Humanity: ಮರಿಯಾನೆಯ ರಕ್ಷಿಸಲು ರಾಜಕೀಯ ಮರೆತು, ಮಾನವೀಯತೆ ಮೆರೆದ ರಾಹುಲ್ ಗಾಂಧಿ, ಸಿಎಂ ಬೊಮ್ಮಾಯಿ!


 ರಾಹುಲ್ ಗಾಂಧಿ ಹಾಗೂ ಬಸವರಾಜ ಬೊಮ್ಮಾಯಿ

 ರಾಹುಲ್ ಗಾಂಧಿ ಹಾಗೂ ಸಿಎಂ ಬಸವರಾಜ್ ಬೊಮ್ಮಾಯಿ ತನ್ನ ರಾಜಕೀಯ ಹಿತಾಸಕ್ತಿಯನ್ನು ಬದಿಗಿರಿಸಿ ಮರಿಯಾನೆಯೊಂದರ ರಕ್ಷಣೆಗೆ ಮುಂದಾಗಿದ್ದಾರೆ. ಒಂದೊಳ್ಳೆ ಕಾರಣಕ್ಕಾಗಿ ರಾಜಕೀಯವಾಗಿ ಬದ್ಧ ವೈರಿಗಳಂತಿರುವ ನಾಯಕರು ಮಾನವೀಯತೆಗಾಗಿ ಕೈ ಮಿಲಾಯಿಸಿದ್ದಾರೆ

 ಬೆಂಗಳೂರು(ಅ.07): ಭಾರತ್ ಜೋಡೋ (BHarat Jodo) ಯಾತ್ರೆ ಅಭಿಯಾನದಡಿ ಕಾಂಗ್ರೆಸ್ ಮಾಜಿ ಅಧ್ಯಕ್ಷ ರಾಹುಲ್ ಗಾಂಧಿ ಪ್ರಸ್ತುತ ಪಾದಯಾತ್ರೆ ನಡೆಸುತ್ತಿದ್ದಾರೆ. ಈ 150 ದಿನಗಳ ಸುದೀರ್ಘ ಕಾಂಗ್ರೆಸ್ ಅಭಿಯಾನವು ಕನ್ಯಾಕುಮಾರಿಯಿಂದ ಕಾಶ್ಮೀರದವರೆಗೆ 12 ರಾಜ್ಯಗಳ ಮೂಲಕ ಹಾದುಹೋಗುತ್ತದೆ. ಸದ್ಯ ಭಾರತ ಜೋಡೋ ಯಾತ್ರೆಯಡಿ ತಮಿಳುನಾಡು ಮತ್ತು ಕೇರಳ ಮೂಲಕ ರಾಹುಲ್ ಗಾಂಧಿ ಕರ್ನಾಟಕ ತಲುಪಿದ್ದಾರೆ. ಈ ಮಧ್ಯೆ ರಾಹುಲ್ ಗಾಂಧಿ ಹಾಗೂ ಸಿಎಂ ಬಸವರಾಜ್ ಬೊಮ್ಮಾಯಿ ತನ್ನ ರಾಜಕೀಯ ಹಿತಾಸಕ್ತಿಯನ್ನು ಬದಿಗಿರಿಸಿ ಮರಿಯಾನೆಯೊಂದರ ರಕ್ಷಣೆಗೆ ಮುಂದಾಗಿದ್ದಾರೆ. ಒಂದೊಳ್ಳೆ ಕಾರಣಕ್ಕಾಗಿ ರಾಜಕೀಯವಾಗಿ ಬದ್ಧ ವೈರಿಗಳಂತಿರುವ ನಾಯಕರು ಮಾನವೀಯತೆಗಾಗಿ ಕೈ ಮಿಲಾಯಿಸಿದ್ದಾರೆ

ಇದನ್ನೂ ಓದಿ: Mysore Dasara: ಭರ್ಜರಿಯಾಗಿ ರೆಡಿಯಾಗ್ತಿದೆ ಅಭಿಮನ್ಯು ಆ್ಯಂಡ್ ಟೀಂ, ಇಲ್ಲಿದೆ ಗಜಪಡೆ ಊಟದ ಮೆ

ಆನೆಮರಿಗೆ ಗಂಭೀರ ಗಾ

ಹೌದು ಸಿಎಂ ಬಸವರಾಜ ಬೊಮ್ಮಾಯಿಗೆ ಅಕ್ಟೋಬರ್ 5ರಂದು ಪತ್ರ ಬರೆದಿರುವ ಕಾಂಗ್ರೆಸ್ ಮಾಜಿ ಅಧ್ಯಕ್ಷ ರಾಹುಲ್ ಗಾಂಧಿ 'ನಾನು ಹಾಗೂ ಕಾಂಗ್ರೆಸ್ ಅಧ್ಯಕ್ಷ ನಾಗರಹೊಳೆ ಹುಲಿ ರಕ್ಷಿತಾರಣ್ಯಕ್ಕೆ ಭೇಟಿ ನೀಡಿದ್ದೆವು. ಈ ವೇಳೆ ತನ್ನ ತಾಯಿ ಜೊತೆಗಿದ್ದ ಮರಿಯಾನೆಯೊಂದು ನೋವಿನಿಂದ ನರಳುತ್ತಿರುವ ದೃಶ್ಯ ನಮಗೆ ಕಾಣಿಸಿತು. ಪುಟ್ಟ ಆನೆಯ ಬಾಲ ಹಾಗೂ ಸೊಂಡಿಲಿಗೆ ಗಂಭೀರ ಗಾಯಗಳಾಗಿದ್ದು, ಅದು ತನ್ನ ಜೀವ ಉಳಿಸಲು ಯತ್ನಿಸುತ್ತಿತ್ತು ಎಂದಿದ್ದಾ

