Loudspeaker license: ಸರ್ಕಾರಕ್ಕೆ ಶುಲ್ಕ ಪಾವತಿಸಿ ಅಜಾನ್ ಅನುಮತಿ ಪಡೆದ 10 ಸಾವಿರಕ್ಕೂ ಮಸೀದಿಗಳು Karnataka Government: ಈ ವರ್ಷದ ಆರಂಭದಲ್ಲಿ ಅಜಾನ್ ವರ್ಸಸ್ ಹನುಮಾನ್ ಚಾಲೀಸಾ ಅಭಿಯಾನ ಆರಂಭವಾಗಿತ್ತು. ಅತ್ಯಧಿಕ ಧ್ವನಿ ಹೊರಡಿಸುವ ಮೈಕ್​ಗಳನ್ನು ತೆಗೆಯಬೇಕೆಂದು ಹಿಂದೂ ಸಂಘಟನೆಗಳು ಆಗ್ರಹಿಸಿದ್ದವು. ಇನ್ನು ಕೆಲ ಹಿಂದೂ ಸಂಘಟನೆಗಳು ಮಸೀದಿಗಳ ಮೇಲಿನ ಧ್ವನಿವರ್ದಕಗಳ ತೆರವಿಗೆ ಆಗ್ರಹಿಸಿದ್ದವು.


 ಸದ್ಯ ರಾಜ್ಯ ಸರ್ಕಾರ ಹತ್ತು ಸಾವಿರಕ್ಕೂ ಅಧಿಕ ಮಸೀದಿಗಳಿಗೆ ಧ್ವನಿವರ್ಧಕ ಬಳಕೆಗೆ ಅನುಮತಿ ನೀಡಿದೆ. ರಾಜ್ಯದಲ್ಲಿ 17,850 ಮಸೀದಿಗಳು 10 ಸಾವಿರಕ್ಕೂ ಅಧಿಕ ಮಸೀದಿಗಳು ಪೊಲೀಸರು ನೀಡುವ ಅನುಮತಿಯನ್ನು 450 ರೂಪಾಯಿ ಪಾವತಿಸಿ ಪಡೆದುಕೊಂಡಿದೆ. ಈ ಅನುಮತಿ ಎರಡು ವರ್ಷಗಳ ವ್ಯಾಲಿಡಿಟಿಯನ್ನು ಹೊಂದಿರಲಿದೆ.

ಗೃಹ ಇಲಾಖೆಯ ಅಂಕಿ ಅಂಶಗಳ ಪ್ರಕಾರ, ಬೆಂಗಳೂರಿನಲ್ಲಿ ಮಸೀದಿ, ಚರ್ಚ್​, ರೆಸ್ಟೋರೆಂಟ್​ಗಳ ಸೇರಿದಂತೆ 1,841 ಪರವಾನಿಯನ್ನು ಪಡೆಯಲಾಗಿದೆ. ವಿಜಯಪುರದಲ್ಲಿ 744 ಮಸೀದಿಗಳು ಲೌಡ್​ ಸ್ಪೀಕರ್ ಬಳಕೆಯ ಅನುಮತಿಯನ್ನು ಪಡೆದುಕೊಂಡಿವೆ ಎಂದು ಡೆಕ್ಕನ್ ಹೆರಾಲ್ಡ್​ ವರದಿ ಮಾಡಿದೆ.
ವಿಶೇಷವಾಗಿ ಬೆಳಗಿನ ಜಾವದ ಅಜಾನ್​ಗೆ ಹಿಂದೂ ಸಂಘಟನೆಗಳು ವ್ಯಾಪಕ ಆಕ್ರೋಶ ಹೊರಹಾಕಿದ್ದವು. ಮಸೀದಿಗಳಲ್ಲಿ ಬೆಳಗ್ಗೆ 6 ಗಂಟೆಗೂ ಮೊದಲು ಧ್ವನಿವರ್ಧಕ ಬಳಕೆ ಮಾಡಬಾರದು. ಇದು ಸುಪ್ರೀಂಕೋರ್ಟ್​ ಆದೇಶದ ಉಲ್ಲಂಘನೆ ಎಂದು ಆರೋಪಿಸಲಾಗಿತ್ತು.
ಹಿಂದೂ ಸಂಘಟನೆಗಳು ಮತ್ತು ಬಲಪಂಥೀಯ ನಾಯಕರ ಆಗ್ರಹಕ್ಕೆ ಮಣಿದ ರಾಜ್ಯ ಸರ್ಕಾರ, ಮೇ ತಿಂಗಳಿನಲ್ಲಿ ಎಲ್ಲಾ ಧ್ವನಿವರ್ಧಕ ಬಳಕೆದಾರರಿಗೆ ಲಿಖಿತ ಅನುಮತಿಯನ್ನು ಪಡೆಯುವಂತೆ ಸುತ್ತೋಲೆ ಹೊರಡಿಸಿತ್ತು. ಪರವಾನಿಗೆ ನೀಡಲು ಸಮಿತಿಯನ್ನು ಸಹ ರಚನೆ ಮಾಡಲಾಗಿತ್ತು.
ಬೆಳಗ್ಗೆ 6 ಗಂಟೆಯಿಂದ ರಾತ್ರಿ 10 ಗಂಟೆವರೆಗೆ ಹಾಗೂ ರಾತ್ರಿ 10 ಯಿಂದ ಬೆಳಗಿನ ಜಾವ 6 ಗಂಟೆವರೆಗೆ ನಿರ್ದಿಷ್ಟ ಸಮಯ (Time) ಹಾಗೂ ಶಬ್ದದ ಬಗ್ಗೆ ಡೆಸಿಬಲ್​ ನಿಗದಿ ಮಾಡಲಾಗಿತ್ತು.
ಕೈಗಾರಿಕಾ ಝೋನ್ - ಹಗಲಿನಲ್ಲಿ 75 dB - ರಾತ್ರಿ 70 dB, ಕಮರ್ಷಿಯಲ್ ಝೋನ್ - ಹಗಲಿನಲ್ಲಿ 65 dB - ರಾತ್ರಿ 55 dB, ರೆಸಿಡೆನ್ಸಿಯಲ್ ಝೋನ್ - ಹಗಲಿನಲ್ಲಿ 55 dB - ರಾತ್ರಿ 45 dB, ಸೈಲೆಂಟ್ ಝೋನ್ - ಹಗಲಿನಲ್ಲಿ 50 dB - ರಾತ್ರಿ 40 dB
ರಾತ್ರಿ 10 ರಿಂದ ಬೆಳಗ್ಗೆ 6ರ ರವರೆಗೆ ಎಲ್ಲಾ ರೀತಿಯ ಧ್ವನಿವರ್ಧಕ, ತಮಟೆ, ಬ್ಯಾಂಡ್, ಡಿಜೆ ಎಲ್ಲದಕ್ಕೂ ಬ್ರೇಕ್ ಹಾಕಲಾಗಿದೆ. ಆದರೆ ಅಗತ್ಯ ಸಮಯದಲ್ಲಿ ಸಂಬಂಧಪಟ್ಟ ಅಧಿಕಾರಿಗಳ ಅನುಮತಿ ಮೇರೆಗೆ ಅನುಮತಿ ನೀಡಲಾಗುತ್ತದೆ.

Post a Comment

Previous Post Next Post