Shocking Law: ತಾಯಿಯಿಂದ ಮಕ್ಕಳನ್ನು ದೂರವಾಗಿರಿಸುವುದೂ ಕಾನೂನುಬದ್ಧವಂತೆ!


  ಸಾಂದರ್ಭಿಕ ಚಿತ್ರ

ಕ್ಯಾಥರಿನ್ ಇದುವರೆಗೆ ಮಕ್ಕಳೊಂದಿಗೆ ಫೋನ್, ಆನ್‌ಲೈನ್ ಇಲ್ಲವೇ ವೈಯಕ್ತಿಕವಾಗಿ ಇದುವರೆಗೆ ಮಾತನಾಡಿಲ್ಲ ಎಂದು ತಿಳಿಸಿದ್ದಾರೆ.

 ಟೋಕಿಯೋ: ಮೂರು ವರ್ಷಗಳ ಹಿಂದೆ ತಮ್ಮ ಪತಿ ಜಪಾನ್‌ಗೆ ಕರೆದೊಯ್ದಿದ್ದ ತನ್ನ ಇಬ್ಬರು ಮಕ್ಕಳೊಂದಿಗೆ (Children) ತಾನು ಇದುವರೆಗೆ ಮಾತನಾಡಿಲ್ಲ ಎಂಬುದು ಆಸ್ಟ್ರೇಲಿಯಾದ ಕ್ಯಾಥರೀನ್ ಹೆಂಡರ್ಸನ್ ಅವರ ಅಳಲಾಗಿದೆ. ಜಪಾನ್‌ನ (Japan) ಪಾಲನೆ ವ್ಯವಸ್ಥೆಯಲ್ಲಿ ಈ ಪ್ರಕ್ರಿಯೆ ಕಾನೂನುಬದ್ಧವಾಗಿದ್ದು, ಪರಸ್ಪರ ದಂಪತಿಗಳ ಹಂಚಿಕೆಯ ಒಪ್ಪಂದದ ಮೇರೆಗೆ ಕಾಳಜಿ ಸ್ಥಿರತೆ ಎಂಬುದಾಗಿ ಉಲ್ಲೇಖಿಸಲಾಗಿದೆ ಎಂದು ಕ್ಯಾಥರೀನ್ ಹೇಳುತ್ತಾರೆ. ಟೋಕಿಯೊದಲ್ಲಿ (Tokyo) ತಮ್ಮ ಕುಟುಂಬದೊಂದಿಗೆ ಕ್ಯಾಥರೀನ್‌ ವಾಸವಾಗಿದ್ದರು. ಆಕೆಯ ದುಃಖಕರ ಜೀವನ ಪ್ರಾರಂಭವಾಗಿದ್ದೇ ಆಕೆಯ ವಕೀಲರು ತಿಳಿಸಿದ ವಿಷಯದಿಂದ ಎಂದು ದುಃಖತಪ್ತ ತಾಯಿ ಕ್ಯಾಥರಿನ್ ತಿಳಿಸುತ್ತಾರೆ.

ಕ್ಯಾಥರಿನ್ ಪತಿ ಮಕ್ಕಳೊಂದಿಗೆ ಬೇರೆಡೆಗೆ ತೆರಳಿರುವುದಾಗಿ ಆಕೆಯ ಪತಿಯ ಪರ ವಕೀಲರು ಫ್ಯಾಕ್ಸ್ ಕಳುಹಿಸಿರುವುದಾಗಿ ಕ್ಯಾಥರಿನ್ ವಕೀಲೆ ತಿಳಿಸುತ್ತಾರೆ. ಕ್ಯಾಥರಿನ್ ತಮ್ಮ ಅಳಲನ್ನು ತೋಡಿಕೊಂಡಿದ್ದು, ಆಕೆಗೆ ಅರಿವೇ ಇಲ್ಲದಂತೆ ಮಕ್ಕಳನ್ನು ಪತಿ ಕರೆದೊಯ್ದಿದ್ದರು ಹಾಗೂ ಆಕೆಯ ಸಮ್ಮತಿಯನ್ನು ಈ ಸಮಯದಲ್ಲಿ ಕೇಳಲಿಲ್ಲ ಎಂದು ಕ್ಯಾಥರಿನ್ ಹೇಳುತ್ತಾರೆ.

