ಮೋದಿ-ಪುಟಿನ್ (ಸಂಗ್ರಹ ಚಿತ್ರ)
ರಷ್ಯಾ ಅಧ್ಯಕ್ಷ ವ್ಲಾಡಿಮಿರ್ ಪುಟಿನ್ ಭಾರತದ ಬಗ್ಗೆ ಸ್ನೇಹದ ಮಾತುಗಳನ್ನಾಡಿದ್ದಾರೆ. ಅಲ್ಲದೇ "ಭಾರತದ ಪ್ರಧಾನಿ ನರೇಂದ್ರ ಮೋದಿ ಅವರು ರಷ್ಯಾದ ಅತ್ಯುತ್ತಮ ಸ್ನೇಹಿತ" ಅಂತ ಪುಟಿನ್ ಹೊಗಳಿದ್ದಾರೆ.ಮಾಸ್ಕೋ, ರಷ್ಯಾ: ಭಾರತದ ಪ್ರಧಾನ ಮಂತ್ರಿ ನರೇಂದ್ರ ಮೋದಿ (Prime Minister Narendra Modi) ಅವರ ಕುರಿತಂತೆ ರಷ್ಯಾ ಅಧ್ಯಕ್ಷ ವ್ಲಾಡಿಮಿರ್ ಪುಟಿನ್ (Russia President Vladimir Putin) ಸ್ನೇಹದ ಮಾತುಗಳನ್ನಾಡಿದ್ದಾರೆ. ಪ್ರಧಾನಿ ನರೇಂದ್ರ ಮೋದಿ ಅವರು ರಷ್ಯಾದ ಅತ್ಯುತ್ತಮ ಸ್ನೇಹಿತ (Russia's best friend) ಅಂತ ಪುಟಿನ್ ಹೊಗಳಿದ್ದಾರೆ. ಅಲ್ಲದೇ ಮೋದಿ ಪರಿಕಲ್ಪನೆಯಲ್ಲಿ ಜಾರಿಯಾದ ಮೇಕ್ ಇನ್ ಇಂಡಿಯಾ (Make in India) ಯೋಜನೆ ಬಗ್ಗೆ ಪುಟಿನ್ ಮೆಚ್ಚುಗೆ ಸೂಚಿಸಿದ್ದಾರೆ. ಮೇಕ್ ಇನ್ ಇಂಡಿಯಾ ಅಭಿಯಾನವು ಭಾರತದ ಆರ್ಥಿಕತೆಯ ಮೇಲೆ ಕಾಪಾಡಿ, ಆರ್ಥಿಕತೆಯನ್ನು ಪರಿಣಾಮಕಾರಿಯಾಗಿ ರಕ್ಷಿಸುತ್ತಿದೆ ಅಂತ ಕೊಂಡಾಡಿದ್ದಾರೆ. ಮೋದಿ ರಷ್ಯಾದ ಅತ್ಯುತ್ತಮ ಸ್ನೇಹಿತ ಹೀಗಂತ ರಷ್ಯಾ ಅಧ್ಯಕ್ಷ ವ್ಲಾಡಿಮಿರ್ ಪುಟಿನ್ ಹೊಗಳಿದ್ದಾರೆ. ಭಾರತದ ಪ್ರಧಾನಿ ನರೇಂದ್ರ ಮೋದಿ ಅವರು ರಷ್ಯಾದ ಅತ್ಯುತ್ತಮ ಸ್ನೇಹಿತರಾಗಿದ್ದಾರೆ. ರಷ್ಯಾದ ಮಾಸ್ಕೋದಲ್ಲಿ ಆಯೋಜಿಸವಾಗಿದ್ದ ಸರ್ಕಾರಿ ಕಾರ್ಯಕ್ರಮದಲ್ಲಿ ಮಾತನಾಡಿದ ಪುಟಿನ್ ಭಾರತದಲ್ಲಿನ ನನ್ನ ಸ್ನೇಹಿತ, ಪ್ರಧಾನಿ ನರೇಂದ್ರ ಮೋದಿ ಅವರು ನನಗಷ್ಟೇ ಅಲ್ಲ, ರಷ್ಯಾಕ್ಕೂ ಅತ್ಯಂತ ಆತ್ಮೀಯ ಸ್ನೇಹಿತ ಅಂತ ಸ್ನೇಹದ ಮಾತುಗಳನ್ನಾಡಿದ್ದಾರೆ.