ಬೆಳಗಾವಿಯಲ್ಲಿ ಮಂದಿ ಪೊಲೀಸ್ ವಶಕ್ಕೆ
ಎನ್.ಐ.ಎ ದಾಳಿ ಬೆನ್ನಲ್ಲೇ ಕರ್ನಾಟಕ ಪೊಲೀಸರು ಅರ್ಲಟ್ ಆಗಿದ್ದಾರೆ. ಈ ದಾಳಿಯಲ್ಲಿ SDPI, PFI ಸಂಘಟನೆ ಜೊತೆ ಗುರುತಿಸಿಕೊಂಡಿದ್ದ 7 ಜನರನ್ನು ವಶಕ್ಕೆ ಪಡೆದುಕೊಳ್ಳಲಾಗಿದೆ
ಬೆಳಗಾವಿ (ಸೆ.27): ದೇಶಾದ್ಯಂತ ಎನ್ಐಎ ದಾಳಿ ಬೆನ್ನಲ್ಲೇ ಬೆಳಗಾವಿಯಲ್ಲಿ ಪಿ ಎಫ್ ಐ, ಎಸ್ ಡಿ ಪಿ ಐ ಸಂಘಟನೆಗಳಿಗೆ (PFI, SDPI Organization) ಪೊಲೀಸರು ಶಾಕ್ ಕೊಟ್ಟಿದ್ದಾರೆ. ಬೆಳ್ಳಂ ಬೆಳಗ್ಗೆ ದಾಳಿ ನಡೆಸಿದ ಪೊಲೀಸರು ಎಸ್ ಡಿ ಪಿ ಐ ಜಿಲ್ಲಾಧ್ಯಕ್ಷ ಸೇರಿ 7 ಜನರನ್ನ ವಶಕ್ಕೆ ಪಡೆದಿದ್ದಾರೆ. ಇನ್ನೂ ಬೆಳಗಾವಿ ಪೊಲೀಸ್ ದಾಳಿ (Police Raid) ಸುಳಿವು ಸಿಗುತ್ತಿದ್ದಂತೆ ಪಿಎಫ್ಐ ಜಿಲ್ಲಾಧ್ಯಕ್ಷ ನವೀದ್ ಕಟಗಿ (Naveedh katagi) ಪರಾರಿಯಾಗಿದ್ದಾನೆ. ಆತನ ಪತ್ತೆಗೆ ಜಾಲ ಬೀಸಲಾಗಿದ್ದು, ಬಂಧಿತರನ್ನ ಹಿಂಡಲಗಾ ಜೈಲಿಗೆ ಅಟ್ಟಲಾಗಿದೆ. ಕೆಲ ದಿನಗಳ ಹಿಂದೆಯಷ್ಟೇ ದೇಶಾದ್ಯಂತ ಎನ್.ಐ.ಎ (NIA) ದಾಳಿ ನಡೆ ಅನೇಕ ಶಂಕಿತ ಉಗ್ರರನ್ನ ಬಂಧಿಸಿತ್ತು
ಕರ್ನಾಟಕ ಪೊಲೀಸರು ಅರ್ಲ
ಎನ್.ಐ.ಎ ದಾಳಿ ಬೆನ್ನಲ್ಲೇ ಕರ್ನಾಟಕ ಪೊಲೀಸರು ಅರ್ಲಟ್ ಆಗಿದ್ದಾರೆ
ಇಂದು ರಾಜ್ಯದ ನಾನಾ ಭಾಗದಲ್ಲಿ ಏಕಕಾಲದಲ್ಲಿ ಖಾಕಿ ಪಡೆ ದಾಳಿ ನಡೆಸಿದ್ದು, ಅದೇ ರೀತಿ ಬೆಳಗಾವಿ ನಗರ ಪೊಲೀಸರು ಬೆಳ್ಳಂಬೆಳಗ್ಗೆ ದಾಳಿ ನಡೆಸಿದ್ದಾರೆ. ಬೆಳಗಾವಿ ಡಿಸಿಪಿ ರವೀಂದ್ರ ಗಡಾದಿ ನೇತೃತ್ವದಲ್ಲಿ ಮಾರ್ಕೆಟ್ ಎಸಿಪಿ ನಾರಾಯಣ ಬರಮನಿ, ಕ್ರೈಂ ಎಸಿಪಿ ಸದಾಶಿವ ಕಟ್ಟಿಮನಿ ಒಳಗೊಂಡ 30 ಜನರ ತಂಡ ಕಾರ್ಯಾಚರಣೆ ನಡೆಸಿದಿದೆ
