ಸೊರಬ ಕ್ಷೇತ್ರದಲ್ಲಿ ಸಹೋದರರ ಕಾಳಗ?
Karnataka Assembly Elections 2023: ಚುನಾವಣೆ ವಿಚಾರ ಬಂದಾಗ ಸದ್ದು ಮಾಡುವ ಜಿಲ್ಲೆಗಳಲ್ಲಿ ಶಿವಮೊಗ್ಗವೂ ಒಂದು. ಒಟ್ಟು ಏಳು ವಿಧಾನಸಭಾ ಕ್ಷೇತ್ರಗಳನ್ನೊಳಗೊಂಡಿರುವ ಶಿವಮೊಗ್ಗ ಇತ್ತೀಚೆಗೆ ಕೋಮು ಗಲಭೆ ವಿಚಾರವಾಗಿಯೇ ಹೆಚ್ಚು ಸದ್ದು ಮಾಡುತ್ತಿದೆ ಎಂಬುವುದು ಕರಾಳ ಸತ್ಯ. ಹೀಗಿರುವಾಗ ಶಿವಮೊಗ್ಗದ ಕ್ಷೇತ್ರಗಳಲ್ಲೊಂದಾಗಿರುವ ಮಾಜಿ ಮುಖ್ಯಮಂತ್ರಿ ಎಸ್.ಬಂಗಾರಪ್ಪ ತವರು ನೆಲ ಸೊರಬ ವಿಧಾನಸಭಾ ಕ್ಷೇತ್ರದ ರಾಜಕೀಯ ಸ್ಥಿತಿಗತಿ ಹೇಗಿದೆ? ಇಲ್ಲಿನ ವಿಶೇಷತೆ ಏನು? ಕಣಕ್ಕಿಳಿಯಲು ಬಯಸುವ ಪ್ರಮುಖ ಆಕಾಂಕ್ಷಿಗಳು ಯಾರು? ಜಾತಿ ಸಮೀಕರಣ ಹೇಗಿದೆ ಎಂಬಿತ್ಯಾದಿ ವಿವರಗಳು ಇಲ್ಲಿವೆ ನೋಡಿ
ಸೊರಬ ವಿಧಾನಸಭಾ ಕ್ಷೇತ್ರ: ಕರ್ನಾಟಕ ವಿಧಾನಸಭಾ ಚುನಾವಣೆಗೆ (Karnataka Assembly Elections 2023) ಇನ್ನು ಕೆಲ ಸಮಯವಷ್ಟೇ ಬಾಕಿ. ಮುಂದಿನ ವರ್ಷ ನಡೆಯಲಿರುವ ಚುನಾವಣೆಯಲ್ಲಿ ಗೆಲುವು ಸಾಧಿಸುವ ನಿಟ್ಟಿನಲ್ಲಿ ಈಗಾಗಲೇ ಪಕ್ಷಗಳು ಸಿದ್ಧತೆ ಆರಂಭಿಸಿವೆ. ಈ ನಡುವೆ ರಾಜಕೀಯ ನಾಯಕರ ಪರಸ್ಪರ ತಿಕ್ಕಾಟ, ವಾಕ್ಸಮರವೂ ಎಗ್ಗಿಲ್ಲದೇ ಸಾಗಿದೆ. ಇನ್ನು ಚುನಾವಣೆ ವಿಚಾರ ಬಂದಾಗ ಸದ್ದು ಮಾಡುವ ಜಿಲ್ಲೆಗಳಲ್ಲಿ ಶಿವಮೊಗ್ಗವೂ ಒಂದು. ಒಟ್ಟು ಏಳು ವಿಧಾನಸಭಾ ಕ್ಷೇತ್ರಗಳನ್ನೊಳಗೊಂಡಿರುವ ಶಿವಮೊಗ್ಗ ಇತ್ತೀಚೆಗೆ ಕೋಮು ಗಲಭೆ ವಿಚಾರವಾಗಿಯೇ ಹೆಚ್ಚು ಸದ್ದು ಮಾಡುತ್ತಿದೆ ಎಂಬುವುದು ಕರಾಳ ಸತ್ಯ. ಹೀಗಿರುವಾಗ ಶಿವಮೊಗ್ಗದ ಕ್ಷೇತ್ರಗಳಲ್ಲೊಂದಾಗಿರುವ ಮಾಜಿ ಮುಖ್ಯಮಂತ್ರಿ ಎಸ್.ಬಂಗಾರಪ್ಪ(S Bangarappa) ತವರು ನೆಲ ಸೊರಬ ವಿಧಾನಸಭಾ ಕ್ಷೇತ್ರದ (Soraba Assembly constituency) ರಾಜಕೀಯ ಸ್ಥಿತಿಗತಿ ಹೇಗಿದೆ? ಇಲ್ಲಿನ ವಿಶೇಷತೆ ಏನು? ಕಣಕ್ಕಿಳಿಯಲು ಬಯಸುವ ಪ್ರಮುಖ ಆಕಾಂಕ್ಷಿಗಳು ಯಾರು? ಜಾತಿ ಸಮೀಕರಣ ಹೇಗಿದೆ ಎಂಬಿತ್ಯಾದಿ ವಿವರಗಳು ಇಲ್ಲಿವೆ ನೋಡಿ
ಅರೆ ಮಲೆನಾಡಿನಂತಾd ಸೊ
ಶಿವಮೊಗ್ಗ ಜಿಲ್ಲೆಯಲ್ಲಿದ್ದರೂ ನೀರಿನ ಕೊರತೆ ಎದುರಿಸುವ ಕ್ಷೇತ್ರ ಸೊರಬ. ಶಾಶ್ವತ ನೀರಾವರಿ ಯೋಜನೆ ಬೇಕು ಎಂಬುದು ದಶಕಗಳ ಕೂಗು. ನೀರಿನ ಹೆಸರು ಹೇಳಿ ಅನೇಕರು ರಾಜಕೀಯ ಮಾಡಿದ್ದಾರೆ. ಆದರೆ ಮಾತ್ರ ನೀರು ಸಿಕ್ಕಿಲ್ಲ. ಹೀಗಾಗೇ ಪಶ್ಚಿಮಘಟ್ಟದ ಸೆರಗಿನಲ್ಲಿ ಹಚ್ಚಹಸುರಿನಿಂದ ಕಂಗೊಳಿಸುತ್ತಿದ್ದ ಸೊರಬ ಪ್ರಸ್ತುತ ಅರೆ ಮಲೆನಾಡಿನಂತಾಗಿದೆ
ಕೃಷಿಗೆ ಆಧಾರವಾಗಿರುವ 1,186 ಕೆರೆ
ಇನ್ನು ಸೊರಬ ತಾಲೂಕಿನಲ್ಲಿ ಇರುವಷ್ಟು ಕೆರೆಗಳು ಏಷ್ಯಾ ಖಂಡದಲ್ಲಿ ಮತ್ತೆಲ್ಲಿಯೂ ಇಲ್ಲ ಎನ್ನಲಾಗುತ್ತದೆ. ಅಧಿಕೃತ ಅಂಕಿ-ಅಂಶಗಳ ಪ್ರಕಾರ ಕೃಷಿಗೆ ಆಧಾರವಾಗಿರುವ 1,186 ಕೆರೆಗಳಿವೆ. ಇದನ್ನು ಹೊರತುಪಡಿಸಿ ಇನ್ನೂ ಮುನ್ನೂರಕ್ಕೂ ಹೆಚ್ಚು ಕೆರೆಗಳಿವೆ ಎನ್ನಲಾಗಿದೆ. ಕೃಷಿ ಪ್ರಧಾನ ಹಳ್ಳಿಗಳಿರುವ ಸೊರಬದಲ್ಲಿ ಭತ್ತ ಪ್ರಮುಖ ಬೆಳೆ. ಇನ್ನು ರಾಜ್ಯದಲ್ಲಿರುವ ಪ್ರಮುಖ ಐದು ಪಕ್ಷಿಧಾಮಗಳಲ್ಲಿ ಒಂದಾದ ’ಗುಡುವಿ ಪಕ್ಷಿಧಾಮ’ ಸೊರಬದಲ್ಲಿ
