RSS ಮುಖಂಡನ ಕಾರಿನ ಮೇಲೆ 'ಕಿಲ್​ ಯು' ಜಿಹಾದಿ ಬರಹ; ಕಾಫಿನಾಡಲ್ಲಿ ಮೂಡಿದೆ ಆತಂಕ!


 ಕಾರಿನ ಮೇಲೆ ಕಿಲ್​ ಯು ಬರಹ

 ಚಿಕ್ಕಮಗಳೂರು ಜಿಲ್ಲೆಯ ಕಡೂರಿನಲ್ಲಿ ಆರ್.ಎಸ್.ಎಸ್. ಮುಖಂಡನ ಮನೆ ಮುಂದೆ ನಿಲ್ಲಿಸಿದ್ದ ಕಾರಿನ ಮೇಲೆ ಕಿಲ್ ಯು, ಜಿಹಾದಿ ಎಂದು ಬರೆದಿರುವುದು ತೀವ್ರ ಆತಂಕಕ್ಕೆ ಕಾರಣವಾಗಿದೆ.

 ಚಿಕ್ಕಮಗಳೂರು (ಸೆ.26) : ಕಾಫಿನಾಡ ಕಡೂರಿನಲ್ಲಿ (Kadooru) ಮನೆ ಮುಂದೆ ನಿಂತಿದ್ದ ಕಾರಿನ (Car) ಮೇಲೆ ಬರೆದಿರುವ ಬರಹಗಳು ಕಡೂರಿನ ಇಡೀ ಕಾಫಿನಾಡನ್ನೇ ತಲ್ಲಣಗೊಳಿಸಿದೆ. ಕಡೂರಿನ ಇತಿಹಾಸದಲ್ಲಿ ಇಂತಹ ಪ್ರಕರಣ ನಡೆದಿರೋ ಸಣ್ಣ ಉದಾಹರಣೆಯೂ ಇಲ್ಲ. ಆದರೆ, ಇತ್ತೀಚೆಗೆ ರಾಜ್ಯದಲ್ಲಿ ನಡೆಯುತ್ತಿರೋ ವಿದ್ಯಮಾನಗಳ ಮಧ್ಯೆ ಈ ರೀತಿಯ ಪದ ಜನರಲ್ಲಿ ಆತಂಕ (People are worried) ತರಿಸಿದೆ.

ಕಾರಿನ ಮೇಲೆ ಕಿಲ್ ಯು, ಜಿಹಾದಿ ಎಂದು ಬರಹ

 ಚಿಕ್ಕಮಗಳೂರು ಜಿಲ್ಲೆಯ ಕಡೂರಿನಲ್ಲಿ ಆರ್.ಎಸ್.ಎಸ್. ಮುಖಂಡನ ಮನೆ ಮುಂದೆ ನಿಲ್ಲಿಸಿದ್ದ ಕಾರಿನ ನಾಲ್ಕು ಚಕ್ರದ ಗಾಳಿ ಬಿಟ್ಟು ಕಿಲ್ ಯು, ಜಿಹಾದಿ ಎಂದು ಬರೆದಿರುವುದು ತೀವ್ರ ಆತಂಕಕ್ಕೆ ಕಾರಣವಾಗಿದೆ. ಕಡೂರು ನಿವಾಸಿ ಡಾ.ಶಶಿಧರ್ ವೃತ್ತಿಯಲ್ಲಿ ಬ್ಯುಸಿನೆಸ್‍ಮೆನ್ ಆಗಿದ್ದು, ಹಿಂದೂತ್ವದ ಕೆಲಸ-ಕಾರ್ಯಗಳಲ್ಲೂ ತೊಡಗಿಸಿಕೊಂಡಿದ್ದಾರೆ.

ಟಾರ್ಗೆಟ್ ಮಾಡಿದ್ದಾರಾ ಕಿಡಿಗೇಡಿಗಳು?

