Udupi: ಸಾವರ್ಕರ್ ಪುತ್ಥಳಿ ಸ್ಥಾಪನೆ ವಿವಾದ; ಬಿಜೆಪಿ ನಾಯಕರ ನಡುವೆ ಕೋಲ್ಡ್ ವಾರ್?


 ವೀರ ಸಾವರ್ಕರ್ ಪುತ್ಥಳಿ ವಿವಾದ

 ಬ್ರಹ್ಮಗಿರಿ ಸರ್ಕಲ್ಗ ಆಸ್ಕರ್ ಹೆಸರಿಡಬೇಕೆ?, ಪುತ್ಥಳಿ ನಿರ್ಮಿಸಬೇಕೆ ಎನ್ನುವ ನಿರ್ಣಯ ಆಗಿದೆ. ‌ಇವತ್ತಲ್ಲ ನಾಳೆ ಬ್ರಹ್ಮಗಿರಿ ಸರ್ಕಲ್ ನಲ್ಲೇ ಸಾವರ್ಕರ್ ಅವರ ಪ್ರತಿಮೆಯನ್ನು ನಿರ್ಮಾಣ ಮಾಡಿಯೇ ಮಾಡುತ್ತೇವೆ ಎಂದಿದ್ದಾರೆ

 ಉಡುಪಿಯಲ್ಲಿ (udupi) ತಣ್ಣಗಾಗಿದ್ದ ಸಾವರ್ಕರ್ ವಿವಾದ (Veer Savarkar Row) ಈಗ ಇಬ್ಬರು ಬಿಜೆಪಿ ನಾಯಕರ (BJP Leaders) ನಡುವೆ ಕೋಲ್ಡ್ ವಾರ್ಗೆ ಕಾರಣವಾಗಿದ್ಯಾ ಅನ್ನೋ ಅನುಮಾನ ಶುರುವಾಗಿದೆ.‌ ಸಾವರ್ಕರ್ ಪುತ್ಥಳಿ ಸ್ಥಾಪನೆ ವಿಚಾರದಲ್ಲಿ ಮನಸ್ತಾಪ ಬೂದಿ ಮುಚ್ಚಿದ ಕೆಂಡದಂತಾಗಿದೆ. ಹೌದು ಇವರಿಬ್ಬರು ಉಡುಪಿಯ ಬಿಜೆಪಿಯ ನಾಯಕರು.‌ ಹಿಂದೂ ಮುಖಂಡರು ಕೂಡ.‌ ಸಾವರ್ಕರ್ ಮೇಲೆ ಇಬ್ಬರಿಗೂ ಎಲ್ಲಿಲ್ಲದ ಪ್ರೀತಿ ಗೌರವ. ಆದ್ರೆ ಪುತ್ಥಳಿ (Savarkar idol) ವಿಚಾರದಲ್ಲಿ ಸಣ್ಣ ಮಟ್ಟಿನ ಮನಸ್ತಾಪ ಉಂಟಾಗಿದ್ಯಾ ಅನ್ನೋ‌ ಅನುಮಾನ‌ ಶುರುವಾಗಿದೆ‌. ಹೌದು, ಬಿಜೆಪಿ ಮುಖಂಡ ಯಶ್ಪಾಲ್ ಸುವರ್ಣ (BJP Leader Yashpal Suvarna) ಬ್ರಹ್ಮಗಿರಿ ಸರ್ಕಲ್‌ನಲ್ಲಿ ಹಾಕಲಾಗಿದ್ದ ಸಾವರ್ಕರ್ ಫ್ಲೆಕ್ಸ್ (Savarkar Flex) ತೆರವು ವೇಳೆ ಇಲ್ಲೇ ಪುತ್ಥಳಿ ಸ್ಥಾಪಿಸಿಯೇ ಸಿದ್ಧ ಎಂದು ಆಗಸ್ಟ್ 19 ರಂದು ಮುಸ್ಲಿಂ ನಾಯಕರಿಗೆ ಸವಾಲು ಹಾಕಿದ್ರು

