ಮಾಜಿ ಸಿಎಂ ಎಚ್ಡಿ ಕುಮಾರಸ್ವಾಮಿ ಎರಡು ಮೂರು ತಿಂಗಳಲ್ಲಿ, ಅಕ್ಟೋಬರ್ ನವೆಂಬರ್ ಒಳಗೆ ಹೊಸ ರಾಜಕೀಯ ಬದಲಾವಣೆ ಆಗುತ್ತೆ ಎಂದು ಕಾಂಗ್ರೆಸ್ ಸರ್ಕಾರದ ಕುರಿತು ಎಚ್ಡಿ ಕುಮಾರಸ್ವಾಮಿ ಭವಿಷ್ಯ ನುಡಿದಿದ್ದಾರೆ. ರಾಮನಗರ: ಕರ್ನಾಟಕ ವಿಧಾನಸಭಾ ಚುನಾವಣೆಯಲ್ಲಿ (Karnataka Assembly Elections) ಸ್ಪಷ್ಟ ಬಹುಮತ ಪಡೆದ ಐದು ದಿನಗಳ ಬಳಿಕ ಕಾಂಗ್ರೆಸ್ (Congress) ಹೈಕಮಾಂಡ್, ಮುಖ್ಯಮಂತ್ರಿ (Chief Minister) ಅಭ್ಯರ್ಥಿಯನ್ನು ಘೋಷಣೆ ಮಾಡಿದ್ದಾರೆ. ಇದರ ನಡುವೆ ಹೊಸ ಬಾಂಬ್ ಸಿಡಿಸಿರುವ ಮಾಜಿ ಸಿಎಂ ಎಚ್ಡಿ ಕುಮಾರಸ್ವಾಮಿ (HD Kumaraswamy) ಅವರು, ಕಾಂಗ್ರೆಸ್ ಸರ್ಕಾರ ಬಗ್ಗೆ ಹೊಸ ಭವಿಷ್ಯ ನುಡಿದಿದ್ದು, ಎರಡ್ಮೂರು ತಿಂಗಳಲ್ಲಿ ರಾಜಕೀಯ (Politics) ಬದಲಾವಣೆ ಆಗುತ್ತೆ. ಅಕ್ಟೋಬರ್ ನವೆಂಬರ್ ಒಳಗೆ ರಾಜಕೀಯ ಬದಲಾವಣೆಯಾಗುತ್ತೆ ಎಂದು ಹೇಳಿದ್ದಾರೆ.
ಈ ಪಕ್ಷಕ್ಕೆ ಸೋಲು ಹೊಸದೇನಲ್ಲ

Post a Comment