ನಟ ಪುನೀತ್ ರಾಜ್ಕುಮಾರ್
ಪುನೀತ್ ಪುಣ್ಯ ಸ್ಮರಣೆ ನಿಮಿತ್ತ ರಸ್ತೆ ಪಕ್ಕದಲ್ಲೇ ಪೆಂಡಾಲ್ ಹಾಕಿದ್ದು, ಪುನೀತ್ ಭಾವಚಿತ್ರ ಇರಿಸಿ ಶಾಸ್ತ್ರೋಕ್ತವಾಗಿ ಪೂಜೆ ಮಾಡಲಾಯಿತು. ಬಳಿಕ ಕಾರ್ಯಕ್ರಮಕ್ಕೆ ಆಗಮಿಸಿದವರಿಗೆ ಬಾಡೂಟ ಹಾಕಿಸಿದ್ದಾರೆ
ಶಿವಮೊಗ್ಗ (ಅ.19): ನಟ ಪುನೀತ್ ರಾಜ್ ಕುಮಾರ್ (Puneeth Rajkumar) ನಮ್ಮನ್ನು ಅಗಲಿ ಒಂದು ವರ್ಷ ಆಗುತ್ತಿದ್ದರೂ, ಅವರ ನೆನಪು ಅಕ್ಟೋಬರ್ 29ಕ್ಕೆ ಪುನೀತ್ ರಾಜ್ ಕುಮಾರ್ ನಿಧನರಾಗಿ ಒಂದು ವರ್ಷ ಆಗ್ತಿದೆ. ಈ ಹಿನ್ನೆಲೆ ಅಭಿಮಾನಿಗಳು (Fans) ಪುನೀತ್ ಪುಣ್ಯಸ್ಮರಣೆಯ ಕಾರ್ಯಕ್ರಮವನ್ನು ಹಮ್ಮಿಕೊಳ್ತಿದ್ದಾರೆ. ಶಿವಮೊಗ್ಗದ ವಿದ್ಯಾನಗರದ (Vidhya Nagara) ಯಾಲಕ್ಕಪ್ಪನ ಕೇರಿಯ ವೀರಕೇಸರಿ ಯುವಕ ಸಂಘದ ಸದಸ್ಯರು ಪುನೀತ್ ರಾಜ್ಕುಮಾರ್ ಅವರ ವರ್ಷದ ಪುಣ್ಯ ಸ್ಮರಣೆಯನ್ನು ಅದ್ದೂರಿಯಾಗಿ ಆಚರಿಸಿದ್ದಾರೆ
ಅಭಿಮಾನಿಗಳಿಂದ ಪುನೀತ್ ಪುಣ್ಯ ಸ್ಮ
ಪುನೀತ್ ಪುಣ್ಯ ಸ್ಮರಣೆ ನಿಮಿತ್ತ ರಸ್ತೆ ಪಕ್ಕದಲ್ಲೇ ಪೆಂಡಾಲ್ ಹಾಕಿದ್ದು, ಪುನೀತ್ ಭಾವಚಿತ್ರ ಇರಿಸಿ ಶಾಸ್ತ್ರೋಕ್ತವಾಗಿ ಪೂಜೆ ಮಾಡಲಾಯಿತು. ಈ ಸಂದರ್ಭ ಕಾರ್ಯಕ್ರಮಕ್ಕೆ ಆಗಮಿಸಿದವರು ಭಾವಚಿತ್ರಕ್ಕೆ ನಮನ ಸಲ್ಲಿಸಿದ್ದರು. ಬಳಿಕ ಕಾರ್ಯಕ್ರಮಕ್ಕೆ ಆಗಮಿಸಿದವರಿಗೆ ಬಾಡೂಟ ಹಾಕಿಸಿದ್ದಾರೆ
ಅಭಿಮಾನಿಗಳಿಗೆ ಬಾಡೂ
