Crime News: ದಾರಿಯಲ್ಲಿ ಹಿಂಬಾಲಿಸಿ ಬಂದ ಸರಗಳ್ಳರು, ಪ್ರತಿರೋಧ ತೋರಿದ್ದಕ್ಕೆ ಮಹಿಳೆಯ ಕೈ ಕಟ್!


 ಸರಗಳ್ಳತನ (ಸಾಂದರ್ಭಿಕ ಚಿತ್ರ)

ಸರಗಳ್ಳತನಕ್ಕೆ ಯತ್ನಿಸಿದ ಇಬ್ಬರು ಆರೋಪಿಗಳನ್ನು ಮನೋಜ್ ಕುಮಾರ್ ಮತ್ತು ಫ್ರಾಂಕ್ಲಿನ್ ಎಂದು ಗುರುತಿಸಲಾಗಿದ್ದು, ಆರೋಪಿಗಳನ್ನು ಪುಟ್ಟೇನಹಳ್ಳಿ ಪೊಲೀಸರು ಬಂಧನ ಮಾಡಿದ್ದಾರೆ.ಬೆಂಗಳೂರು: ದೇವಸ್ಥಾನಕ್ಕೆ (Temple) ಹೋಗುತ್ತಿದ್ದ ಮಹಿಳೆಯನ್ನು (Woman) ಹಿಂಬಾಲಿಸಿದ್ದ ಆರೋಪಿಗಳು ಆಕೆಯ ಕತ್ತಿನಲ್ಲಿದ್ದ ಸರವನ್ನು ಕಳ್ಳತನ ಮಾಡಿ (Chain Snatching) ಎಸ್ಕೇಪ್​​ ಆಗಲು ಮುಂದಾಗಿದ್ದರು. ಆದರೆ ಆಕೆ ಸರ ಬಿಟ್ಟು ಕೊಡಲು ಪ್ರತಿರೋಧ ತೋರಿದ್ದಕ್ಕೆ ಕೋಪಗೊಂಡ ಆರೋಪಿಗಳು ಆಕೆಯ ಕೈಗೆ ಚಾಕು ಹಾಕಿ ಸ್ಥಳದಿಂದ ಪರಾರಿಯಾಗಿದ್ದಾರೆ. ಬೆಂಗಳೂರಿನ (Bengaluru) ಪುಟ್ಟೇನಹಳ್ಳಿ (Puttenahalli ) ಕೆರೆ ಬಳಿ ಘಟನೆ ನಡೆದಿದೆ. ಮಹಿಳೆ ಪ್ರತಿರೋಧ ತೋರಿದ ಪ್ರರಿಣಾಮ ಆರೋಪಿಗಲೂ ಬರಿಗೈನಲ್ಲಿ ಎಸ್ಕೇಪ್ ಆಗಿದ್ದರು ಎಂಬ ಮಾಹಿತಿ ಲಭ್ಯವಾಗಿದೆ.ನಿದು ಪ್ರಕರಣ?ಪುಟ್ಟೇನಹಳ್ಳಿ ನಿವಾಸಿಯಾಗಿದ್ದ ಮಹಿಳೆಯೊಬ್ಬರು ದೇವಸ್ಥಾನಕ್ಕೆ ಹೋಗಲು ಮನೆಯಿಂದ ಹೊರಟ್ಟಿದ್ದರು. ಆದರೆ ದುಷ್ಕರ್ಮಿಗಳು ಆಕೆಯನ್ನು ಬೈಕ್​​ನಲ್ಲಿ ಹಿಂಬಾಲಿಸಿಕೊಂಡು ಹೋಗಿ ಪುಟ್ಟೇನಹಳ್ಳಿ ಕೆರೆ ಬಳಿ ಸರ ಕಿತ್ತುಕೊಂಡು ಹೋಗಲು ಮುಂದಾಗಿದ್ದಾರೆ. ಆದರೆ ಮಹಿಳೆ ಕಳ್ಳರ ವಿರುದ್ಧ ತಿರುಗಿ ಬಿದ್ದು ಪ್ರತಿರೋಧ ತೋರಿದ್ದಾ


