Tumakur: ಕುಡಿಯಲು ಹಣ ಕೊಡಲಿಲ್ಲವೆಂದು ಹಾರೆಯಿಂದ ಹೊಡೆದು ಪತ್ನಿ, ಮಗುವನ್ನು ಕೊಂದ ನೀಚ


 ಕಾವ್ಯಾ ಮತ್ತು ಮೋಹನ್ ಕುಮಾರ್

ಕುಡಿತದ ದಾಸನಾಗಿದ್ದ ಮೋಹನ್ ಕುಮಾರ್​ನಿಂದ ಸಂಸಾರ ನಿರ್ವಹಣೆ ಸಾಧ್ಯವಾಗುತ್ತಿರಲಿಲ್ಲ. ಆದ್ದರಿಂದ ಕಾವ್ಯಾ ಕೂಡ ಕೆಲಸಕ್ಕೆ ಹೋಗುತ್ತಿದ್ದರು.

 Tumakuru Crime News: ಮದ್ಯಪಾನ ಮಾಡಲು ಹಣ (Money) ಕೊಟ್ಟಿಲ್ಲ ಎಂಬ ಕಾರಣಕ್ಕೆ ಪಾತಕಿಯೋರ್ವ ಹಾರೆಯಿಂದ ಹೆಂಡತಿ ಮತ್ತು ಮಗುವನ್ನು ಹತ್ಯೆ (Double Murder) ಮಾಡಿದ್ದಾನೆ. ತುಮಕೂರು ಜಿಲ್ಲೆ ಗುಬ್ಬಿ ತಾಲೂಕಿನ ಮಾವಿನಹಳ್ಳಿಯಲ್ಲಿ (Mavinahalli, Tumakuru) ಈ ಕೊಲೆ ನಡೆದಿದೆ. ಗಂಡ ಹೆಂಡತಿ ಜಗಳದಲ್ಲಿ ನಾಲ್ಕು ವರ್ಷದ ಹಾಲುಗಲ್ಲದ ಕಂದಮ್ಮ ಸಹ ಕೊಲೆಯಾಗಿದೆ. ಎಳೆ ಮಗು ಅನ್ನೋದನ್ನು ನೋಡದ ಪಾಪಿ ಹೆಂಡತಿಯ ಜೊತೆಗೆ 4 ವರ್ಷದ ಮಗುವನ್ನೂ ಹತ್ಯೆ ಮಾಡಿದ್ದಾನೆ. ಮೋಹನ್ ಕುಮಾರ್ ಅಲಿಯಾಸ್‌ ಸ್ವಾಮಿ ತನ್ನ ಹೆಂಡತಿ ಕಾವ್ಯಾ ಹಾಗೂ ಮಗು ಜೀವನ್ ತಲೆಗೆ ಹಾರೆ ಕೋಲಿನಿಂದ ಹೊಡೆದು ಬರ್ಬರವಾಗಿ ಹತ್ಯೆ ಮಾಡಿದ್ದಾನೆ. ಬುಧವಾರ ಬೆಳಗ್ಗೆ 7 ಗಂಟೆಗೆ ಕೊಲೆ ನಡೆದಿದೆ.

ಮೋಹನ್ ಕುಮಾರ್ ಆರು ವರ್ಷಗಳ ಹಿಂದೆ ಚಿಕ್ಕನಾಯಕನಹಳ್ಳಿ ಮೂಲದ ಕಾವ್ಯಾ ಎಂಬವರನ್ನು ಮದುವೆಯಾಗಿದ್ದ. ಮದುವೆಯಾದಾಗಿನಿಂದಲೂ ಪ್ರತಿನಿತ್ಯ ಕುಡಿದು ಜಗಳವಾಡುತ್ತಿದ್ದನು. ಮೋಹನ್ ಕುಮಾರ್​​ನ ಈ ರುದ್ರಾವತಾರಕ್ಕೆ ಬೇಸತ್ತು ಕಾವ್ಯಾ ಮನೆ ಬಿಟ್ಟು ತವರು ಮನೆ ಸೇರಿದ್ದರು.

ಕುಡಿತದ ದಾಸನಾಗಿದ್ದ ಮೋಹನ್ ಕುಮಾರ್​

ನಾಲ್ಕು ವರ್ಷದ ಬಳಿಕ ರಾಜಿ ಪಂಚಾಯತಿ ಮಾಡಿ ಕಳೆದು ತಿಂಗಳು ಕಾವ್ಯಾ ಗಂಡನ ಮನೆಗೆ ವಾಪಸ್‌ ಬಂದಿದ್ದರು. ಕುಡಿತದ ದಾಸನಾಗಿದ್ದ ಮೋಹನ್ ಕುಮಾರ್​ನಿಂದ ಸಂಸಾರ ನಿರ್ವಹಣೆ ಸಾಧ್ಯವಾಗುತ್ತಿರಲಿಲ್ಲ. ಆದ್ದರಿಂದ ಕಾವ್ಯಾ ಕೂಡ ಕೆಲಸಕ್ಕೆ ಹೋಗುತ್ತಿ


ದ್ದರು ಡಬಲ್ ಮರ್ಡರ್

ಬುಧವಾರ ಬೆಳಗ್ಗೆ ಮದ್ಯಪಾನ ಮಾಡಲು ಹಣ ಕೇಳಿದ್ದಾನೆ. ಕಾವ್ಯಾ ಹಣ ನೀಡಲು ನಿರಾಕರಿಸಿದಾಗ ಜಗಳ ನಡೆದು ವಿಕೋಪಕ್ಕೆ ತಿರುಗಿ ಈ ದುರಂತ ಸಂಭವಿಸಿದೆ.

 ಪರಾರಿಯಾಗಲು ಯತ್ನಿಸಿದ್ದ

ಸ್ಥಳೀಯರು ನೋಡ ನೋಡುತ್ತಲೇ ಪತ್ನಿ ಮತ್ತು ಮಗುವನ್ನು ಹತ್ಯೆ ಮಾಡಿದ ಮೋಹನ್ ಕುಮಾರ್ ಎಸ್ಕೇಪ್ ಆಗಲು ಪ್ರಯತ್ನಿಸಿದ್ದನು. ಆದರೆ ಗ್ರಾಮಸ್ಥರು ಈತನನ್ನು ಹಿಡಿದು ಕೈ ಕಾಲು ಕಟ್ಟಿಹಾಕಿ ಪೊಲೀಸರಿಗೆ ಒಪ್ಪಿಸಿ


ದ್ದಾರೆ.ಡಬಲ್ ಮರ್ಡರ್

ಈ ಹಿಂದೆಯೂ ಜೈಲು ಸೇರಿದ್ದ

ಮೋಹನ್ ಕುಮಾರನ ರಂಪಾಟ ಒಂದೆರಡಲ್ಲ. ಕರಿಯಮ್ಮ ದೇವಸ್ಥಾನದ ಅರ್ಚಕನಾದ ಈತ ಹುಂಡಿ ಹಣ ಕದ್ದು ಗ್ರಾಮಸ್ಥರಿಂದ ಗೂಸಾ ತಿಂದಿದ್ದ. ದ್ವೇಷಕ್ಕೆ ಊರಿನವರ ಹುಲ್ಲಿನ ಬಣವೆಗೆ ಬೆಂಕಿ ಹಚ್ಚಿ ಜೈಲೂ ಸೇರಿದ್ದ. ಈಗ ಮತ್ತೊಮ್ಮೆ ಎಂದೂ ಕ್ಷಮಿಸಲಾಗದ ಪಾಪ ಕೃತ್ಯ ನಡೆಸಿ ಕಂಬಿ ಹಿಂದೆ ಹೋಗಿದ್ದಾನೆ.

