Amit Shah: 'ಚಾಣಕ್ಯ' ಚಕ್ರವ್ಯೂಹ; ಹಳೇ ಮೈಸೂರಾಯ್ತು, ಮಧ್ಯ ಕರ್ನಾಟಕ ಟಾರ್ಗೆಟ್! 'ಕಲ್ಯಾಣ' ಬಿಕ್ಕಟ್ಟಿಗೆ ಶಾ ಮದ್ದು


  ಕರ್ನಾಟಕಕ್ಕೆ ಅಮಿತ್ ಶಾ ಭೇಟಿ

ಕುಂದಗೋಳ ಕಾರ್ಯಕ್ರಮ ಮುಗಿಸಿ ಅಮಿತ್​ ಶಾ ನೇರ ಬೆಳಗಾವಿಗೆ ಭೇಟಿ ನೀಡಲಿದ್ದಾರೆ. ಕಲ್ಯಾಣ ಕರ್ನಾಟಕದ ಬೆಳಗಾವಿ, ಧಾರವಾಡ, ಹಾವೇರಿ, ಗದಗ ಜಿಲ್ಲೆಗಳ ಸಚಿವರು, ಶಾಸಕರು, ಪದಾಧಿಕಾರಿಗಳ ಜೊತೆ ಸಭೆ ಮಾಡಲಿದ್ದಾರೆ. ಸಭೆಯ ಉದ್ದೇಶ ಒಡೆದು ಹೋಗಿರುವ ಬಿಜೆಪಿ ಮನಸ್ಸುಗಳನ್ನ ಒಗ್ಗೂಡಿಸುವ ಪ್ಲ್ಯಾನ್ ಆಗಿದೆ.ಹುಬ್ಬಳ್ಳಿ: ದಕ್ಷಿಣ ಭಾರತದಲ್ಲಿ ಕರ್ನಾಟಕ (Karnataka) ಬಿಟ್ಟರೆ ಬಿಜೆಪಿಗೆ ಬೇರೆ ಎಲ್ಲೂ ಭವಿಷ್ಯ ಇಲ್ಲ. ಹಾಗಾಗಿನೇ ಅಧಿಕಾರ ಕೈತಪ್ಪಬಾರದು ಅಂತ ಬಿಜೆಪಿ (BJP) ಹಠಕ್ಕೆ ಬಿದ್ದಿದೆ. ಸಿಕ್ಕಾಪಟ್ಟೆ ಪ್ರಚಾರ ಮಾಡುತ್ತಿದೆ. ಈಗ ಬಿಜೆಪಿ ಕಲ್ಯಾಣಕ್ಕಾಗಿ ಇಂದು (Kalyana Karnataka) ಅಮಿತ್​ ಶಾ ರಾಜ್ಯಕ್ಕೆ ಆಗಮಿಸಿದ್ದಾರೆ. ಬಿಜೆಪಿಯಲ್ಲಿರುವ ಮುನಿಸು, ಕೋಪತಾಪಕ್ಕೆಲ್ಲಾ ತೇಪೆ ಹಾಕೋದಕ್ಕೂ ಸಭೆ ನಿಗದಿಯಾಗಿದೆ. ಕೆಲ ದಿನಗಳ ಹಿಂದಷ್ಟೇ ಯಾದಗಿರಿ ಮತ್ತು ಕಲಬುರಗಿಯಲ್ಲಿ ಮೋದಿ (PM Modi) ರಣಕಹಳೆ ಮೊಳಗಿಸಿದ್ದರು. ಕಲ್ಯಾಣ ಕರ್ನಾಟಕದಲ್ಲಿ ಬಿಜೆಪಿಗೆ ಶಕ್ತಿ ತುಂಬಿ ಹೋಗಿದ್ದರು. ಈಗ ಆ ಶಕ್ತಿಯನ್ನ ಇಮ್ಮಡಿಗೊಳಿಸಲು ಚುನಾವಣಾ ಚಾಣಾಕ್ಯ ಅಮಿತ್ ​​ಶಾ (Union Minister Amit Shah) ಹುಬ್ಬಳ್ಳಿಗೆ ಬರುತ್ತಿದ್ದಾರೆ. ಹುಬ್ಬಳ್ಳಿಯಲ್ಲಿ ವಾಸ್ತವ್ಯ ಹೂಡಿರುವ ಅಮಿತ್​ ಶಾ ಇಂದು ಒಟ್ಟು 6 ಕಾರ್ಯಕ್ರಮಗಳಲ್ಲಿ ಭಾಗಿಯಾಗಲಿದ್ದಾರೆ.