ಡಿಕೆ ಶಿವಕುಮಾರ್, ಕೆಪಿಸಿಸಿ ಅಧ್ಯಕ್ಷ
53,000 ಮುಸ್ಲಿಂ ಮತಗಳನ್ನು ಹೊಂದಿರುವ ಧಾರವಾಡದಿಂದ ಚುನಾವಣೆಗೆ ಸ್ಪರ್ಧಿಸುವುದಾಗಿ ಇಸ್ಮಾಯಿಲ್ ಮಾಧ್ಯಮ ಪ್ರತಿನಿಧಿಗಳಿಗೆ ತಿಳಿಸಿದ್ದಾರೆ. ಕೆಲವೊಂದು ಪಕ್ಷಗಳಿಂದ ತಮಗೆ ಬೇಡಿಕೆ ಇದೆ ಎಂಬ ವಿಚಾರವನ್ನು ಇಸ್ಮಾಯಿಲ್ ಬಹಿರಂಗಪಡಿಸಿದ್ದಾರೆ.ಬೆಂಗಳೂರು: ಕೆಪಿಸಿಸಿ ಅಧ್ಯಕ್ಷ ಡಿ ಕೆ ಶಿವಕುಮಾರ್ (KPCC President DK Shivakumar) ಚಿತ್ರದುರ್ಗ ವಿಧಾನಸಭಾ ಕ್ಷೇತ್ರದಿಂದ (Chitradurga Constituency) ಸ್ಪರ್ಧಿಸಲು ಟಿಕೆಟ್ ನಿರಾಕರಿಸಿ ವಂಚಿಸಿದ್ದಾರೆ ಎಂದು ಮಾಜಿ ಎಂಎಲ್ಸಿ ಜಿ ರಘು ಆಚಾರ್ (Former MLA Raghu Achar) ಆರೋಪಿಸಿದ್ದಾರೆ. ಕಾಂಗ್ರೆಸ್ 42 ಅಭ್ಯರ್ಥಿಗಳ ಎರಡನೇ ಪಟ್ಟಿ (Congress 2nd List) ಬಿಡುಗಡೆ ಮಾಡಿದ ನಂತರ ಪಕ್ಷಕ್ಕೆ ಬಂಡಾಯದ ಬೆದರಿಕೆ ಎದುರಾಗಿದೆ. ಟಿಕೆಟ್ ಸಿಗದ ಕೆಲವೊಂದು ಅಭ್ಯರ್ಥಿಗಳು ಪಕ್ಷಕ್ಕೆ ವಿರುದ್ಧವಾಗಿ ನಿಲ್ಲುವ ಸೂಚನೆ ನೀಡಿದ್ದಾರೆ. ಟಿಕೆಟ್ ಸಿಗದ ಅಭ್ಯರ್ಥಿಗಳು ಇದೀಗ ಪಕ್ಷದ ವಿರುದ್ಧ ಸಿಡಿದೆದ್ದಿದ್ದು, ಒಂದಾ ಬೇರೊಂದು ಪಕ್ಷವನ್ನು ಸೇರುವ ಅಥವಾ ಸ್ವತಂತ್ರ ಅಭ್ಯರ್ಥಿಯಾಗಿ (Independent Candidate) ಕಣಕ್ಕಿಳಿಯುವ ಎಚ್ಚರಿಕೆ ನೀಡಿದ್ದಾರೆ.ಟಿಕೆಟ್ ನಿರಾಕರಿಸಿದ ಹಿನ್ನೆಲೆಯಲ್ಲಿ ಪಕ್ಷದ ಮುಖಂಡರು ವಿಧಾನ ಪರಿಷತ್ ಚುನಾವಣೆಗೆ ಬದಲಾಗಿ ವಿಧಾನಸಭೆ ಚುನಾವಣೆಗೆ ಸ್ಪರ್ಧಿಸುವಂತೆ ಸೂಚಿಸಿದ್ದರು ಎಂದು ರಘು ಅವರು ಮಾಧ್ಯಮ ವರದಿಗಾರರಿಗೆ ತಿಳಿಸಿದ್ದಾರೆ. ಪಕ್ಷದ ಟಿಕೆಟ್ ಸಿಕ್ಕೇ ಸಿಗುತ್ತದೆ ಎಂಬ ಭರವಸೆಯೊಂದಿಗೆ ನಾನು