ಇದನ್ನೂಓದಿ: Honour Killing: ಇಬ್ಬರನ್ನ ಒಂದು ಮಾಡ್ತೀವಿ ಬನ್ನಿ ಅಂತ ಕರೆಸಿ ಕೊಲೆ; ಬಾಗಲಕೋಟೆಯಲ್ಲಿ ಮರ್ಯಾದಾ ಹತ್ಯೆ

 ಪತ್ನಿಯನ್ನ ಕೊಂದು ಆತ್ಮಹತ್ಯೆಗೆ ಯತ್ನಿಸಿದ ಗಂಡ

ಪತ್ನಿ (Wife) ಮೇಲಿನ ಅನುಮಾನ ವಿಕೋಪಕ್ಕೆ ತಿರುಗಿ ಸಾವಿನಲ್ಲಿ ಅಂತ್ಯಗೊಂಡಿದೆ. ಆತ್ಮಹತ್ಯೆಗೆ ಯತ್ನಿಸಿರುವ ಪತಿಯ (Husband Health) ಸ್ಥಿತಿಯು ಗಂಭೀರವಾಗಿದ್ದು, ಮಕ್ಕಳು ಅನಾಥವಾಗಿವೆ. ಬೆಂಗಳೂರು ಗ್ರಾಮಾಂತರ ಜಿಲ್ಲೆ ಹೊಸಕೋಟೆಯಲ್ಲಿ (Hosakote, Bengaluru) ಈ ಘಟನೆ ನಡೆದಿದೆ.

ಪತ್ನಿಗೆ ಚಾಕುವಿನಿಂದ ಇರಿದು ಕಲ್ಲಿನಿಂದ ಹಲ್ಲೆ ನಡೆಸಿ ತಾನು ಆತ್ಮಹತ್ಯೆಗೆ (Suicide Attempt) ಯತ್ನಿಸಿದ್ದನು. ಚಿಕಿತ್ಸೆ ಫಲಕಾರಿಯಾಗದೇ ಪತ್ನಿ ಆಸ್ಪತ್ರೆಯಲ್ಲಿ ಸಾ


ವನ್ನಪ್ಪಿದ್ದಾರೆ.ಡಬಲ್ ಮರ್ಡರ್

ಇನ್ನು ಆತ್ಮಹತ್ಯೆಗೆ ಯತ್ನಿಸಿರುವ ಪತಿಯ ಸ್ಥಿತಿ ಸಹ ಗಂಭೀರವಾಗಿದೆ. ಹೊಸಕೋಟೆ ಮೂಲದ ರಮೇಶ್ ಪಿಲ್ಲಗುಂಪೆ ಕೈಗಾರಿಕಾ ಪ್ರದೇಶದಲ್ಲಿ ಪತ್ನಿ ಅರ್ಪಿತಾ ಮೇಲೆ ಚಾಕು ಮತ್ತು ಕಲ್ಲಿನಿಂದ ಮಾರಣಾಂತಿಕ ಹಲ್ಲೆ ನಡೆಸಿ ತಾನು ಕೂಡ ಚಾಕುವಿನಿಂದ ಇರಿದು ಆತ್ಮಹತ್ಯೆಗೆ ಯತ್ನಿಸಿದ್ದನು.

ಇದನ್ನೂ ಓದಿ: Traffic Rules: ಸೀಟ್ ಬೆಲ್ಟ್ ಹಾಕದಿದ್ರೆ ಬೀಳುತ್ತೆ ಭಾರೀ ದಂಡ! ಟ್ರಾಫಿಕ್ ಪೊಲೀಸರ ಆದೇಶ​

ಪ್ರೀತಿಸಿ ಮದುವೆಯಾಗಿದ್ದ ರಮೇಶ್ ಮತ್ತು ಅರ್ಪಿತಾ

ಏಳು ವರ್ಷಗಳ ಹಿಂದೆ ಪರಸ್ಪರ ಪ್ರೀತಿಸಿ ಮದುವೆಯಾಗಿದ್ದ ರಮೇಶ್ ಮತ್ತು ಅರ್ಪಿತಾ ಸಾಂಸಾರಿಕ ಜೀವನ ಚೆನ್ನಾಗಿತ್ತು. ಒಂದು ಹೆಣ್ಣು ಮತ್ತು ಗಂಡು ಸಹ ದಂಪತಿಗೆ ಜನಿಸಿದ್ದು, ನೆಮ್ಮದಿಯ ಜೀವನ ನ ಡೆಸುತ್ತಿದ್ದರು .

Post a Comment

Previous Post Next Post