ರೆ.ಬಂಧಿತ ಆರೋಪಿಗಳಾದ ಮನೋಜ್ ಕುಮಾರ್ ಮತ್ತು ಫ್ರಾಂಕ್ಲಿನ್ಇದನ್ನೂ ಓದಿ: Gift Politics: ಮತದಾರರಿಗೆ ಹಂಚಲು ತಂದಿಟ್ಟಿದ್ದ ಕುಕ್ಕರ್, ಗಡಿಯಾರ ಸೀಜ್! ಪ್ರತ್ಯೇಕ ಪ್ರಕರಣದಲ್ಲಿ ದಾಖಲೆಯಿಲ್ಲದ ₹25 ಲಕ್ಷ ಜಪ್ತಿ!ಸರಗಳ್ಳತನಕ್ಕೆ ಯತ್ನಿಸಿದ ಇಬ್ಬರು ಆರೋಪಿಗಳನ್ನು ಮನೋಜ್ ಕುಮಾರ್ ಮತ್ತು ಫ್ರಾಂಕ್ಲಿನ್ ಎಂದು ಗುರುತಿಸಲಾಗಿದ್ದು, ಆರೋಪಿಗಳನ್ನು ಪುಟ್ಟೇನಹಳ್ಳಿ ಪೊಲೀಸರು ಬಂಧನ ಮಾಡಿದ್ದಾರೆ. ವಿಚಾರಣೆ ಸಂದರ್ಭದಲ್ಲಿ ಆರೋಪಿ ಮನೋಜ್ ಮೇಲೆ ಈಗಾಗಲೇ ಕೊಲೆ ಪ್ರಕರಣ ದಾಖಲಾಗಿರುವುದು ಬೆಳಕಿಗೆ ಬಂದಿದೆ. ಸದ್ಯ ಆರೋಪಿಗಳನ್ನು ಪುಟ್ಟೇನಹಳ್ಳಿ ಪೊಲೀಸರು ಹೆಚ್ಚಿನ ವಿಚಾರಣೆ ನಡೆಸಿದ್ದು, ಪುಟ್ಟೇನಹಳ್ಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲು ಮಾಡಿಕೊಳ್ಳಲಾಗಿದೆ.ಸಿಲಿಕಾನ್​ ಸಿಟಿಯಲ್ಲಿ ಡೆಡ್ಲಿ ವೀಲ್ಹಿಂಗ್ಸಿಲಿಕಾನ್ ಸಿಟಿ ಬೆಂಗಳೂರಿನ (Bengaluru) ಪ್ರಮುಖ ರಸ್ತೆಗಳಲ್ಲಿ ವೀಲ್ಹಿಂಗ್ (Bike Wheeling) ಮಾಡಿ ವಿಡಿಯೋಗಳನ್ನು (Video) ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದ ಪುಂಡರ ಹೆಡೆಮುರಿ ಕಟ್ಟಲು ಪೊಲೀಸರು ಯಶಸ್ವಿಯಾಗಿದ್ದಾರೆ. ನಗರದ ಕೆಐಎಎಲ್ ಏರ್​​ಪೋರ್ಟ್​​ ರಸ್ತೆ (Airport Road) ಹಾಗೂ ಹೊಸೂರು ರಸ್ತೆಯಲ್ಲಿ ವೀಲ್ಹಿಂಗ್ ಮಾಡುತ್ತಾ ಬೈಕ್ ನಲ್ಲಿ ಸ್ಟಂಟ್ ಮಾಡಿದ ಪುಂಡರು ಅದನ್ನು ವಿಡಿಯೋ ಮಾಡಿಕೊಂಡಿದ್ದರು. ಟ್ರಾಫಿಕ್​ ನಡುವೆಯೂ ಆರೋಪಿಗಳು ವೀಲ್ಹಿಂಗ್ ಮಾಡಿದ್ದರು. ಅಲ್ಲದೆ ವೀಲಿಂಗ್ ಬಳಿಕ ಚಿಕ್ಕಜಾಲ (Chikkajala) ಬಳಿ ತನ್ನ ಪಟಾಲಂನೊಂದಿಗೆ ವೀಲ್ಹಿಂಗ್​ ಮಾಡಿದ್ದ ಯುವಕ ಸೆಲ್ಫಿ (Selfie) ತೆಗೆದುಕೊಂಡು ವಿಡಿಯೋ ಕೂಡ ಮಾಡಿದ್ದ.