪುರದಂತಹ ಪೈಶಾಚಿಕ ಕೃತ್ಯಕ್ಕೆ ಸಾಕ್ಷಿಯಾದ ರಾಜಸ್ಥಾನ, ಮಹಿಳೆಯ ನಗ್ನ ಮೆರವಣಿಗೆ, ವಿಡಿಯೋ ವೈರಲ್!ಚಾಕುವಿನಿಂದ ಹಿರಿದು ಕೊಲೆಸಹಜೀವನ ಮುಂದುವರಿಸಲು ಮಹಿಳೆ ಬಯಸದ ಕಾರಣ ಜಗಳವಾಗಿದೆ. ಅಲ್ಲದೆ ತನ್ನ ವಿರುದ್ಧ ದೂರು ನೀಡಿದ್ದರಿಂದ ಕೋಪಗೊಂಡು ಈ ಕೃತ್ಯ ಎಸಗಿರುವುದಾಗಿ ಆರೋಪಿ ಒಪ್ಪಿಕೊಂಡಿದ್ದಾನೆ. ಜೈಲಿನಿಂದ ಬಂದ ನಂತರ ಗೆಳತಿ ಮೇಲೆ ಕೋಪಗೊಂಡಿದ್ದ ಯುವಕ ಮರುದಿನ ಬೆಳಗ್ಗೆ ಆಕೆಯ ಮನೆಗೆ ತೆರಳಿ ಆಕೆಯೊಂದಿಗೆ ಮತ್ತೆ ಜಗಳವಾಡಿದ್ದು, ಕೊನೆಗೆ ತನ್ನ ಬಳಿಯಿದ್ದ ಚಾಕುವಿನಿಂದ ಹಲವು ಬಾರಿ ಇರಿದು ಕೊಲೆಗೈದಿದ್ದಾನೆ. ನಂತರ ಕೊಲೆಯನ್ನು ಮುಚ್ಚಿಹಾಕಲು ಮಹಿಳೆಯ ಮೃತ ದೇಹವನ್ನು ಕಾರಿಗೆ ತುಂಬಿಸಿಕೊಂಡು ಹೋಗಿ ಸುಮಾರು 80 ಕಿಲೋಮೀಟರ್ ಪ್ರಯಾಣಿಸಿ ಮಹಿಳೆಯ ಶವವನ್ನು ಮಹಾರಾಷ್ಟ್ರ ರಾಜ್ಯದ ಒಂದು ಸ್ಥಳದಲ್ಲಿ ಎಸೆದು ಗೋವಾಕ್ಕೆ ಹಿಂತಿರುಗಿದ್ದಾಗಿ ಒಪ್ಪಿಕೊಂಡಿದ್ದಾನೆ.

Post a Comment

Previous Post Next Post