ಇದನ್ನೂ ಓದಿ: Karnataka Assembly Elections: ಜೈನ ಕಾಶಿ ಕಾರ್ಕಳದಲ್ಲಿ ಬಿಜೆಪಿಗಿಲ್ಲ ಆಪ್ಶನ್, ಕಾಂಗ್ರೆಸ್ನಲ್ಲಿ ಆಕಾಂಕ್ಷಿಗಳ ಲೈ
ರಾಜಕೀಯ ಇತಿಹಾ
ಕರ್ನಾಟಕದ ಮಾಜಿ ಮುಖ್ಯಮಂತ್ರಿ ಎಸ್.ಬಂಗಾರಪ್ಪ ತವರು ಕ್ಷೇತ್ರ ಸೊರಬ. ಸೊರಬ ಕ್ಷೇತ್ರದಲ್ಲಿ ಮಧು ಹಾಗೂ ಕುಮಾರ್ ಒಟ್ಟಾರೆ ನಾಲ್ಕು ಬಾರಿ ಪರಸ್ಪರ ಮುಖಾಮುಖಿಯಾಗಿದ್ದಾರೆ. ಇದರಲ್ಲಿ ಕುಮಾರ್ ಬಂಗಾರಪ್ಪ ಎರಡು ಬಾರಿಯಾದರೆ ಮಧು ಬಂಗಾರಪ್ಪ ಒಂದು ಬಾರಿ ಜಯ ಸಾಧಿಸಿದ್ದಾರೆ. ಮತ್ತೊಂದು ಚುನಾವಣೆಯಲ್ಲಿ ಇವರಿಬ್ಬರು ಸೋಲನುಭವಿಸಿದ್ದರು. 1967 ರಿಂದ 1994 ರವರೆಗೆ ಎಸ್.ಬಂಗಾರಪ್ಪರವರೇ ಸತತವಾಗಿ ಈ ಕ್ಷೇತ್ರ ಪ್ರತಿನಿಧಿಸಿಕೊಂಡು ಬಂದಿದ್ದರು. 1999 ರಲ್ಲಿ ತಂದೆಯ ಬೆಂಬಲದೊಂದಿಗೆ ಕಾಂಗ್ರೆಸ್ ಅಭ್ಯರ್ಥಿಯಾಗಿ ಕಣಕ್ಕಿಳಿದಿದ್ದ ಕುಮಾರ್ 38,773 ಮತ ಗಳಿಸಿ ವಿಧಾನಸಭೆಗೆ ಪ್ರವೇಶಿಸಿದ್ದ
ತಂದೆಯ ಬೆಂಬಲದಿಂದ ಕಣಕ್ಕಿಳಿದಿದ್ದ ಮಧು ಬಂಗಾರ
ಬದಲಾದ ರಾಜಕೀಯ ಬೆಳವಣಿಗೆಯಲ್ಲಿ ಬಂಗಾರಪ್ಪ ಬಿಜೆಪಿ ಸೇರ್ಪಡೆಯಾಗಿದ್ದರು. ಆದರೆ ಕುಮಾರ್ ಮಾತ್ರ ಕಾಂಗ್ರೆಸ್‍ನಲ್ಲಿಯೇ ಉಳಿದುಕೊಂಡಿದ್ದರು. 2004 ರಲ್ಲಿ ನಡೆದ ಚುನಾವಣೆಯಲ್ಲಿ ಕುಮಾರ್ ಮತ್ತೆ ಕಾಂಗ್ರೆಸ್‍ನಿಂದ ಕಣಕ್ಕಿಳಿದರು. ತಂದೆಯ ಬೆಂಬಲದೊಂದಿಗೆ ಮಧು ಬಂಗಾರಪ್ಪ ಬಿಜೆಪಿ ಅಭ್ಯರ್ಥಿಯಾಗಿದ್ದರು. ಕುಮಾರ್ 44,677 ಮತ ಪಡೆದು ಆಯ್ಕೆಯಾದರೆ, ಮಧು 32,748 ಮತ ಪಡೆದು ಪರಾಭವಗೊಂಡಿದ್ದ
