Hubballi News: ತಿರುಪತಿ ತಿಮ್ಮಪ್ಪನ ದರ್ಶನ ಇನ್ನಷ್ಟು ಸುಲಭ! ಸಾರ್ವಜನಿಕರ ಕಾಯುವಿಕೆ ಕೊನೆಗೊಂಡಂತಾಗಿದ್ದು, ನೇರವಾಗಿ ತಿರುಪತಿ ತಿಮ್ಮಪ್ಪನ ದರ್ಶನಕ್ಕೆ ತೆರಳುವ ಅವಕಾಶ ಒದಗಿ ಬಂದಿದೆ.


  ಹುಬ್ಬಳ್ಳಿ: ಕೋವಿಡ್ 19ರಿಂದಾಗಿ ಕಳೆದ ಎರಡೂವರೆ ವರ್ಷಗಳ ಕಾಲ ರದ್ದಾಗಿದ್ದ ಹುಬ್ಬಳ್ಳಿ - ತಿರುಪತಿ - ಹುಬ್ಬಳ್ಳಿ ವಿಶೇಷ ಪ್ಯಾಸೆಂಜರ್ ರೈಲು (Hubballi Tirupati Special Passenger Trains) ಮತ್ತೆ ಪುನರಾರಂಭಗೊಳ್ಳಲಿದೆ. ಇದ್ರಿಂದಾಗಿ ತಿರುಪತಿ ತಿಮ್ಮಪ್ಪನ ದರ್ಶನಕ್ಕೆ ಮತ್ತೊಮ್ಮೆ ನೇರ ಪಯಣವನ್ನು ಬೆಳೆಸಬಹುದಾಗಿದೆ. ಅಕ್ಟೋಬರ್ 17 ರಂದು ವಿಶೇಷ ರೈಲು ಓಡಾಟ ಪುನರಾರಂಭವಾಗಲಿದೆ. ಹೀಗಾಗಿ ಸಾರ್ವಜನಿಕರ ಕಾಯುವಿಕೆ ಕೊನೆಗೊಂಡಂತಾಗಿದ್ದು, ನೇರವಾಗಿ ತಿರುಪತಿ ತಿಮ್ಮಪ್ಪನ ದರ್ಶನಕ್ಕೆ (Tirupati Darshan) ತೆರಳುವ ಅವಕಾಶ ಒದಗಿ ಬಂದಿದೆ.

ಯಾವ ಸಮಯಕ್ಕೆ ಹೊರಡಲಿ

ಹುಬ್ಬಳ್ಳಿ-ತಿರುಪತಿ- ಹುಬ್ಬಳ್ಳಿ ವಿಶೇಷ ರೈಲು ಆರಂಭದಲ್ಲಿ ಅಕ್ಟೋಬರ್ 17 ರಂದು ತಿರುಪತಿಯಿಂದ ಹುಬ್ಬಳ್ಳಿಗೆ ಆಗಮಿಸಲಿದೆ. ಆ ದಿನ ತಿರುಪತಿಯಿಂದ ಬೆಳಿಗ್ಗೆ 6.10 ಕ್ಕೆ ಹೊರಡುವ ರೈಲು ಅದೇ ದಿನ ರಾತ್ರಿ 9.10 ಕ್ಕೆ ಹುಬ್ಬಳ್ಳಿ ತಲುಪಲಿದೆ

 ಎಲ್ಲೆಲ್ಲ ನಿಲುಗಡೆ ಮತ್ತು ಸಮಯ

ತಿರುಪತಿಯಿಂದ ಹುಬ್ಬಳ್ಳಿಗೆ ಆಗಮಿಸುವ ವೇಳೆ ರೈಲು ರಾಜ್ಯದ ಹಲವೆಡೆ ನಿಲುಗಡೆ ಹೊಂದಿದ್ದು, ಆ ನಿಲ್ದಾಣ ಹಾಗೂ ಸಮಯವು ಹೀಗಿವೆ

ಮುನಿರಾಬಾದ್ ಸಾಯಂಕಾಲ 4.40, ಹಿಟ್ನಾಳ್ ಹಾಲ್ಡ್ ಸಾಯಂಕಾಲ 4.48, ಗಿಣಿಗೇರಾ - ಸಂಜೆ 5 ಕ್ಕೆ, ಕೊಪ್ಪಳ - ಸಂಜೆ 5.20, ಭಾನಾಪುರ ಸಂಜೆ 5.33 ಈ ಸಮಯಕ್ಕೆ ನಿಲುಗಡೆ ಹೊಂದಲಿ

ಇದನ್ನೂ ಓದಿ: Bengaluru To Mysuru: ಬೆಂಗಳೂರು-ಮೈಸೂರು ಹೆದ್ದಾರಿ ಜಲಾವೃತ; ಬದಲಿ ಮಾರ್ಗ ಇಲ್ಲಿ

ಹುಬ್ಬಳ್ಳಿಯಿಂದ ತಿರುಪ

ಅಕ್ಟೋಬರ್ 17 ರಂದು ತಿರುಪತಿಯಿಂದ ಆಗಮಿಸುವ ರೈಲು, ಮರುದಿನ ಅಕ್ಟೋಬರ್ 18 ರಂದು ಹುಬ್ಬಳ್ಳಿಯಿಂದ ಬೆಳಿಗ್ಗೆ 6 ಗಂಟೆಗೆ ಹೊರಡಲಿದೆ. ಅದೇ ದಿನ ರಾತ್ರಿ 9.50 ತಿರುಪತಿ ತಲುಪಲಿದೆ

ಇಲ್ಲಿದೆ ನಿಲುಗಡೆ

ಹುಬ್ಬಳ್ಳಿಯಿಂದ ತಿರುಪತಿಗೆ ಹೊರಟಾಗ ರಾಜ್ಯದ ಈ ರೈಲ್ವೇ ನಿಲ್ದಾಣಗಳಲ್ಲಿ ನಿಲುಗಡೆ ಹೊಂದಿರುತ್ತದೆ

ಇದನ್ನೂ ಓದಿ: Hubballi News: ಉತ್ತರ ಕರ್ನಾಟಕ ಜನರಿಗೆ ಖುಷಿಸುದ್ದಿ! ಹೊಸ ರೈಲಿಗೆ ಹಸಿರು ನಿ

ಗದಗ - ಬೆಳಿಗ್ಗೆ 7.03, ಭಾನಾಪುರ ಬೆಳಿಗ್ಗೆ 7.47, ಕೊಪ್ಪಳ - 8.03, ಗಿಣಿಗೇರಾ - 8.14, ಹಿಟ್ನಾಳ್ ಹಾಲ್ಸ್ - 8.24 ಮತ್ತು ಮುನಿರಾಬಾದ್ - ಬೆಳಿಗ್ಗೆ 8.33ಕ್ಕೆ ಈ ಸಮಯಕ್ಕೆ ನಿಲ್ದಾಣಗಳಲ್ಲಿ ನಿಲುಗಡೆಯಾಗಲಿದೆ ಎಂದು ನೈರುತ್ಯ ರೈಲ್ವೆಯ ಪ್ರಕಟಣೆ ತಿಳಿಸಿದೆ . ಶಾನೆ..ತಿಗೆದೆದೆ..?.ದೆ?ಲ್ವೆಯ ಪ್ರಕಟಣೆ ತಿಳಿಸಿದೆ .

Post a Comment

Previous Post Next Post