ಮಕ್ಕಳನ್ನು ಮರಳಿ ಪಡೆಯುವ ಹೋರಾಟ

ಕೆಲಸಕ್ಕೆ ತೆರಳಿದ್ದ ಸಮಯದಲ್ಲಿ ಕ್ಯಾಥರಿನ್ ಪತಿ ಮಕ್ಕಳನ್ನು ಕರೆದೊಯ್ದಿದ್ದು, ಆಕೆ ಮರಳಿ ಮನೆಗೆ ಬಂದಾಗ ಆಕೆಯ ಕುಟುಂಬವೇ ಕಣ್ಮರೆಯಾಗಿತ್ತು ಎಂದು ಕಣ್ಣೀರಾಗುತ್ತಾರೆ. ಅಂದಿನಿಂದ ತನ್ನ ಮಕ್ಕಳನ್ನು ಮರಳಿ ಪಡೆಯುವ ಹೋರಾಟದಲ್ಲಿ ಕ್ಯಾಥರಿನ್ ತಮ್ಮನ್ನು ಸಮರ್ಪಿಸಿಕೊಂಡಿದ್ದಾರೆ.

ಕ್ಯಾಥರಿನ್ ಮಕ್ಕಳನ್ನು ಅವರಿಂದ ದೂರವಾಗಿಸಿದ ಕ್ಷಣ

ಕ್ಯಾಥರಿನ್ ತರಬೇತಿ ಪಡೆದ ನುರಿತ ಶಿಕ್ಷಕಿಯಾಗಿದ್ದು ಪ್ರಸ್ತುತ ಟೋಕಿಯೋ ಸಮೀಪದ ನಗರವೊಂದರಲ್ಲಿ ವಾಸವಾಗಿದ್ದಾರೆ. 2019 ರಿಂದ ತಮ್ಮ ಮಕ್ಕಳನ್ನು ನೋಡಿಲ್ಲ ಎಂದು ಹೇಳುವ ಕ್ಯಾಥರಿನ್ ಮಕ್ಕಳಿಗೆ ಸಮೀಪವಾಗಿರುವ ನಗರದಲ್ಲೇ ವಾಸ್ತವ್ಯ ಹೂಡಿದ್ದಾರೆ ಹಾಗೂ ತಾನು ಎಂದಾದರೊಂದು ದಿನ ಮಕ್ಕಳನ್ನು ನೋಡುತ್ತೇನೆ ಎಂಬ ಆಶಾಭಾವನೆ ಹೊಂದಿದ್ದಾರೆ.

ಬೇರೊಂದು ಮನೆಯಲ್ಲಿ ವಸತಿ

ಕ್ಯಾಥರಿನ್ ತಮ್ಮ ಪತಿಯೊಂದಿಗೆ ವಿವಾಹ ವಿಚ್ಛೇದನಕ್ಕೊಳಪಟ್ಟಾಗ ಮಕ್ಕಳಿಗೆ ಕ್ರಮವಾಗಿ 10 ಹಾಗೂ 14 ವರ್ಷಗಳಾಗಿತ್ತು. ಇವರ ವಿಚ್ಛೇದನದ ಮೊಕದ್ದಮೆ ಇನ್ನೂ ನ್ಯಾಯಾಲಯದಲ್ಲಿಯೇ ಇದ್ದು, ಆಕೆಯ ಪತಿ ಮಕ್ಕಳೊಂದಿಗೆ ಹಾಗೂ ತನಗೆ ಸಂಬಂಧಿತವಾಗಿರುವ ವಸ್ತುಗಳನ್ನು ಪ್ಯಾಕ್ ಮಾಡಿಕೊಂಡು ಬೇರೊಂದು ಮನೆಯಲ್ಲಿ ವಸತಿ ಹೂಡಲು ನಿರ್ಧರಿಸಿದರು.