ಅಮಿತ್​ ಶಾ ‘ಕಲ್ಯಾಣ’ ಕಹಳೆ 01; ಲಿಂಗಾಯತ ಮತ ಟಾರ್ಗೆಟ್​ ಕೆಎಲ್‍ಇ ಸಂಸ್ಥೆಯ ಭೂಮರಡ್ಡಿ ಕಾಲೇಜಿನ ಕಾರ್ಯಕ್ರಮದಲ್ಲಿ ಅಮಿತ್​ ಶಾ ಭಾಗಿಯಾಗ್ತಾರೆ. ಮೊದಲು BVB ಕಾಲೇಜು ಒಳಾಂಗಣ ಸ್ಟೇಡಿಯಂ ಉದ್ಘಾಟನೆ ಮಾಡಲಿದ್ದಾರೆ. ಬಳಿಕ ಕೆಎಲ್​ಇ ಸೊಸೈಟಿಯ ಅಮೃತ ಮಹೋತ್ಸವದಲ್ಲಿ ಭಾಗಿಯಾಗಲಿದ್ದಾರೆ. ಆ ಮೂಲಕ ಲಿಂಗಾಯತ ಮತದಾರರನ್ನ ಸೆಳೆಯುವುದು ಅಮಿತ್​ ಶಾ ಅವರ ಮೊದಲ ಪ್ಲ್ಯಾನ್​. ಅಮಿತ್ ಶಾ ‘ಕಲ್ಯಾಣ’ ಕಹಳೆ 02; ಅಭಿವೃದ್ಧಿ ಹೆಸರಲ್ಲಿ ಮತಬೇಟೆಕೆಎಲ್​ಇ ಸಂಸ್ಥೆ ಕಾರ್ಯಕ್ರಮದ ಬಳಿಕ ಅಮಿತ್​ ಶಾ, ಧಾರವಾಡ ವಿಶ್ವ ವಿದ್ಯಾಲಯಕ್ಕೆ ಆಗಮಿಸಲಿದ್ದಾರೆ. ಕೇಂದ್ರ ಸಚಿವ ಪ್ರಹ್ಲಾದ್​ ಜೋಶಿ ಲೋಕಸಭಾ ಕ್ಷೇತ್ರದ ಧಾರವಾಡ ವಿವಿ ಒಳಗೆ ನಿರ್ಮಾಣ ಆಗುತ್ತಿರುವ ರಾಷ್ಟ್ರೀಯ ವಿಧಿ ವಿಜ್ಞಾನ ವಿಶ್ವವಿದ್ಯಾಲಯ ಕ್ಯಾಂಪಸ್​ಗೆ ಶಂಕುಸ್ಥಾಪನೆ ಮಾಡಲಿದ್ದಾರೆ.ಅಮಿತ್ ಶಾ ‘ಕಲ್ಯಾಣ’ ಕಹಳೆ 03; ದೇಶದಲ್ಲಿ ಒಟ್ಟು 8 ರಾಷ್ಟ್ರೀಯ ಫಾರಿನ್ಸಿಕ್​​ ವಿಶ್ವವಿದ್ಯಾಲಯಗಳಿವೆ. ನಾಳೆ 9ನೇ ಹಾಗು ದಕ್ಷಿಣ ಭಾರತದ ಮೊದಲ ವಿವಿಗೆ ಅಡಿಗಲ್ಲು ಹಾಕಲಿದ್ದಾರೆ ಅಮಿತ್​ ಶಾ. ಕರ್ನಾಟಕ ವಿವಿ, ಕೃಷಿ ಮತ್ತು ಕಾನೂನು ವಿವಿ ಕ್ಯಾಂಪಸ್​ನಲ್ಲೇ ನಿರ್ಮಾಣ ಆಗುತ್ತಿದೆ. ಧಾರವಾಡ ವಿಶ್ವವಿದ್ಯಾಲಯ ಇದಕ್ಕಾಗಿ 42 ಎಕರೆ ಜಾಗವನ್ನೂ ಒದಗಿಸಿದೆ. ಆ ಮೂಲಕ ಯುವ ಮತದಾರರನ್ನ ಸೆಳೆಯೋ 2ನೇ ಪ್ಲ್ಯಾನ್​​ ಬಿಜೆಪಿಯದ್ದಾಗಿದೆ. ಅಮಿತ್ ಶಾ ‘ಕಲ್ಯಾಣ’ ಕಹಳೆ 04; ಕುಂದಗೋಳಕ್ಕೆ ಶಾ ಲಗ್ಗೆಇಂದು ಮಧ್ಯಾಹ್ನ ಕುಂದಗೋಳ ಕ್ಷೇತ್ರಕ್ಕೆ ಅಮಿತ್ ಶಾ ಬರ್ತಿದ್ದಾರೆ. ಕುಂದಗೋಳ ಹೇಳಿ ಕೇಳಿ ಕಾಂಗ್ರೆಸ್​ ಭದ್ರಕೋಟೆಯಾಗಿದ್ದು, ಕಾಂಗ್ರೆಸ್​ಗೆ ಸೋಲುಣಿಸೋ ಪ್ಲ್ಯಾನ್​​​ ಹಾಕಿದ್ದಾರೆ. ಮೊದಲು 300 ವರ್ಷಗಳ ಪುರಾತನ ಶಂಭುಲಿಂಗ ದೇವಸ್ಥಾನಕ್ಕೆ ಹಾಗೂ ಬಸವಣ್ಣ ದೇವರ ಮಠಕ್ಕೆ ಭೇಟಿ ನೀಡಲಿದ್ದಾರೆ. ಬಳಿಕ ಕುಂದಗೋಳದ ವಾರ್ಡ್​ ನಂ.7ರಲ್ಲಿ ಬಿಜೆಪಿಯ ವಿಜಯ ಸಂಕಲ್ಪ ಅಭಿಯಾನಕ್ಕೆ ಮನೆ ಮನೆಗಳಿಗೆ ಕರಪತ್ರ ವಿತರಣೆಗೆ ಮಿಸ್ಡ್ ಕಾಲ್ ಮೂಲಕ ಸದಸ್ಯತ್ವ ಅಭಿಯಾನಕ್ಕೂ ಚಾಲನೆ ನೀಡಿ 2 ಕಿ.ಮೀ ರೋಡ್​ಶೋ


ನಡೆಸಲಿದ್ದಾರೆ.ಕರ್ನಾಟಕಕ್ಕೆ ಅಮಿತ್ ಶಾ ಭೇಟಿಅಮಿತ್​ ಶಾ ‘ಕಲ್ಯಾಣ’ ಕಹಳೆ 05; ಕಲ್ಯಾಣ ಬಿಕ್ಕಟ್ಟಿಗೆ ಶಾ ಮದ್ದು!ಕುಂದಗೋಳ ಕಾರ್ಯಕ್ರಮ ಮುಗಿಸಿ ಅಮಿತ್​ ಶಾ ನೇರ ಬೆಳಗಾವಿಗೆ ಭೇಟಿ ನೀಡಲಿದ್ದಾರೆ. ಕಲ್ಯಾಣ ಕರ್ನಾಟಕದ ಬೆಳಗಾವಿ, ಧಾರವಾಡ, ಹಾವೇರಿ, ಗದಗ ಜಿಲ್ಲೆಗಳ ಸಚಿವರು, ಶಾಸಕರು, ಪದಾಧಿಕಾರಿಗಳ ಜೊತೆ ಸಭೆ ಮಾಡಲಿದ್ದಾರೆ. ಸಭೆಯ ಉದ್ದೇಶ ಒಡೆದು ಹೋಗಿರುವ ಬಿಜೆಪಿ ಮನಸ್ಸುಗಳನ್ನ ಒಗ್ಗೂಡಿಸೋ ಪ್ಲ್ಯಾನ್ ಆಗಿದೆ.'ಕಲ್ಯಾಣ' ಬಿಕ್ಕಟ್ಟಿಗೆ ಶಾ ಮದ್ದುಬೆಳಗಾವಿ 8 ಕ್ಷೇತ್ರಗಳಲ್ಲಿ 6 ಬಿಜೆಪಿ, 2 ಕಾಂಗ್ರೆಸ್​ ಗೆದ್ದಿದೆ. ಆದರೆ ಬೆಳಗಾವಿ ಬಿಜೆಪಿ ನಾಯಕರಲ್ಲಿ ಒಗ್ಗಟ್ಟಿಲ್ಲ. ಜಾರಕಿಹೊಳಿ Vs ಸವದಿ ಟೀಂ ಕಚ್ಚಾಟಕ್ಕೆ ಅಮಿತ್​ ಶಾ ಬ್ರೇಕ್​ ಹಾಕುವ ಲೆಕ್ಕಾಚಾರ ಬಿಜೆಪಿಯದ್ದು. ಇನ್ನು ಧಾರವಾಡದಲ್ಲಿ 5 ಬಿಜೆಪಿ 2 ಕಾಂಗ್ರೆಸ್​​​​ ಕ್ಷೇತ್ರಗಳನ್ನ ಗೆದ್ದಿದೆ. ಆದರೆ ಜೋಶಿ ಕೇಂದ್ರ ಸಚಿವರಾಗಿದ್ದರೂ ಶೆಟ್ಟರ್​-ಬೆಲ್ಲದ್​ ಮಧ್ಯೆ ಕೋಲ್ಡ್​ವಾರ್​​ ಇದೆ.ಇದನ್ನೂ ಓದಿ: PM Modi: ಮೋದಿ ಮನುಷ್ಯ ಅಲ್ರಿ ದೇವರು; ಅದಕ್ಕೆ ಹಾರ ಹಾಕಲು ಹೋಗಿದ್ದೆ; ಕೇಳಿದ್ರಾ 12ರ ಬಾಲಕನ ಮಾತು?