ಸಾಂದರ್ಭಿಕ ಚಿತ್ರ
ಇನ್ಮೇಲೆ ನೀವು ಯಾವುದೇ ನೋಟು ತೆಗೆದುಕೊಳ್ಳುವಾಗ ಎಚ್ಚರದಿಂದ ಇರಬೇಕು. ಜನರ ಕೈಯಿಂದ ಇರಲಿ, ಅಂಗಡಿ ಮಾರುಕಟ್ಟೆಯಲ್ಲಿ ಇರಲಿ, ಇಷ್ಟೇ ಯಾಕೆ ಬ್ಯಾಂಕ್‌ನಿಂದ ನೋಟು ಪಡೆಯುವಾಗ ಸಮೇತ ನೀವು ಎಚ್ಚರದಿಂದ ಇರಬೇಕು ಇದು ಅಸಲಿ ನೋಟೋ ಅಥವಾ ನಕಲಿ ನೋಟೋ ಎಂದು.ಬೆಂಗಳೂರು: ಕರ್ನಾಟಕದ ವಿಧಾನಸಭಾ ಚುನಾವಣೆ ನಡೆದಿದೆ. ಈ ಬಾರಿಯ ಚುನಾವಣೆಯಲ್ಲಿ ಬಿಜೆಪಿಗೆ ಅಧಿಕಾರವನ್ನು ಹಿಡಿಟ್ಟುಕೊಳ್ಳುವ ಅನಿವಾರ್ಯತೆ ಇದ್ದರೆ, ಕಾಂಗ್ರೆಸ್‌ಗೆ ಪುನಃ ಅಧಿಕಾರ ಹಿಡಿಯುವ ಹಂಬಲವಿತ್ತು. ಈಗ ಚುನಾವಣೆ ಮುಗಿದಿದೆ. ಆಡಳಿತ ಪಕ್ಷ ಬಿಜೆಪಿ ಹೀನಾಯವಾಗಿ ಸೋತು ಕಾಂಗ್ರೆಸ್ ಅಧಿಕಾರದ ಗದ್ದುಗೆಗೆ ಏರಿದೆ. ಆದರೆ ಈ ಬಾರಿಯ ಚುನಾವಣೆಯಲ್ಲಿ ಹಣದ ಹೊಳೆಯೇ ಹರಿದಿದೆ. ಎಲ್ಲಾ ಪಕ್ಷಗಳ ಅನೇಕ ಅಭ್ಯರ್ಥಿಗಳು ಕೋಟಿ ಕೋಟಿ ಹಣವನ್ನು ಸುರಿದಿದ್ದಾರೆ.ಆದರೆ ಈಗ ಹರಿದು ಬರ್ತಿರೋ ಸುದ್ದಿ ಏನಪ್ಪಾ ಅಂದ್ರೆ, ಚುನಾವಣೆ ಮುಗಿದ ಬೆನ್ನಲ್ಲೇ ಭಾರೀ ಖೋಟಾ ನೋಟು (Counterfeit Note) ಜಾಲ ಪತ್ತೆಯಾಗಿರುವ ಮಾಹಿತಿ ಸಿಕ್ಕಿದೆ. ಹೌದು, ಅಂದ್ಹಾಗೆ ಇನ್ಮೇಲೆ ನೀವು ಯಾವುದೇ ನೋಟು ತೆಗೆದುಕೊಳ್ಳುವಾಗ ಎಚ್ಚರದಿಂದ ಇರಬೇಕು. ಜನರ ಕೈಯಿಂದ ಇರಲಿ, ಅಂಗಡಿ ಮಾರುಕಟ್ಟೆಯಲ್ಲಿ ಇರಲಿ, ಇಷ್ಟೇ ಯಾಕೆ ಬ್ಯಾಂಕ್‌ನಿಂದ ನೋಟು ಪಡೆಯುವಾಗ ಸಮೇತ ನೀವು ಎಚ್ಚರದಿಂದ ಇರಬೇಕು ಇದು ಅಸಲಿ ನೋಟೋ ಅಥವಾ ನಕಲಿ ನೋಟೋ ಎಂದು. ಯಾಕಂದ್ರೆ ಈ ಬಾರಿ ನಕಲಿ ನೋಟು ಪತ್ತೆಯಾಗಿರೋದು ಇನ್ನೆಲ್ಲೋ ಜನರ ಕೈಯಲ್ಲಿ ಅಲ್ಲ, ಸ್ವತಃ ಬ್ಯಾಂಕ್‌ನಲ್ಲೇ ಅಂದ್ರೆ ನೀವು ನಂಬಲೇ ಬೇಕು.

Post a Comment