ಅತೀಕ್ ಅಹ್ಮದ್ತ
ಅತೀಕ್ ತನಗೆ 18 ವರ್ಷ ತುಂಬುವುದರೊಳಗೆ ಅಪರಾಧ ಜಗತ್ತಿಗೆ ಕಾಲಿಟ್ಟಿದ್ದ. ಕೇವಲ 17ನೇ ವಯಸ್ಸಿನಲ್ಲಿ, 1979 ರಲ್ಲಿ ಅತೀಕ್ ಮೇಲೆ ಮೊದಲ ಕೊಲೆ ಆರೋಪ ಹೊರಿಸಲಾಗಿತ್ತು. ನಂತರ ಅಪರಾಧ ಜಗತ್ತಿನಲ್ಲಿ ಅತೀಕ್ ತನ್ನದೇ ಹೆಸರು ಮಾಡಲು ಪ್ರಾರಂಭಿಸಿದ್ದನುಪ್ರಯಾಗ್ರಾಜ್: ಮೊನ್ನೆಯವರಿಗೆ ಉತ್ತರ ಪ್ರದೇಶಕ್ಕೆ (Uttar Pradesh) ಸೀಮಿತವಾಗಿದ್ದ ಅತೀಕ್ ಅಹ್ಮದ್( Atiq Ahmed) ಸುದ್ದಿ, ಇಂದು ದೇಶಾದ್ಯಂತ ಚರ್ಚೆಗೆ ಬಂದಿದೆ. ಕಾರಣ ಪೊಲೀಸರ (Police) ಸಮ್ಮುಖದಲ್ಲೇ, ಜೊತೆಗೆ ಮಾಧ್ಯಮದ ಜೊತೆ ಲೈವ್ನಲ್ಲಿದ್ದಾಗಲೇ ಮೂವರು ದುಷ್ಕರ್ಮಿಗಳು ಅತೀಕ್ ಅಹ್ಮದ್ನನ್ನು ಹತ್ಯೆ ಮಾಡಿದ್ದರು. ಅತೀಕ್ ಅಹ್ಮದ್ ಜೊತೆಗೆ ಆತನ ಸಹೋದರ ಅಶ್ರಫ್ ಅಹ್ಮದ್ನನ್ನೂ ಕೊಲ್ಲಲಾಗಿದೆ. ಈ ಘಟನೆ ಇಡೀ ದೇಶವನ್ನೇ ಉತ್ತರ ಪ್ರದೇಶದತ್ತ ತಿರುಗುವಂತೆ ಮಾಡಿದೆ. ಒಂದು ಕಡೆ ನೂರಾರು ಅಪರಾಧ ಪ್ರಕರಣಗಳಲ್ಲಿ ಭಾಗಿಯಾಗಿದ್ದ ಅತೀಕ್ನನ್ನು ಕೊಂದಿದ್ದಕ್ಕೆ ಸಂಭ್ರಮಿಸುತ್ತಿದ್ದರೆ, ಮತ್ತೊಂದು ಕಡೆ ಪೊಲೀಸ್ ಸಮ್ಮುಖದಲ್ಲೇ ಇಂತಹ ಘಟನೆ ನಡೆದಿರುವುದರಿಂದ ರಾಜ್ಯದಲ್ಲಿನ ಕಾನೂನು ಸುವ್ಯವಸ್ಥೆ (Law and Order) ಯಾವ ಮಟ್ಟಕ್ಕಿದೆ ಎಂದು ಹಲವರು ಪ್ರಶ್ನಿಸುತ್ತಿದ್ದಾರೆಅತೀಕ್ ಅಹ್ಮದ್ ಯಾಅತೀಕ್ ಅಹ್ಮದ್ 1962 ರಲ್ಲಿ ಅಂದಿನ ಅಲಹಾಬಾದ್ ಅಂದರೆ ಈಗಿನ ಪ್ರಯಾಗ್ ರಾಜ್ನ ಚಾಕಿಯಾ ಪ್ರದೇಶದಲ್ಲಿ ಜನಿಸಿದ. ತಂದೆ ಫಿರೋಜ್ ಅಹಮದ್ ಜೀವನೋಪಾಯಕ್ಕಾಗಿ ಟಾಂಗಾ ನಡೆಸುತ್ತಿದ್ದರು. ಅತೀಕ್ 10ನೇ ಪರೀಕ್ಷೆಯಲ್ಲಿ ಅನುತ್ತೀರ್ಣನಾಗಿದ್ದ, ನಂತರ ಓದನ್ನು ಸಂಪೂರ್ಣವಾಗಿ ತೊರೆದಿದ್ದ ಆತ ಅಪರಾಧ ಕೃತ್ಯಗಳಲ್ಲಿ ತೊಡಗಿಕೊಂಡಿದ್ದ17ನೇ ವಯಸ್ಸಿನಲ್ಲಿ ಮೊದಲ ಕೊಲೆ ಓದನ್ನು ನಿಲ್ಲಿಸಿದ ಅತೀಕ್, ತನಗೆ 18 ವರ್ಷ ತುಂಬುವುದರೊಳಗೆ ಅಪರಾಧ ಜಗತ್ತಿಗೆ ಕಾಲಿಟ್ಟಿದ್ದ. ಕೇವಲ 17ನೇ ವಯಸ್ಸಿನಲ್ಲಿ, ಅಂದರೆ 1979 ರಲ್ಲಿ ಅತೀಕ್ ಮೇಲೆ ಮೊದಲ ಕೊಲೆ ಆರೋಪ ಹೊರಿಸಲಾಗಿತ್ತು. ನಂತರ ಅಪರಾಧ ಜಗತ್ತಿನಲ್ಲಿ ಅತೀಕ್ ತನ್ನದೇ ಹೆಸರು ಮಾಡಲು ಪ್ರಾರಂಭಿಸಿದಇದನ್ನೂ ಓದಿ: Atiq Ahmed Killers: ಅತೀಕ್ ಅಹ್ಮದ್ ಶೂಟೌಟ್‌ನ ಮೂವರು ಆರೋಪಿಗಳಿಗಿದೆ ಖತರ್ನಾಕ್ ಇತಿಹಾಚಾಂದ್ ಬಾಬಾನಿಗೆ ಪ್ರತಿಸ್ಪರ್ಧಿಅತೀಕ್ ಅಲಹಾಬಾದ್ನಲ್ಲಿ ಮಾಫಿಯಾ ಜಗತ್ತಿಗೆ ಕಾಲಿಡುವ ಹೊತ್ತಿಗೆ ಈ ಪ್ರದೇಶದಲ್ಲಿಯೇ 'ಚಾಂದ್ ಬಾಬಾ' ತನ್ನದೇ ಆದ ಗ್ಯಾಂಗ್ ಸೃಷ್ಟಿಸಿಕೊಂಡಿದ್ದ. ಅವನ ಹೆಸರು ಎಷ್ಟು ದೊಡ್ಡದಾಗಿತ್ತೆಂದರೆ, ಪೊಲೀಸರು ಕೂಡ ಚಾಂದ್ ಬಾಬಾ ತಂಟೆಗೆ ಹೋಗದೇ ನುಣುಚಿಕೊಳ್ಳಲು ಪ್ರಯತ್ನಿಸುತ್ತಿದ್ದರು. ಚಾಂದ್ ಬಾಬಾನ ಕ್ರಿಮಿನಲ್ ಪಾರಮ್ಯಕ್ಕೆ ಪೊಲೀಸರಷ್ಟೇ ಅಲ್ಲ, ರಾಜಕಾರಣಿಗಳೂ ಹೆದರಿದ್ದರು. ಇಂತಹ ಸಂದರ್ಭದಲ್ಲಿ ಚಾಂದ್ ಬಾಬಾನ ಕೊಲೆ ಮಾಡಲು ಪೊಲೀಸರು ಹಾಗೂ ಸ್ಥಳೀಯ ರಾಜಕೀಯ ಮುಖಂಡರು ಅತೀಕ್ನನ್ನು ಎತ್ತಿಕಟ್ಟಿದ್ದರು ಎನ್ನಲಾಗಿದೆ. 