ಆನೆಗೆ ಚಿಕಿತ್ಸೆಯ ಅಗತ್ಯ

ಅಲ್ಲದೇ ಪತ್ರದಲ್ಲಿ ಮತ್ತಷ್ಟು ವಿವರ ನೀಡಿರುವ ರಾಹುಲ್ ಗಾಂಧಿ ಪ್ರಕೃತಿ ತನ್ನದೇ ಆದ ಪರಿಹಾರ ಹೊಂದಿದೆ ಎಂಬ ವಿಚಾರ ನನಗೂ ಅರ್ಥವಾಗುತ್ತದೆ ಹಾಗೂ ನಾನದನ್ನು ಗೌರವಿಸುತ್ತೇನೆ. ಆದರೆ ಹಾನಿಯುಂಟು ಮಾಡದಿರುವ ಹಾಗೂ ಸಾಂಪ್ರದಾಯಿಕ ಪ್ರಾಣಿಗಳ ವಿಚಾರ ಬಂದಾಗ ಅವುಗಳಿಗಾದ ಗಾಯಗಳ ಗಂಭೀರತೆಯನ್ನರಿತು, ಈ ಪ್ರಕೃತಿ ನಿಯಮವನ್ನು ಬದಿಗಿರಿಸುವುದು ಸೂಕ್ತ. ಹೀಗಾಗಿ ನಾನು ಈಗಾಗಲೇ ತಿಳಿಸಿರುವ ಮರಿಯಾನೆಗೆ ತುರ್ತು ವೈದ್ಯಕೀಯ ಆರೈಕೆಯ ಅಗತ್ಯವಿದೆ ಎಂಬುವುದರಲ್ಲಿ ಅನುಮಾನವಿಲ್ಲ ಎಂದಿದ್ದಾ

ರಾಜಕೀಯ ಮರೆತು ಮರಿಯಾನೆ ರಕ್ಷಿ

ಈ ನಿಟ್ಟಿನಲ್ಲಿ ರಾಜಕೀಯ ಅಡೆತಡೆಗಳನ್ನು ದಾಟಿ, ಮರಿಯಾನೆಯ ಪ್ರಾಣ ಉಳಿಸಲು ನೀವು ಸಹಾನುಭೂತಿಯ ನಡೆ ಅನುಸರಿಸಬೇಕೆಂದು ಮನವಿ ಮಾಡುತ್ತೇನೆ. ಸೂಕ್ತ ಚಿಕಿತ್ಸೆ ಒದಗಿಸಿದರೆ ಆ ಮರಿಯಾನೆ ಬದುಕುಳಿಯುತ್ತದೆ ಎಂಬ ನಂಬಿಕೆ ನನಗಿದೆ. ಈ ಆನೆ ಮರಿಯನ್ನು ಬದುಕುಳಿಸಲು ಸಮಯೋಚಿತ ನಿರ್ಧಾರ ಕೈಗೊಳ್ಳುತ್ತೀರೆಂದು ಭಾವಿಸುತ್ತೇನೆ ಎಂದಿದ್ದಾರೆ. ಅಲ್ಲದೇ ಈ ಪತ್ರದೊಂದಿಗೆ ಗಾಯಗೊಂಡ ಆನೆಮರಿಯ ಫೋಟೋಗಳನ್ನೂ Anniversar