7 ಜನರನ್ನು ವಶಕ್ಕೆ ಪಡೆದುಕೊಳ್ಳಲಾ
ಈ ದಾಳಿಯಲ್ಲಿ SDPI, PFI ಸಂಘಟನೆ ಜೊತೆ ಗುರುತಿಸಿಕೊಂಡಿದ್ದ 7 ಜನರನ್ನು ವಶಕ್ಕೆ ಪಡೆದುಕೊಳ್ಳಲಾಗಿದೆ. ಬೆಳಗಾವಿಯ ಆಜಂ ನಗರ ನಿವಾಸಿ PFI ಮಾಜಿ ಜಿಲ್ಲಾಧ್ಯಕ್ಷ ಝಕೀವುಲ್ಲಾ ಫೈಜಿ, ಅಸಾದ್‌ಖಾನ್ ಸೊಸೈಟಿ ನಿವಾಸಿ SDPI ಜಿಲ್ಲಾಧ್ಯಕ್ಷ ಅಬೀದ್ ಖಾನ್ ಕಡೋಲಿ, ಶಿವಾಜಿ ನಗರ ನಿವಾಸಿ ಸಲಾವುದ್ದೀನ್ ಖಿಲೆವಾಲೆ, ಅಸಾದ್‌ಖಾನ್ ನಿವಾಸಿ ಬದ್ರುದ್ದೀನ್ ಪಟೇಲ್, ಅಮನ್ ನಗರ ನಿವಾಸಿ ಸಮೀವುಲ್ಲಾ ಪೀರ್ಜಾದೆ, ಬಾಕ್ಸೈಟ್ ರೋಡ್ ನಿವಾಸಿ ಜಹೀರ್ ಘೀವಾಲೆ ಹಾಗೂ ವಿದ್ಯಾಗಿರಿ ನಿವಾಸಿ ರೆಹಾನ್ ಅಜೀಜ್ ಎಂಬಾತರನ್ನ ಬಂಧಿಸಿ
ಇದನ್ನೂ ಓದಿ: Sudha Murthy: ರಾಜಮಾತೆ ಕಾಲಿಗೆ ನಮಸ್ಕರಿಸಿದ ಸುಧಾ ಮೂರ್ತಿ; ನೀವು ಮಾಡಿದ್ದು ಸರೀನಾ ಎಂದು ನೆಟ್ಟಿಗರ ಪ್ರಶ್ನೆ
ಈ ಏಳು ಜನರನ್ನ ಬಂಧಿಸಿದ ಬಳಿಕ ಬೆಳಗಾವಿ ಮಾರ್ಕೆಟ್ ಪೊಲೀಸ್ ಠಾಣೆಗೆ ಕರೆತಂದು ಸುದೀರ್ಘ4 ಗಂಟೆಗಳ ಕಾಲ ವಿಚಾರಣೆ ನಡೆಸಿದ್ರು. ಅಲ್ಲದೇ ಬಂಧಿತರ 7 ಜನರ ಮೊಬೈಲ್ ಜಪ್ತಿ ಮಾಡಿ ಇಂಚಿಂಚು ಮಾಹಿತಿ ಕಲೆ ಹಾಕಿದ್ದಾರೆ. ಬಂಧಿತರು ಬಳಸುವ ಸಾಮಾಜಿಕ ಜಾಲತಾಣ ಅಕೌಂಟ್‌ಗಳು, ಯಾರ್ಯಾರ ಜೊತೆ ಸಂಪರ್ಕದಲ್ಲಿದ್ದರು ಇದರೊಂದಿಗೆ SDPI, PFI ಸಂಘಟನೆ ಸೇರಿದ್ದು ಯಾವಾಗ, ಏನೆಲ್ಲಾ ಕೆಲಸ ಮಾಡ್ತಾರೆ? ಮತ್ತೆಯಾವೆಲ್ಲ ವಾಟ್ಸಪ್ ಗ್ರೂಪ್‌ಗಳಲ್ಲಿ ಆ್ಯಕ್ಟೀವ್ ಇದ್ದರು ಎಂಬೆಲ್ಲದರ ಬಗ್ಗೆ ಮಾಹಿತಿಯನ್ನ ಕಲೆ ಹಾಕಿದ್ದಾ