ಪುನೀತ್ ರಾಜ್ಕುಮಾರ್ ಇಲ್ಲಿನ ಯುವಕರೆಲ್ಲಾ ಸೇರಿಕೊಂಡು ಪುನೀತ್ ಅವರ ವರ್ಷಾಚರಣೆ ಮಾಡುತ್ತಿದ್ದೇವೆ. ಸುಮಾರು 2 ಸಾವಿರ ಜನರಿಗೆ ನಾಲ್ಕು ಕುರಿಗಳ ಬಾಡೂಟ ಮಾಡಲಾಗಿತ್ತು. ಈ ಕಾರ್ಯಕ್ರಮ ಸಂತೋಷದಿಂದ ಮಾಡುತ್ತಿಲ್ಲ, ನಾವೆಲ್ಲಾ ಇಂದಿಗೂ ದುಃಖತಪ್ತರಾಗಿದ್ದೇವೆ. ಹಾಗಾಗಿ ಶಾಸ್ತ್ರೋಕ್ತವಾಗಿ ಕಾರ್ಯಕ್ರಮ ಆಯೋಜಿಸಿದ್ದೇವೆ. ಪ್ರತಿ ವರ್ಷವೂ ಸಹ ಪುನೀತ್ ಸ್ಮರಣೆ ಕಾರ್ಯಕ್ರಮ ಇದೇ ರೀತಿ ನಡೆಸುತ್ತೇವೆ ಎಂದು ಹೇಳಿ
ಇದನ್ನೂ ಓದಿ: Puneeth Rajkumar: ಗಂಧದ ಗುಡಿಗೆ ಧ್ವನಿಯಾದ ಅಶ್ವಿನಿ ಪುನೀತ್ ರಾಜ್ಕುಮಾ
ಪುನೀತ ಪರ್ವ ಕಾರ್ಯಕ್ರಮಕ್ಕೆ ಸಿದ್ಧ
ಇನ್ನು ಪುನೀತ ಪರ್ವ ಕಾರ್ಯಕ್ರಮ ನಡೆಯುವ ಸ್ಥಳ, ಸಮಯ, ಡ್ರೆಸ್ ಕೋಡ್ ಹಾಗೂ ಇನ್ನಿತರ ಮಾಹಿತಿಯನ್ನು ಕೂಡಾ ಅಶ್ವಿನಿ ಪುನೀತ್ ರಾಜ್‌ಕುಮಾರ್ ತಮ್ಮ ಅಧಿಕೃತ ಸೋಷಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದಾರೆ. ಪುನೀತ ಪರ್ವ ಕಾರ್ಯಕ್ರಮ ಅಕ್ಟೋಬರ್ 21 ಶುಕ್ರವಾರದಂದು ಅರಮನೆ ಮೈದಾನದ ಕೃಷ್ಣ ವಿಹಾರದಲ್ಲಿ ಸಂಜೆ 6 ಗಂಟೆಗೆ ಆರಂಭವಾಗಲಿದೆ. ಹಾಗೇ ಈ ಕಾರ್ಯಕ್ರಮಕ್ಕೆ ಬರುವವರು ಬಿಳಿ ಬಣ್ಣದ ಡ್ರೆಸ್ ಧರಿಸಿ ಬರಲು ಮನವಿ ಮಾಡಲಾಗಿ
ನಾಲ್ಕು ದಿನ ಹಲವು ಕಾರ್ಯಕ್ರ
ಅಕ್ಟೋಬರ್ 26 ರಂದು ವಿಶ್ವದಾಖಲೆ ಮಟ್ಟದಲ್ಲಿ ಡಾ. ಪುನೀತ್ ರಾಜ್ಕುಮಾರ್ ಅವರ 75 ಕಟೌಟ್‌ಗಳನ್ನು ನಿಲ್ಲಿಸಲಾಗುವುದು. ಅಕ್ಟೋಬರ್ 27 ರಂದು ಮಧ್ಯಾಹ್ನ 1.00 ಗಂಟೆಗೆ 75 ಕಟೌಟ್‌ಗಳಿಗೆ ಭಾರೀ ಹೂವಿನ ಹಾರ ಹಾಕುವ ಕಾರ್ಯಕ್ಕೆ ಚಾಲನೆ. ಅದೇ ದಿನ ಸಂಜೆ 7.00ಕ್ಕೆ ಸ್ಮಾರಕದ ಸುತ್ತ ಸುಮಾರು 1 ಕಿಲೋ ಮೀಟರ್ ವ್ಯಾಪ್ತಿವರೆಗೂ ಲೈಟಿಂಗ್ ಅಳವಡಿಕೆ ಅಕ್ಟೋಬರ್ 28 ರಂದು ಗಂಧದಗುಡಿ ಸಿನಿಮಾ ಬಿಡುಗಡೆ ಅಂಗವಾಗಿ ಕೆ.ಜಿ. ರಸ್ತೆಯ ಪ್ರಮುಖ ಚಿತ್ರಮಂದಿರ ಹಾಗೂ ಮಾಗಡಿ ರಸ್ತೆಯ ಚಿತ್ರಮಂದಿರಗಳಲ್ಲಿ ಸಂಭ್ರಮಾಚರಣೆ ನಡೆಯ
