ಪ್ರಧಾನಿಯವರನ್ನೇ ಟಾರ್ಗೆಟ್ ಮಾಡಿತಾ ಪಿಎಫ್ಐ?
ಪ್ರಮುಖ ಹಿಂದೂ ದೇವಾಲಯಗಳನ್ನು ಗುರಿಯಾಗಿಸಿಕೊಂಡು ಪಿಎಫ್‌ಐ ಸದಸ್ಯ ಬೆದರಿಕೆ ಹಾಕಿದ್ದಾನೆ ಎಂದು ದೂರಿನಲ್ಲಿ ಶಾಸಕರು ಉಲ್ಲೇಖಿಸಿದ್ದಾರೆ. ಅಯೋಧ್ಯೆಯ ಶ್ರೀರಾಮ ಮಂದಿರ, ಮಥುರಾ ಶ್ರೀಕೃಷ್ಣ ಜನ್ಮಭೂಮಿ, ಅಲ್ಲಿನ ಮಂದಿರಗಳು ಸೇರಿದಂತೆ ಪ್ರಮುಖ ದೇಗುಲಗಳನ್ನು ಆತ್ಮಹತ್ಯಾ ಬಾಂಬರ್‌ಗಳು ಟಾರ್ಗೆಟ್ ಮಾಡುವುದಾಗಿ ಎಚ್ಚರಿಕೆ ನೀಡಲಾಗಿದ್ಯಂತೆ.
ಮಹಾರಾಷ್ಟ್ರ: 5 ವರ್ಷಗಳ ಕಾಲ ದೇಶದಲ್ಲಿ ನಿಷೇಧದ (Ban) ಶಿಕ್ಷೆಗೆ ಒಳಗಾಗಿರುವ ಪಾಪ್ಯುಲರ್ ಫ್ರಂಟ್ ಆಫ್ ಇಂಡಿಯಾ (PFI) ಇದೀಗ ತೆರೆ ಮರೆಯಲ್ಲೇ ಕೆಲಸ ಮಾಡುತ್ತಿದೆಯಾ? ಹೀಗೊಂದು ಅನುಮಾನಕ್ಕೆ ಕಾರಣವಾಗಿರೋದು ಮಹಾರಾಷ್ಟ್ರ ಬಿಜೆಪಿ ಶಾಸಕ (Maharashtra BJP MLA) ವಿಜಯ್ ದೇಶಮುಖ್ (Vijay Deshmukh) ಅವರ ಗಂಭೀರ ಆರೋಪ. ಪಿಎಫ್ಐ ಸದಸ್ಯನೊಬ್ಬನಿಂದ (PFI Member) ತಮಗೆ ಬೆದರಿಕೆ ಪತ್ರ (Threat letter) ಬಂದಿದ್ದಾಗಿ ವಿಜಯ್ ದೇಶಮುಖ್ ಆರೋಪಿಸಿದ್ದಾರೆ. ಪ್ರಧಾನಿ ನರೇಂದ್ರ ಮೋದಿ (PM Narendra Modi), ಮಥುರಾ (Mathura) ಹಾಗೂ ಅಯೋಧ್ಯೆ ರಾಮಮಂದಿರವೇ (Ayodhya Ram Mandir) ನಮ್ಮ ಟಾರ್ಗೆಟ್ (Target) ಅಂತ ಆ ಪತ್ರದಲ್ಲಿ ಬೆದರಿಕೆ ಒಡ್ಡಿದ್ದಾಗಿ ಶಾಸಕ ವಿಜಯ್ ದೇಶಮುಖ್ ಆರೋಪಿಸಿದ್ದಾರೆ.
