ಓಲಾ, ಊಬರ್ ಸಂಸ್ಥೆಗಳಿಗೆ ಟಕ್ಕರ್ ನೀಡಲು ಆಟೋ ಚಾಲಕರ ಸಿದ್ಧತೆ; ಬರ್ತಿದೆ ಹೊಸ ಆ್ಯಪ್


  ಸಾಂದರ್ಭಿಕ ಚಿತ್ರ

 ಮೊಬೈಲ್ ಆ್ಯಪ್ ಆಧರಿತ ಕ್ಯಾಬ್ ಸೇವೆ ಬಗ್ಗೆ ಸಂಬಂಧಿಸಿದಂತೆ ಹಲವು ಬಾರಿ ಸರ್ಕಾರಕ್ಕೆ ದೂರು ಸಲ್ಲಿಕೆ ಮಾಡಲಾಗಿತ್ತು. ಆದರೆ ಸರ್ಕಾರ ಯಾವುದೇ ಕ್ರಮ ತೆಗೆದುಕೊಳ್ಳದ ಹಿನ್ನೆಲೆ ನಮ್ಮದೇ ಸ್ವಂತ ಮೊಬೈಲ್ ಆ್ಯಪ್ ಆಧರಿತ ಹೊಸ ಆ್ಯಪ್ ತರಲು ಮುಂದಾಗಿದ್ದೇದೆ ಎಂದು ಎಆರ್ಡಿಯು ಅಧ್ಯಕ್ಷ ಡಿ.ರುದ್ರಮೂರ್ತಿ ಹೇಳುತ್ತಾರೆ

 ಬೆಂಗಳೂರು: ಇದೇ ನವೆಂಬರ್ 1ರಿಂದ ಮೊಬೈಲ್ ಆ್ಯಪ್ ಆಧರಿತ ಕ್ಯಾಬ್ ಸೇವೆ (Mobile App Based Cabs) ಒದಗಿಸುವ ಓಲಾ (Ola) ಮತ್ತು ಊಬರ್ (Uber) ಸಂಸ್ಥೆಗಳಿಗೆ ಟಕ್ಕರ್ ಕೊಡಲು ಬೆಂಗಳೂರು ಆಟೋ ಚಾಲಕರ ಒಕ್ಕೂಟ (ಎಆರ್ಡಿಯು-ARDU) ಮುಂದಾಗಿದೆ. ಈ ನಿಟ್ಟಿನಲ್ಲಿ ನವೆಂಬರ್ 1ರಂದು ಹೊಸ ಆ್ಯಪ್ (New App) ಆರಂಭಿಸಿಲು ಎಆರ್ಡಿಯೂ ಎಲ್ಲಾ ಸಿದ್ಧತೆಗಳನ್ನು ಮಾಡಿಕೊಳ್ಳುತ್ತಿದೆ. ಉದ್ಯಮಿ ನಂದನ್ ನೀಲೆಕೆನಣಿ ಅವರ  ಬೆಂಬಲಿತ ಬೈಕ್ ಪ್ರತಿಷ್ಠಾನದ ತಾಂತ್ರಿಕ ಸಹಾಯದೊಂದಿಗೆ ಹೊಸ ಆ್ಯಪ್ ಕರ್ನಾಟಕ ರಾಜ್ಯೋತ್ಸವದಂದು (Karnataka Rajyotsava) ಮುಕ್ತಗೊಳಿಸಲಾಗುವುದು ಎಂದು ಎಆರ್ಡಿಯು ಮಾಹಿತಿ ನೀಡಿದೆ. ಈ ಹೊಸ ಆ್ಯಪ್ಗೆ ‘ನಮ್ಮ ಯಾತ್ರಿ’ (Namma Yatri App) ಎಂದು ಹೆಸರಿಡಲಾಗಿದೆ

ಮೊಬೈಲ್ ಆ್ಯಪ್ ಆಧರಿತ ಕ್ಯಾಬ್ ಸೇವೆ ಬಗ್ಗೆ ಸಂಬಂಧಿಸಿದಂತೆ ಹಲವು ಬಾರಿ ಸರ್ಕಾರಕ್ಕೆ ದೂರು ಸಲ್ಲಿಕೆ ಮಾಡಲಾಗಿತ್ತು. ಆದರೆ ಸರ್ಕಾರ ಯಾವುದೇ ಕ್ರಮ ತೆಗೆದುಕೊಳ್ಳದ ಹಿನ್ನೆಲೆ ನಮ್ಮದೇ ಸ್ವಂತ ಮೊಬೈಲ್ ಆ್ಯಪ್ ಆಧರಿತ ಹೊಸ ಆ್ಯಪ್ ತರಲು ಮುಂದಾಗಿದ್ದೇದೆ ಎಂದು ಎಆರ್ಡಿಯು ಅಧ್ಯಕ್ಷ ಡಿ.ರುದ್ರಮೂರ್ತಿ ಹೇಳುತ್ತಾ

