Basavaraj Bommai: ಸೋಲಿನ ಬೆನ್ನಲ್ಲೇ ಹಂಗಾಮಿ ಸಿಎಂಗೆ RSS ಬುಲಾವ್​​! ರಹಸ್ಯ ಸಭೆ ಬಳಿಕ ಬೊಮ್ಮಾಯಿ ಹೇಳಿದ್ದೇನು?


 ಹಂಗಾಮಿ ಸಿಎಂ ಬಸವರಾಜ್ ಬೊಮ್ಮಾಯಿ

ಕರ್ನಾಟಕ ವಿಧಾನಸಭಾ ಚುನಾವಣೆಯಲ್ಲಿ ಪಕ್ಷದ ಸೋಲಿಗೆ ಕಾರಣವನ್ನು ವಿಶ್ಲೇಷಣೆ ಮಾಡಿರುವ ಆರ್​ಎಸ್​​ಎಸ್ ನಾಯಕರು ಪಕ್ಷ ಸಂಘಟನೆ ಬೊಮ್ಮಾಯಿ ಅವರಿಗೆ ಹಲವು ಸಲಹೆಗಳನ್ನು ನೀಡಿದ್ದಾರೆ. ಬೆಂಗಳೂರು: ಕರ್ನಾಟಕ ವಿಧಾನಸಭಾ ಚುನಾವಣೆಯಲ್ಲಿ (Karnataka Assembly Election) ಆಡಳಿತರೂಢ ಬಿಜೆಪಿ (BJP) ಪಕ್ಷ ಹೀನಾಯ ಸೋಲುಂಡಿದೆ. ಇದರ ಬೆನ್ನಲ್ಲೇ ರಾಜ್ಯಪಾಲರನ್ನು (Governor) ಭೇಟಿ ಮಾಡಿದ್ದ ಬಸವರಾಜ ಬೊಮ್ಮಾಯಿ (Basavaraj Bommai) ಅವರು ತಮ್ಮ ಸ್ಥಾನಕ್ಕೆ ರಾಜೀನಾಮೆ (Resignation) ಸಲ್ಲಿಕೆ ಮಾಡಿದ್ದರು. ಈ ನಡುವೆ ನಿನ್ನೆ ಬಿಜೆಪಿ ಕಚೇರಿಗೆ ಭೇಟಿ ನೀಡಿದ್ದ ಹಲವು ಬಿಜೆಪಿ ನಾಯಕರು ತಮ್ಮ ಸೋಲಿಗೆ ಕಾರಣಗಳನ್ನು ನೀಡಿದ್ದರು. ಈ ಎಲ್ಲಾ ಬೆಳವಣಿಗಗಳ ನಡುವೆ ಇಂದು ಆರ್​​ಎಸ್​​ಎಸ್ (RSS) ನಾಯಕರು ಹಂಗಾಮಿ ಸಿಎಂ ಬಸವರಾಜ ಬೊಮ್ಮಾಯಿ ಅವರಿಗೆ ಬುಲಾವ್​​​ ನೀಡಿದ್ದು, ರಹಸ್ಯ ಸಭೆಯನ್ನು ನಡೆಸಿದ್ದಾರೆ. ಸಭೆಯಲ್ಲಿ ಚುನಾವಣೆ ಸೋಲಿನ ಕುರಿತಂತೆ ಚರ್ಚೆ ನಡೆಸಿ, ಪಕ್ಷದಲ್ಲಿ ಮೇಜರ್ ಸರ್ಜರಿ ಮಾಡುವಂತೆ ಸೂಚನೆ ನೀಡಿದ್ದಾರೆ ಎನ್ನಲಾಗಿದೆ.ಬಿಜೆಪಿ ಶಾಸಕಾಂಗ ಸಭೆ ಇಂದು ಘೋಷಣೆ ಸಾಧ್ಯತೆ

Post a Comment

Previous Post Next Post