ಪಿಎಫ್ಐ ಸದಸ್ಯನಿಂದ ಬೆದರಿಕೆ ಪತ್ರ
ನಿಷೇಧಿತ ಪಿಎಫ್ಐ ಸದಸ್ಯನಿಂದ ತಮಗೆ ಜೀವ ಬೆದರಿಕೆ ಪತ್ರ ಬಂದಿದೆ ಅಂತ ಮಹಾರಾಷ್ಟ್ರದ ಬಿಜೆಪಿ ಶಾಸಕ ವಿಜಯಕುಮಾರ್ ದೇಶಮುಖ್ ಆಱೋಪಿಸಿದ್ದಾರೆ. ಅಲ್ಲದೇ ಅವರು ಪಿಎಫ್‌ಐ ನಾಯಕ ಮೊಹಮ್ಮದ್ ಶಫಿ ಬಿರಾಜದಾರ್ ವಿರುದ್ಧ ಪೊಲೀಸ್ ದೂರು ದಾಖಲಿಸಿದ್ದಾರೆ, ಪಿಎಫ್‌ಐ ಮೇಲೆ ಕೇಂದ್ರ ಸರ್ಕಾರ ನಿಷೇಧ ಹೇರಿರುವುದರಿಂದ ಕೋಪದಿಂದಾಗಿ ಅವರ ಶಿರಚ್ಛೇದ ಮಾಡುವುದಾಗಿ ಬೆದರಿಕೆ ಹಾಕಿದ್ದಾರೆ ಎಂದು ಆರೋಪಿಸಿದ್ದಾ
ರೆಪಿಎಫ್ಐ ಸದಸ್ಯನಿಂದ ಬೆದರಿಕೆ ಪತ್ರ?
“ಪಿಎಫ್ಐ ನಿಷೇಧಕ್ಕೆ ಸೇಡು ತೀರಿಸಿಕೊಳ್ಳುವುದು ಪಕ್ಕಾ!”
ಹಿಂದಿಯಲ್ಲಿ ಪತ್ರ ಬರೆಯಲಾಗಿದ್ದು, ಪಿಎಫ್ಐ ಸಂಘಟನೆ ನಿಷೇಧಕ್ಕೆ ಸೇಡು ತೀರಿಸಿಕೊಳ್ಳುವುದು ಪಕ್ಕಾ ಎಂದು ಪತ್ರದಲ್ಲಿ ಉಲ್ಲೇಖಿಸಲಾಗಿದೆ. ಹಿಂದೂಗಳ ಪವಿತ್ರ ಕ್ಷೇತ್ರಗಳಾದ ಆಯೋಧ್ಯೆ ಶ್ರೀರಾಮ ಮಂದಿರ ಹಾಗೂ ಮಥುರಾದ ಕೃಷ್ಣ ಜನ್ಮಭೂಮಿ ಮಂದಿರಗಳ ಮೇಲೆ ಆತ್ಮಾಹುತಿ ದಾಳಿ ನಡೆಸಿ, ಆ ಮೂಲಕ ಮಂದಿರ ಸ್ಫೋಟಿಸಲಾಗುವುದು ಎಂದು ಪತ್ರದಲ್ಲಿ ಹೇಳಲಾಗಿದೆ.
ಇದನ್ನೂ ಓದಿ: Harassment: ಬಾಲಕಿ ಮೇಲೆ ಅತ್ಯಾಚಾರ ಮಾಡಿ, ಬ್ಯಾಗ್‌ನಲ್ಲಿ ತುಂಬಿ ಕಾಡಿಗೆ ಬಿಟ್ಟ ಪಾಪಿ! ಅಲ್ಲಿ ಮುಂದಾಗಿದ್ದೇ ಬೇರೆ!
“ಪ್ರಧಾನಿ ನರೇಂದ್ರ ಮೋದಿ ನಮ್ಮ ರಾಡಾರ್‌ನಲ್ಲಿದ್ದಾರೆ!”
ಪ್ರಧಾನಿ ನರೇಂದ್ರ ಮೋದಿ ಸೇರಿದಂತೆ ದೇಶದ ಗಣ್ಯ ವ್ಯಕ್ತಿಗಳನ್ನು ಟಾರ್ಗೆಟ್ ಮಾಡಿದ್ದಾಗಿ ಪತ್ರದಲ್ಲಿ ಹೇಳಲಾಗಿದ್ಯಂತೆ. ಪ್ರಧಾನಿ ನರೇಂದ್ರ ಮೋದಿ ನಮ್ಮ ರಾಡಾರ್‌ನಲ್ಲೇ ಇದ್ದಾರೆ ಅಂತ ಎಚ್ಚರಿಕೆ ನೀಡಿದ್ದಾಗಿ ವಿಜಯ್ ದೇಶಮುಖ್ ಆ
ರೋಪಿಸಿದ್ದಾರೆ.ಮಹಾರಾಷ್ಟ್ರದ ಬಿಜೆಪಿ ಶಾಸಕ ವಿಜಯ್ ದೇಶಮುಖ್
“ಮಥುರಾ, ಅಯೋಧ್ಯಾ ದೇಗುಲಗಳೇ ಟಾರ್ಗೆಟ್”
ಪ್ರಮುಖ ಹಿಂದೂ ದೇವಾಲಯಗಳನ್ನು ಗುರಿಯಾಗಿಸಿಕೊಂಡು ಪಿಎಫ್‌ಐ ಸದಸ್ಯ ಬೆದರಿಕೆ ಹಾಕಿದ್ದಾನೆ ಎಂದು ದೂರಿನಲ್ಲಿ ಶಾಸಕರು ಉಲ್ಲೇಖಿಸಿದ್ದಾರೆ. ಅಯೋಧ್ಯೆಯ ಶ್ರೀರಾಮ ಮಂದಿರ, ಮಥುರಾ ಶ್ರೀಕೃಷ್ಣ ಜನ್ಮಭೂಮಿ, ಅಲ್ಲಿನ ಮಂದಿರಗಳು ಸೇರಿದಂತೆ ಪ್ರಮುಖ ದೇಗುಲಗಳನ್ನು ಆತ್ಮಹತ್ಯಾ ಬಾಂಬರ್‌ಗಳು ಟಾರ್ಗೆಟ್ ಮಾಡುವುದಾಗಿ ಎಚ್ಚರಿಕೆ ನೀಡಲಾಗಿದ್ಯಂತೆ.