ಗ್ರಾಹಕರನ್ನು ಕಳೆದುಕೊಳ್ಳುವ ಆತಂ

ಮೊಬೈಲ್ ಆ್ಯಪ್ ಆಧರಿತ ಕ್ಯಾಬ್ ಸೇವೆ ನೀಡುವ ಕಂಪನಿಗಳು ಗ್ರಾಹಕರಿಂದ ಕನಿಷ್ಠ 100 ರೂಪಾಯಿ ಪಡೆದುಕೊಂಡು, ಆಟೋ ಚಾಲಕರಿಗೆ  60 ರೂಪಾಯಿ ನೀಡುತ್ತವೆ. ಇನ್ನುಳಿದ 40 ರೂಪಾಯಿಯನ್ನು ಕಮಿಷನ್ ರೂಪದಲ್ಲಿ ಇರಿಸಿಕೊಳ್ಳುತ್ತವೆ. ಇತ್ತೀಚೆಗೆ ಮೊಬೈಲ್ ಆ್ಯಪ್ ಆಧರಿತ ಕ್ಯಾಬ್ ಸೇವೆ ಸಂಸ್ಥೆಗಳು ಬೆಲೆ ಏರಿಕೆ ಮಾಡಿದ್ದರಿಂದ ಗ್ರಾಹಕರ ಸಂಖ್ಯೆ ಇಳಿಮುಖವಾಗ್ತಿದೆ. ಬೆಲೆ ಏರಿಕೆ ಹಿನ್ನೆಲೆ ಪ್ರಯಾಣಿಕರ ಸಾರಿಗೆ ಸಂಸ್ಥೆ ಮತ್ತು ಮೆಟ್ರೋಗಳತ್ತ ಮುಖ ಮಾಡುತ್ತಿದ್ದಾ

ಸಾಂದರ್ಭಿಕ ಚಿತ್ರ

ಅನಿವಾರ್ಯ ಮತ್ತು ತುರ್ತ ಪರಿಸ್ಥಿತಿಗಳಲ್ಲಿ ಮಾತ್ರ ಜನರು ಕ್ಯಾಬ್ಗಳನ್ನು ಬುಕ್ ಮಾಡುತ್ತಿದ್ದಾರೆ. ಈ ಬೆಳವಣಿಗೆ ಹೀಗೆ ಮುಂದುವರಿದ್ರೆ ನಾವು ಗ್ರಾಹಕರನ್ನು ಕಳೆದುಕೊಳ್ಳಬೇಕಾದ ಪರಿಸ್ಥಿತಿ ನಿರ್ಮಾಣವಾಗಬಹುದು ಎಂದು ರುದ್ರಮೂರ್ತಿ ಆತಂಕ ವ್ಯಕ್ತಪಡಿಸುತ್ತಾ

ನಮ್ಮ ಯಾತ್ರಿ ಆ್ಯಪ್ನಲ್ಲಿ ದರ ಇಳಿಕೆ ಆಗುತ್ತಾ? ಎಆರ್ಡಿಯು ಹೇಳಿದ್ದೇನು

ಸದ್ಯ ನಮ್ಮ ಯಾತ್ರಿ ಆ್ಯಪ್ ಕನ್ನಡ ರಾಜ್ಯೋತ್ಸವದಂದು ಮುಕ್ತಗೊಳಿಸಲು ಎಆರ್ಡಿಯು ಪ್ಲಾನ್ ಮಾಡಿಕೊಂಡಿದೆ. ಈ ಹೊಸ ಆ್ಯಪ್ನಲ್ಲಿ ಪ್ರಯಾಣದ ದರ ಹೇಗಿರುತ್ತೆ ಎಂದು ಎಆರ್ಡಿಯು ಅಧ್ಯಕ್ಷ ರುದ್ರಮೂರ್ತಿ ಹೇಳುತ್ತಾ