ಆಸ್ಪ್ರೇಲಿಯಾದಲ್ಲಿ ಇದನ್ನು ಕಾನೂನು ವ್ಯವಸ್ಥೆಗಳ ಉಲ್ಲಂಘನೆಯಾಗಿ ಪರಿಗಣಿಸಿದರೆ ಜಪಾನ್‌ನಲ್ಲಿ ಇದು ಸಾಮಾನ್ಯವಾಗಿದೆ ಎಂಬುದು ಕ್ಯಾಥರಿನ್ ಮಾತಾಗಿದೆ. ಹೆಚ್ಚಿನ ಜಪಾನೀಯರು ಈ ಕಾನೂನಿನ ಅನುಸರಣೆ ಮಾಡುತ್ತಿದ್ದಾರೆ ಎಂದು ಆಕೆ ತಿಳಿಸಿದ್ದಾರೆ.ಸತ್ಯಾಂಶವೆಂದರೆ ಜಪಾನ್‌ನಲ್ಲಿ ವಿಚ್ಛೇದಿತರಾದ ದಂಪತಿಗಳಲ್ಲಿ 70% ದಷ್ಟು ಮಕ್ಕಳು ಪೂರ್ಣ ಪ್ರಮಾಣದಲ್ಲಿ ತಂದೆ ಇಲ್ಲವೇ ತಾಯಿಯನ್ನು ಭೇಟಿಯಾಗುವುದಿಲ್ಲ. ಕಾಳಜಿ ಸ್ಥಿರತೆಗೆ ಅನುಗುಣವಾಗಿ ಮಕ್ಕಳನ್ನು ಪೋಷಿಸುವ ಕಾಳಜಿ ನೀಡುವ ಸ್ಥಿರವಾದ ಮನೆಯಲ್ಲಿ ಇರಿಸಲು ಕಾನೂನು ಅವಕಾಶ ಮಾಡಿಕೊಡುತ್ತದೆ.

ಇದನ್ನೂ ಓದಿ: Medical In Hindi: ಮೆಡಿಕಲ್ ಪ್ರಿಸ್ಕ್ರಿಪ್ಷನ್ ಮೇಲೆ ಶ್ರೀ ಹರಿ ಎಂದು ಬರೆಯಬಹುದು! ಶಿವರಾಜ್ ಸಿಂಗ್ ಚೌಹಾಣ್ ಸಲಹೆ

ತಂದೆ ಇಲ್ಲವೇ ತಾಯಿಯೊಂದಿಗೆ ಸ್ಥಿರವಾಗಿ ವಾಸ್ತವ್ಯ ಹೂಡಿರುವ ಮಕ್ಕಳು ವ್ಯವಸ್ಥೆಗಳನ್ನು ಬದಲಾಯಿಸಲು ಹಿಂಜರಿಯುತ್ತಾರೆ ಎಂಬುದು ಕ್ಯಾಥರಿನ್ ಹೇಳಿಕೆಯಾಗಿದೆ. ಕ್ಯಾಥರಿನ್ ಮಕ್ಕಳು 10 ಹಾಗೂ 14 ವರ್ಷದವರಾಗಿದ್ದರಿಂದ ತಮ್ಮ ತಂದೆಯೊಡನೆ ತೆರಳಲು ಮಕ್ಕಳನ್ನು ಒತ್ತಾಯಪಡಿಸಿಲ್ಲ ಎಂಬುದನ್ನು ಮನಗಂಡ ನ್ಯಾಯಾಲಯ ಮಕ್ಕಳು ತಾವು ಯಾರೊಂದಿಗೆ ಇರಬೇಕೆಂಬ ಆಯ್ಕೆಗೆ ಬದ್ಧರು ಎಂದು ತೀರ್ಮಾನಿಸಿದೆ.

