ಸಾಂದರ್ಭಿಕ ಚಿತ್ರ
ಮಗಳನ್ನು ಕೊಂದ ಆರೋಪಿಯನ್ನು ರಾಕೇಶ್ (37) ಎಂದು ಗುರುತಿಸಲಾಗಿದೆ. ಆತ ಕಾರ್ಪೆಂಟರ್ ಕೆಲಸ ಮಾಡುತ್ತಿದ್ದು, ಮಾದಕ ದ್ರವ್ಯ ಸೇವನೆಗೆ ದಾಸನಾಗಿದ್ದ ಎಂದು ತಿಳಿದುಬಂದಿದೆ.
ಇಂದೋರ್: ಬಡತನ (Poverty) ವ್ಯಕ್ತಿಯನ್ನು ಯಾವ ಮಟ್ಟಕ್ಕೆ ತೆಗೆದುಕೊಂಡು ಹೋಗುತ್ತದೆ ಎನ್ನುವುದಕ್ಕೆ ಉದಾಹರಣೆ ಮಧ್ಯ ಪ್ರದೇಶದ (Madhya Pradesh) ಇಂದೋರ್ನಲ್ಲಿ ನಡೆದಿದೆ. ಇಲ್ಲೊಬ್ಬ ತಂದೆ ತನ್ನ ಎಂಟು ವರ್ಷದ ಬಾಲಕಿಯ ಬರ್ಬರವಾಗಿ (Father kills Daughter) ಕೊಂದಿದ್ದಾನೆ. ಆರೋಪಿಯು ಪೊಲೀಸ್ (Police) ವಿಚಾರಣೆಯ ಸಮಯದಲ್ಲಿ ತಾನು ಬಡತನದಿಂದ ತೀವ್ರವಾಗಿ ತೊಂದರೆ ಅನುಭವಿಸುತ್ತಿದ್ದೆ. ನನ್ನ ಮಗಳು ಪ್ರತಿದಿನ ಚಾಕೊಲೇಟ್, ಆಟಿಕೆಗಳು ಮತ್ತು ಬಟ್ಟೆ ಬೇಕು ಎಂದು ಕೇಳಿ ಕೇಳಿ ನನ್ನ ಸಮಸ್ಯೆಗಳನ್ನು ಹೆಚ್ಚಿಸುತ್ತಿದ್ದಳು. ಇದರಿಂದ ಬೇಸತ್ತು ಕೊಂದಿರುವುದಾಗಿ ಹೇಳಿಕೊಂಡಿದ್ದಾನೆ.
ಮಾದಕ ದ್ರವ್ಯ ಸೇವನೆಯ ಚಟ
ಮಗಳನ್ನು ಕೊಂದ ಆರೋಪಿಯನ್ನು ರಾಕೇಶ್ (37) ಎಂದು ಗುರುತಿಸಲಾಗಿದೆ. ಆತ ಕಾರ್ಪೆಂಟರ್ ಕೆಲಸ ಮಾಡುತ್ತಿದ್ದು, ಮಾದಕ ದ್ರವ್ಯ ಸೇವನೆಗೆ ದಾಸನಾಗಿದ್ದ. ಮತ್ತೊಂದೆಡೆ, ಕಡು ಬಡತನದಲ್ಲಿ ವಾಸಿಸುತ್ತಿದ್ದ, ಆತನ ಮಗಳು ಪದೇ ಪದೇ ಚಾಕೊಲೇಟ್ ಆಟಿಕೆಗಳು ಮತ್ತು ಬಟ್ಟೆಗಳು ಬೇಕು ಎಂದು ಅವನಿಗೆ ಕೇಳುತ್ತಿದ್ದಳು. ಈ ಬೇಡಿಕೆಗಳನ್ನು ಈಡೇರಿಸಲು ಸಾಧ್ಯವಾಗದೆ ಮಗಳ ಹಠದಿಂದ ಸಿಟ್ಟಾಗತೊಡಗಿದ. ಈ ಸಮಸ್ಯೆಯನ್ನು ಕೊನೆಗೊಳಿಸಲು, ತಂದೆ ರಾಕ್ಷಸನಾಗಿ ಮಾರ್ಪಟ್ಟನು ಮತ್ತು ತನ್ನ ಸ್ವಂತ ಮುಗ್ಧ ಮಗಳ ತಲೆಯನ್ನು ಕಲ್ಲಿನಿಂದ ಪುಡಿಮಾಡಿ ಕೊಂದಿರುವುದಾಗಿ ಒಪ್ಪಿಕೊಂಡಿದ್ದಾನೆ ಎಂದು ಉಪ ಪೊಲೀಸ್ ಆಯುಕ್ತ (ಡಿಸಿಪಿ) ರಾಜೇಶ್ ಕುಮಾರ್ ಸಿಂಗ್ ಹೇಳಿದ್ದಾರೆ.
