Rs 2000 Note withdraw: ‘ಗಮನ ಬೇರೆಡೆ ಸೆಳೆಯುವ ತಂತ್ರ’ ಮೋದಿ ವಿರುದ್ಧ ಸಿದ್ದರಾಮಯ್ಯ ಕೆಂಡ!


  2000 ನೋಟ್ ಚಲಾವಣೆ ಸ್ಥಗಿತ

ಜನಸಾಮಾನ್ಯರ ಬಳಿ ಈಗ 2000 ರೂಪಾಯಿ ನೋಟ್ ಗಳಿಲ್ಲ, ಆದರೂ ಪದೇ ಪದೇ ನೋಟ್ ಮಾಡುವುದು ಸರಿ ಅಲ್ಲ ಎಂದು ಕೊಪ್ಪಳದ ನಿವೃತ್ತ ಬ್ಯಾಂಕ್ ಮ್ಯಾನೇಜರ್ ದೇವಪ್ಪ ಹೇಳಿದ್ದಾರೆ.ಬೆಂಗಳೂರು: ರಿಸರ್ವ್​ ಬ್ಯಾಂಕ್ ಆಫ್​ ಇಂಡಿಯಾ 2000 ರೂಪಾಯಿ ಮುಖಬೆಲೆಯ ನೋಟುಗಳನ್ನು (2000 Currency Notes) ಇನ್ಮುಂದೆ ಮುದ್ರಿಸುವುದಿಲ್ಲ ಎಂದು ಘೋಷಿಸಿದೆ. ಅಲ್ಲದೆ ಚಲಾವಣೆಯಲ್ಲಿರುವ ನೋಟುಗಳನ್ನು ಹಿಂತೆಗೆದುಕೊಳ್ಳುವುದಾಗಿ ( 2000 Notes Withdraw) ತಿಳಿಸಿದೆ. ಈ ಕುರಿತಂತೆ ಪ್ರತಿಕ್ರಿಯೆ ನೀಡಿರುವ ಸಿದ್ದರಾಮಯ್ಯ (Siddaramaiah) ಅವರು, 2 ಸಾವಿರ ರೂಪಾಯಿ ನೋಟ್ ಬ್ಯಾನ್ ಮೂಲಕ ನರೇಂದ್ರ ಮೋದಿ (Narendra Modi) ಮತ್ತೊಂದು ನೋಟು ನಿಷೇಧ (Note Ban) ಮಾಡಿದ್ದಾರೆ, ಇದು ದುಃಖಕರವಾಗಿದೆ. ಬಿಜೆಪಿ ಸರ್ಕಾರಕ್ಕೆ (BJP Govt) ತಮ್ಮದೇ ನೀತಿಗಳ ಬಗ್ಗೆ ಸ್ಪಷ್ಟತೆ ಇಲ್ಲ. 2016ರಲ್ಲಿ 2,000 ರೂಪಾಯಿ ನೋಟುಗಳನ್ನು ಬ್ಯಾನ್ ಮಾಡುವ ಯೋಜನೆ ಇದ್ದರೆ ಅದನ್ನು ಏಕೆ ಪರಿಚಯಿಸಿದರು? ತಮ್ಮ ವೈಫಲ್ಯಗಳಿಂದ ಗಮನವನ್ನು ಬೇರೆಡೆ ಸೆಳೆಯಲು ಬಿಜೆಪಿಯ ಹತಾಶ ಪ್ರಯತ್ನ ಇದಾಗಿದೆ ಎಂದು ಕಿಡಿಕಾರಿದ್ದಾರೆ.2 ಸಾವಿರ ರೂಪಾಯಿ ನೋಟು ಹಿಂತೆಗೆದುಕೊಳ್ಳುವ ಆರ್​ಸಿಐ ನಿರ್ಧಾರದ ಕುರಿತಂತೆ ಪ್ರತಿಕ್ರಿಯೆ ನೀಡಿರುವ ಕೊಪ್ಪಳದ ನಿವೃತ್ತ ಬ್ಯಾಂಕ್ ಮ್ಯಾನೇಜರ್ ದೇವಪ್ಪ, ಪದೇ ಪದೇ ನೋಟ್ ಬ್ಯಾನ್​ ಮಾಡೋದು ಜನರಲ್ಲಿ ಗೊಂದಲ ಉಂಟಾಗುತ್ತೆ. 2000 ರೂಪಾಯಿ ನೋಟ್ ಪ್ರಿಂಟ್ ಮಾಡಿರುವುದು ಆರ್ಥಿಕ ಹೊರೆಯಾಗುತ್ತೆ.

Post a Comment

Previous Post Next Post