Pakistan: ಪಾಕಿಸ್ತಾನಕ್ಕೆ ಕೈ ಕೊಟ್ಟ ವಿದ್ಯುತ್! ಪ್ರಮುಖ ನಗರಗಳಲ್ಲಿ 'ಪವರ್ ಪ್ರಾಬ್ಲಮ್'


 ಕರಾಚಿ, ಲಾಹೋರ್, ಇಸ್ಲಾಮಾಬಾದ್ ಮತ್ತು ಕ್ವೆಟ್ಟಾ ಸೇರಿದಂತೆ ಪಾಕಿಸ್ತಾನದ ಹಲವಾರು ನಗರಗಳಲ್ಲಿ ವಿದ್ಯುತ್ ಸರಬರಾಜು ಸ್ಥಗಿತವಾಗಿದೆ ಎಂದು ವರದಿಗಳು ತಿಳಿಸಿವೆ
ಆರ್ಥಿಕ ಹಿಂಜರಿತದಿಂದ ಕಂಗೆಟ್ಟಿರುವ ಪಾಕಿಸ್ತಾನಕ್ಕೆ ಮತ್ತೊಂದು ಆಘಾತ ಎದುರಾಗಿದೆ. ಸದ್ಯ ಪಾಕಿಸ್ತಾನಕ್ಕೆ ವಿದ್ಯುತ್ ಕೈಕೊಟ್ಟಿದೆ. (ಸಾಂದರ್ಭಿಕ ಚಿತ್ರ)
ಕರಾಚಿ, ಲಾಹೋರ್, ಇಸ್ಲಾಮಾಬಾದ್ ಮತ್ತು ಕ್ವೆಟ್ಟಾ ಸೇರಿದಂತೆ ಪಾಕಿಸ್ತಾನದ ಹಲವಾರು ನಗರಗಳಲ್ಲಿ ವಿದ್ಯುತ್ ಸರಬರಾಜು ಸ್ಥಗಿತವಾಗಿದೆ ಎಂದು ವರದಿಗಳು ತಿಳಿಸಿವೆ. (ಸಾಂದರ್ಭಿಕ ಚಿತ್ರ)
ಬಲೂಚಿಸ್ತಾನಕ್ಕೆ ವಿದ್ಯುತ್ ಸರಬರಾಜು ಮಾಡುವ ಎಲ್ಲಾ ಪ್ರಸರಣ ಮಾರ್ಗಗಳು ಟ್ರಿಪ್ ಆಗಿವೆ. ಇದರಿಂದ ಪಾಕಿಸ್ತಾನದ ಪ್ರಮುಖ ನಗರಗಳಲ್ಲಿ ಪವರ್ ಪ್ರಾಬ್ಲಮ್ ಉಂಟಾಗಿದೆ. (ಸಾಂದರ್ಭಿಕ ಚಿತ್ರ)
ಪಾಕಿಸ್ತಾನದ ಪ್ರಧಾನಿ ಶೆಹಬಾಜ್ ಷರೀಫ್ ಇತ್ತೀಚಿಗಷ್ಟೇ ಪಾಕಿಸ್ತಾನವು ಪಾಠ ಕಲಿತಿದೆ. ಭಾರತದೊಂದಿಗೆ ಶಾಂತಿಯಿಂದ ಬದುಕಲು ಬಯಸುತ್ತದೆ ಎಂದು ಪಾಕ್ ಪ್ರಧಾನಿ ಹೇಳಿದ್ದಾರೆ. (ಸಾಂದರ್ಭಿಕ ಚಿತ್ರ)
ನಾವು ಭಾರತದೊಂದಿಗೆ 3 ಯುದ್ಧಗಳನ್ನು ಮಾಡಿದ್ದೇವೆ. ಆದರೆ ಇದು ನಮ್ಮ ಜನರಿಗೆ ಹೆಚ್ಚಿನ ದುಃಖ, ಬಡತನ ಮತ್ತು ನಿರುದ್ಯೋಗ ಸಮಸ್ಯೆಯನ್ನು ತಂದಿದೆ’ ಎಂದು ಅವರು ಹೇಳಿದ್ದರು. (ಸಾಂದರ್ಭಿಕ ಚಿತ್ರ)ಪಾಕಿಸ್ತಾನದಲ್ಲಿ ಆರ್ಥಿಕ ಬಿಕ್ಕಟ್ಟು ಸ್ಥಳೀಯ ಜನರಿಗೆ ಸಮಸ್ಯೆಯ ತಲೆನೋವಾಗಿ ಪರಿಣಮಿಸಿದೆ. (ಸಾಂದರ್ಭಿಕ ಚಿತ್ರ)
ಮದ್ದುಗುಂಡುಗಳ ದಾಳಿಯಿಂದ ಅಮೂಲ್ಯ ಸಂಪನ್ಮೂಲಗಳನ್ನು ವ್ಯರ್ಥ ಮಾಡಬಯಸುವುದಿಲ್ಲ. ಇದು ನಾನು ಪ್ರಧಾನಿ ಮೋದಿಗೆ ಮಾಡುವ ಮನವಿ ಎಂದು ಪಾಕಿಸ್ತಾನದ ಪ್ರಧಾನಿ ಶೆಹಬಾಜ್ ಷರೀಫ್ ಮನವಿ ಮಾಡಿದ್ದಾರೆ (ಸಾಂದರ್ಭಿಕ ಚಿತ್ರ)

Post a Comment

Previous Post Next Post