ಆರ್.ಎಸ್.ಎಸ್. ಧರ್ಮ ಜಾಗರಣ ಸಹ ಸಂಚಾಲಕರಾಗಿಯೂ ಕಾರ್ಯ ನಿರ್ವಹಿಸುತ್ತಿದ್ದಾರೆ. ಆ ಜಾಗದಲ್ಲಿ 30-35 ಕಾರುಗಳಿದ್ದರೂ ಅವರ ಕಾರಿನ ಮೇಲೇ ಈ ರೀತಿ ಬರೆದಿರುವುದು, ರಾಜ್ಯದಲ್ಲಿ ಇತ್ತೀಚೆಗೆ ನಡೆಯುತ್ತಿರುವ ಬೆಳವಣಿಗೆಗಳಿಂದ ಬೆದರಿಸುವ ತಂತ್ರ ಅಥವಾ ಟಾರ್ಗೆಟ್ ಮಾಡಿದ್ದಾರಾ ಎಂಬ ಅನುಮಾನವೂ ಮೂಡಿದೆ.

ಬೆದರಿಕೆಗಳಿಗೆಲ್ಲಾ ಹಿಂದೂ ಕಾರ್ಯಕರ್ತರು ಹೆದರಲ್ಲ

ಈಗಾಗಲೇ ಕಡೂರು ಠಾಣೆಯಲ್ಲಿ ಪ್ರಕರಣ ದಾಖಲಿಸಿರುವ ಡಾ. ಶಶಿಧರ್, ಇದು ಹಿಂದೂ ಕಾರ್ಯಕರ್ತರ ಮನೋಸ್ಥೈರ್ಯವನ್ನ ಕುಗ್ಗಿಸುವ ಪ್ರಯತ್ನ, ಹಿಂದೂ ಕಾರ್ಯಕರ್ತರ ಮೇಲೆ ನಡೆಯುವ ಈ ರೀತಿ ದೌರ್ಜನ್ಯಕ್ಕೆ ಕಡಿವಾಣ ಹಾಕಬೇಕು, ಇಂತಹಾ ಬೆದರಿಕೆಗಳಿಗೆಲ್ಲಾ ಹಿಂದೂ ಕಾರ್ಯಕರ್ತರು ಹೆದರಲ್ಲ ಎಂದು ಪೊಲೀಸರು ಸೂಕ್ತ ಕ್ರಮಕೈಗೊಳ್ಳಬೇಕೆಂದು ಆಗ್ರಹಿಸಿದ್ದಾರೆ.

ಕಡೂರು ಠಾಣೆಯಲ್ಲಿ ಪ್ರಕರಣ ದಾಖಲು

ಕಾರಿನ ಮೇಲಿನ ಬರಹಗಳನ್ನ ಕಂಡ ಕೂಡಲೇ ಆರ್.ಎಸ್.ಎಸ್. ಕಾರ್ಯಕರ್ತ ಜಯಣ್ಣ ಕಡೂರು ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ. ಗಂಭೀರ ಪ್ರಕರಣ ಹಾಗೂ ಬರಹವಾಗಿರೋದ್ರಿಂದ ಬಿಟ್ಟರೇ ದೊಡ್ಡದಾಗುತ್ತೆಂದು ಪ್ರಕರಣ ದಾಖಲಿಸಿಕೊಂಡಿರೋ ಕಡೂರಿನ ಖಾಕಿಗಳು ಕೂಡ ಪ್ರಕರಣ ಗಂಭೀರವಾಗಿ ಪರಿಗಣಿಸಿದ್ದಾರೆ.

ಇದನ್ನೂ ಓದಿ: Draupadi Murmu: ಭಾರತವನ್ನು ವಿಶ್ವಗುರು ಮಾಡಬೇಕಿದೆ, IIIT ಧಾರವಾಡ ದೇಶದ ಭವಿಷ್ಯಕ್ಕೆ ವಿಶೇಷ ಕೊಡುಗೆ ಎಂದ ರಾಷ್ಟ್ರಪತಿ

