ಎಂಬಿ ಪಾಟೀಲ್, ಸಚಿವ
ಬಿಜೆಪಿಯವರಿಗೆ ಈಗ ಕೆಲಸ ಇಲ್ಲ, ಹೀಗಾಗಿ ಟೀಕೆ ಮಾಡ್ತಿದ್ದಾರೆ ಎಂದ ಎಂಬಿ ಪಾಟೀಲ್, ಮೊದಲು ಅಕ್ಕಿ ಕೊಡ್ತೀವಿ ಅಂತ ಹೇಳಿ ಮೋಸ ಮಾಡಿದರು. ಅಕ್ಕಿಯನ್ನು ಯಾವ ಬೆಲೆಯಲ್ಲಿ ತೆಗೆದುಕೊಳ್ತೀವಿ, ಆ ದುಡ್ಡನ್ನು ನಾವು ಕೊಡ್ತೀವಿ ಎಂದು ಸಚಿವ ಎಂಬಿ ಪಾಟೀಲ್ ಹೇಳಿದರು.ಬೆಂಗಳೂರು: ಬಿಜೆಪಿಯವರನ್ನು ಜನರೇ ತಿರಸ್ಕಾರ ಮಾಡಿದ್ದಾರೆ. ಜನ ಶಿಕ್ಷೆ ಕೊಟ್ಟಯ ಪಾಠ ಕಲಿಸಿದ್ದಾರೆ ಎಂದು ಸಚಿವ ಎಂಬಿ ಪಾಟೀಲ್ ವ್ಯಂಗ್ಯವಾಡಿದ್ದಾರೆ. ಸುದ್ದಿಗಾರರ ಜೊತೆ ಮಾತನಾಡಿ ಬಿಜೆಪಿ ನಾಯಕರ ವಿರುದ್ದ ವಾಗ್ದಾಳಿ ನಡೆಸಿದ ಎಂಬಿ ಪಾಟೀಲ್, ಬಿಜೆಪಿ ಪಕ್ಷ ಹತ್ತು ದಿಕ್ಕು ಆಗಿದೆ ಎಂದರು.ಬಸವರಾಜ ಬೊಮ್ಮಾಯಿ ಖಾಲಿ ಕುರ್ಚಿಯಲ್ಲಿ ಕೂತಿದ್ದಾರೆ ಅಂತಾರೆ. ಬಿಜೆಪಿ ಪಕ್ಷ ಛಿದ್ರ ಛಿದ್ರ ಆಗಿದೆ. ಒಂದಲ್ಲ ಇಪ್ಪತ್ತು ಗುಂಪು ಆಗಿದೆ. ಯಾರು ಜೋಡಿಸಿದ್ರೂ ಜೋಡಿಸೋದಕ್ಕೆ ಆಗಲ್ಲ. ಆ ರೀತಿ ಛಿದ್ರ ಛಿದ್ರ ಆಗಿದೆ. ಬಿಜಾಪುರದಲ್ಲಿ ಒಬ್ಬೊಬ್ಬರದ್ದು ಒಂದೊಂದು ರೀತಿ ಹೊಡೆದಾಟ ಆಗ್ತಿದೆ. ಬಿಜೆಪಿ ಅಂತಿಮ ಘಟ್ಟ ತಲುಪಿದೆ. ಬಿಜೆಪಿಗೆ ಫೆವಿಕಲ್ ಹಚ್ಚಿದ್ರೂ ಅಂಟಲ್ಲ ಎಂದು ಕಾಲೆಳೆದರು.ಇದನ್ನೂ ಓದಿ: Karnataka BJP: ಈಶ್ವರಪ್ಪ, ಶೆಟ್ಟರ್ ಎಲ್ಲರನ್ನೂ ಮುಗಿಸಿಬಿಟ್ರಲ್ಲ, ಸ್ವಪಕ್ಷದ ವಿರುದ್ಧ ಮತ್ತೆ ಸಿಡಿದೆದ್ದ ರೇಣುಕಾಚಾರ್ಯ!