ಇದನ್ನೂ ಓದಿ: Mukhtar Ansari: ಉತ್ತರ ಪ್ರದೇಶವನ್ನು ದಶಕಗಳ ಕಾಲ ಆಳಿದ ಮುಕ್ತಾರ್ ಅನ್ಸಾರಿಗೆ ಜೀವಾವಧಿ ಶಿಕ್ಷೆ; ಗ್ಯಾಂಗ್‌ಸ್ಟರ್ ಮೇಲಿವೆ ನೂರಾರು ಕೇಸ್
ಕಲ್ಲುಗಳಿಂದ ಹೊಡೆದು ಕೊಲೆ
ಆರೋಪಿ ಶನಿವಾರವೂ ಕುಡಿದು ಮನೆಗೆ ಬಂದಿದ್ದ. ತನ್ನ ಮಗಳ ಈ ಸಮಸ್ಯೆಯಿಂದ ಮುಕ್ತನಾಗಲು ನಿರ್ಧರಿಸಿದ್ದ. ಹಾಗಾಗಿ ತನ್ನ ಮಗಳನ್ನು ನಿರ್ಮಾಣ ಹಂತದಲ್ಲಿರುವ ಕಟ್ಟಡದ ಬಳಿ ಕರೆದೊಯ್ದು ಆಕೆಯ ತಲೆಯನ್ನು ಟೈಲ್ಸ್ ಮತ್ತು ಕಲ್ಲುಗಳಿಂದ ಹೊಡೆದು ಕೊಲೆ ಮಾಡಿದ್ದಾನೆ ಎಂದು ಡಿಸಿಪಿ ತಿಳಿಸಿದ್ದಾರೆ.
ಮೂರು ವರ್ಷಗಳ ಹಿಂದೆ ಪತ್ನಿ ಬಿಟ್ಟು ಹೋಗಿದ್ದಳು
ಮಾಹಿತಿಯ ಪ್ರಕಾರ ಆರೋಪಿಯ ತಾಯಿ ನಗರದ ದೇವಸ್ಥಾನದ ಬಳಿ ಭಿಕ್ಷೆ ಬೇಡುತ್ತಾಳೆ. ಮೂರು ವರ್ಷಗಳ ಹಿಂದೆ ಅವನ ಹೆಂಡತಿ ಅವನನ್ನು ತೊರೆದು ಹೋಗಿದ್ದಾಳೆ. ಪೊಲೀಸರು ಆರೋಪಿಯಿಂದ ಮತದಾರರ ಗುರುತಿನ ಚೀಟಿ ವಶಪಡಿಸಿಕೊಂಡಿದ್ದಾರೆ. ಸದ್ಯ ಆರೋಪಿಯನ್ನು ಬಂಧಿಸಿದ್ದು, ತನಿಖೆ ಮುಂದುವರಿಸಿದ್ದಾರೆ.

Post a Comment