Weight Loss Drink: ಪ್ರತಿ ದಿನ ಜ್ಯೂಸ್​ ಅಲ್ಲ, ಒಂದು ಕಪ್​ ಅನಾನಸ್​ ಟೀ ಕುಡಿಯಿರಿ; ಬೇಗ ಸಣ್ಣ ಆಗ್ತೀರಾ!


 ಸಾಮಾನ್ಯವಾಗಿ ಜನರು ಅನಾನಸ್ ಅನ್ನು ಸಲಾಡ್ ಅಥವಾ ಜ್ಯೂಸ್ ರೂಪದಲ್ಲಿ ಸೇವಿಸಲು ಇಷ್ಟಪಡುತ್ತಾರೆ. ಇದನ್ನು ಸೇವಿಸುವುದರಿಂದ ನಿಮ್ಮ ಜೀರ್ಣಕ್ರಿಯೆ ಉತ್ತಮವಾಗಿರುತ್ತದೆ. ಆದರೆ ತೂಕ ಇಳಿಸಿಕೊಳ್ಳುವಲ್ಲಿ ಕೂಡ ಅನಾನಸ್ ಸಹಾಯಕವಾಗಿದೆ ಅಂತ ನಿಮಗೆ ತಿಳಿದಿದ್ಯಾ?

ಅನಾನಸ್ ತುಂಬಾ ರಸಭರಿತವಾದ ಹಣ್ಣಾಗಿದ್ದು, ಕಾರ್ಬೋಹೈಡ್ರೇಟ್‌ಗಳು, ಫೈಬರ್, ಕ್ಯಾಲ್ಸಿಯಂ, ಪೊಟ್ಯಾಸಿಯಮ್, ವಿಟಮಿನ್ ಸಿ ಮತ್ತು ಖನಿಜಗಳಂತಹ ಪೋಷಕಾಂಶಗಳಿಂದ ಸಮೃದ್ಧವಾಗಿದೆ.

ಸಾಮಾನ್ಯವಾಗಿ ಜನರು ಅನಾನಸ್ ಅನ್ನು ಸಲಾಡ್ ಅಥವಾ ಜ್ಯೂಸ್ ರೂಪದಲ್ಲಿ ಸೇವಿಸಲು ಇಷ್ಟಪಡುತ್ತಾರೆ. ಇದನ್ನು ಸೇವಿಸುವುದರಿಂದ ನಿಮ್ಮ ಜೀರ್ಣಕ್ರಿಯೆ ಉತ್ತಮವಾಗಿರುತ್ತದೆ. ಆದರೆ ತೂಕ ಇಳಿಸಿಕೊಳ್ಳುವಲ್ಲಿ ಕೂಡ ಅನಾನಸ್ ಸಹಾಯಕವಾಗಿದೆ ಅಂತ ನಿಮಗೆ ತಿಳಿದಿದ್ಯಾ?

ಹೌದು ನಾವಿಂದು ನಿಮಗಾಗಿ ಅನಾನಸ್ ಟೀ ಮಾಡುವುದೇಗೆ ಎಂದು ಹೇಳಿಕೊಡುತ್ತೇವೆ. ಅನಾನಸ್‌ನಲ್ಲಿ ಕ್ಯಾಲೋರಿಗಳು ಮತ್ತು ಕಾರ್ಬೋಹೈಡ್ರೇಟ್‌ಗಳು ತುಂಬಾ ಕಡಿಮೆ, ಆದ್ದರಿಂದ ಅನಾನಸ್ ಚಹಾವು ನಿಮ್ಮ ಕೊಬ್ಬನ್ನು ಸುಡುವಲ್ಲಿ ಸಹಾಯಕವಾಗಿದೆ.

ನೀವು ಪ್ರತಿದಿನ 1 ಕಪ್ ಅನಾನಸ್ ಟೀ ಕುಡಿಯುವುದರಿಂದ ಸುಲಭವಾಗಿ ತೂಕವನ್ನು ನಿಯಂತ್ರಿಸಬಹುದು. ಹಾಗಾದರೆ ಅನಾನಸ್ ಟೀ ಮಾಡುವುದು ಹೇಗೆ ಎಂದು ನೋಡೋಣ ಬನ್ನಿ.

 ಅನಾನಸ್ ಟೀ ತಯಾರಿಸಲು ಬೇಕಾಗುವ ಸಾಮಾಗ್ರಿಗಳು: ನಿಂಬೆ ರಸ, ನೀರು, ಟೀ ಬ್ಯಾಗ್, ಅನಾನಸ್ ರಸ.

 ಅನಾನಸ್ ಟೀ ಮಾಡುವುದು ಹೇಗೆ?: ಅನಾನಸ್ ಟೀ ಮಾಡಲು ಮೊದಲು ಪ್ಯಾನ್ ತೆಗೆದುಕೊಳ್ಳಿ.ನಂತರ ಅದರಲ್ಲಿ ನೀರನ್ನು ಹಾಕಿ ಕುದಿಸಿ. ಇದಾದ ಬಳಿಕ ಈ ನೀರನ್ನು ಒಂದು ಕಪ್ಗೆ ಹಾಕಿ.ನಂತರ ನೀವು ಅದರಲ್ಲಿ ಟೀ ಬ್ಯಾಗ್ ಅನ್ನು ಹಾಕಿ ಮತ್ತು ಚೆನ್ನಾಗಿ ಹದ್ದಿ.

ಇದಾದ ನಂತರ, ಅದನ್ನು ಸುಮಾರು 5-7 ನಿಮಿಷಗಳ ಕಾಲ ಚೆನ್ನಾಗಿ ಹದ್ದಿ. ಬಳಿಕ ಅದಕ್ಕೆ ಅನಾನಸ್ ಮತ್ತು ನಿಂಬೆ ರಸವನ್ನು ಹಾಕಿ. ಫ್ರಿಜ್ ನಲ್ಲಿ ಸ್ವಲ್ಪ ಹೊತ್ತು ಇಟ್ಟು ತಣ್ಣಗಾದ ನಂತರ ಕುಡಿಯಿರಿ. (Disclaimer: ಈ ಲೇಖನವು ಅಂತರ್ಜಾಲದಲ್ಲಿ ಲಭ್ಯವಿರುವ ವರದಿಗಳು, ಮಾಹಿತಿಯನ್ನು ಆಧರಿಸಿದೆ.   ಜವಾಬ್ದಾರಿಯಲ್ಲ)

Post a Comment

Previous Post Next Post