ಸೊಲ್ಲಾಪುರ ಪೊಲೀಸರಿಂದ ತನಿಖೆ
ಸದ್ಯ ಬೆದರಿಕೆ ಪತ್ರ ಬಂದಿರೋ ಬಗ್ಗೆ ಶಾಸಕ ವಿಜಯ್ ದೇಶಮುಖ್ ದೂರು ದಾಖಲಿಸಿದ್ದಾರೆ. ಈ ಬಗ್ಗೆ ದೂರು ಪಡೆದ ಸೊಲ್ಲಾಪುರ ಪೊಲೀಸರು, ಪತ್ರದ ಸತ್ಯಾಸತ್ಯತೆ ಕುರಿತು ತನಿಖೆ ನಡೆಸುತ್ತಿದ್ದು, ತನಿಖೆ ಮುಂದುವರಿದಿದೆ.
ಇದನ್ನೂ ಓದಿ: Vidhana Soudha: ಇಬ್ಬರು ಹುಡುಗಿಯರು ಕೈಕೊಟ್ಟಿದ್ದಕ್ಕೆ ಸರ್ಕಾರದ ಮೇಲೆ ಸಿಟ್ಟು! ವಿಧಾನಸೌಧಕ್ಕೆ ಬಾಂಬ್ ಇಟ್ಟಿದ್ದಾರೆ ಅಂತ ಕಾಲ್ ಮಾಡಿದ ಟೆಕ್ಕಿ!
ಪೊಲೀಸರ ಜೊತೆ ನಂಟು ಹೊಂದಿತ್ತಾ ಪಿಎಫ್‌ಐ?
ಭಯೋತ್ಪಾದನಾ ಚಟುವಟಿಕೆಯಲ್ಲಿ ಭಾಗಿಯಾದ ಮತ್ತು ಉಗ್ರರಿಗೆ ಹಣಕಾಸು ನೆರವು ನೀಡಿದ ಕಾರಣಕ್ಕಾಗಿ ಇತ್ತೀಚೆಗೆ ನಿಷೇಧಕ್ಕೆ ಒಳಪಟ್ಟ ಪಾಪ್ಯುಲರ್ ಫ್ರಂಟ್ ಆಫ್ ಇಂಡಿಯಾ (ಪಿಎಫ್‌ಐ) ಜೊತೆಗೆ ಕೇರಳದ 873 ಪೊಲೀಸ್ ಸಿಬ್ಬಂದಿಗೆ ನಂಟಿದೆ ಎಂಬ ಸ್ಫೋಟಕ ಮಾಹಿತಿಯನ್ನು ರಾಷ್ಟ್ರೀಯ ತನಿಖಾ ಏಜೆನ್ಸಿ (ಎನ್‌ಐಎ) ರಾಜ್ಯ ಪೊಲೀಸ್ ಮುಖ್ಯಸ್ಥರಿಗೆ ಮಾಹಿತಿ ನೀಡಿದೆ ಎಂದು ಸ್ಥಳೀಯ ಮಾಧ್ಯಮಗಳು ತಿಳಿಸಿವೆ. ಆದರೆ ಮಾಧ್ಯಮಗಳ ವರದಿಯನ್ನು ಕೇರಳ ಪೊಲೀಸರು ತಳ್ಳಿಹಾಕಿದ್ದಾರೆ.



Post a Comment