1980ರ ದಶಕದಲ್ಲಿ ಅತೀಕ್ ಮತ್ತು ಚಾಂದ್ ಬಾಬಾ ಗ್ಯಾಂಗ್‌ಗಳ ನಡುವೆ ಸಾಕಷ್ಟು ಘರ್ಷಣೆ ನಡೆದಿತ್ತುಶಾಸಕನಾದ ತಕ್ಷಣ ಚಾಂದ್ ಬಾಬಾ ಹತ್ಯೆಗೈದ ಅ1989ರಲ್ಲಿ ಪ್ರಥಮ ಬಾರಿಗೆ ವಿಧಾನಸಭೆಗೆ ಟಿಕೆಟ್ ಪಡೆದಿದ್ದ ಅತೀಕ್ ಅದೇ ವರ್ಷ ರಾಜಕೀಯಕ್ಕೆ ಎಂಟ್ರಿಕೊಟ್ಟಿದ್ದ ಚಾಂದ್ ಬಾಬಾನನ್ನು ಸೋಲಿಸಿದ್ದ. ರಾಜಕೀಯದಲ್ಲಿ ಮೊದಲ ಯಶಸ್ಸು ಸಿಗುತ್ತಿದ್ದಂತೆ ಕೇವಲ ಮೂರೇ ತಿಂಗಳಲ್ಲಿ ಹಾಡ ಹಗಲೇ ಚಾಂದ್ ಬಾಬಾನನ್ನು ಕೊಲೆಮಾಡಿಸಿದ್ದ. ಇದರ ಹಿಂದೆ ಅತೀಕ್ ಕೈವಾಡವಿದೆ ಎಂಬುದು ಜಗ್ಗಜಾಹೀರಾಗಿತ್ತು. ಅಲ್ಲದೆ ಚಾಂದ್ ಬಾಬಾನ ಹತ್ಯೆಯ ನಂತರ ಆತನ ಸಂಪೂರ್ಣ ಗ್ಯಾಂಗ್ ಅಂತ್ಯವಾಯಿತು. ಅತೀಕ್ ಆ ಪ್ರದೇಶದ ಡಾನ್ ಆದ. ನಂತರ ಆತನ ಹಾದಿ ಸುಲಭವಾಗಿ ಅಪರಾಧ ಜಗತ್ತಿನಲ್ಲಿ ಎದುರಾಳಿಗಳಿಲ್ಲದೆ ಮೆರೆದಾಡಿದ್ದಇದನ್ನೂ ಓದಿ: Atiq Ahmed: ಗ್ಯಾಂಗ್‌ಸ್ಟರ್ ಅತೀಕ್ ಅಹ್ಮದ್, ಸಹೋದರ ಗುಂಡೇಟಿಗೆ ಬಲಿ! ಪೊಲೀಸರ ಮುಂದೆಯೇ ಲೈವ್ ಶೂಚಾಂದ್ ಬಾಬಾ ನಂತರ ಅತೀಕ್‌ಗೆ ಸವಾಲ್ ಹಾಕಿದ್ದ ರಾಜು ಪಾಒಂದು ಕಡೆ ಅಪರಾಧ ಜಗತ್ತಿನಲ್ಲಿ ಮುಂದುವರಿಯುತ್ತಿದ್ದರೂ, ಆತನ ರಾಜಕೀಯ ಸ್ಥಾನಮಾನ ಕಡಿಮೆಯಾಗಲಿಲ್ಲ. ಚಾಂದ್ ಬಾಬಾ ಹತ್ಯೆಯ ನಂತರ, ಅತೀಕ್ ಅಹ್ಮದ್ ಅಲಹಾಬಾದ್ ಪಶ್ಚಿಮದಿಂದ 1989 ರಿಂದ 2002 ರವರೆಗೆ 5 ಬಾರಿ ಶಾಸಕನಾಗಿದ್ದ. ಈ ಕ್ಷೇತ್ರದಲ್ಲಿ ಅತನಿಗೆ ಸವಾಲೊಡ್ಡುವ ಯಾವೊಬ್ಬ ಎದುರಾಳಿ ಇರಲಿಲ್ಲಎದುರಾಳಿಯಾಗಿ ಬೆಳೆದ ರಾಜುಪಾಲ್ ಆದರೆ 2004ರಲ್ಲಿ ಅಲಹಾಬಾದ್ ಪಶ್ಚಿಮ ಕ್ಷೇತ್ರದಲ್ಲಿ ಅತೀಕ್ ಹಿನ್ನಡೆ ಅನುಭವಿಸುವಂತಾಯಿತು. 