ಉಕ್ರೇನ್‌ನಿಂದ ವಾಪಾಸ್ ಆದ ವಿದ್ಯಾರ್ಥಿಗಳು
ಯುದ್ಧಪೀಡಿತ ಉಕ್ರೇನ್‌ನಿಂದ ಹಿಂದಿರುಗಿದ ಸರಿಸುಮಾರು 20,000 ಭಾರತೀಯ ವಿದ್ಯಾರ್ಥಿಗಳು ಪೂರ್ವ ಯುರೋಪಿಯನ್ ದೇಶದಲ್ಲಿ ತಮ್ಮ ಶಿಕ್ಷಣವನ್ನು ಹೇಗೆ ಮುಂದುವರಿಸಬಹುದು ಎಂಬುದರ ಕುರಿತು ಈಗ ಅನಿಶ್ಚಿತರಾಗಿದ್ದಾರೆ. ವೈದ್ಯಕೀಯ ಶಿಕ್ಷಣವನ್ನು ಕೊನೆಗೊಳಿಸುವ ನಿರ್ಧಾರದಲ್ಲಿದ್ದಾರೆ ಇಲ್ಲವೇ ದೇಶಗಳಲ್ಲಿನ ಇತರ ಶಿಕ್ಷಣ ಸಂಸ್ಥೆಗಳಲ್ಲಿ ವರ್ಗಾವಣೆಯನ್ನು ಬಯಸುತ್ತಿದ್ದಾರೆ
17 ರ ಹರೆಯದ ಯುವಕ ಪ್ರಲಯ್ ಕುಮಾರ್ ನಾಯಕ್ 2020 ರಲ್ಲಿ ಒಡಿಶಾದ ಜೈಪುರದ (Jaipur) ಸಣ್ಣ ಪಟ್ಟಣದಿಂದ 5,400 ಕಿ.ಮೀ. ದೂರದ ಉಕ್ರೇನ್‌ಗೆ ಪ್ರಯಾಣಿಸುವಾಗ ಹಲವಾರು ಆಸೆ ಆಕಾಂಕ್ಷೆಗಳನ್ನು ಕಣ್ಣಲ್ಲಿ ತುಂಬಿಕೊಂಡಿದ್ದರು. ವೈದ್ಯಕ್ಷೀಯ ಶಿಕ್ಷಣ (Medical Education) ಪೂರ್ತಿಗೊಳಿಸಿ ವೈದ್ಯರಾಗಿ ತವರಿಗೆ ಮರಳುವ ಹಂಬಲವನ್ನು ಪ್ರಲಯ್ ಹೊಂದಿದ್ದರು. ಬಾಲ್ಯದಿಂದಲೇ ವೈದ್ಯನಾಗಬೇಕೆಂಬ ಇಚ್ಛೆ ಪ್ರಲಯ್‌ದಾಗಿತ್ತು. ಎರಡು ವರ್ಷಗಳ ನಂತರ, ಅವರು ತಮ್ಮ ಮೂರನೇ ವರ್ಷದ ವೈದ್ಯಕೀಯ ಅಧ್ಯಯನವನ್ನು ಪ್ರಾರಂಭಿಸುವ ಮೊದಲೇ ರಷ್ಯಾ ಉಕ್ರೇನ್ ಯುದ್ಧ (Russia Ukraine War) ಅವರ ಕನಸಿಗೆ ತಣ್ಣೀರೆರಚಿದೆ. ಈಗ ಬೇರೆ ವೈದ್ಯಕೀಯ ಶಿಕ್ಷಣವನ್ನು ಹೇಗೆ ಪೂರ್ಣಗೊಳಿಸುವುದು, ಬೇರೆ ವೃತ್ತಿಯನ್ನು ಅರಸುವುದೇ ಎಂಬ ತೊಳಲಾಟದಲ್ಲಿ ಪ್ರಲಯ್ ಸಿಲುಕಿಕೊಂಡಿದ್ದಾರೆ
ಯುದ್ಧಪೀಡಿತ ಉಕ್ರೇನ್‌ನಿಂದ ಹಿಂದಿರುಗಿದ ಭಾರತೀಯ ವಿದ್ಯಾರ್ಥಿ