ಮೇಕ್ ಇನ್ ಇಂಡಿಯಾ ಬಗ್ಗೆ ಪುಟಿನ್ ಮೆಚ್ಚುಗೆಮುಂದುವರೆದು ಮಾತನಾಡಿದ ಪುಟಿನ್, ಮೇಕ್ ಇನ್ ಇಂಡಿಯಾ ಬಗ್ಗೆಯೂ ಮೆಚ್ಚುಗೆಯ ಮಾತನ್ನಾಡಿದ್ರು. ಕೆಲ ವರ್ಷಗಳ ಹಿಂದೆ ಭಾರತದಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರೊಂದು ಮೇಕ್ ಇನ್ ಇಂಡಿಯಾ ಎಂಬ ಪರಿಕಲ್ಪನೆಯನ್ನು ಜಾರಿಗೆ ತಂದರು ಅಂತ ಸ್ಮರಿಸಿದ್ದಾರೆ.ಇದನ್ನೂ ಓದಿ: Lab made Diamonds: ಅಮೆರಿಕಾ ಅಧ್ಯಕ್ಷರ ಪತ್ನಿಗೆ ಮೋದಿಯಿಂದ ಕೃತಕ ವಜ್ರದ ಗಿಫ್ಟ್! ಲ್ಯಾಬ್ ಮೇಡ್ ಡೈಮಂಡ್ ವಿಶೇಷತೆ ಗೊತ್ತಾ?ಮೇಕ್ ಇನ್ ಇಂಡಿಯಾ ಯಶಸ್ವಿಯಾಗಿದೆ ವಿದೇಶಿ ವಸ್ತುಗಳ ಮೇಲಿನ ಅವಲಂಬನೆ, ವಸ್ತುಗಳ ಆಮದಿನ ಬದಲಾಗಿ ದೇಶೀಯವಾಗಿಯೇ ತನ್ನದೇ ಆದ ಅತ್ಯಾಧುನಿಕ ವಸ್ತುಗಳ ಉತ್ಪಾದನೆ, ಸೇವೆ ಮತ್ತು ತಂತ್ರಜ್ಞಾನವನ್ನು ಅಭಿವೃದ್ಧಿಪಡಿಸುವ ಯೋಜನೆ ಅದಾಗಿತ್ತು. ಅದೀಗ ಯಶಸ್ವಿಯಾಗಿದೆ ಅಂತ ಹೇಳಿದ್ದಾರೆ.ಭಾರತದ ಆರ್ಥಿಕತೆಯನ್ನು ಮೇಕ್ ಇನ್ ಇಂಡಿಯಾ ಕಾಪಾಡುತ್ತಿದೆಮೇಕ್ ಇನ್ ಇಂಡಿಯಾ ಅಭಿಯಾನವು ಭಾರತದ ಆರ್ಥಿಕತೆ ಮೇಲೆ ಪ್ರಭಾವ ಬೀರಿದೆ ಅಂತ ಪುಟಿನ್ ಹೇಳಿದ್ದಾರೆ. ಮೇಕ್ ಇನ್ ಇಂಡಿಯಾ ಅಭಿಯಾನವು ಭಾರತದ ಆರ್ಥಿಕತೆಯನ್ನು ಕಾಪಾಡುತ್ತಿದೆ ಅಂತ ಹೊಗಳಿದ್ದಾರೆ.ಇದನ್ನೂ ಓದಿ: Delhi University ಶತಮಾನೋತ್ಸವ ಸಮಾರಂಭದಲ್ಲಿ ಪ್ರಧಾನಿ ಮೋದಿ ಹೇಳಿದ ಮಾತಿದುಮೇಕ್ ಇನ್ ಇಂಡಿಯಾದ ಕಲ್ಪನೆ ರಷ್ಯಾ ಕೂಡ ಅನುಸರಿಸಲಿಮೇಕ್ ಇನ್ ಇಂಡಿಯಾ ಪರಿಕಲ್ಪನೆ ಮೆಚ್ಚಿಕೊಂಡಿರುವ ಪುಟಿನ್, ಇಂಥದ್ದೊಂದು ಪರಿಕಲ್ಪನೆ ರಷ್ಯಾದಲ್ಲೂ ತರುವ ಅಗತ್ಯತೆಯನ್ನು ತಿಳಿಸಿದ್ದಾರೆ. ಸ್ಥಳೀಯವಾಗಿ ಉತ್ಪನ್ನಗಳನ್ನು ಅಭಿವೃದ್ಧಿಪಡಿಸಲು, ತಯಾರಿಸಲು ಕಂಪನಿಗಳನ್ನು ಪ್ರೋತ್ಸಾಹಿಸುವ ಆರ್ಥಿಕತೆಯ ಕುರಿತು ಮಾತನಾಡುವಾಗ ಪುಟಿನ್ ಭಾರತವನ್ನು ಉದಾಹರಣೆಯಾಗಿ ನೀಡಿದ್ದಾರೆ. ಅಲ್ಲದೆ ರಷ್ಯಾ ಕೂಡ ಭಾರತವನ್ನ ಅನುಸರಿಸಬೇಕು ಎಂದಿದ್ದಾರೆ.

Post a Comment