2004ರಲ್ಲಿ ಫುಲ್‌ಪುರದಿಂದ ಲೋಕಸಭೆ ಚುನಾವಣೆಯಲ್ಲಿ ಅತೀಕ್‌ಗೆ ಟಿಕೆಟ್ ನೀಡಿದ್ದರಿಂದ ಸಂಸದರಾಗಿ ಆಯ್ಕೆಯಾಗಿದ್ದ. ಸಂಸದರಾದ ನಂತರ, ಅತೀಕ್ ಅಲಹಾಬಾದ್ ಪಶ್ಚಿಮ ವಿಧಾನಸಭಾ ಸ್ಥಾನಕ್ಕೆ ರಾಜೀನಾಮೆ ನೀಡಿದ್ದನು ಮತ್ತು ಆ ಜಾಗಕ್ಕೆ ತಮ್ಮ ಸಹೋದರ ಅಶ್ರಫ್ ಅವರನ್ನು ಕಣಕ್ಕಿಳಿಸಿದ್ದ. ಆದರೆ 2004ರ ಕೊನೆಯಲ್ಲಿ ನಡೆದ ಉಪಚುನಾವಣೆಯಲ್ಲಿ, ಒಂದು ಕಾಲದಲ್ಲಿ ಅತೀಕ್ ಅವರ ನಿಕಟವರ್ತಿಯಾಗಿದ್ದ ರಾಜು ಪಾಲ್ ಅವರು ಅಶ್ರಫ್ ಮುಂದೆ ಬಿಎಸ್‌ಪಿಯಿಂದ ಕಣಕ್ಕಿಳಿದಿದ್ದರು. ರಾಜುಪಾಲ್ ಕೂಡ ಗೂಂಡಾಗಿರಿಗೆ ಹೆಸರಾಗಿದ್ದರು. ಕೊನೆಗೆ ಚುನಾವಣೆಯಲ್ಲಿ ಗೆಲ್ಲುವ ಮೂಲಕ ಅಲಹಾಬಾದ್ ಪಶ್ಚಿಮದ ಮೇಲೆ ಅತೀಕ್ ಅವರ 15 ವರ್ಷಗಳ ಪ್ರಾಬಲ್ಯವು ಕೊನೆಗಾಣಿಸಿದ್ದಅತೀಕ್ ಕ್ಷೇತ್ರದಲ್ಲಿ ರಾಜು ಪಾಲ್ ಗೆದ್ದಿದ್ದರಿಂದ ಮುಂದೆ ಏನಾಗಬಹುದು ಎಂದು ಇಡೀ ಕ್ಷೇತ್ರದಲ್ಲಿ ಕುತೂಹಲ ಹೆಚ್ಚಾಗಿತ್ತು. ಇದೇ ಕಾರಣದಿಂದ ಕೇವಲ ಮೂರು ತಿಂಗಳಲ್ಲಿ ಹಾಡ ಹಗಲೇ ಗುಂಡಿನ ಸುರಿಮಳೆಗೈದು ರಾಜು ಪಾಲ್ನನ್ನು ಕೊಲ್ಲಲಾಗಿತ್ತು. ರಾಜುಪಾಲ್ ಪತ್ನಿ ಅತೀಕ್ ಅಹಮದ್ ಮತ್ತು ಆತನ ಸಹೋದರ ಅಶ್ರಫ್ ವಿರುದ್ಧ ದೂರು ನೀಡಿದ್ದರು. ಉಮೇಶ್ ಪಾಲ್ ಈ ಕೊಲೆಗೆ ಸಾಕ್ಷಿಯಾಗಿದ್ದರು. ಈತನನ್ನು ಕಿಡ್ನಾಪ್ ಮಾಡಿ ಸಾಕ್ಷಿ ಹೇಳದಂತೆ ಬೆದರಿಸಿದ್ದ, ಆದರೆ ಉಮೇಶ್ ಪಾಲ್ ಪೊಲೀಸರಿಗೆ ರಾಜು ಪಾಲ್ ಕೊಲೆ ತಾನೇ ಸಾಕ್ಷಿ ಎಂದು ಹೇಳಿದ್ದ. ಈ ಕಾರಣದಿಂದಲೇ ಆತನ್ನು ಇದೇ ವರ್ಷ ಫೆಬ್ರವರಿಯಲ್ಲಿ ಕೊಲ್ಲಲಾಗಿತ್ತುಇದನ್ನೂ ಓದಿ: Asad Ahmad Encounter: ಅತೀಕ್ ಅಹ್ಮದ್ ಯಾರು ? ಗ್ಯಾಂಗ್ಸ್ಟರ್ನ ಮಗ ಎನ್ಕೌಂಟರ್ನಲ್ಲಿ ಬಲಿಯಾಗಿದ್ದೇಐಎಸ್‌ಐ ಏಜೆಂಈ ಕೊಲೆ ಪ್ರಕರಣದಲ್ಲಿ ಅಈಕ್ ಮತ್ತು ಅಶ್ರಫ್ ಅವರನ್ನು ಬಂಧಿಸಲಾಗಿತ್ತು. ಪ್ರಯಾಗ್‌ರಾಜ್‌ನ ಸಿಜಿಎಂ ಕೋರ್ಟ್ ಏಪ್ರಿಲ್ 13 ರಿಂದ 17 ರವರೆಗೆ ಪೊಲೀಸ್ ಕಸ್ಟಡಿಗೆ ಕಳುಹಿಸಿತ್ತು. ವಿಚಾರಣೆ ವೇಳೆ ಇಬ್ಬರಿಗೂ ಸುಮಾರು 200 ಪ್ರಶ್ನೆಗಳನ್ನು ಕೇಳಲಾಗಿತ್ತು. ವಿಶೇಷವೆಂದರೆ ಅತೀಕ್ ಪಾಕಿಸ್ತಾನದ ಜೊತೆಗಿನ ಸಂಪರ್ಕವನ್ನು ಒಪ್ಪಿಕೊಂಡಿದ್ದ. ಜೊತೆಗೆ ಉಮೇಶ್ ಪಾಲ್ ಕೊಲೆ ಪ್ರಕರಣದಲ್ಲಿ ತಾನು ಭಾಗಿಯಾಗಿರುವುದನ್ನು ಒಪ್ಪಿಕೊಂಡಿದ್ದ ಎಂದು ಹೇಳಲಾಗುತ್ತಿಅಲ್ಲದೆ ಆತ ಅಹಮದಾಬಾದ್ ಜೈಲಿನಿಂದ ಐಎಸ್ಐ ಏಜೆಂಟ್ಗೆ ಕರೆ ಮಾಡಿದ್ದ, ಪಾಕಿಸ್ತಾನದಿಂದ ಶಸ್ತ್ರಾಸ್ತ್ರ ಪೂರೈಕೆ ಮಾಡುತ್ತಿದ್ದ. ಅಲ್ಲದೆ ಅತೀಕ್ ತನ್ನ ಮಗನನ್ನು ಅಂತ್ಯಕ್ರಿಯೆಗೆ ಕರೆದುಕೊಂಡು ಹೋಗುವಂತೆ ಮನವಿ ಮಾಡುತ್ತಲೇ ಇದ್ದ. ಆದರೆ ಏಪ್ರಿಲ್ 14ರಂದು ಇದ್ದಕ್ಕಿದ್ದಂತೆ ಆತನ ಆರೋಗ್ಯ ಹದಗೆಟ್ಟಿತ್ತು. ಹಾಗಾಗಿ ಏಪ್ರಿಲ್ 15 ರಂದು ರಾತ್ರಿ ಪ್ರಯಾಗರಾಜ್‌ನಲ್ಲಿರುವ ಕ್ಯಾಲ್ವಿನ್ ಆಸ್ಪತ್ರೆಗೆ ಕರೆದೊಯ್ಯಲಾಯಿತು, ಅಲ್ಲಿಆತನನ್ನು ಮಾಧ್ಯಮದ ಮುಂದೆಯೇ ಗುಂಡಿಕ್ಕಿ ಕೊಲ್ಲಲಾಗಿದೆ. ದೆ.ಟ್ಕೆ?.ರು.ಹತ್ಯೆ.ಲ್ಟೌಟ್.ತೀಕ್.ಸ!.ಆರೋಪ.ರು?..ನನ್ನು ಮಾಧ್ಯಮದ ಮುಂದೆಯೇ ಗುಂಡಿಕ್ಕಿ ಕೊಲ್ಲಲಾಗಿದೆ.

Post a Comment