ಇದರ ಬೆನ್ನಲ್ಲೇ ವಿವಾದಕ್ಕೆ ಕಡಿವಾಣ ಹಾಕುವ ನಿಟ್ಟಿನಲ್ಲಿ ಶಾಸಕ ರಘುಪತಿ ಭಟ್ (BJP MLA Raghupati Bhat) ಬ್ರಹ್ಮಗಿರಿ ಸರ್ಕಲ್ನಲ್ಲಿ ಸಾವರ್ಕರ್ ಪುತ್ಥಳಿ ಬೇಡ ಇಲ್ಲಿ ದಿವಂಗತರಾಗಿರುವ ಕಾಂಗ್ರೆಸ್ ಕೇಂದ್ರ ಮಾಜಿ ಸಚಿವ ಆಸ್ಕರ್ ಫರ್ನಾಂಡೀಸ್(Oscar Fernandes) ಅವರ ಹೆಸರು ಇಡೋಣ. ಈ ಭಾಗದಲ್ಲಿ ಅವರು ಓಡಾಡಿಕೊಂಡಿದ್ದವರು. ಹೀಗಾಗಿ ಅವರ ಹೆಸರು ಇಡೋಣ‌ ಅಂದಿದ್ರು. ಹೀಗಾಗಿ ನಗರದಲ್ಲಿರುವ ಹಳೆ‌ ತಾಲೂಕು ಕಚೇರಿ ಸಮೀಪವಿರುವ ಸರ್ಕಲ್ ನಲ್ಲಿ ಸಾವರ್ಕರ್ ಹೆಸರಿಡೋಣ ಅಂತ ಆಗಸ್ಟ್ 30ರಂದು ನಗರಸಭೆಯಿಂದ ನಿರ್ಣಯ ಹೊರಡಿಸಿಯೇ ಬಿಟ್ರು

ಪುತ್ಥಳಿ ಸ್ಥಾಪನೆ ಬಗ್ಗೆ ಹೇಳಿ

ಈ ಮೊದಲೇ ನಗರಸಭೆಗೆ ಪುತ್ಥಳಿ ಸ್ಥಾಪನೆಗೆ ಮನವಿ ನೀಡಿದ್ದ ಯಶ್ಪಾಲ್ ಅವರಿಗೆ ಶಾಸಕರು ಬೇಡ ಅಂತ ಹೇಳಿ ಸುಮ್ಮನಾಗಿಸಿದ್ರು. ಆದ್ರೆ ಒಂದು ತಿಂಗಳ ಬಳಿಕ ಯಶ್ಪಾಲ್ ಮತ್ತೆ ಅದೇ ಸರ್ಕಲ್ ನಲ್ಲಿ ಪುತ್ಥಳಿ ಸ್ಥಾಪಿಸುತ್ತೇನೆ.‌ ನಮ್ಮ ಆದರ್ಶ ವ್ಯಕ್ತಿ ವೀರ ಸಾವರ್ಕರ್ ಕುರಿತಾಗಿ ನಮಗೆ ಸಾಕಷ್ಟು ಗೌರವವಿದೆ. ಸರ್ಕಾರಕ್ಕೆ ನಾವು ಈಗಾಗಲೇ ಮನವಿ ಮಾಡಿದ್ದೇ


ವೆ. ಕೆ...ಡಿದ್ದೇವೆ ವೀರ ಸಾವರ್ಕರ್


ಬ್ರಹ್ಮಗಿರಿ ಸರ್ಕಲ್​ಗ ಆಸ್ಕರ್ ಹೆಸರಿಡಬೇಕೆ?, ಪುತ್ಥಳಿ ನಿರ್ಮಿಸಬೇಕೆ ಎನ್ನುವ ನಿರ್ಣಯ ಆಗಿದೆ. ‌ಇವತ್ತಲ್ಲ ನಾಳೆ ಬ್ರಹ್ಮಗಿರಿ ಸರ್ಕಲ್ ನಲ್ಲೇ ಸಾವರ್ಕರ್ ಅವರ ಪ್ರತಿಮೆಯನ್ನು ನಿರ್ಮಾಣ ಮಾಡಿಯೇ ಮಾಡುತ್ತೇವೆ ಎಂದಿದ್ದಾರೆ.

ಸಾವರ್ಕರ್ ಓರ್ವ ದೇಶಭಕ್ತ ಅವರಿಗೆ ಉಡುಪಿಯ ಜನತೆ ಗೌರವನು ಸಲ್ಲಿಸುತ್ತಿದ್ದಾರೆ.‌ ಇಂದು ಹಿಂದುತ್ವಕ್ಕೆ ಸಂಘಟನೆಗೆ ಶಕ್ತಿ ನೀಡಿದಂತಹ ಭಾಗ ಅದು ಉಡುಪಿ ಜಿಲ್ಲೆ.‌‌ ಹಾಗಾಗಿ ಸಾವರ್ಕರ್ ಅವರ ಪ್ರತಿಮೆಯನ್ನು ನಿರ್ಮಿಸುವುದು ನಮಗೆಲ್ಲರಿಗೂ ಹೆಮ್ಮೆಯ ವಿಷಯ ಎಂದು ಹೇಳಿದ್ದಾರೆ.

ನಿರ್ಣಯಕ್ಕೆ ತಿದ್ದುಪಡಿ ಮಾಡ್ತಾರಾ?