ನೂರಾರು ಕಾರ್ಯಕರ್ತರ ಪ್ರತಿಭ
ಇತ್ತೀಚೆಗೆ ಎನ್ ಐ ಎ ದಾಳಿ ಖಂಡಿಸಿ ಬೆಳಗಾವಿ ತಾಲೂಕಿನ ಕಾಕತಿ ಬಳಿಯ ರಾಷ್ಟ್ರೀಯ ಹೆದ್ದಾರಿ ಪುನಾ ಬೆಂಗಳೂರು ತಡೆದು PFI ಜಿಲ್ಲಾಧ್ಯಕ್ಷ ನವೀದ್ ಕಟಗಿ ನೇತೃತ್ವದಲ್ಲಿ ನೂರಾರು ಕಾರ್ಯಕರ್ತರು ಪ್ರತಿಭಟನೆ ಮಾಡಿದ್ದರು. ಹೀಗಾಗಿ ಮುಂಜಾಗೃತ ಕ್ರಮವಾಗಿ ಏಳು ಜನರನ್ನ ಐಪಿಸಿ 110 ಸೆಕ್ಷನ್ ಅಡಿ ಬಂಧಿಸಿಲಾಗಿದೆ. ಆದ್ರೆ ಬೆಳಗಾವಿ PFI ಜಿಲ್ಲಾಧ್ಯಕ್ಷ ನವೀದ್ ಕಟಗಿ ಗೆ ಪೊಲೀಸ್ ದಾಳಿಯ ಸುಳಿವು ಮುಂಚೆಯೇ ಸಿಕ್ಕಿದ್ದು, ಹೀಗಾಗಿ ನವೀದ್ ತನ್ನ ಮೊಬೈಲ್ ಸ್ವೀಚ್ ಮಾಡಿ ಪರಾರಿ ಆಗಿದ್ದಾನೆ. ಆತನ ಬಂಧನಕ್ಕೆ ಬೆಳಗಾವಿ ನಗರ ಪೊಲೀಸರು ಜಾಲಬೀಸಿದ್ದಾರೆ. ಈ ಮಧ್ಯೆ ಅರೆಸ್ಟ್ ಆದ ಆರೋಪಿಗಳನ್ನ ನಗರದ ವಂಟಮೂರಿ ಸರ್ಕಾರಿ ಆಸ್ಪತ್ರೆಯಲ್ಲಿ ವೈದ್ಯಕೀಯ ತಪಾಸಣೆಗೆ ಒಳಪಡಿಸಲಾಯಿ
ಇದನ್ನೂ ಓದಿ: Hubballi: ದೀಪಕ್ ಕೊಲೆ ಆರೋಪಿಗಳಿಗೆ ಸಿಐಡಿ ಡ್ರಿಲ್; ಮತ್ತೊಂದೆಡೆ SDPI, PFI ಮುಖಂಡರು ಅಂ
ಆ ಬಳಿಕ ಆರೋಪಿಗಳನ್ನ ಬಿಗಿ ಪೊಲೀಸ್ ಭದ್ರತೆಯಲ್ಲಿ ಬೆಳಗಾವಿ ಹಿಂಡಲಗಾ ಜೈಲಿಗೆ ಕಳುಹಿಸಲಾಗಿದೆ. ಹಿಂಡಲಗಾ ಜೈಲಿನ ಬಳಿ ವಾಹನದಿಂದ ಆರೋಪಿಗಳನ್ನ ಕೆಳಗೆ ಇಳಿಸುತ್ತಿದ್ದಂತೆ ಎಸ್ ಡಿಪಿಐ ಅಬೀಬ್ ಖಾನ್ ಕಡೋಲಿ ಘೋಷಣೆ ಹಾಕಿದರು. ಮುಸ್ಲಿಂ ಆಂಡ್ ದಲಿತ ಕ್ರೈಂ ಇನ್ ಇಂಡಿಯಾ ಅಂತ ಘೋಷಣೆ ಕೂಗಿ ಮಾಧ್ಯಮದವರ ಗಮನ ಸೆಳೆಯುವ ಪ್ರಯತ್ನ ಮಾಡಿದನು. ದರ್ತು.ಟನೆರೆ.!ದೆ.ಗಿದೆ..ಟ್..ಗಮನ ಸೆಳೆಯುವ ಪ್ರಯತ್ನ ಮಾಡಿದನು.
Post a Comment