Crime News: ಗಂಡನ ಕೊಲೆ ಮಾಡಿಸಿದ್ದ ಹೆಂಡತಿಗಿದ್ದರು ಬಾಯ್‌ ಫ್ರೆಂಡ್ಸ್! ಪತಿ ಮರ್ಮಾಂಗ ಕತ್ತರಿಸಿದವಳ ಹಿಸ್ಟರಿಯೇ ಭಯಾನಕ!


 ಕೊಲೆ ಆರೋಪಿ ಶ್ವೇತಾ

 ಕೊಲೆಯಾದವನ ಪತ್ನಿ ಅಂದು ಅತ್ತೂ-ಕರೆದು ಸೀನ್ ಕ್ರಿಯೇಟ್ ಮಾಡಿದ್ದಳು. ಈಕೆಯ ಓವರ್ ಆ್ಯಕ್ಟಿಂಗ್ ಕಂಡಿದ್ದ ಪೊಲೀಸರು, ಖಡಕ್ ಭಾಷೆಯಲ್ಲಿ ವಿಚಾರಣೆ ನಡೆಸಿದಾಗ ಈಕೆಯೇ ಕೊಲೆ ಮಾಡಿರೋದು ಬೆಳಕಿಗೆ ಬಂದಿತು. ಇದೀಗ ಆಕೆಯ ಭಯಾನಕ ಹಿಸ್ಟರಿ ಬೆಳಕಿಗೆ ಬಂದಿದೆ

 ಬೆಂಗಳೂರು: ಇದೇ ಅಕ್ಟೋಬರ್ 22ರಂದು ಬೆಂಗಳೂರಿನ (Bengaluru) ಯಲಹಂಕದಲ್ಲಿ (Yalahanka) ವ್ಯಕ್ತಿಯೋರ್ವನ ಕೊಲೆಯಾಗಿತ್ತು. ಆಂಧ್ರ ಪ್ರದೇಶದ (Andhra Pradesh) ಸತ್ಯಸಾಯಿ ಜಿಲ್ಲೆಯ ಚಂದ್ರಶೇಖರ್, ಬೆಂಗಳೂರಿನ ಯಲಹಂಕದ ಬಳಿ ಪತ್ನಿ ಶ್ವೇತಾ ಜೊತೆ ನೆಲೆಸಿದ್ದ. 22ರ ರಾತ್ರಿ ಚಂದ್ರಶೇಖರ್‌ನನ್ನು ಕೊಲೆ (Murder) ಮಾಡಲಾಗಿತ್ತು. ಚಂದ್ರಶೇಖರ್ ತಲೆ ಮತ್ತು ಮರ್ಮಾಂಗಕ್ಕೆ ಇರಿದು ಭೀಕರವಾಗಿ ಹತ್ಯೆಗೈಯ್ಯಲಾಗಿತ್ತು. ಅಂದು ಆತನ ಪತ್ನಿ ಶ್ವೇತಾ ಅತ್ತೂ ಕರೆದು ಸೀನ್ ಕ್ರಿಯೇಟ್ ಮಾಡಿದ್ದಳು. ಈಕೆಯ ಓವರ್ ಆ್ಯಕ್ಟಿಂಗ್ ಕಂಡಿದ್ದ ಪೊಲೀಸರು (Police), ಖಡಕ್ ಭಾಷೆಯಲ್ಲಿ ವಿಚಾರಣೆ ನಡೆಸಿದಾಗ ಈಕೆಯೇ ಕೊಲೆ ಮಾಡಿರೋದು ಬೆಳಕಿಗೆ ಬಂದಿತು. ಹೀಗಾಗಿ ಈಕೆಯ ಜೊತೆ ಪ್ರಿಯಕರ (Lover) ಸುರೇಶ್ ಎಂಬಾತನನ್ನೂ ಪೊಲೀಸರು ಒದ್ದು ಒಳಗೆ ಹಾಕಿದ್ದರು. ಇನ್ನು ವಿಚಾರಣೆ ವೇಳೆ ಆರೋಪಿ ಶ್ವೇತಾಳ ಒಂದೊಂದೇ ಕಲ್ಯಾಣ ಗುಣಗಳು ಹೊರಕ್ಕೆ ಬರುತ್ತಿವೆ