ಬಿಜೆಪಿಯವರಿಗೆ ಈಗ ಕೆಲಸ ಇಲ್ಲ, ಹೀಗಾಗಿ ಟೀಕೆ ಮಾಡ್ತಿದ್ದಾರೆ ಎಂದ ಎಂಬಿ ಪಾಟೀಲ್, ಮೊದಲು ಅಕ್ಕಿ ಕೊಡ್ತೀವಿ ಅಂತ ಹೇಳಿ ಮೋಸ ಮಾಡಿದರು. ಅಕ್ಕಿಯನ್ನು ಯಾವ ಬೆಲೆಯಲ್ಲಿ ತೆಗೆದುಕೊಳ್ತೀವಿ, ಆ ದುಡ್ಡನ್ನು ನಾವು ಕೊಡ್ತೀವಿ. ಇದೇ ಸಿಟಿ ರವಿ ಅಕ್ಕಿ ಕೊಡಲಾಗದಿದ್ರೆ ಹಣ ಕೊಡಿ ಅಂತಿದ್ರು. ಈಗ ಹಣ ಕೊಟ್ಟರೆ ಅಕ್ಕಿ ಕೊಡಿ ಅಂತಿದ್ದಾರೆ. ಛತ್ತೀಸಗಢದವರು ಒಂದೇ ತಿಂಗಳಿಗೆ ಅಕ್ಕಿ ಕೊಡ್ತೀವಿ ಅಂದ್ರು. ಬಿಜೆಪಿಯವರಿಗೆ ತಕ್ಕ ಪಾಠ ಕಲಿಸಬೇಕು ಅಂತಲೇ ನಾವು ಜನರ ಅಕೌಂಟ್ ಗೆ ದುಡ್ಡು ಹಾಕ್ತಿದ್ದೇವೆ. ಜನರಿಗೆ ತೊಂದರೆ ಇಲ್ಲ, ಬಿಜೆಪಿಯವರಿಗೆ ತೊಂದರೆ ಅಷ್ಟೇ ಎಂದರು. ಜನ ಬಿಜೆಪಿಯವರ ನಾಟಕವನ್ನು ಗಣನೆಗೇ ತೆಗೆದುಕೊಳ್ಳುವುದಿಲ್ಲ ಎಂದ ಪಾಟೀಲ್, ಜನರು ಖುಷಿಯಾಗಿದ್ದಾರೆ, ಬಿಜೆಪಿಯವರಿಗೆ ಕೆಲಸ ಇಲ್ಲ ಅಷ್ಟೇ. ನಾವು ಬಿಜೆಪಿಯಿಂದ ಮೋಸ ಹೋದ್ವಿ, ಅದಕ್ಕಾಗಿ ನಾವು ಪರ್ಯಾಯ ಮಾಡಿದ್ದೇವೆ. ಬಸವರಾಜ ಬೊಮ್ಮಾಯಿ ಕೂಡ ಹಣ ಹಾಕಿ ಅಂದ್ರು. ಈಗ ಪುಂಗಿ ಊದುತ್ತೀರಾ? ಕೇಂದ್ರ ಸರ್ಕಾರ ಮೋಸ ಮಾಡಿದ್ದಕ್ಕೆ ನಮ್ಮ ನಿರ್ಧಾರದಿಂದ ಜನ ಖುಷಿಯಾಗಿದ್ದಾರೆ ಎಂದು ಹೇಳಿದರು.ಸರ್ಕಾರದ ವಿರುದ್ಧ ಎಚ್‌ಡಿಕೆ ಟ್ವೀಟ್ ವಿಚಾರಕ್ಕೆ ಪ್ರತಿಕ್ರಿಯಿಸಿ, ನಮ್ಮ ಸರ್ಕಾರದಲ್ಲಿ ಕಾಸಿಗಾಗಿ ವರ್ಗಾವಣೆ ನಡೆದಿಲ್ಲ. ಪಾರದರ್ಶವಾಗಿ ನಡೆಯುತ್ತಿದೆ. ಟೆಂಡರ್ ಕೂಡ ನಾವು ಇನ್ನೂ ಕರೆದಿಲ್ಲ. ಕುಮಾರಸ್ವಾಮಿ ಬಹಳ ಆತುರರಾಗಿದ್ದಾರೆ. ಅವ್ರ ಸರ್ಕಾರ ಇದ್ದಾಗ ಪಾರದರ್ಶಕವಾಗಿ ನಡೆದುಕೊಂಡಿದ್ದಾರೆ ಎಂದು ತೋರಿಸುತ್ತಿದ್ದಾರೆ. ಸಿಎಂ ಕಚೇರಿಯಲ್ಲಿ ಏನೂ ನಡೆದಿಲ್ಲ. ಈಗ ಸೆಟ್ಲ್ ಆಗ್ತಾ ಇದ್ದೀವಿ ಎಂದರು.

Post a Comment