ಇದನ್ನೂ ಓದಿ:  Mysuru Dasara 2022: ದಸರಾ ಗಜಪಡೆಗೆ 5 ಹೊಸ ಆನೆ; ಜಂಬೂ ಪಡೆಗೆ ಭರ್ಜರಿ ತಾಲೀ

ರಾಹುಲ್ ಮನವಿಗೆ ಸ್ಪಂದಿಸಿದ ಬೊಮ್ಮಾ

ಇನ್ನು ಕಾಂಗ್ರೆಸ್ ನಾಯಕನ ಈ ಮನವಿಗೆ ಸ್ಪಂದಿಸಿರುವ ಮುಖ್ಯಮಂತ್ರಿ ಬಸವರಾಜ್ ಬೊಮ್ಮಾಯಿ ಮರಿಯಾನೆಯ ಉಳಿಸಲು ರಾಹುಲ್ ಗಾಂಧಿ ತೋರಿಸಿದ ಕಾಳಜಿಗೆ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಅಲ್ಲದೇ ಈ ಬಗ್ಗೆ ಅಧಿಕಾರಿಗಳ ಬಳಿಯೂ ವಿಚಾರಿಸಿದ್ದೇನೆ. ಈ ಆನೆಮರಿ ಕಾಡು ಪ್ರಾಣಿಗಳ ದಾಳಿಗೀಡಾಗಿರುವ ಸಾಧ್ಯತೆ ಇದ್ದು, ಪ್ರಸ್ತುತ ಅದು ತಾಯಾನೆಯ ಎದೆಹಾಲನ್ನೇ ಅವಲಂಭಿಸಿದೆ. ಇಂತಹ ಪರಿಸ್ಥಿತಿಯಲ್ಲಿ ಸಂಬಂಧಪಟ್ಟ ಅಧಿಕಾರಿಗಳು ತಾಯಿ ಹಾಗೂ ಮರಿ ಆನೆಯ ಮೇಲೆ ನಿಗಾ ಇರಿಸಿದ್ದಾರೆ ಎಂದಿದ್ದಾ

ನಿಗಾ ಇರಿಸಿದ್ದೇ

ಇನ್ನು ಚಿಕಿತ್ಸೆ ಬಗ್ಗೆಯೂ ಉಲ್ಲೇಖಿಸಿದ ಸಿಎಂ ಬೊಮ್ಮಾಯಿ ತಜ್ಞರ ಅನ್ವಯ ಈಗಿನ ಸ್ಥಿತಿಯಲ್ಲಿ ಚಿಕಿತ್ಸೆ ನೀಡಲು ಈ ಮರಿಯಾನೆಯನ್ನು ಅದರ ತಾಯಿಯಿಂದ ದೂರ ಮಾಡುವುದರಿಂದ ಸಮಸ್ಯೆ ಬಗೆಹರಿಯುವ ಬದಲು ಮತ್ತಷ್ಟು ಗಂಭೀರವಾಗಬಹುದು ಎಂದಿದ್ದಾರೆ. ಹೀಗಾಗಿ ಈ ಆನೆಮರಿಗೆ ಬೇಕಾದ ಅಗತ್ಯ ವೈದ್ಯಕೀಯ ಚಿಕಿತ್ಸೆಯನ್ನು ಅದು ಇದ್ದಲ್ಲೇ ಒದಗಿಸಲು ಮತ್ತು ಅದರ ಆರೋಗ್ಯದ ಬಗ್ಗೆ ತೀವ್ರ ನಿಗಾ ಇಡಲು ಸೂಚಿಸಿದ್ದೇನೆ ಎಂದಿದ್ದಾ

ರಾಗಾ ಕಾಳಜಿಗೆ ಮೆ

ಇದೇ ವೇಳೆ ತಮ್ಮ ಸರ್ಕಾರ ಈ ಮರಿಯಾನೆಯ ಪ್ರಾಣ ಉಳಿಸಲು ಸಾಧ್ಯವಾದ ಎಲ್ಲಾ ಕ್ರಮಗಳನ್ನು ಕೈಗೊಳ್ಳುತ್ತದೆ ಎಂದ ಸಿಎಂ ಬೊಮ್ಮಾಯಿ, ರಾಗಾಗೆ ಗಾಯಗೊಂಡ ಮರಿಯಾನೆ ಮೇಲಿದ್ದ ಕಾಳಜಿಗೆ ಭೇಷ್ ಎಂದಿದ್ದಾ


ರೆ ಚ್ಚುಗೆರೆ.ವೆರೆ.ಯಿಮುರೆ.ಸಿರೆ.ವಿದೆರೆ.ಯನು.. ಮರಿಯಾನೆ ಮೇಲಿದ್ದ ಕಾಳಜಿಗೆ ಭೇಷ್ಸಿಎಂ ಬೊಮ್ಮಾಯಿಗೆ ರಾಹುಲ್ ಗಾಂಧಿ ಬರೆದ ಪತ್ರ

ಸದ್ಯ ರಾಹುಲ್ ಗಾಂಧಿಯ ಮನವಿ ಹಾಗೂ ಸಿಎಂ ಬೊಮ್ಮಾಯಿ ಕೊಟ್ಟಿರುವ ಪ್ರತಿಕ್ರಿಯೆರ ಈ ಎರಡೂ ಪತ್ರಗಳು ಭಾರೀ ವೈರಲ್ ಆಗುತ್ತಿವೆ. ಮರಿಯಾನೆಯ ಜೀವ ಉಳಿಸಲು ಇಬ್ಬರು ನಾಯಕರು ತಮ್ಮ ರಾಜಕೀಯ ಗಡಿಯನ್ನು ದಾಟಿ ಸ್ಪಂದಿಸಿದ ರೀತಿಗೆ ಎಲ್ಲೆಡೆ ಮೆಚ್ಚುಗೆ ವ್ಯಕ್ತವಾಗುತ್ತಿ


ದೆ. ಎಂದಿದ್ದಾರೆ

Post a Comment

Previous Post Next Post