ರಶೀದ್ ಅಹಮ್ಮದ್ ಖಾದ್ರಿಗೆ ಪದ್ಮಶ್ರೀ ಗೌರವ
ದೇಶದ ನಾಲ್ಕನೇ ಅತ್ಯುನ್ನತ ಪ್ರಶಸ್ತಿಯಾದ ಪದ್ಮಶ್ರೀ ಪ್ರಶಸ್ತಿಗೆ ರಶೀದ್ ಅಹ್ಮದ್ ಖಾದ್ರಿ ಅವರು ಆಯ್ಕೆಯಾಗಿದ್ದಾರೆ ಕಲಬುರಗಿ: ಭಾರತದ ಅತ್ಯುನ್ನತ ನಾಗರಿಕ ಪ್ರಶಸ್ತಿಗಳಾದ ಪದ್ಮಶ್ರೀ, ಪದ್ಮ ಭೂಷಣ ಹಾಗೂ ಪದ್ಮ ವಿಭೂಷಣ ಪ್ರಶಸ್ತಿಗಳನ್ನು ಒಳಗೊಂಡ 2023ನೇ ಸಾಲಿನ ಪದ್ಮ ಪ್ರಶಸ್ತಿಗಳನ್ನು ಕೇಂದ್ರ ಸರಕಾರವು ಬುಧವಾರ ಪ್ರಕಟಿಸಿದೆ. ಆರು ಸಾಧಕರಿಗೆ ಪದ್ಮ ವಿಭೂಷಣ, ಒಂಭತ್ತು ಸಾಧಕರಿಗೆ ಪದ್ಮ ಭೂಷಣ ಹಾಗೂ 91 ಸಾಧಕರಿಗೆ ಪದ್ಮಶ್ರೀ ಪ್ರಶಸ್ತಿ ಘೋಷಣೆಯಾಗಿದೆ. ಈ ಪೈಕಿ ಕಲ್ಯಾಣ ಕರ್ನಾಟಕದ ಭಾಗದ ಬೀದರ್‌ನ ಬಿದರಿ ಕಲಾವಿದ ಷಾ ರಶೀದ್ ಅಹಮ್ಮದ್ ಖಾದ್ರಿ ಅವರಿಗೆ ಕೇಂದ್ರ ಸರ್ಕಾರವು ಪ್ರಸಕ್ತ ಸಾಲಿನ ಪದ್ಮಶ್ರೀ ಪ್ರಶಸ್ತಿಯನ್ನು ಘೋಷಿಸಿದೆ.ಬಿದರಿ ಖಾತಮ್ಮ ಇಳಿ ವಯಸ್ಸಿನಲ್ಲಿಯೂ ಕ್ರಿಯಾಶೀಲತೆಯಿಂದ ಬಿದ್ರಿ ಕಲೆಯನ್ನ ಬದುಕಿಸಿದ ಕುಶಲಕರ್ಮಿ, ರಶೀದ್ ಅಹಮದ್ ಖಾದ್ರಿ ಅವರಿಗೆ ಕಲ್ಯಾಣ ಕರ್ನಾಟಕದ ಭಾಗದ ಹಿರಿಯ ಪ್ರತಿಭೆಗೆ ಪದ್ಮಶ್ರೀ ದೊರೆತಿದ್ದು ಕಲ್ಯಾಣ ಕರ್ನಾಟಕ ಭಾಗದ ಕೀರ್ತಿ ಹೆಚ್ಚುವಂತೆ ಮಾಡಿದೆಇದನ್ನೂ ಓದಿ: PM Narendra Modi: ಖರ್ಗೆ ಭದ್ರಕೋಟೆ ಛಿದ್ರ ಮಾಡಲು ಮೋದಿ ಲಗ್ಗೆ; ಇಂದು ಯಾದಗಿರಿ, ಕಲಬುರಿಯಲ್ಲಿ ಪ್ರಧಾನಿ ಮೋದಿ ಅರಶೀದ ಖಾದ್ರಿ ಹಿನ್ನಲೆಷಾ ರಶೀದ್ ಅಹಮ್ಮದ್ ಖಾದ್ರಿ ಅವರು ತಮ್ಮ ಪೂರ್ವಜರ ಕಾಲದಿಂದಲೂ ಬಿದರಿ ಕಲೆ ಮುಂದುವರಿಸಿಕೊಂಡು ಬಂದಿದ್ದಾರೆ. ಸುಮಾರು ಐದು ದಶಕಗಳ ಕಾಲ ದೇಶ ವಿದೇಶ ಸುತ್ತಾಡಿ ಬಿದರಿ ಕಳೆ ಪರಿಚಯಿಸಿದ ಕೀರ್ತಿ ಪ್ರಸಿದ್ಧ ಖಾದ್ರಿ ಅವರಿಗೆ ಸಲ್ಲುತ್ತದೆ. 