ಪಕ್ಷವನ್ನು ಬಲಪಡಿಸಲು ಶ್ರಮಿಸಿದ್ದೇನೆ ಎಂದು ತಿಳಿಸಿರುವ ರಘು ಅವರು ನಾನು ಪ್ರಮುಖ ಜಾತಿಗೆ ಸೇರಿದವನಲ್ಲ ಎಂಬ ಕಾರಣಕ್ಕೆ ನನಗೆ ಟಿಕೆಟ್ ನೀಡದೆ ನಿರಾಸೆಗೊಳಿಸಿದ್ದಾರೆ. ಒಟ್ಟಿನಲ್ಲಿ ಅವರು ನನ್ನ ರಾಜಕೀಯ ಬದುಕನ್ನು ಹಾಳು ಮಾಡಿದ್ದಾರೆ ಎಂದು ರಘು ಆರೋಪಿಸಿದ್ದಾರೆ.ಡಿ.ಕೆ ಶಿವಕುಮಾರ್‌ಗೆ ಸಮುದಾಯದ ಮೇಲೆ ಒಲವಿಲ್ಲರಾಜ್ಯದಲ್ಲಿ 197 ಸಣ್ಣ ಸಮುದಾಯಗಳಿದ್ದು, ಮಾಜಿ ಮುಖ್ಯಮಂತ್ರಿ ದಿವಂಗತ ಡಿ.ದೇವರಾಜ ಅರಸು ನಂತರ ರಾಜಕೀಯದಲ್ಲಿ ಪ್ರಾತಿನಿಧ್ಯ ಸಿಕ್ಕಿಲ್ಲ ಎಂದು ತಿಳಿಸಿದ್ದಾರೆ.ಇಂತಹ ಸಮುದಾಯದ ಮೇಲೆ ಶಿವಕುಮಾರ್ ಅವರಿಗೆ ಒಲವು ಇದ್ದಂತಿಲ್ಲ ಎಂದು ರಘು ಅವರು ಹೇಳಿಕೆ ನೀಡಿದ್ದು, ವಿಶ್ವಕರ್ಮ ಸಮುದಾಯದವರನ್ನು ಕಡೆಗಣಿಸಿದ ಕಾಂಗ್ರೆಸ್‌ಗೆ ಆ ಸಮುದಾಯದ ಜನ ಬೆಂಬಲ ನೀಡುವುದಿಲ್ಲ. ವಿಧಾನಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ಗೆ ತಕ್ಕ ಪಾಠ ಕಲಿಸಲಿದ್ದಾರೆ ಎಂಬ ಎಚ್ಚರಿಕೆಯನ್ನು ನೀಡಿದ್ದಾರೆ.ಡಿಕೆ ಶಿವಕುಮಾರ್, ಕೆಪಿಸಿಸಿ ಅಧ್ಯಕ್ಷಕಾಂಗ್ರೆಸ್‌ಗೆ ಮತ- ಹಾಕದಂತೆ ಸಮುದಾಯದವರಲ್ಲಿ ಮನವಿಪ್ರತಿ ವಿಧಾನಸಭಾ ಕ್ಷೇತ್ರದಲ್ಲಿ ಸುಮಾರು 5 ರಿಂದ 17 ಸಾವಿರ ಮತದಾರರಿದ್ದಾರೆ ಎಂದು ತಿಳಿಸಿರುವ ರಘು ಅವರು, ರಾಜ್ಯ ಪ್ರವಾಸ ಕೈಗೊಳ್ಳುತ್ತೇನೆ ಹಾಗೂ ಸಮುದಾಯದ ಮತದಾರರಲ್ಲಿ ಕಾಂಗ್ರೆಸ್‌ಗೆ ಮತಹಾಕದಂತೆ ವಿನಂತಿಸಿಕೊಳ್ಳುತ್ತೇನೆ.ಹೀಗೆ ಮಾಡುವ ಮೂಲಕ ಸಮುದಾಯದ ಮತದಾರರಿಗೆ ನಿರ್ದೇಶನ ನೀಡುವಂತೆ ನಾನು ಸಮುದಾಯದ ಮತದಾರರನ್ನು ಕೇಳುತ್ತೇನೆ ಎಂದು ತಿಳಿಸಿದ್ದಾರೆ.