ಪ್ರಲಯ್ , ಫೆಬ್ರವರಿ ಮತ್ತು ಮಾರ್ಚ್‌ನಲ್ಲಿ ಯುದ್ಧಪೀಡಿತ ಉಕ್ರೇನ್‌ನಿಂದ ಹಿಂದಿರುಗಿದ ಸರಿಸುಮಾರು 20,000 ಭಾರತೀಯ ವಿದ್ಯಾರ್ಥಿಗಳು ಪೂರ್ವ ಯುರೋಪಿಯನ್ ದೇಶದಲ್ಲಿ ತಮ್ಮ ಶಿಕ್ಷಣವನ್ನು ಹೇಗೆ ಮುಂದುವರಿಸಬಹುದು ಎಂಬುದರ ಕುರಿತು ಈಗ ಅನಿಶ್ಚಿತರಾಗಿದ್ದಾರೆ
ವೈದ್ಯಕೀಯ ಶಿಕ್ಷಣವನ್ನು ಕೊನೆಗೊಳಿಸುವ ನಿರ್ಧಾರದಲ್ಲಿದ್ದಾರೆ ಇಲ್ಲವೇ ದೇಶಗಳಲ್ಲಿನ ಇತರ ಶಿಕ್ಷಣ ಸಂಸ್ಥೆಗಳಲ್ಲಿ ವರ್ಗಾವಣೆಯನ್ನು ಬಯಸುತ್ತಿದ್ದಾರೆ. ತಮ್ಮ ಊರಿನಲ್ಲಿಯೇ ಇರುವ ಇತರ ವೈದ್ಯಕೀಯ ಶಾಲೆಗಳಲ್ಲಿ ದಾಖಲಾತಿಗೆ ಭಾರತದ ಸರಕಾರದ ನೆರವು ದೊರಕುವುದೇ ಎಂದು ಕಾತರದಿಂದ ಕಾಯುತ್ತಿದ್ದಾರೆ
ವಿದ್ಯಾರ್ಥಿಗಳ ಆತಂಕ ಹಾಗೂ ಗೊಂದಲ ಇನ್ನಷ್ಟು ಹೆಚ್ಚಿ
ಅಕ್ಟೋಬರ್ 10 ರಿಂದ ಉಕ್ರೇನ್‌ನಾದ್ಯಂತ ರಷ್ಯಾ ತನ್ನ ವೈಮಾನಿಕ ದಾಳಿಯನ್ನು ನಡೆಸಿದ ನಂತರ ಇದೀಗ ಭಾರತೀಯ ವಿದ್ಯಾರ್ಥಿಗಳ ಆತಂಕ ಹಾಗೂ ಗೊಂದಲ ಇನ್ನಷ್ಟು ಹೆಚ್ಚಿದೆ. ಫೆಬ್ರವರಿಯಲ್ಲಿ ರಷ್ಯಾ ಉಕ್ರೇನ್ ಮೇಲೆ ಶೆಲ್ ದಾಳಿ ಆರಂಭಿಸಿದಾಗ, ಪ್ರಲಯ್ ನಾಯಕ್ ಪೂರ್ವದ ಖಾರ್ಕಿವ್ ನಗರದಲ್ಲಿ ಹದಿನೈದು ದಿನಗಳ ಕಾಲ ಸಿಕ್ಕಿಬಿದ್ದಿದ್ದರು. ಮಾರ್ಚ್‌ನಲ್ಲಿ, ಅವರನ್ನು ನೆರೆಯ ರೊಮೇನಿಯಾ ಮೂಲಕ ಊರಿಗೆ ಸ್ಥಳಾಂತರಿಸಲಾಯಿತು
ಯುದ್ಧವು ಶೀಘ್ರದಲ್ಲೇ ಕೊನೆಗೊಳ್ಳುತ್ತದೆ ಮತ್ತು ಅವರ ವಿಶ್ವವಿದ್ಯಾಲಯವು ತರಗತಿಗಳನ್ನು ಪುನರಾರಂಭಿಸುತ್ತದೆ ಎಂದೇ ಅವರು ಆಶಿಸಿದ್ದರು. ಆದರೆ ವಾರಗಳು ತಿಂಗಳುಗಳವರೆಗೆ ಯಾವುದೇ ನಿರ್ಣಯವಿಲ್ಲದ್ದರಿಂದ, ಪ್ರಲಯ್ ಭಾರತೀಯ ವೈದ್ಯಕೀಯ ಕಾಲೇಜಿಗೆ ವರ್ಗಾವಣೆಯನ್ನು ಹುಡುಕಲು ಪ್ರಾರಂಭಿಸಿದರು. ಸೆಪ್ಟೆಂಬರ್‌ನಲ್ಲಿ, ಭಾರತದ ರಾಷ್ಟ್ರೀಯ ವೈದ್ಯಕೀಯ ಆಯೋಗವು ಉಕ್ರೇನ್‌ನ ವಿಶ್ವವಿದ್ಯಾನಿಲಯಗಳ ಭಾರತೀಯ ವೈದ್ಯಕೀಯ ವಿದ್ಯಾರ್ಥಿಗಳಿಗೆ ಭಾರತೀಯ ಕಾಲೇಜುಗಳಲ್ಲಿ ಅವಕಾಶ ಕಲ್ಪಿಸುವ ಯೋಜನೆಯಿಲ್ಲ ಎಂದು ಸ್ಪಷ್ಟಪಡಿಸಿತು, ಇದರೊಂದಿಗೆ ನಾಯಕ್ ಅವರ ವೈದ್ಯನಾಗುವ ಕನಸು ಕಮರಿಹೋಯಿ
ಇದನ್ನೂ ಓದಿ: Invention Story: ಈ ಮಗ ಅಮ್ಮನಿಗೋಸ್ಕರ ರೋಬೋಟ್ ಮಾಡಿದ್ದಾನೆ, ನೀವ್ ಏನ್ ಮಾಡಿದ್ದೀ
ಭಾರತೀಯ ಕಾಲೇಜುಗಳಿಗೆ ವರ್ಗಾಯಿಸಲು ಯಾವುದೇ ಆಡಳಿತಾತ್ಮಕ ಅವಕಾಶವಿಲ್ಲ ಎಂದು ಪುನರುಚ್ಛರಿಸಿತು
ಈ ಸಮಯದಲ್ಲಿ ನಾಯಕ್ ಅವರನ್ನು ವೈದ್ಯಕೀಯ ಶಿಕ್ಷಣ ಮುಂದುವರಿಸಲು ಬೇರೆ ದೇಶಕ್ಕೆ ಕಳುಹಿಸಲು ಅವರ ಪೋಷಕರು ಹಿಂದೇಟು ಹಾಕಿದ್ದರು. ಸಪ್ಟೆಂಬರ್‌ನಲ್ಲಿ ನಾಯಕ್ ತಮ್ಮ ಕನಸಾಗಿದ್ದ ವೈದ್ಯಕ್ಷೀಯ ಶಿಕ್ಷಣವನ್ನೇ ಕೊನೆಗೊಳಿಸುವ ನಿರ್ಧಾರಕ್ಕೆ ಬಂದರು, ಇದೀಗ ನಾಯಕ್ ತಮ್ಮ ಹೊಸ ಪದವಿಯನ್ನು ಪುನಃ ಆರಂಭದಿಂದಲೇ ಪ್ರಾರಂಭಿಸಬೇಕು ಎಂದು ಅಳಲು ತೋಡಿಕೊಂಡಿದ್ದಾ
ವಿದ್ಯಾರ್ಥಿಗಳು ಸೀಮಿತ ಆಯ್ಕೆ ಹೊಂದಿದ್ದ
ಉಕ್ರೇನ್‌ನಲ್ಲಿ ಓದುತ್ತಿರುವ ಭಾರತೀಯ ವಿದ್ಯಾರ್ಥಿಗಳು ಸೀಮಿತ ಆಯ್ಕೆಗಳನ್ನು ಹೊಂದಿದ್ದಾರೆ. ಮೊದಲಿಗೆ, ಅವರು ಮತ್ತೊಂದು ದೇಶದ ವಿಶ್ವವಿದ್ಯಾಲಯಕ್ಕೆ ಶಾಶ್ವತ ವರ್ಗಾವಣೆಯನ್ನು ತೆಗೆದುಕೊಳ್ಳಬಹುದು. ಅದಕ್ಕಾಗಿ, ಅವರು ಉಕ್ರೇನ್‌ನಲ್ಲಿರುವ ತಮ್ಮ ಹೋಮ್ ಯೂನಿವರ್ಸಿಟಿಯಿಂದ ವರ್ಗಾವಣೆ ಪ್ರತಿಗಳು ಮತ್ತು ಅಂಕ ಪಟ್ಟಿಗಳನ್ನು ಪಡೆದುಕೊಂಡಿರಬೇಕು. ಆದರೆ ಹಲವಾರು ವಿದ್ಯಾರ್ಥಿಗಳು ಉಕ್ರೇನ್‌ನಲ್ಲಿ ಯುದ್ಧ ಪರಿಸ್ಥಿತಿಗಳಿಂದಾಗಿ ತಮ್ಮ ವಿಶ್ವವಿದ್ಯಾಲಯಗಳಿಂದ ಇವುಗಳನ್ನು ಪಡೆಯಲು ಸಾಧ್ಯವಾಗಲಿಲ್ಲ ಎಂದು ಹೇಳಿಕೊಂಡಿದ್ದಾ
"ಮೊಬಿಲಿಟಿ ಪ್ರೋಗ್ರಾಂ" ಅಡಿಯಲ್ಲಿ ಮತ್ತೊಂದು ದೇಶಕ್ಕೆ ತಾತ್ಕಾಲಿಕ ವರ್ಗಾವಣೆಯನ್ನು ಪಡೆಯುವುದು ಎರಡನೆಯ ಆಯ್ಕೆಯಾಗಿದೆ. ಉಕ್ರೇನ್‌ನಲ್ಲಿನ ಯುದ್ಧವು ಕೊನೆಗೊಳ್ಳುವವರೆಗೆ ಆರು ತಿಂಗಳು ಅಥವಾ ಒಂದು ವರ್ಷದವರೆಗೆ ವಿದ್ಯಾರ್ಥಿಗಳು ತಮ್ಮ ಅಧ್ಯಯನವನ್ನು ಮತ್ತೊಂದು ವಿಶ್ವವಿದ್ಯಾಲಯದಲ್ಲಿ ಮುಂದುವರಿಸಲು ಇದು ಅನುವು ಮಾಡಿಕೊಡುತ್ತದೆ. ಅಂತಿಮ ಪದವಿಯನ್ನು ಉಕ್ರೇನ್‌ನಲ್ಲಿರುವ ಪೋಷಕ ವಿಶ್ವವಿದ್ಯಾಲಯವು ನೀಡುತ್ತ
ಇದನ್ನೂ ಓದಿ: Explained: ಮಕ್ಕಳಿಗೆ ಪಾಠದೊಂದಿಗೆ ಆಟವೂ ಇರಬೇಕಾ? ಆರು ವರ್ಷದೊಳಗಿನ ಮಕ್ಕಳ ಶಿಕ್ಷಣ ಹೇಗಿರಬೇ
ಈ ಬಗ್ಗೆ ಮಾಹಿತಿ ನೀಡಿದ ವಿದ್ಯಾರ್ಥಿ ಪ್ರತೀಕ್ ಧಾಲ್, ರಾಷ್ಟ್ರೀಯ ವೈದ್ಯಕೀಯ ಆಯೋಗವು 29 ದೇಶಗಳ ಪಟ್ಟಿಯನ್ನು ಪ್ರಕಟಿಸಿದ್ದು ಮೊಬಿಲಿಟಿ ಪ್ರೊಗ್ರಾಂ ಅಡಿಯಲ್ಲಿ ವರ್ಗಾವಣೆಯನ್ನು ಪಡೆಯಬಹುದು ಆದರೆ ಈ ವರ್ಗಾವಣೆಗಳಿಗೆ ಸಂಬಂಧಿಸಿದಂತೆ ಸರಕಾರ ಯಾವುದೇ ನೆರವನ್ನು ನೀಡುವುದಿಲ್ಲ ಹಾಗೂ ವಿದ್ಯಾರ್ಥಿಗಳೇ ಪ್ರತಿಯೊಂದು ವೆಚ್ಚವನ್ನು ಭರಿಸಬೇಕು ಎಂದು ತಿಳಿಸಿದ್ದಾರೆ ಕು?ದೆ.ರೆ.ರುರೆ..ರಾ?ತು..ದೆ..ಗಳು..ವನ್ನು ಭರಿಸಬೇಕು ಎಂದು ತಿಳಿಸಿದ್ದಾರೆ
.webp)
Post a Comment