ಕೋಬ್ರಾ ಬೈಕ್
“ಕೋಬ್ರಾ” ಬೈಕ್ ಸದಾ ಅಲರ್ಟ್ ಆಗಿದ್ದು, ನಗರದಲ್ಲಿ ಉಂಟಾಗುವ ಅನಗತ್ಯ ಟ್ರಾಫಿಕ್ ಕಿರಿಕಿರಿಗೆ ಮುಕ್ತ ಹಾಡಲಿದೆ.ಮಂಗಳೂರು: ಟ್ರಾಫಿಕ್ ಸಮಸ್ಯೆಗಳಿಗೆ ಮುಕ್ತಿ ಹಾಡಲು ಈಗ “ಕೋಬ್ರಾ” ಪಡೆ (Cobra Bikes In Mangaluru) ಇನ್ಮುಂದೆ ಮಂಗಳೂರು ನಗರದಲ್ಲಿ (Mangaluru News) ಕಾಣಿಸಿಕೊಳ್ಳಲಿದೆ. ದ್ವಿಚಕ್ರ ವಾಹನದ ಈ ಪಡೆ ತಕ್ಷಣವೇ ಟ್ರಾಫಿಕ್ ಸಂಬಂಧಿತ ಸಮಸ್ಯೆಗಳಿಗೆ (Mangaluru Traffic) ಸ್ಥಳಕ್ಕೆ ತೆರಳಿ ಕ್ರಮಕೈಗೊಳ್ಳಲಿದೆ. ಕಮೀಷನರೇಟ್ ವ್ಯಾಪ್ತಿಗೆ ನಾಲ್ಕು “ಕೋಬ್ರಾ” ಬೈಕ್ಗಳನ್ನು ನೀಡಲಾಗಿದ್ದು, ಅದನ್ನು ಸಂಚಾರ ಪೂರ್ವ ಹಾಗೂ ಸಂಚಾರ ಪಶ್ಚಿಮ ಠಾಣೆಗಳಿಗೆ ಮಂಗಳೂರು ನಗರ ಪೊಲೀಸ್ ಕಮೀಷನರ್ ಕುಲದೀಪ್ ಆರ್. ಜೈನ್ ಹಸ್ತಾಂತರಿಸಿದ್ದಾರೆ.
“ಕೋಬ್ರಾ” ಕಾರ್ಯಾಚರಣೆ ಹೇಗೆ?“ಕೋಬ್ರಾ” ಬೈಕ್ ಸದಾ ಅಲರ್ಟ್ ಆಗಿದ್ದು, ನಗರದಲ್ಲಿ ಉಂಟಾಗುವ ಅನಗತ್ಯ ಟ್ರಾಫಿಕ್ ಕಿರಿಕಿರಿಗೆ ಮುಕ್ತ ಹಾಡಲಿದೆ. ವಿಶೇಷವಾಗಿ ಅಪಘಾತ, ಪಾರ್ಕಿಂಗ್ ನಿಯಮ ಉಲ್ಲಂಘನೆ, ವಿಐಪಿ ಹಾಗೂ ಆಂಬುಲೆನ್ಸ್ ಸಂಚಾರಕ್ಕೆ ಸುಗಮ ಸಂಚಾರ, ಯಾವುದೇ ಅಡೆತಡೆಯಿಲ್ಲದಂತೆ ಫುಟ್ಪಾತ್ಗಳ ನಿರ್ವಹಣೆ, ನೋ ಪಾರ್ಕಿಂಗ್ ಜಾಗದಲ್ಲಿ ನಿಲ್ಲಿಸಿರುವ ವಾಹನಗಳ ಮೇಲೆ ಕ್ರಮ ಹೀಗೆ ಸದಾ ಅಲರ್ಟ್ ಆಗಿದ್ದು ನಗರದಾದ್ಯಂತ ಈ “ಕೋಬ್ರಾ” ಸಿಬ್ಬಂದಿಗಳು ಕಾರ್ಯಾಚರಿಸಲಿದ್ದಾರೆ.

Post a Comment