ಈ ಬಗ್ಗೆ ಸರಕಾರ ಶಾಸಕರು ಸ್ಥಳೀಯ ನಗರಸಭೆಯ ಗಮನಕ್ಕೆ ತಂದು ಪ್ರತಿಮೆಯನ್ನು ನಿರ್ಮಿಸುತ್ತೇವೆ.‌ ಒಂದು ಬಾರಿ ಮಾಡಿದ ನಿರ್ಣಯವನ್ನು ವಾಪಾಸ್ ತೆಗೆದುಕೊಳ್ಳುವುದು ತುಂಬಾ ಕಷ್ಟದ ಕೆಲಸ. ‌ಕಾನೂನುಬದ್ಧವಾಗಿ ಮಾಡಿದ ನಿರ್ಣಯವನ್ನು ವಾಪಾಸ್ ಪಡೆದು ಪುನಃ ಅರ್ಜಿ ಸಲ್ಲಿಸಬೇಕಾಗುತ್ತದೆ.

ನಗರ ಸಭೆಗೆ ತನ್ನದೇ ಆದ ಕಾನೂನು ಚೌಕಟ್ಟು ಇದೆ. ಕಾನೂನಿನ ಚೌಕಟ್ಟಿನೊಳಗೆ ನಾವು ಕೆಲಸ ಮಾಡಲು ಸಿದ್ಧ.‌ ಆಸ್ಕರ್ ಅವರು ತೀರಿಕೊಂಡ ನಂತರ ಶಾಸಕರು ಬ್ರಹ್ಮಗಿರಿ ಸರ್ಕಲ್​​ಗೆ ಆಸ್ಕರ್ ಹೆಸರಿಡಲು ತೀರ್ಮಾನ ಮಾಡಿದ್ದರು. ಆ ಸಂದರ್ಭದಲ್ಲಿ ಇಂತಹ ಪರಿಸ್ಥಿತಿಗಳು ಇರಲಿಲ್ಲ. ಹಾಗಾಗಿ ಮಾಡಿದ ನಿರ್ಣಯವನ್ನು ಅದೇ ಚೌಕಟ್ಟಿನಲ್ಲಿ ತಿದ್ದುವ ಅವಶ್ಯಕತೆ ಇದೆ.‌ ಒಮ್ಮೆ ಮಾಡಿದ ನಿರ್ಣಯವನ್ನು ತಿದ್ದುವಂತ ಅವಕಾಶ ಸರಕಾರದಲ್ಲಿದೆ ನಗರಸಭೆಯಲ್ಲಿದೆ. ಹಾಗಾಗಿ ನಗರಸಭೆಯ ಗಮನಕ್ಕೆ ತಂದು ಬಸ್ ನಿಲ್ದಾಣ ಸ್ಥಳ ಅಥವಾ ಯಾವುದೇ ಸರಕಾರಿ ಕಛೇರಿಗಳಿಗೆ ಆಸ್ಕರ್ ಹೆಸರಿಡು


ವ ಅವಕಾಶವಿದೆ.ವೀರ ಸಾವರ್ಕರ್

ಬ್ರಹ್ಮಗಿರಿ ಸರ್ಕಲ್​​ನಲ್ಲಿ ಪುತ್ಥಳಿ ಸ್ಥಾಪನೆಗೆ ಪಟ್ಟು

ರಾಜಕೀಯವಾಗಿ ಎಂಪಿಯಾಗಿ ಈ ಭಾಗದಲ್ಲಿ ಕೆಲಸ ಮಾಡಿದ ಆಸ್ಕರ್ ಅವರಿಗೂ ಸ್ವತಂತ್ರ ವೀರ ಸಾವರ್ಕರ್ ಅವರಿಗೂ ವ್ಯತ್ಯಾಸವಿದೆ. ನಾವು ಬ್ರಹ್ಮಗಿರಿ ಸರ್ಕಲ್ ನಲ್ಲಿ ವೀರ ಸಾವರ್ಕರ್ ಅವರ ಪ್ರತಿಮೆ ನಿರ್ಮಾಣ ಮಾಡುವ ನಿರ್ಣಯ ಕೈಗೊಂಡಿದ್ದೇವೆ ಎಂದು ಯಶ್ಪಾಲ್ ಸುವರ್ಣ ಪ್ರತಿಕ್ರಿಯೆ ನೀಡಿ


ದ್ರು.ಹೀಗೆ ತಮ್ಮ ನಿರ್ಧಾರ ಪ್ರಕಟಿಸಿದ ಯಶ್ಪಾಲ್ ಮಾತಿಗೆ ಶಾಸಕ ರಘುಪತಿ ಭಟ್ ಯಶ್ಪಾಲ್ ಜೊತೆ ಚರ್ಚಿಸಿ ಮನವೊಲಿಸುತ್ತೇನೆ ಎಂದಿದ್ದಾರೆ.

Post a Comment

Previous Post Next Post