ಸುಮಲತಾ ಅಂಬರೀಶ್
ಮಂಗಳವಾರ ವಿಧಾನಸೌದದಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಸುಮಲತಾ, ನನಗೆ ಮಂಡ್ಯ ಅಭಿವೃದ್ಧಿ ಮುಖ್ಯ, ನನ್ನ ಜನ ಏನು ಹೇಳುತ್ತಾರೋ ಅದನ್ನು ನಾನು ಕೇಳುತ್ತೇನೆ. ನನ್ನ ಕೋರ್ ಕಮಿಟಿ ನಿಮ್ಮ ನಿಲುವಿಗೆ ಬದ್ಧ ಎಂದಿದ್ದಾರೆ. ಆದರೆ ನಾನು ಇನ್ನೂ ನಿರ್ಧಾರ ಮಾಡಿಲ್ಲ. ಪರಿಸ್ಥಿತಿ, ಸಂದರ್ಭ ನೋಡಿ ನಿರ್ಧಾರ ತೆಗೆದುಕೊಳ್ಳುತ್ತೇನೆ. ನನಗೆ ಯಾವುದೇ ಒತ್ತಡವಿಲ್ಲ ಎಂದರು.ಬೆಂಗಳೂರು: ಕಳೆದ ಒಂದು ವರ್ಷದಿಂದ ಮಂಡ್ಯ ಸಂಸದೆ ಸುಮಲತಾ ಅಂಬರೀಷ್ ( Sumalatha Ambareesh) ಬಿಜೆಪಿ (BJP) ಅಥವಾ ಕಾಂಗ್ರೆಸ್ (Congress) ಸೇರುತ್ತಾರೆ ಎಂಬ ಊಹಾಪೂಹಗಳು ಕೇಳಿ ಬರುತ್ತಿವೆ. ಇದೀಗ ವಿಧಾನಸಭೆ ಚುನಾವಣೆ (Assembly Election) ಹತ್ತಿರ ಬರುತ್ತಿದ್ದಂತೆ ಪಕ್ಷ ಸೇರ್ಪಡೆ ವಿಚಾರ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದೆ. ಈ ಕುರಿತು ಸ್ವತಃ ಸಂಸದೆ ಸುಮಲತಾ ಅಂಬರೀಷ್ ಮಾತನಾಡಿದ್ದು, ತಾವೂ ಸಂಸದೆ ಆದಾಗಿನಿಂದ ಈ ಚರ್ಚೆ ನಡೆಯುತ್ತಿದೆ. ಆದರೆ ಇನ್ನೂ ಅದರ ಬಗ್ಗೆ ಯಾವುದೇ ನಿರ್ಧಾರ ತೆಗೆದುಕೊಂಡಿಲ್ಲ ಎಂದು ತಿಳಿಸಿದ್ದಾರೆ.ಮಂಗಳವಾರ ವಿಧಾನಸೌದದಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಸುಮಲತಾ, ನನಗೆ ಮಂಡ್ಯ ಅಭಿವೃದ್ಧಿ ಮುಖ್ಯ, ನನ್ನ ಜನ ಏನು ಹೇಳುತ್ತಾರೋ ಅದನ್ನು ನಾನು ಕೇಳುತ್ತೇನೆ. ನನ್ನ ಕೋರ್ ಕಮಿಟಿ ನಿಮ್ಮ ನಿಲುವಿಗೆ ಬದ್ಧ ಎಂದಿದ್ದಾರೆ. ಆದರೆ ನಾನು ಇನ್ನೂ ನಿರ್ಧಾರ ಮಾಡಿಲ್ಲ. ಪರಿಸ್ಥಿತಿ, ಸಂದರ್ಭ ನೋಡಿ ನಿರ್ಧಾರ ತೆಗೆದುಕೊಳ್ಳುತ್ತೇನೆ. ನನಗೆ ಯಾವುದೇ ಒತ್ತಡವಿಲ್ಲ ಎಂದರು.ಬಿಜೆಪಿ-ಕಾಂಗ್ರೆಸ್ ಪಕ್ಷಗಳಿಂದ ನನಗೆ ಬೆಂಬಲ ಲೋಕಸಭಾ ಚುನಾವಣೆಯಲ್ಲಿ ಬಿಜೆಪಿ ಹಾಗೂ ಕಾಂಗ್ರೆಸ್ ಎರಡೂ ಪಕ್ಷಗಳು ನನ್ನನ್ನು ಬೆಂಬಲಿಸಿದ್ದವು. ಆ ಎರಡು ಪಕ್ಷದ ಕಾರ್ಯಕರ್ತರು ತಮ್ಮ ಪಕ್ಷದ ಧ್ವಜವನ್ನು ಬಿಟ್ಟು ನನ್ನ ಜಯಕ್ಕಾಗಿ ಒಟ್ಟಾಗಿ ಶ್ರಮಿಸಿದ್ದರು. ಹಾಗಾಗಿ ತಟಸ್ಥವಾಗಿ ಉಳಿದುಕೊಂಡರೆ ಅನುಕೂಲ ಎಂಬುದು ನನ್ನ ಆಲೋಚನೆಯಾಗಿದೆ ಎಂದರು.ಇದನ್ನೂ ಓದಿ: Sumalatha Ambareesh: ಪಕ್ಷ ಸೇರುವ ಬಗ್ಗೆ ನಾನಿನ್ನೂ ನ್ಯೂಟ್ರಲ್ ಆಗೇ ಇದ್ದೀನಿ: ಸುಮಲತಾ ಅಂಬರೀಷ್ಬಿಜೆಪಿ ನಾಯಕರಿಂದ ಪಕ್ಷ ಸೇರಲು ಕರೆಈಗಾಗಲೆ ಕೆಲವು ಪಕ್ಷಗಳಿಂದಲೂ ಕರೆ ಬರುತ್ತಿದೆ. ಬಿಜೆಪಿಯ ಹಲವಾರು ನಾಯಕರು ಪಕ್ಷ ಸೇರಿಕೊಳ್ಳಿ ಎಂದು ಸಾಕಷ್ಟು ಬಾರಿ ಕರೆದಿದ್ದಾರೆ. ಆದರೆ ನಾನು ಯಾವುದೇ ನಿರ್ಧಾರ ತೆಗೆದುಕೊಂಡಿಲ್ಲ. ಇನ್ನು ಚುನಾವಣೆಯಲ್ಲಿ ಯಾವ ಪಕ್ಷಕ್ಕೆ ಬೆಂಬಲ ನೀಡುತ್ತೀರಿ ? ಎಂಬುದಕ್ಕೆ ಪ್ರತಿಕ್ರಿಯಿಸಿ, " ನನಗೆ ಎಲ್ಲಾ ಪಕ್ಷದವರು ಬೆಂಬಲ ನೀಡಿದ್ದಾರೆ. ಆದರೆ ನಾನು ಎಲ್ಲರ ಪರ ಪ್ರಚಾರ ಮಾಡುವುದಕ್ಕೆ ಸಾಧ್ಯವಿಲ್ಲ. ನನ್ನ ಗೆಲುವಿನಲ್ಲಿ ಹೆಚ್ಚು ಶ್ರಮಿಸಿದವರು ಸ್ಪರ್ಧೆ ಮಾಡಿದರೆ, ಅವರ ಪರ ಖಂಡಿತ ಪ್ರಚಾರ ಮಾಡುತ್ತೇನೆ " ಎಂದು ಹೇಳಿದರು. ಶಾಸಕಿಯಾದರೆ ಜಿಲ್ಲೆ ಅಭಿವೃದ್ಧಿ ಅಂತಿದ್ದಾರೆ!ನಾನು ಶಾಸಕಿಯಾದರೆ ಜಿಲ್ಲೆ ಅಭಿವೃದ್ಧಿಯಾಗುತ್ತದೆ ಎಂದು ಜನರು ಹೇಳುತ್ತಿದ್ದಾರೆ. ಹಾಗಾಗಿ ನನ್ನ ಬೆಂಬಲಿಗರು ಹಾಗೂ ಜಿಲ್ಲೆಯ ಜನರ ಪ್ರತಿಕ್ರಿಯೆ ಸಂಗ್ರಹಿಸುತ್ತಿದ್ದೇನೆ. ಸ್ವಲ್ಪ ದಿನಗಳ ನಂತರ ಅಂತಿಮ ನಿರ್ಧಾರ ತೆಗೆದುಕೊಳ್ಳುತ್ತೇನೆ. ಜಿಲ್ಲೆಯ ಅಭಿವೃದ್ಧಿ ನೋಡಿಕೊಂಡು ಪಕ್ಷ ಸೇರ್ಪಡೆ ವಿಚಾರದ ಬಗ್ಗೆಯೂ ಯೋಚನೆ ಮಾಡುತ್ತೇನೆ. ಜನರಿಗೆ ಒಳ್ಳೆಯದಾಗಬೇಕು. ನನಗೆ, ನನ್ನ ಮಗನಿಗೆ ಏನು ಉಪಯೋಗ ಆಗುತ್ತದೆ ಎಂಬುದನ್ನು ನಾನು ನೋಡುವುದಿಲ್ಲ" ಎಂದು ತಿಳಿಸಿದರು.