ಮುಖಾಮುಖಿಯಾದ ಸಹೋದ
2008 ರ ಚುನಾವಣೆಯಲ್ಲಿಯೂ ಸಹೋದರರು ಮುಖಾಮುಖಿಯಾಗಿದ್ದರು. ಆದರೆ ಸಹೋದರರ ಕಲಹದ ಲಾಭ ಬೇರೆ ಪಕ್ಷಕ್ಕೆ ದಕ್ಕಿದ್ದು ಈ ಚುನಾವಣೆಯ ವಿಶೇಷವಾಗಿದೆ. ಬಿಜೆಪಿ ಅಭ್ಯರ್ಥಿಯಾಗಿ ಕಣಕ್ಕಿಳಿದಿದ್ದ ಹರತಾಳು ಹಾಲಪ್ಪರವರು 53,552 ಮತ ಪಡೆದು ಆಯ್ಕೆಯಾಗಿದ್ದರು. ಆದರೆ ಕಾಂಗ್ರೆಸ್ ಅಭ್ಯರ್ಥಿಯಾಗಿದ್ದ ಕುಮಾರ್ 32,499 ಹಾಗೂ ಜೆಡಿಎಸ್ ಅಭ್ಯರ್ಥಿಯಾದ ಮಧು 31,135 ಮತಗಳಿಸಿ ಪರಾಭವಗೊಂಡಿದ್ದ
ಇದನ್ನೂ ಓದಿ: Karnataka Assembly Elections: ಕೃಷ್ಣನೂರು ಉಡುಪಿಯ ಸಾರಥಿ ಯಾರು? ನಾವಿಕನಿಲ್ಲದ ದೋಣಿಯಂತಾದ ಕಾಂಗ್ರೆಸ್, ಬಿಜೆಪಿಯಲ್ಲಿ ರೇ
ಬಿಜೆಪಿಗೆ ಸೇರೊದ್ದ ಕುಮಾರ್ ಬಂಗಾರ
2013 ರ ಚುನಾವಣೆಯಲ್ಲಿ 58,541 ಮತ ಪಡೆದ ಮಧು, ಗೆಲುವಿನ ನಗೆ ಬೀರಿದ್ದರು. ಕಾಂಗ್ರೆಸ್ ಅಭ್ಯರ್ಥಿಯಾಗಿದ್ದ ಕುಮಾರ್ ಬಂಗಾರಪ್ಪ 22,176, ಕೆಜೆಪಿ ಅಭ್ಯರ್ಥಿಯಾಗಿದ್ದ ಹರತಾಳು ಹಾಲಪ್ಪರವರು 37,316 ಹಾಗೂ ಬಿಜೆಪಿಯ ನಾಗರಾಜಗೌಡರವರು 5226 ಮತ ಗಳಿಸಿದ್ದರು. ಆದರೆ 2018ರ ಚುನಾವಣೆ ಎದುರಾದಾಗ ಕುಮಾರ್ ಬಂಗಾರಪ್ಪ ಕಾಂಗ್ರೆಸ್ ಬಿಟ್ಟು ಯಡಿಯೂರಪ್ಪರ ಅನುಯಾಯಿಯಾಗಿ ಬಿಜೆಪಿ ಸೇರಿ ಟಿಕೆಟ್ ಪಡೆದರು. ಸೊರಬದಲ್ಲಿ ನೆಲೆ-ಬೆಲೆಯಿಲ್ಲದ ಜೆಡಿಎಸ್ ಅಭ್ಯರ್ಥಿಯಾಗಿದ್ದ ಮಧು ವೈಯಕ್ತಿಕ ಸಾಮರ್ಥ್ಯದಿಂದ ಸೆಣಸಾಡಬೇಕಿತ್ತು. ಲಿಂಗಾಯತ ಪ್ರಜ್ಞೆಯ ತಂತ್ರಗಾರಿಕೆಯಿಂದ ಹಿಂದುಳಿದ ವರ್ಗದ ಮತ ಬ್ಯಾಂಕ್ ವಿಭಜನೆಯಾಗಿದ್ದರಿಂದ ನೇರಾನೇರ ಕಾಳಗದಲ್ಲಿ ಬಿಜೆಪಿಯ ಕುಮಾರ್ ಬಂಗಾರಪ್ಪ 13,286 ಮತಗಳ ಅಂತರದಿಂದ ಆಯ್ಕೆಯಾದರೆಂಬ ಮಾತು ಈ ಕ್ಷೇತ್ರದ ಜನರದ್ದು
ಟಿಕೆಟ್ ಆಕಾಂಕ್ಷಿಗಳು
ಸೊರಬ ದೀವರ ಮತ್ತು ಲಿಂಗಾಯತರ ಜಿದ್ದಾಜಿದ್ದಿನ ಆಖಾಡ. ಹೀಗಿದ್ದರೂ ತಮ್ಮದೇ ಆದ ತಂತ್ರಗಾರಿಕೆಯಿಂದ ಗೆದ್ದು ಬೀಗುತ್ತಿದ್ದ ಮಾಜಿ ಸಿಎಂ ಎಸ್. ಬಂಗಾರಪ್ಪ ಹಾಗೂ ಅವರ ಪುತ್ರರ ಪ್ರಭಾವ ಇಲ್ಲಿ ಹೆಚ್ಚಿನ ಪ್ರಮಾಣದಲ್ಲಿರುವುದರಿಂದ ಸೊರಬ ಕ್ಷೇತ್ರ ಇಂದಿಗೂ ಬಂಗಾರಪ್ಪರ ಪರಿವಾರದ ಹಿಡಿತದಲ್ಲೇ ಇ
ಬಿಜೆಪಿ ಟಿಕೆಟ್ ಆಕಾಂಕ್ಷಿ
* ಕುಮಾರ್ ಬಂಗಾರಪ್ಪ: ಬಿಜೆಪಿ ನಾಯಕ ಹಾಲಿ ಶಾಸಕ ಕುಮಾರ್ ಬಂಗಾರಪ್ಪ ಕಮಲ ಪಾಳಯದ ಪ್ರಬಲ ಟಿಕೆಟ್ ಆಕಾಂಕ್ಷಿ. ಕಾಂಗ್ರೆಸ್ ಪಕ್ಷದಿಂದ ಸತತ ಮೂರು ಬಾರಿ ಕಣಕ್ಕಿಳಿದಿದ್ದ ಕುಮಾರ್, ಬದಲಾದ ರಾಜಕಾರಣದಲ್ಲಿ ಬಿಜೆಪಿಗೆ ಸೇರ್ಪಡೆಗೊಂಡಿದ್ದರು. ಇವರು ಜನರಿಗೆ ಹೆಚ್ಚು ಲಭ್ಯವಿರುವುದಿಲ್ಲ ಎಂಬ ಅಸಮಾಧಾನವಿದೆ. ಹೀಗಿದ್ದರೂ ಈ ಬಾರಿಯ ಚುನಾವಣೆಯಲ್ಲಿ ಅವರಿಗೆ ಟಿಕೆಟ್ ಸಿಗುವ ಸಾಧ್ಯತೆ ಹೆಚ್ಚಿದೆ
. ಗಳುದೆ.ಯಾರು?.ಪ್ಪಸ್!ರು.ರರುರು.ಪ್ಪರು.ಸ:ನ್!ದೆ.ಗಳು.ರಬ.. ಚುನಾವಣೆಯಲ್ಲಿ ಅವರಿಗೆ ಟಿಕೆಟ್ ಸಿಗುವ ಸಾಧ್ಯತೆ ಹೆಚ್ಚಿದೆ.ಕುಮಾರ್ ಬಂಗಾರಪ್ಪ
* ಡಾ.ಜ್ಞಾನೇಶ್: ರೋಟರಿ ಸಂಸ್ಥೆಯ ಸಂಸ್ಥಾಪಕ ಅಧ್ಯಕ್ಷ ಡಾ.ಜ್ಞಾನೇಶ್ ಸಮಾಜಮುಖಿ ಕಾರ್ಯಕ್ರಮಗಳಿಂದ ಗುರುತಿಸಿಕೊಂಡವರು. ಇವರು ಕೂಡಾ ಈ ಬಾರಿಯ ಬಿಜೆಪಿ ಟಿಕೆಟ್ ಆಕಾಂಕ್ಷಿ.