ಇನ್ನು ಹಾವೇರಿಯಲ್ಲಿ 6 ಕ್ಷೇತ್ರಗಳಲ್ಲಿ 4 ಕಾಂಗ್ರೆಸ್​-2 ಬಿಜೆಪಿಯದ್ದು. ಸಿಎಂ ಬೊಮ್ಮಾಯಿ ತವರಲ್ಲಿ ಬಿಜೆಪಿ ಹಿನ್ನಡೆಯಲ್ಲಿದೆ. ಹೀಗಾಗಿ ಕನಿಷ್ಠ 4 ಕ್ಷೇತ್ರಗಳಲ್ಲಿ ಗೆಲ್ಲುವ ಬಗ್ಗೆ ರಣತಂತ್ರ ರೂಪಿಸಲಾಗುತ್ತಿದೆ. ಗದಗದ 4 ಕ್ಷೇತ್ರಗಳಲ್ಲಿ 3ರಲ್ಲಿ ಬಿಜೆಪಿ 1 ಕ್ಷೇತ್ರದಲ್ಲಿ ಕಾಂಗ್ರೆಸ್​​ ಗೆದ್ದಿದ್ದು, ಈ ಸಲ H.K.ಪಾಟೀಲ್​ ಸೋಲಿಸಿ 4 ಕ್ಷೇತ್ರಕ್ಕೆ 4 ಗೆಲ್ಲುವ ಲೆಕ್ಕ ಹಾಕಿ ಅಮಿತ್​ ಶಾ ಸಭೆ ಕರೆದಿದ್ದಾ


ರೆ ಅಂತ ಗೊತ್ತಾಗಿದೆ.ಅಮಿತ್ ಶಾ, ಕೇಂದ್ರ ಸಚಿವಅಮಿತ್ ಶಾ ‘ಕಲ್ಯಾಣ’ ಕಹಳೆ 06; ಕಿತ್ತೂರಿನಲ್ಲಿ ಜನಸಂಕಲ್ಪ ಸಮಾವೇಶಇನ್ನು ಕಾರ್ಯಕರ್ತರನ್ನ ಹುರಿದುಂಬಿಸುವ ಜೊತೆಗೆ ಜನರನ್ನ ಸೆಳೆಯಲು ಇಂದು ಸಂಜೆ ಬೆಳಗಾವಿಯ ಕಿತ್ತೂರು ಕ್ಷೇತ್ರದ ವೀರ ಸೋಮೇಶ್ವರ ರಂಭಾಪುರಿ ಕಲ್ಯಾಣ ಮಂಟಪ ಮೈದಾನದಲ್ಲಿ ಜನಸಂಕಲ್ಪ ಸಮಾವೇಶದಲ್ಲಿ ಅಮಿತ್​ ಷಾ ಭಾಗಿಯಾಗಲಿದ್ದಾರೆ.ಇದನ್ನೂ ಓದಿ: KMF-Amul Cooperation: ಅಮುಲ್​​ ಜೊತೆ ವಿಲೀನವಾಗುತ್ತಾ ನಂದಿನಿ? ಅಮಿತ್ ಶಾ ಪ್ರಸ್ತಾಪಕ್ಕೆ ಕನ್ನಡಿಗರು ಕಿಡಿಕಿಡಿಅಮಿತ್ ಶಾ ‘ಕಲ್ಯಾಣ’ ಕಹಳೆ 07; ಸಂಘ ಪರಿವಾರ+ಅಗ್ರನಾಯಕರ ಸಭೆಕಿತ್ತೂರು ಸಮಾವೇಶದ ಬಳಿಕ ಅಮಿತ್​ ಶಾ ಬೆಳಗಾವಿಯಲ್ಲಿ ಹಿರಿಯ ನಾಯಕರ ಸಭೆ ಕರೆದಿದ್ದಾರೆ. ಸಂಘ ಪರಿವಾರದ ಪ್ರಮುಖರ ಜೊತೆ ಸಭೆ ನಡೆಸಿ ಬಳಿಕ ಸಿಎಂ ಬೊಮ್ಮಾಯಿ, ರಾಜ್ಯಾಧ್ಯಕ್ಷ ನಳಿನ್‍ಕುಮಾರ್ ಕಟೀಲ್, ಮಾಜಿಸಿಎಂ ಯಡಿಯೂರಪ್ಪ, ಜೋಶಿ ಸೇರಿ ಅನೇಕರ ಜೊತೆ ಪ್ರತ್ಯೇಕ ಸಭೆನೂ ಮಾಡುವುದು ಖಚಿತವಾಗಿದೆ.

Post a Comment

Previous Post Next Post