Karnataka Politics: ರಾಜ ಹೋರಾಟದಲ್ಲಿ ಸತ್ತಿಲ್ಲ, ಜೊತೆಗಿದ್ದವರಿಂದಲೇ ಸತ್ತಿರೋದು: ಬೆಲ್ಲದ್ ಮಾತಿನ ಮರ್ಮವೇನು?


ಯಾವುದೇ ರಾಜ ಹೋರಾಟದಲ್ಲಿ ಮಡಿದಿಲ್ಲ. ಬದಲಿಗೆ ಅರಮನೆಯಲ್ಲಿನ ರಾಜಕಾರಣದಿಂದ ರಾಜ ಸಾಯುವಂತಾಗಿದೆ ಎಂದು ಅರವಿಂದ್ ಬೆಲ್ಲದ್ ಮಾರ್ಮಿಕವಾಗಿ ಮಾತನಾಡಿದ್ದಾರೆ. ಸಚಿವ ಸ್ಥಾನ ಸಿಗದೇ ಇರೋದಕ್ಕೆ ಸ್ವಪಕ್ಷೀಯರ ವಿರುದ್ದವೇ ಅತೃಪ್ತಿ ಹೊರಹಾಕಿದ್ದಾರೆ.ಹುಬ್ಬಳ್ಳಿ(ಜ.18): ಯಾವುದೇ ಯುದ್ಧದಲ್ಲಿ ರಾಜ ಹೋರಾಟದಲ್ಲಿ ಸತ್ತಿಲ್ಲ. ಹಿತಶತ್ರುಗಳು, ಜೊತೆಗಿದ್ದವರಿಂದಲೇ ರಾಜ ಸತ್ತಿರೋದು. ಪ್ಯಾಲೇಸ್ ಪಾಲಿಟಿಕ್ಸ್ (Palace Politics) ​ನಲ್ಲಿಯೇ ರಾಜರು ಸತ್ತಿರೋದು. ಹೀಗಂತ ಮಂತ್ರಿ ಸ್ಥಾನ ಸಿಗದೆ ಇರೋದಕ್ಕೆ ರಾಜರ ಉದಾಹರಣೆ ಕೊಟ್ಟು ಹುಬ್ಬಳ್ಳಿ - ಧಾರವಾಡ (Dharwad) ಪಶ್ಚಿಮ ಕ್ಷೇತ್ರದ ಶಾಸಕ ಅರವಿಂದ ಬೆಲ್ಲದ್ (Arvind Bellad) ಅಸಮಾಧಾನ ವ್ಯಕ್ತಪಡಿಸಿದರು. ನಿಮ್ಮ‌ಹಿತ ಶತ್ರು ಯಾರು ಅಂದ್ರೆ ಯಾರೂ ಇಲ್ಲ ಎಂದಿದ್ದಾರೆ. ಹೀಗೆ. ಯಾರ ಹೆಸರೂ ಹೇಳದೆ ಸ್ವ ಪಕ್ಷೀಯರ ವಿರುದ್ದ ಅಸಮಾಧಾನ ಹೊರಹಾಕಿದ್ದಾರೆ.ಪಾರ್ಟಿ ನನ್ನ ಕೆಲಸ ನೋಡಿ ಟಿಕೆಟ್ ಕೊಟ್ಟೇ ಕೊಡತ್ತೆ. ನಾನು ಮುಸ್ಲಿಂ, ದಲಿತ ವಿರೋಧಿ ಅಲ್ಲ. ನಾನು ಮುಸ್ಲಿಂನಲ್ಲಿ ಬಡವರಾಗಿ ಇರೋರ ಪರ. ರಾಜ್ಯದಲ್ಲಿ ಮುಸ್ಲಿಂ ಸಮಾಜದ ಎಲ್ಲಾ ಮುಖಂಡರ ಜೊತೆ ನಾನು ಸಿಎಮ್ ಭೇಟಿ ಮಾಡಿದ್ದೇನೆ. ಬಡ ಮುಸ್ಲಿಂರಿಗೆ ಪ್ರತ್ಯೇಕ ಹಣ ಬಿಡುಗಡೆ ಮಾಡೋ ಪ್ರಯತ್ನ ನಮ್ಮ ಸರ್ಕಾರದಲ್ಲಿ ನಡೆದಿದೆ. ನಮ್ಮ ಕ್ಷೇತ್ರದಲ್ಲಿ 7,200 ಮನೆಗಳನ್ನು ನಿರ್ಮಿಸಿ ಕೊಡಲಾಗ್ತಿದೆ. ಇಷ್ಟೆಲ್ಲಾ ಮಾಡಿದ್ರೂ ಸಚಿವ ಸ್ಥಾನ ಸಿಗದೇ ಇರೋದಕ್ಕೆ ಕಾರಣ ಏನೆಂಬ ಪ್ರಶ್ನೆಗೆ ಪರೋಕ್ಷವಾಗಿ ಸ್ವ ಪಕ್ಷೀಯರ ವಿರುದ್ದ ಬೆಲ್ಲದ್ ಅಸಮಾಧಾನ ವ್ಯಕ್ತಪಡಿಸಿದರು.: ಇದನ್ನೂ ಓದಿ: Karnataka Politics: ಜೆಡಿಎಸ್ ಜೊತೆ ಬಿಜೆಪಿ ಮೈತ್ರಿ ಇಲ್ಲ; ಮಿಷನ್ 150+ ಟಾರ್ಗೆಟ್​ ಎಂದ ಅಮಿತ್​ ಶಾ!ಬೇರೆ ಕ್ಷೇತ್ರದಿಂದ ಸ್ಪರ್ಧಿಸುವಂತೆ ಹೈಕಮಾಂಡ್ ಹೇಳಿಲ್ಲಈ ಕ್ಷೇತ್ರ ಬಿಟ್ಟು ಬೇರೆ ಕ್ಷೇತ್ರದಿಂದ ಸ್ಪರ್ಧಿಸಿ ಅಂತ ನನಗೆ ಹೈಕಮಾಂಡ್ ಹೇಳಿಲ್ಲ. ನಾನು ಈ ಕ್ಷೇತ್ರದ ಪ್ರತಿನಿಧಿಯಾಗಿ ಮತ್ತಷ್ಟು ಕೆಲಸ ಮಾಡಬೇಕಿದೆ. ಹೀಗಾಗಿ ಇಲ್ಲಿಂದಲೇ ಮುಂದಿನ ಚುನಾವಣೆಗೂ ಸ್ಪರ್ಧಿಸ್ತೇನೆ ಎಂಬ ವಿಶ್ವಾಸವಿದೆ ಎಂದರು. ಮುಖ್ಯಮಂತ್ರಿ ಹುದ್ದೆ ಮುಳ್ಳಿನ ಹಾಸಿಗೆ. ಅಲ್ಲಿ ಕೂತು ನಡೆಸೋರಿಗೆ ಅದು ಗೊತ್ತಿರುತ್ತೆ. ಆ ಕುರ್ಚಿ ಅಲ್ಲಿ ಕುಳಿತವರಿಗೆ ಎಲ್ಲರಿಗೂ ನ್ಯಾಯ ಕೊಡಿಸಬೇಕು ಎಂದಿರುತ್ತೆ. ನಿಗಮ ಮಂಡಳಿ ಅಧ್ಯಕ್ಷರಿಲ್ಲದಿದ್ದರೆ ಸಂಬಂಧಪಟ್ಟ ಸಚಿವರ ಮೇಲೆ ಒತ್ತಡ ಜಾಸ್ತಿ ಬೀಳುತ್ತೆ. ನಾನು ತಿಪ್ಪಾರೆಡ್ಡಿ ಆಡಿಯೋ ಕೇಳಿಲ್ಲ. ಇದು ಬಿಜೆಪಿ ಸರ್ಕಾರ ಮಾತ್ರವಲ್ಲ, ಎಲ್ಲಾ ಸರ್ಕಾರದಲ್ಲೂ ಇದೆ. ಇವಾಗ ರೆಕಾರ್ಡ್ ಮಾಡೋದು ಹೆಚ್ಚಾಗಿದೆ. ಹಾಗಾಗಿ ವೈರಲ್ ಆಗ್ತಿವೆ ಎಂದು ಬೆಲ್ಲದ್ ತಿಳಿಸಿದ್ದಾರೆ.