ಆರೋಪಿ ಶ್ವೇತಾಗೆ ಹಲವು ಬಾಯ್‌ಫ್ರೆಂಡ್ಸ್

ಹೌದು, ಅಕ್ರಮ ಸಂಬಂಧಕ್ಕೆ ಅಡ್ಡಿಯಾಗಿದ್ದಕ್ಕೆ ಗಂಡನ ಕೊಲೆ ಪ್ರಕರಣದ ವಿಚಾರಣೆಯನ್ನು ಚುರುಕುಗೊಳಿಸಿರುವ ಯಲಹಂಕ ಪೊಲೀಸರು, ಶ್ವೇತಾಳ ಹಿಸ್ಟರಿಯನ್ನೇ ತೆಗೆದಿದ್ಗಾರೆ. ಕೊಲೆಯಾದ ಚಂದ್ರಶೇಖರ್ ಪತ್ನಿ ಶ್ವೇತಾ ಹಾಗೂ ಆಕೆಯ ಪ್ರಿಯಕರ ಸುರೇಶ್ ವಿಚಾರಣೆಯಲ್ಲಿ ಅಚ್ಚರಿಯ ಮಾಹಿತಿ ಬೆಳಕಿಗೆ ಬಂದಿದೆ. ಆರೋಪಿ ಶ್ವೇತಾಗೆ ಹಲವು ಬಾಯ್ ಫ್ರೆಂಡ್ಸ್ ಇದ್ದರಂತೆ ಎಂಬ ವಿಚಾರ ಗೊತ್ತಾಗಿದೆ


. !..ಗಿದೆ ಕೊಲೆಯಾಗಿರುವ ಚಂದ್ರಶೇಖರ್

ಪ್ರಪೋಸ್ ಮಾಡಿದವರ ಜೊತೆಯೆಲ್ಲಾ ಸಲುಗೆ!

ಈ ಹಿಂದೆ ಬೆಂಗಳೂರಿನಲ್ಲಿ ಎಂಎಸ್‌ಸಿ ಓದುತ್ತಿದ್ದ ಶ್ವೇತಾ, ಕಾಲೇಜಿನ ಹಲವು ಸ್ನೇಹಿತರ ಜೊತೆ ಡೇಟಿಂಗ್ ಮಾಡಿದ್ದಳಂತೆ. ನೋಡೋಕೆ ಸುಮಾರಾಗಿದ್ದ ಆಕೆಗೆ ಸಾಮಾನ್ಯವಾಗಿ ಹುಡುಗರು ಪ್ರಪೋಸ್ ಮಾಡ್ತಿದ್ದರಂತೆ. ಹೀಗೆ ಪ್ರಪೋಸ್ ಮಾಡೋ ಎಲ್ಲರ ಜೊತೆ ಶ್ವೇತಾ ಸಲುಗೆ ಹೊಂದಿದ್ದಳು ಎನ್ನಲಾಗಿದೆ.

ಇದನ್ನೂ ಓದಿ: Bengaluru Crime News: ಅಂದು ಬಿಕ್ಕಿ ಬಿಕ್ಕಿ ಅತ್ತಿದ್ದವಳೇ ಗಂಡನನ್ನ ಕೊಂದಿದ್ಲು: ತಲೆ, ಮರ್ಮಾಂಗಕ್ಕೆ ಇರಿದು ಹತ್ಯೆ