ನಮ್ಮ ಯಾತ್ರಿ ಆ್ಯಪ್ನಲ್ಲಿ ಸರ್ಕಾರ ನಿಗದಿಪಡಿಸಿದ ದರವನ್ನು ನಿಗದಿಪಡಿಸಲಾಗುತ್ತದೆ. ಈ ದರದ ಜೊತೆಗೆ ಪಿಕ್-ಅಪ್ ಶುಲ್ಕ ಹೆಚ್ಚುವರಿಯಾಗಿ 10 ರೂಪಾಯಿ ಪಡೆಯಲಾಗುವುದು. ಎರಡು ಕಿಲೋಮೀಟರ್ ಅಂತರದೊಳಗಿನ ಪ್ರಯಾಣಕ್ಕೆ 40 ರೂಪಾಯಿ ಸ್ಥಿರ ದರ ಪಡೆದುಕೊಳ್ಳುವ ಕುರಿತು ಚರ್ಚೆಗಳು ನಡೆಯುತ್ತಿವೆ ಎಂದು ಹೇಳುವ ಮೂಲಕ ದರಗಳು ಇನ್ನೂ ಅಂತಿಮವಾಗಿಲ್ಲ ಎಂಬ ಮಾಹಿತಿಯನ್ನು ರುದ್ರಮೂರ್ತಿ ನೀಡಿ

ಇದನ್ನೂ ಓದಿ:  Breaking News: ಬಂದ್ ಆಗುತ್ತಾ ಓಲಾ, ಉಬರ್ ಆಟೋ ಸೇ

ಸದ್ಯ ಎಷ್ಟಿದೆ 

ಸದ್ಯ ರಾಜಧಾನಿ ಬೆಂಗಳೂರಿನಲ್ಲಿ ಪ್ರಯಾಣ ದರ ಕನಿಷ್ಠ ಎರಡು ಕಿಲೋ ಮೀಟರ್ಗೆ 30 ರೂಪಾಯಿ ಮತ್ತು ನಂತರದ ಪ್ರತಿ ಕಿ.ಮೀ.ಗೆ 15 ರೂ. ಹೆಚ್ಚಳವಾಗುತ್ತದೆ. ಆದ್ರೆ ಮೊಬೈಲ್ ಆ್ಯಪ್ ಆಧರಿತ ಕ್ಯಾಬ್ ಕಂಪನಿಗಳು ಕನಿಷ್ಠ 100 ರೂ. ವಿಧಿಸುತ್ತಿವೆ. ಇದರಲ್ಲಿ ಆಟೋ ಚಾಲಕರಿಗೆ 60 ರೂಪಾಯಿ ನೀಡಲಾಗುತ್ತಿದೆ


. ದರ?ವೆ?ದರು.ರೆ.?ರೆ.ರೆ.ಕರೆ... 60 ರೂಪಾಯಿ ನೀಡಲಾಗುತ್ತಿದೆ.ಸಾಂದರ್ಭಿಕ ಚಿತ್ರ

ಮೊಬೈಲ್ ಆ್ಯಪ್ ಆಧರಿತ ಕ್ಯಾಬ್ ಬೆಲೆ ಏರಿಕೆಗೆ ಸಾರ್ವಜನಿಕರಿಂದ ಆಕ್ರೋಶ ವ್ಯಕ್ತವಾಗಿದೆ. ಇದೀಗ ಬೆಲೆ ಏರಿಕೆ ಹಿನ್ನೆಲೆ ಜೇಬಿಗೆ ಹೊರೆ ಆಗ್ತಿದೆ. ಆದ್ದರಿಂದ ಬಿಎಂಟಿಸಿ, ನಮ್ಮ ಮೆಟ್ರೋ ಬಳಕೆ ಮಾಡುತ್ತಿದ್ದೇವೆ ಎಂದು ಸಾರ್ವಜನಿಕರು ಹೇಳುತ್ತಿದ್ದಾರೆ.

ಇದನ್ನೂ ಓದಿ: SC, ST ಮೀಸಲಾತಿ ಹೆಚ್ಚಳ: ಸಂಪುಟ ಸಭೆಯಲ್ಲಿ ಮಹತ್ವದ ತೀರ್ಮಾನ; ಬೊಮ್ಮಾಯಿ ಸರ್ಕಾರದಿಂದ ಗುಡ್​ ನ್ಯೂಸ್

ಕೊಚ್ಚಿಯಲ್ಲಿದೆ ಯಾತ್ರಾ ಆ್ಯಪ್

ಇನ್ನು ನೆರೆಯ ಕೊಚ್ಚಿಯಲ್ಲಿ ಯಾತ್ರಾ ಆ್ಯಪ್ ಚಾಲ್ತಿಯಲ್ಲಿದೆ. ಕೇರಳ ಮೆಟ್ರೋಪಾಲಿಟನ್‌ ಟ್ರಾನ್ಸ್‌ಪೋರ್ಟ್‌ ಅಥಾರಿಟಿ (ಕೆಎಂಟಿಎ) ಮತ್ತು ಬೆಕ್​ನ ಪ್ರತಿಷ್ಠಾನ ಜಂಟಿಯಾಗಿ ಯಾತ್ರಾ ಆ್ಯಪ್ ಬಿಡುಗಡೆ ಮಾಡಿತ್ತು.

Post a Comment

Previous Post Next Post