ವಿಧಾನಸಭೆ ಚುನಾವಣೆಗೆ ಸ್ಪರ್ಧಿಸಲಿರುವ ರಘುವಿಧಾನಸಭೆ ಚುನಾವಣೆಗೆ ತಪ್ಪದೇ ಸ್ಪರ್ಧಿಸುವುದಾಗಿಯೂ, ಏಪ್ರಿಲ್ 17ರಂದು ನಾಮಪತ್ರ ಸಲ್ಲಿಸುವುದಾಗಿಯೂ ರಘು ಸ್ಪಷ್ಟಪಡಿಸಿದ್ದಾರೆ.ಕ್ಷೇತ್ರದ ಬೆಂಬಲಿಗರು ಮತ್ತು ಮತದಾರರನ್ನು ಸಮಾಲೋಚಿಸಿದ ನಂತರ ಅವರು ಬಂಡಾಯ ಕಾಂಗ್ರೆಸ್ ಅಭ್ಯರ್ಥಿಯಾಗಿ ಅಥವಾ ಬೇರೆ ರಾಜಕೀಯ ಪಕ್ಷದ ನಾಮನಿರ್ದೇಶಿತರಾಗಿ ಚುನಾವಣೆಯನ್ನು ಎದುರಿಸಲಿದ್ದಾ
ರೆಯೇ ಎಂಬುದನ್ನು ತಿಳಿಸಲಿದ್ದಾರೆ.ರಘು ಆಚಾರ್, ಮಾಜಿ ಎಂಎಲ್ಸಿ
ಕಾಂಗ್ರೆಸ್ ಘೋಷಣೆ ಮಾಡಿರುವ ಅಭ್ಯರ್ಥಿಗಳುಇಲ್ಲಿಯವರೆಗೆ ಕಾಂಗ್ರೆಸ್ 165 ಅಭ್ಯರ್ಥಿಗಳನ್ನು ಘೋಷಿಸಿದೆ. ಆದರೆ ತನ್ನ ಹಾಲಿ ಶಾಸಕರು ಕಣಕ್ಕಿಳಿದಿರುವ ಪುಲಕೇಶಿನಗರ, ಹರಿಹರ, ಕುಂದಗೋಳ, ಶಿಡ್ಲಘಟ್ಟ ಮತ್ತು ಲಿಂಗಸೂಗೂರು ಐದು ಕ್ಷೇತ್ರಗಳಲ್ಲಿ ಟಿಕೆಟ್ ಘೋಷಿಸಿಲ್ಲ.ಇದನ್ನೂ ಓದಿ: Karnataka Election 2023: ರಾಜ್ಯ ಚುನಾವಣೆ ಹೊಸ್ತಿಲಲ್ಲಿ ಕಮಲ ರಿವರ್ಸ್ ಆಪರೇಷನ್; ಕಾಂಗ್ರೆಸ್ ಟಿಕೆಟ್ ಆಕಾಂಕ್ಷಿಗಳು ಬಿಜೆಪಿ ಸೇರ್ಪಡೆ!ವಿವಾದಕ್ಕೂ ಒಳಗಾಗಿರುವ ಅಭ್ಯರ್ಥಿಗಳ ಪಟ್ಟಿಸಿದ್ದರಾಮಯ್ಯ ಪ್ರತಿನಿಧಿಸುವ ಬಾದಾಮಿಯಲ್ಲಿ ಕಾಂಗ್ರೆಸ್ ಮಾಜಿ ಶಾಸಕ ಬಿ.ಬಿ.ಚಿಮ್ಮನಕಟ್ಟಿ ಅವರ ಪುತ್ರ ಭೀಮಸೇನ್ ಚಿಮ್ಮನಕಟ್ಟಿ ಅವರನ್ನು ಪಕ್ಷ ಕಣಕ್ಕಿಳಿಸಿದೆ.ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಮಾಜಿ ಸಚಿವ ವಿನಯ್ ಕುಲಕರ್ಣಿ ಅವರನ್ನು ಧಾರವಾಡ ಜಿಲ್ಲೆಗೆ ಪ್ರವೇಶಿಸದಂತೆ ಸುಪ್ರೀಂ ಕೋರ್ಟ್ ನಿರ್ಬಂಧ ವಿಧಿಸಿರುವ ಬೆನ್ನಲ್ಲೇ ಕಾಂಗ್ರೆಸ್ ಅವರನ್ನು ಕಣಕ್ಕಿಳಿಸಿರುವುದು ವಿವಾದಕ್ಕೆ ಕಾರಣವಾಗಿದೆ.


Post a Comment