ಇದನ್ನೂ ಓದಿ: Puneeth Rajkumar: ಕರ್ನಾಟಕದಾದ್ಯಂತ ಪುನೀತ್ ರಾಜ್‌ಕುಮಾರ್‌ಗೆ ವಿಶೇಷ ಗೌ
ಅಕ್ಟೋಬರ್ 29 ರಂದು ಪುನೀತ್ ಪುಣ್ಯಸ್ಮ
ಅಕ್ಟೋಬರ್ 29 ರಂದು ಡಾ. ಪುನೀತ್ ರಾಜ್ಕುಮಾರ್ ಅವರ ಒಂದನೇ ವರ್ಷದ ಪುಣ್ಯಸ್ಮರಣೆ ಅಂಗವಾಗಿ ಸ್ಮಾರಕಕ್ಕೆ ಭೇಟಿ ನೀಡುವ ಅಭಿಮಾನಿಗಳಿಗೆ ಬೆಳಗ್ಗೆ 8 ರಿಂದ ಸಂಜೆ 6ವರೆಗೂ ಅನ್ನಸಂತರ್ಪಣೆ ಕಾರ್ಯಕ್ರಮ ನಡೆಯಲಿ
ಅಕ್ಟೋಬರ್ 28ರಂದು ಗಂಧದ ಗುಡಿ ರಿ
ಪುನೀತ್ ರಾಜ್ಕುಮಾರ್ ಅವರು ಗಂಧದ ಗುಡಿ ಬಗ್ಗೆ ಅಭಿಮಾನಿಗಳು ಅಪಾರ ನಿರೀಕ್ಷೆ ಇಟ್ಟುಕೊಂಡಿದ್ದರು. ಇದರ ಟೈಟಲ್ ರಿವೀಲ್ ಆಗುವುದಕ್ಕೂ ಕೆಲವೇ ದಿನದ ಮೊದಲು ಪುನೀತ್ ನಿಧನ ಹೊಂದಿದರು. ನವೆಂಬರ್ 1ಕ್ಕೆ ಇದರ ಶೀರ್ಷಿಕೆ ಅನಾವರಣಗೊಳ್ಳಬೇಕಿತ್ತು. ಪುನೀತ್ ಅಕ್ಟೋಬರ್ 29ರಂದೇ ಮೃತಪಟ್ಟರು. ನಂತರ ಈ ಡಾಕ್ಯುಮೆಂಟರಿಯ ಜವಾಬ್ದಾರಿ ಅಶ್ವಿನಿ ಅವರ ತೆಗೆದುಕೊಂಡರು. ಈಗ ಅಕ್ಟೋಬರ್ 28ರಂದು ಗಂಧದ ಗುಡಿ ರಿಲೀಸ್ ಆಗುತ್ತಿದೆ. ಇದಕ್ಕೆ ಯಾರು ಧ್ವನಿ ನೀಡುತ್ತಾರೆ ಎಂಬ ಕುತೂಹಲ ಇತ್ತು. ಆ ಕುತೂಹಲಕ್ಕೆ ತೆರೆ ಬಿದ್ದಿದೆ. ಅಶ್ವಿನಿ ಪುನೀತ್ ರಾಜ್ಕುಮಾರ್ ಅವರು ಇದಕ್ಕೆ ಧ್ವನಿ ನೀಡುತ್ತಾರೆ ಎನ್ನಲಾಗಿದೆ. ಲೀಸ್ದೆ.ರಣೆರವಲಿದೆ.ಮದೆ.ತೆರ್ದರು.ಟ .ರಣೆ.. ಇದಕ್ಕೆ ಧ್ವನಿ ನೀಡುತ್ತಾರೆ ಎನ್ನಲಾಗಿದೆ.

Post a Comment