ಇದೇ ವಿಚಾರಕ್ಕೆ ಗಂಡ-ಹೆಂಡತಿ ನಡುವೆ ಗಲಾಟೆ

ಇನ್ನು ಈಕೆಯ ಪ್ರಿಯಕರ ಸುರೇಶ್ ಮಾತ್ರ ಶ್ವೇತಾಳನ್ನ ಬಿಟ್ಟಿರದೇ, ಆಕೆಯ ಸಹವಾಸ ಮುಂದುವರೆಸಿದ್ದ. ಜೊತೆಗೆ ಶ್ವೇತಾಳ ಖಾಸಗಿ ವಿಡಿಯೋ ಸಹ ಮಾಡ್ಕೊಂಡಿದ್ದ ಎನ್ನಲಾಗಿದೆ. ಇನ್ನು ಶ್ವೇತಾ ಹಲವರ ಜೊತೆ ಒಡನಾಟ ಹೊಂದಿರುವ ವಿಚಾರ ಗಂಡ ಚಂದ್ರಶೇಖರ್‌ಗೆ ಗೊತ್ತಾಗಿತ್ತು. ಹೀಗಾಗಿ ಹಲವು ಬಾರಿ ಮನೆಯಲ್ಲಿ ಗಲಾಟೆಯಾಗಿದ್ದು, ಇದೇ ಕಾರಣಕ್ಕೆ ಪತಿ ಚಂದ್ರಶೇಖರ್‌ನನ್ನು ಮುಗಿಸಲು ಶ್ವೇತಾ ಪ್ಲಾನ್ ಮಾಡಿದ್ದಳು.

ಪ್ರಿಯಕರನ ಜೊತೆ ಸೇರಿ ಗಂಡನ ಹತ್ಯೆಗೆ ಸ್ಕೆಚ್

ಇನ್ನು ಪ್ರಿಯಕರ ಸುರೇಶನ ಜೊತೆ ಮಾತನಾಡಲು ಹೊಸ ಸಿಮ್ ಸಹ ಖರೀದಿಸಿದ್ದ ಶ್ವೇತಾ, ಅದರಲ್ಲೇ ಪ್ಲಾನ್ ಬಗ್ಗೆ ಮಾತನಾಡಿದ್ದಳು. ಇನ್ನು ಸುರೇಶ ಕೂಡ ಚಂದ್ರಶೇಖರ್‌ನನ್ನು ಕೊಲೆ ಮಾಡೋದ್ಕಕೆ ಒಪ್ಪಿಕೊಂಡಿದ್ದ.

ಇದನ್ನೂ ಓದಿ: Bandemutt Swamy: ಬಂಡೆಮಠ ಸ್ವಾಮಿಯ 3 ವಿಡಿಯೋ ರಹಸ್ಯ; ಆಸ್ತಿಯ ಲೆಕ್ಕಪತ್ರಗಳ ಪರಿಶೋಧನೆ

ಟೆರೆಸ್‌ ಮೇಲೆ ಕಳಿಸಿ ಕೊಲ್ಲಿಸಿದ್ದ ಹೆಂಡತಿ

ಇದೇ ಅಕ್ಟೋಬರ್ 22 ರಂದು ಚಂದ್ರಶೇಖರ್ ಮನೆಗೆ ಬರೋ ಮುಂಚಿತವಾಗಿ ಸುರೇಶನ್ನ ಮನೆಗೆ ಕರೆತಂದಿದ್ಳು.. ಗಂಡ ಚಂದ್ರಶೇಖರ್ ಮನೆಗೆ ಬರ್ತಿದ್ದಂತೆ ನೀರು ಬರುತ್ತಿಲ್ಲ ಅಂತ ಟೆರೇಸ್ ಗೆ ಹೋಗಿ ಚೆಕ್ ಮಾಡುವಂತೆ ಹೇಳಿದ್ಳು. ಈ ವೇಳೆ ಅಲ್ಲೇ ಅಡಗಿದ್ದ ಸುರೇಶ, ಚಂದ್ರಶೇಖರ್ ತಲೆಗೆ ರಾಡ್ ನಿಂದ ಹೊಡೆದು, ಮರ್ಮಾಂಗ ಕತ್ತರಿಸಿದ್ದಾನೆ. ಇದಾದ ಬಳಿಕ ತನಗೇನು ತಿಳಿಯದ ರೀತಿ ನಾಟಕವಾಡಿದ್ದ ಶ್ವೇತಾ, ಗಂಡನ ಹೆಣದ ಮೇಲೆ ಅತ್ತೂ ಕರೆದು ಡ್ರಾಮಾ ಮಾಡಿದ್ದಳು. ಇದೀಗ ಇಬ್ಬರನ್ನೂ ಬಂಧಿಸಿರುವ ಪೊಲೀಸರು ವಿಚಾರಣೆ ಮುಂದುವರೆಸಿದ್ದಾರೆ.

Post a Comment

Previous Post Next Post