ಕ್ಯಾಥರಿನ್ ಅನ್ನು ಪ್ರಶ್ನಿಸಿದ ಪೊಲೀಸರು

ಕ್ಯಾಥರಿನ್ ಇದುವರೆಗೆ ಮಕ್ಕಳೊಂದಿಗೆ ಫೋನ್, ಆನ್‌ಲೈನ್ ಇಲ್ಲವೇ ವೈಯಕ್ತಿಕವಾಗಿ ಇದುವರೆಗೆ ಮಾತನಾಡಿಲ್ಲ ಎಂದು ತಿಳಿಸಿದ್ದಾರೆ. ಆದರೂ ಒಂದೊಮ್ಮೆ ರೈಲಿನಲ್ಲಿ ತಾನು ಅವರನ್ನು ನೋಡಿರುವುದಾಗಿ ಆಕೆ ಹೇಳಿಕೊಂಡಿದ್ದಾಳೆ. ಮಕ್ಕಳನ್ನು ಆಕೆ ಹಿಂಬಾಲಿಸುತ್ತಿರುವುದಾಗಿ ಆಕೆಯನ್ನು ಪೊಲೀಸರು ಪ್ರಶ್ನೆಕೂಡ ಮಾಡಿದ್ದಾರೆ.

ಇದನ್ನೂ ಓದಿ: Hubballi News: ತಿರುಪತಿ ತಿಮ್ಮಪ್ಪನ ದರ್ಶನ ಇನ್ನಷ್ಟು ಸುಲಭ!

ತನ್ನದೇ ಮಕ್ಕಳನ್ನು ಹಿಂಬಾಲಿಸುವ ಹಕ್ಕು ಕೂಡ ತಾಯಿಗಿಲ್ಲವೇ ಎಂಬುದು ಕ್ಯಾಥರಿನ್ ಪ್ರಶ್ನೆಯಾಗಿದೆ. ನಿಯಮಿತವಾಗಿ ವಿಡಿಯೋ ಸಂದೇಶ ಕಳುಹಿಸುವ ಕ್ಯಾಥರಿನ್ ಒಂದಲ್ಲಾ ಒಂದು ದಿನ ತನ್ನ ಮಕ್ಕಳು ಸಂದೇಶವನ್ನು ನೋಡಿಯಾದರೂ ತನ್ನೊಂದಿಗೆ ಮಾತನಾಡುತ್ತಾರೆ ಎಂಬ ಭರವಸೆಯನ್ನು ಹೊಂದಿದ್ದಾರೆ.

ಮಕ್ಕಳು ವಯಸ್ಸಿಗೆ ಬಂದಿದ್ದರೂ ತನ್ನನ್ನು ಭೇಟಿಯಾಗುತ್ತಿಲ್ಲ

ಕ್ಯಾಥರೀನ್ ಅವರ ವಿಚ್ಛೇದನವನ್ನು ಈ ವರ್ಷ ಅಧಿಕೃತವಾಗಿ ಅಂತಿಮಗೊಳಿಸಲಾಯಿತು, ಮತ್ತು ಅವರ ಮಗಳು ಕೆಲವೇ ವಾರಗಳ ಹಿಂದೆ 18 ವರ್ಷಕ್ಕೆ ಕಾಲಿಟ್ಟಿದ್ದಾರೆ. ತಮ್ಮ ಮಕ್ಕಳಿಗೆ ಹಾನಿಯಾಗುತ್ತಿದೆ ಎಂಬುದು ತಿಳಿದು ನಾನು ಹತಾಶೆಗೊಂಡಿರುವೆ. ನನ್ನ ಬಗ್ಗೆ ಪತಿ ಸಾಕಷ್ಟು ಹೇಳಿದ್ದರಿಂದಲೇ ಅವರು ಪಕ್ವತೆಯನ್ನು ಹೊಂದಿದರೂ ನನ್ನನ್ನು ಭೇಟಿಮಾಡಲು ಹಿಂದೇಟು ಹಾಕುತ್ತಿದ್ದಾರೆ ಎಂಬುದು ಕ್ಯಾಥರಿನ್ ನೋವಿನ ಮಾತಾಗಿದೆ.

Post a Comment

Previous Post Next Post