ಸಿಸಿಟಿವಿ ಫೋಟೇಜ್ ವಶಕ್ಕೆ

ಕಾರು ಇದ್ದ ಜಾಗ ಹಾಗೂ ಹೋಗಿ-ಬರುವ ಮಾರ್ಗದಲ್ಲಿನ ಎಲ್ಲಾ ಸಿಸಿಟಿವಿ ಫೋಟೇಜ್​ಗಳನ್ನ ವಶಕ್ಕೆ ಪಡೆದಿದ್ದಾರೆ. ಈಗಾಗಲೇ ವಿಶೇಷ ತಂಡ ರಚಿಸಿರೋ ಎಸ್ಪಿ ಉಮಾಪ್ರಶಾಂತ್ ಕೂಡ ಪ್ರಕರಣವನ್ನ ಸೀರಿಯಸ್ ಆಗಿ ತೆಗೆದುಕೊಂಡು ಪೊಲೀಸರು ಅಲರ್ಟ್ ಆಗಿರಲು ಸೂಚಿಸಿದ್ದಾರೆ. ಯಾರು ಮಾಡಿರಬಹುದು, ಯಾವ ದೃಷ್ಠಿಯಿಂದ ಮಾಡಿರಬಹುದು. ಈ ರೀತಿ ಬರೆದವರು ಹಿಂದೆ ಯಾರಾದರೂ ಇದ್ದಾರಾ. ಬರೆದಿದ್ದರೆ ಏಕೆ ಬರೆದಿರಬಹುದು ಎಂಬೆಲ್ಲಾ ಆಯಾಮದಲ್ಲಿ ಪೊಲೀಸರು ತನಿಖೆ ಆರಂಭಿಸಿದ್ದಾರೆ.

ಕಡೂರು ಅಪ್ಪಟ ಬಯಲು ಸೀಮೆ ಭಾಗ. ಇಲ್ಲಿ ಇತಿಹಾಸದಲ್ಲಿ ಈ ರೀತಿಯ ಸಂಸ್ಕೃತಿ ಇರಲಿಲ್ಲ. ಈಗ ಮಲೆನಾಡು ಭಾಗದಲ್ಲಿದ್ದ ಈ ಜಿಹಾದಿ ಮನಸ್ಥಿತಿಯ ಬರವಣಿಗೆ ಬಯಲುಸೀಮೆಗೂ ಕಾಲಿಡ್ತಾ ಎಂಬ ಅನುಮಾನ ಮುಡಿದೆ.

ಇದನ್ನೂ ಓದಿ: Sunil Kumar: ಇಂಧನ ಸಚಿವರು ಕೊಟ್ರು ಗುಡ್​ ನ್ಯೂಸ್​; ರೈತರಿಗೆ ಎಷ್ಟು ಗಂಟೆಗಳ ಕಾಲ ಸಿಗಲಿದೆ ವಿದ್ಯುತ್?

ತನಿಖೆಯಿಂದ ಹೊರ ಬರಬೇಕಿದೆ ಸತ್ಯ

ಒಟ್ಟಾರೆ, ಮನೆ ಮುಂದೆ ನಿಲ್ಲಿಸಿದ್ದ ಬೈಕು-ಕಾರುಗಳ ಗಾಳಿ ಬಿಡೋದು, ಕಲ್ಲು ಹೊಡೆಯೋದು ಸರ್ವೇ ಸಾಮಾನ್ಯ. ಕುಡಿದು ಟೈಟ್ ಆದಾಗ ಕಿಡಿಗೇಡಿಗಳು ಇಂತಹ ಕೃತ್ಯ ಮಾಡುತ್ತಾರೆ. ಆದರೆ, ನಿಗಧಿತವಾಗಿ ಕಿಲ್ ಯೂ, ಜಿಹಾದಿ ಅಂತ ಬರೆದಿರೋದನ್ನ ಗಮನಿಸಿದರೆ ಇದು ಜಿಹಾದಿ ಮನಸ್ಥಿತಿಯ ಕಿಡಿಗೇಡಿಗಳ ಕೃತ್ಯ ಅಂತ ಮೇಲ್ನೋಟಕ್ಕೆ ಸಾಬೀತಾದಂತಿದೆ. ಅವರ ಉದ್ದೇಶ ಏನು, ಏಕೆ ಬರೆದರು, ಅವರ ಮುಂದಿನ ನಡೆ ಏನು. ಇದು ಸ್ಯಾಂಪಲ್ಲಾ ಎಂಬೆಲ್ಲಾ ಪ್ರಶ್ನೆಗಳು ಮೂಡಿದೆ. ಪ್ರಕರಣ ದಾಖಲಿಸಿಕೊಂಡಿರೋ ಕಡೂರು ಪೊಲೀಸರು ಎಲ್ಲವಕ್ಕೂ ಪೂರ್ಣವಿರಾಮ ಹಾಕಬೇಕಾಗಿದೆ.

Post a Comment

Previous Post Next Post