ಕಾಂಗ್ರೆಸ್ ಟಿಕೆಟ್ ಆಕಾಂಕ್ಷಿ
* ಮಧು ಬಂಗಾರಪ್ಪ: ಮಾಜಿ ಶಾಸಕ ಮಧು ಬಂಗಾರಪ್ಪ ಕಾಂಗ್ರೆಸ್ನ ಪ್ರಬಲ ಟಿಕೆಟ್ ಆಕಾಂಕ್ಷಿ. ಇವರು ಈ ಕ್ಷೇತ್ರದ ಟಿಕೆಟ್ ಪಕ್ಕಾ ಮಾಡಿಕೊಂಡೇ ಜೆಡಿಎಸ್ ತೊರೆದಿದ್ದಾರೆನ್ನಲಾಗುತ್ತಿದೆ. ಕಾಂಗ್ರೆಸ್‌ನಲ್ಲಿ ಮಧುಗೆ ಟಿಕೆಟ್ ಪ್ರತಿಸ್ಪರ್ಧಿ
ಗಳೂ ಇಲ್ಲ.ಮಧು ಬಂಗಾರಪ್ಪ
ಈ ಪೈಪೋಟಿ ಮಧ್ಯೆ ಒಂದು ವೇಳೆ ಬಿಜೆಪಿ ಟಿಕೆಟ್ ತಪ್ಪಿದರೆ ಕುಮಾರ್ ಬಂದಾರಪ್ಪ ತನ್ನ ತಮ್ಮ ಮಧುಗೆ ಸೊರಬ ಬಿಟ್ಟುಕೊಟ್ಟು ಕಾಂಗ್ರೆಸ್ ಸೇರಿ ಲೋಕಸಭೆಗೆ ಸ್ಪರ್ಧಿಸುವ ವಿಕಲ್ಪವನ್ನೂ ಇಟ್ಟುಕೊಂಡಿದ್ದಾರೆನ್ನಲಾಗಿದೆ.
ಇದನ್ನೂ ಓದಿ: Karnataka Assembly Elections: ಕುಂದಾಪುರದಲ್ಲಿ ಹಾಲಾಡಿ ಎಂಬ ಅಶ್ವಮೇಧದ ಕುದುರೆಗೆ ತಡೆಯೊಡ್ಡುತ್ತಾ ಕಾಂಗ್ರೆಸ್?
ಜಾತಿ ಲೆಕ್ಕಾಚಾರ: 2018ರ ಚುನಾವಣೆಯನುಸಾರ
ಒಟ್ಟು ಮತದಾರರು 1,84,621
ಈಡಿಗರು 60,000
ಲಿಂಗಾಯತರು 40,000
ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡ 35,000
ಮಡಿವಾಳ 15,000
ಮುಸ್ಲಿಂ 12,000
ಗಂಗಾಮತಸ್ಥ 10,000
ಒಕ್ಕಲಿಗ 8,000
ಬ್ರಾಹ್ಮಣರು 8,000
2018ರಲ್ಲಿ ಫಲಿತಾಂಶವೇನಾಗಿತ್ತು?
2018 ಚುನಾವಣೆಯಲ್ಲಿ ಸೊರಬ ವಿಧಾನಸಭಾ ಕ್ಷೇತ್ರದಲ್ಲಿ ಬಿಜೆಪಿಯಿಂದ ಕುಮಾರ್ ಬಂಗಾರಪ್ಪ ಕಣಕ್ಕಳಿದಿದ್ದರೆ, ಜೆಡಿಎಸ್ನಿಂದ ಅವರ ತಮ್ಮ ಮಧು ಬಂಗಾರಪ್ಪ ಹಾಗೂ ಕಾಂಗ್ರೆಸ್‍ನಿಂದ ರಾಜು. ಎಂ. ತಲ್ಲೂರು ಸ್ಪರ್ಧೆಯೊಡ್ಡಿದ್ದರು. ಈ ಚುನಾವಣೆಯಲ್ಲಿ ಕಮಲ ಪಾಳಯದ ಅಭ್ಯರ್ಥಿಯಾಗಿದ್ದ ಕುಮಾರ್ ಬಂಗಾರಪ್ಪ 72,091 ಮತಗಳಿಂದ ಗೆಲುವಿನ ನಗೆ ಬೀರಿದ್ದರು. ಕಳೆದ ಚುನಾವಣೆಯ ಫಲಿತಾಂಶ ಹೀಗಿದೆ.
ಪಕ್ಷ ಅಭ್ಯರ್ಥಿ ಹೆಸರು ಮತಗಳು
ಬಿಜೆಪಿ ಕುಮಾರ್ ಬಂಗಾರಪ್ಪ 72,091
ಜೆಡಿಎಸ್ ಮಧು ಬಂಗಾರಪ್ಪ 58,805
ಕಾಂಗ್ರೆಸ್ ರಾಜು. ಎಂ. ತಲ್ಲೂರು 21,721



Post a Comment