ಅಭಿಷೇಕ್ ಅಂಬರೀಷ್ ಸ್ಪರ್ಧೆ ಇಲ್ಲಪುತ್ರ ಅಭಿಷೇಕ್ ರಾಜ್ಯ ರಾಜಕಾರಣ ಪ್ರವೇಶ ಮಾಡಲಿದ್ದಾರೆ, ಮುಂಬರುವ ವಿಧಾನಸಭೆ ಚುನಾವಣೆಯಲ್ಲಿ ಸ್ಪರ್ಧಿಸಲಿದ್ದಾರೆ ಎನ್ನುವ ವಿಚಾರಕ್ಕೆ ಪ್ರತಿಕ್ರಿಯಿಸಿ, " ಸಧ್ಯ ಅಭಿಷೇಕ್ ಸಿನಿಮಾ ಮಾಡುತ್ತಿದ್ದಾನೆ. ರಾಜಕೀಯ ಪ್ರವೇಶದ ಬಗ್ಗೆ ಇನ್ನೂ ನಿರ್ಧಾರ ಮಾಡಿಲ್ಲ. ಅಭಿಮಾನಿಗಳು, ಬೆಂಬಲಿಗರು ಚುನಾವಣೆಗೆ ನಿಲ್ಲಿಸಬೇಕು ಎಂಬ ಆಸೆ ವ್ಯಕ್ತಪಡಿಸುತ್ತಿದ್ದಾ
ರೆ" ಎಂದರು.ಸುಮಲತಾ ಅಂಬರೀಶ್, ಸಂಸದೆಮಂಡ್ಯ ಬಿಡುವ ಪ್ರಶ್ನೆಯಿಲ್ಲಸುಮಲತಾ ಅಂಬರೀಷ್ ಮುಂದಿನ ಲೋಕಸಭಾ ಚುನಾವಣೆಯಲ್ಲಿ ಮಂಡ್ಯದಲ್ಲಿ ನಿಲ್ತಾರಾ? ಅಥವಾ ಬೆಂಗಳೂರಿನಲ್ಲಿ ಸ್ಪರ್ಧಿಸುತ್ತಾರಾ ? ನೋಡಬೇಕು ಎಂಬ ನಿಖಿಲ್ ಕುಮಾರಸ್ವಾಮಿ ಹೇಳಿಕೆಗೆ ಪ್ರತಿಕ್ರಿಯಿಸಿದ ಸುಮಲತಾ, " ನನಗೆ ನಿಖಿಲ್ ಹೇಳಿಕೆ ಕೇಳಿ ನಗು ಬರುತ್ತಿದೆ. ನಿಖಿಲ್ ಅಪ್ರಬುದ್ಧರಾಗಿ ಮಾತನಾಡುತ್ತಿದ್ದಾರೆ. ಮಂಡ್ಯದಲ್ಲಿ ಚುನಾವಣೆ ನಿಲ್ಲುತ್ತೇನೆ ಎಂದಿದ್ದವರು ಈಗ ರಾಮನಗರಕ್ಕೆ ಹೋಗಿದ್ದಾರೆ. ಆದರೆ ನಾನು ಮಂಡ್ಯದಲ್ಲೇ ಸ್ಪರ್ಧಿಸುತ್ತೇನೆ. ರಾಜಕೀಯ ಮಾಡುವುದಾದರೆ ಮಂಡ್ಯದಲ್ಲೆ ಮಾಡುತ್ತೇನೆ. ಯಾವುದೇ ಬೆಂಬಲ ಇಲ್ಲದಿದ್ದಾಗಲೇ ಬೆಂಗಳೂರಿನಲ್ಲಿ ಚುನಾವಣೆಗೆ ನಿಲ್ಲಲು ಬಂದಿದ್ದ ಆಫರ್ ತಿರಸ್ಕರಿಸಿ ಮಂಡ್ಯಕ್ಕೆ ಬಂದಿದ್ದೆ. ನನಗೆ ಇಲ್ಲಿ ರಾಜಕೀಯ ಅಸ್ತಿತ್ವ ಇದ್ದಾಗ ನಾನೇಕೆ ಬೇರೆ ಕ್ಷೇತ್ರಕ್ಕೆ ಹೋಗುವ ಯೋಚನೆ ಮಾಡಲಿ? ಎಂದು ಪ್ರಶ್ನಿಸಿದರು.


Post a Comment