ಪುಂಡರು ದುರ್ವತನೆಯ ತೋರಿದ್ದ ವಿಡಿಯೋವನ್ನು ಸೋಷಿಯಲ್ ಮೀಡಿಯಾದಲ್ಲಿ ಅಪ್ಲೋಡ್ ಮಾಡಿ ಸೆಲೆಬ್ರೆಷನ್ ಕೂಡ ಮಾಡಿದ್ದರು. ಈ ಬಗ್ಗೆ ಸ್ಥಳೀಯರು ಚಿಕ್ಕಜಾಲ ಪೊಲೀಸರಿಗೆ ಮಾಹಿತಿ ನೀಡಿದ್ದರು. ಈ ಮೇರೆಗೆ ಕಾರ್ಯಾಚರಣೆ ನಡೆಸಿದ ಪೊಲೀಸರು, ವೀಲ್ಹಿಂಗ್ ಮಾಡಿದ ವ್ಯಕ್ತಿಯನ್ನ ಪತ್ತೆ ಹಚ್ಚಿ ಬೈಕ್ ಜಪ್ತಿ ಮಾಡಿದ್ದಾರೆ. ಘಟನೆ ಬಗ್ಗೆ ಚಿಕ್ಕಜಾಲ ಸಂಚಾರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.ಇದನ್ನೂ ಓದಿ: Bengaluru: 50 ವರ್ಷ ಇತಿಹಾಸವಿರುವ ದೇವಸ್ಥಾನದ ವಿಗ್ರಹಗಳನ್ನು ನಾಶಗೊಳಿಸಿದ ದುಷ್ಕರ್ಮಿಗಳು; ಭಕ್ತರಿಂದ ಪುಂಡರ ಬಂಧನಕ್ಕೆ ಆಕ್ರೋಶಇದೇ ರೀತಿ ಹೊಸೂರು ರಸ್ತೆಯಲ್ಲೂ ಯವಕರನೋರ್ವ ಸುಮಾರು ಎರಡು ಕಿಲೋ ಮೀಟರ್ ದೂರ ವೀಲ್ಹಿಂಗ್ ಮಾಡಿದ್ದ. ಪುಂಡರ ವೀಲ್ಹಿಂಗ್ ಮತ್ತು ಸ್ಟಂಟ್ ಮಾಡುವ ದೃಶ್ಯಗಳನ್ನು ರಸ್ತೆಯಲ್ಲಿ ಹೋಗುತ್ತಿದ್ದ ವಾಹನ ಸವಾರರು ವಿಡಿಯೋ ಮಾಡಿ ಪೊಲೀಸರಿಗೆ ಮಾಹಿತಿ ನೀಡಿದ್ದರು. ಪುಂಡರ ವೀಲ್ಹಿಂಗ್ ಮತ್ತು ಸ್ಟಂಟ್ ನಿಂದ ವಾಹನ ಸವಾರರು ಹೈರಾಣಾಗಿದ್ದರು. ಸಾರ್ವಜನಿಕರ ದೂರಿನ ಮೇರೆಗೆ ಕಾರ್ಯಾಚರಣೆ ನಡೆಸಿದ ಎಲೆಕ್ಟ್ರಾನಿಕ್ ಸಿಟಿ ಸಂಚಾರ ಠಾಣೆ ಪೊಲೀಸರು ವೀಲ್ಹಿಂಗ್ ಮಾಡಿದ ಪುಂಡರಿಗಾಗಿ ಹುಡುಕಾಟ ನಡೆಸಿದ್ದಾರೆ.

Post a Comment

Previous Post Next Post