ಪಂಚಮಸಾಲಿ ಹೋರಾಟ ಅನ್ಯ ಹಾದಿ ಹಿಡಿಯುತ್ತಿರುವುದಕ್ಕೆ ಆತಂಕ ಪಂಚಮಸಾಲಿಗಳ ತುಡಿತ ಮೀಸಲಾತಿ ಹೋರಾಟದ ಮೂಲಕ ಹೊರಬಿದ್ದಿದೆ. ಆದರೆ ಮುಖಂಡರು, ಸ್ವಾಮೀಜಿಗಳ ನಡುವಿನ ಭಿನ್ನಾಭಿಪ್ರಾಯದಿಂದ ಮೀಸಲಾತಿ ಹೋರಾಟ ಕವಲು ಹಾದಿ ಹಿಡಿದಿದೆ ಎಂದು ಅರವಿಂದ ಬೆಲ್ಲದ್ ತಿಳಿಸಿದ್ದಾರೆ. ಸಿಎಂ ಬೊಮ್ಮಾಯಿ ಅವರು ಪಂಚಮಸಾಲಿಗಳಿಗೆ ಮೀಸಲಾತಿ ಕೊಡೋದಾಗಿ ಹೇಳಿದ್ದಾರೆ. ಸರ್ಕಾರವೂ ಒಪ್ಪಿಕೊಂಡಿದೆ. ಯತ್ನಾಳ್ ಅವರೂ ಪ್ರಬಲ ಬೇಡಿಕೆ ಇಟ್ಟಿದ್ದಾರೆ. ಆದರೆ ಬೇಡಿಕೆ ಈಡೇರಿಕೆಗೆ ಸಮಯ ಬೇಕಾಗುತ್ತೆ. ಮೇಲಿಂದ ಮೇಲೆ ಗಡುವು ಕೊಡೋದು ಸರಿಯಲ್ಲ. ಶಿಗ್ಗಾಂವಿ ಹೋರಾಟದ ಹಿಂದಿನ ದಿನವೇ ಮನವೊಲಿಕೆಗೆ ಸಿಎಂ ಯತ್ನಿಸಿದ್ದರು. ಇಷ್ಟರ ಹೊರತಾಗಿ ಸ್ವಾಮೀಜಿ ಹೋರಾಟ ಮಾಡಿದ್ದರು ಎಂದಿದ್ದಾರೆ.ಇದನ್ನೂ ಓದಿ: Karnataka Politics: ಚುನಾವಣಾ ಹೊಸ್ತಿಲಲ್ಲಿ ಚಿತ್ರದುರ್ಗಕ್ಕೆ ಬಿಜೆಪಿ ಅಧ್ಯಕ್ಷ ನಡ್ಡಾ ಭೇಟಿ!ಅಲ್ಲದೇ ಈಗ ವೈಯಕ್ತಿಕ ವಿಚಾರಗಳ ಕಾರಣದಿಂದ ಮೀಸಲಾತಿ ವಿಚಾರ ಹಿಂದೆ ಸರಿದಿದೆ. ವೈಯಕ್ತಿತ ಟೀಕೆ ಟಿಪ್ಪಣೆ ಸರಿಯಲ್ಲ. ಯಾವ ಉದ್ದೇಶಕ್ಕಾಗಿ ಹೋರಾಟ ಮಾಡಿದ್ರೋ ಅದಕ್ಕೆ ಬದ್ಧರಾಗಿರಬೇಕು. ಇದರಲ್ಲಿ ಸ್ವಲ್ಪ ಸಮಾಧಾನ ಇರಬೇಕು. ವೈಯಕ್ತಿಕ ನಿಂದನೆಗಳಿಂದ ಮೀಸಲಾತಿ ಹೋರಾಟಕ್ಕೆ ಸೆಟ್ ಬ್ಯಾಕ್ ಸಹ ಆಗುತ್ತೆ. ಈ ಹೋರಾಟ ತಾರ್ಕಿಕ ಹಂತಕ್ಕೆ ಬರಲು ಜಯಮೃತ್ಯುಂಜಯ ಸ್ವಾಮೀಜಿಗಳು ಕಾರಣ. ಎಲ್ಲಾ ವೀರಶೈವ, ಲಿಂಗಾಯತ ಒಳ ಜಾತಿಗಳಿಗೆ ನ್ಯಾಯ ಸಿಕ್ಕೇ ಸಿಗುತ್ತೆ. ಸಚಿವ ಸ್ಥಾನ ಸಿಗದೇ ಇರೋದಕ್ಕೆ ಅಸಮಾಧಾನವಿಲ್ಲ. ಎಲ್ಲವನ್ನೂ ಹೈಕಮಾಂಡ್ ನಿರ್ಧರಿಸುತ್ತೆ ಎಂದು ಬೆಲ್ಲದ್ ತಿಳಿಸಿದರು.

Post a Comment

Previous Post Next Post