1955ರಲ್ಲಿ ಜನಿಸಿದ ಇವರು ಪಿಯುಸಿ ವಿದ್ಯಾಭ್ಯಾಸವನ್ನು ಮಾಡಿಕೊಂಡಿದ್ದು ತಮ್ಮ ಹಿರಿಯರಿಂದ ಬಳುವಳಿಯಾಗಿ ಬಂದಂತಹ ಬಿದರಿ ಕಲೆಯನ್ನು ಮುಂದುವರೆಸಿಕೊಂಡು ಬಂದಿದ್ದಾತಂದೆಯೇ ಸ್ಫೂತಂದೆಯಿಂದ ಬಳುವಳಿಯಾಗಿ ಪಡೆದ ಬಿದರಿ ಕಲೆಯನ್ನು ದೇಶ ಮಾತ್ರವಲ್ಲ ವಿದೇಶಕ್ಕೂ ಪರಿಚಯಿಸುವ ಮೂಲಕ ಪ್ರಾಚೀನ ಕರಕುಶಲತೆಯ ಮಹತ್ವವನ್ನು ಸಾರಿದ್ದಾರೆ. ಇವರು 2011 ರಲ್ಲಿ ಗಣರಾಜ್ಯೋತ್ಸವ ಪರೇಡ್‌ನಲ್ಲಿ ಕರ್ನಾಟಕ ಕೋಷ್ಟಕದಲ್ಲಿ ತಮ್ಮ ಉಪಕರಣಗಳೊಂದಿಗೆ ಕೆಲಸ ಮಾಡುವಾಗ ಅವರು ತ್ವರಿತ ಜನಪ್ರಿಯತೆಯನ್ನು ಗಳಿಸಿದರು. ಹೈದಾರಾಬಾದಿನ ನಿಜಾಮರಿಂದ ಗೌರವಕ್ಕೆ ಪಾತ್ರರಾಗಿದ್ದ ತಮ್ಮ ತಂದೆ ಷಾ ಮುಸ್ತಫಾ ಬಿದರಿ ಕಲೆಯನ್ನ ಖಾದರಿಯವರು ಮುಂದುವರೆಸಿಕೊಂಡು ಹೊರಟಿದ್ದಾಇದನ್ನೂ ಓದಿ: Kalburgi: ಕಲಬುರಗಿ ಜನತೆಗೆ ಸುಲಭದಲ್ಲಿ ಸಿಗುತ್ತೆ ನೋಡಿ ಲೋನ್, ಜನವರಿ 26ರಿಂದ ಸಾಲಪ್ರಶಸ್ತಿಗಳ ಮಹಾಪೂಬಿದ್ರಿ ಕಲೆಯಲ್ಲಿ ಜನಪ್ರಿಯತೆಯನ್ನು ಗಳಿಸಿರುವ ಖಾದ್ರಿಯವರಿಗೆ, 2006 ರ ಸುವರ್ಣ ಕರ್ನಾಟಕ ರಾಜ್ಯ ಉತ್ಸವ ಪ್ರಶಸ್ತಿ, 2004 ರಲ್ಲಿ ಗ್ರೇಟ್ ಇನಿಡ್ನಾ ಅಚೀವರ್ಸ್ ಪ್ರಶಸ್ತಿ, 2012ರಲ್ಲಿ ಶಿಲ್ಪ ಗುರು ಪ್ರಶಸ್ತಿ, 2015ರಲ್ಲಿ ರಂದು ರಾಷ್ಟ್ರಪ್ರಶಸ್ತಿ ಲಭಿಸಿವೆ. ಭಾರತದ ರಾಷ್ಟ್ರಪಗಳಾದ ಪ್ರಣವ್ ಮುಖರ್ಜಿ, ರಾಷ್ಟ್ರಪತಿ ಆರ್.ಎಸ್. ವೆಂಕಟರಮನ್ ಅವರಿಂದಲೂ ಪ್ರಶಸ್ತಿ ಸ್ವೀಕರಿಸಿದ್ದಾರೆ. ಈ ಮೂಲಕ ಜನ ಮೆಚ್ಚುಗೆಯನ್ನು ಪಡೆದುಕೊಂಡಿದ್ದಾಇದೀಗ ಕೇಂದ್ರ ಸರ್ಕಾರವು ಷಾ ರಶೀದ್ ಅಹ್ಮದ್ ಖಾದ್ರಿ ಅವರಿಗೆ ಪದ್ಮಶ್ರೀ ನೀಡಿ ಗೌರವಿಸಿದ್ದು, ಕಲ್ಯಾಣ ಕರ್ನಾಟಕ ಮಾತ್ರವಲ್ಲ ಇಡೀ ಕರ್ನಾಟಕಕ್ಕೆ ಹೆಮ್ಮೆಯ ವಿಚಾರವಾಗಿದೆ. ರೆ.ರಮೇಳರೆ.ರ್ತಿರೆ.ಬ್ಬರ.ದ್ರಿ.ಟಕಕ್ಕೆ ಹೆಮ್ಮೆಯ ವಿಚಾರವಾಗಿದೆ.

Post a Comment