Raju Srivastav: ಕಾಮಿಡಿ ಕಿಂಗ್ ಇನ್ನಿಲ್ಲ, ಪ್ರೇಕ್ಷಕರ ನಗಿಸಿದ ಹಾಸ್ಯ ಕಲಾವಿದನಿಗೆ ಕಣ್ಣೀರ ವಿದಾಯ


 ರಾಜು ಶ್ರೀವಾಸ್ತವ್ಹೇ

 Raju Srivastava: ಬಾಲಿವುಡ್ ಕಾಮೆಡಿ ಕಿಂಗ್ ರಾಜು ಶ್ರೀವಾಸ್ತವ್ ಕೊನೆಯುಸಿರೆಳೆದಿದ್ದಾರೆ. ದೆಹಲಿಯ ಏಮ್ಸ್ ಆಸ್ಪತ್ರೆಯಿಂದ ದುಃಖದ ಸುದ್ದಿ ಬಂದಿದ್ದು ನಟ ರಾಜು ಶ್ರೀವಾಸ್ತವ್ ಅವರು ಮೃತಪಟ್ಟಿರುವುದಾಗಿ ತಿಳಿಸಲಾಗಿ

ಪ್ರೇಕ್ಷಕರ ನಕ್ಕು ನಲಿಸಿ, ತಮ್ಮ ನಗಿಸುವ ಪ್ರತಿಭೆಯಿಂದ ಸಿನಿ ಪ್ರಿಯರ ನಗೆಗಡಲಿನಲ್ಲಿ ತೇಲಸಿದ ಬಾಲಿವುಡ್ ಕಾಮೆಡಿ ಕಿಂಗ್ ರಾಜು ಶ್ರೀವಾಸ್ತವ್ (Raju Srivastav) ಕೊನೆಯುಸಿರೆಳೆದಿದ್ದಾರೆ. ದೆಹಲಿಯ (Delhi) ಏಮ್ಸ್ ಆಸ್ಪತ್ರೆಯಿಂದ (AIIMS Hospital) ದುಃಖದ ಸುದ್ದಿ ಬಂದಿದ್ದು ನಟ ರಾಜು ಶ್ರೀವಾಸ್ತವ್ ಅವರು ಮೃತಪಟ್ಟಿರುವುದಾಗಿ ತಿಳಿಸಲಾಗಿದೆ. ಸ್ಟ್ಯಾಂಡ್-ಅಪ್ ಕಾಮಿಡಿಯನ್ ನಿನ್ನೆ ರಾತ್ರಿಯಿಂದ ಬಹಳ ಸೂಕ್ಷ್ಮ ಮತ್ತು ಗಂಭೀರ ಸ್ಥಿತಿಯಲ್ಲಿದ್ದರು. ನಿನ್ನೆ ಸಂಜೆ ರಾಜು ಅವರ ಬಿಪಿ ಮಟ್ಟ ತೀವ್ರವಾಗಿ ಕುಸಿದಿತ್ತು. ಇದನ್ನು ನಂತರ ಸ್ಥಿರಗೊಳಿಸಲಾಗಿದ್ದರೂ ಚಿಕಿತ್ಸೆ (Treatment) ಫಲಕಾರಿಯಾಗದೆ ಅವರು ಕೊನೆಯುಸಿರೆಳೆದಿದ್ದಾರೆ. ಕೋಲ್ಕತ್ತಾದಲ್ಲಿರುವ ಡಾ ಪದ್ಮಾ ಶ್ರೀವಾಸ್ತವ ಅವರನ್ನು ಚಿಕಿತ್ಸೆಗೆ ಕರೆಸಲಾಗಿತ್ತು. ರಾಜು ಶ್ರೀವಾಸ್ತವ ಅವರ ಸೋದರಳಿಯ ಕುಶಾಲ್ ಅವರನ್ನು ರಾಜು ಅವರ ಸಾವಿನ ಮುನ್ನ ಸಂಪರ್ಕಿಸಿದಾಗ,  ನಾವು ಏನದರೂ ಪವಾಡ ನಡೆಯಲಿ ಎಂದು ಆಶಿಸುತ್ತಿದ್ದೇವೆ. ಅದಕ್ಕಾಗಿ ಪ್ರಾರ್ಥಿಸುತ್ತಿದ್ದೇವೆ. ರಾಜು  ಅವರ ಸ್ಥಿತಿ ತುಂಬಾ ಗಂಭೀರವಾಗಿದೆ ಎಂದಿದ್ದರು. ಈ ಘಟನೆ ಬೆನ್ನಲ್ಲೇ ನಟನ ಸಾವಿನ ಸುದ್ದಿ ಹೊರಬಿದ್ದಿದೆ

ರಾಜು ಶ್ರೀವಾಸ್ತವ ಅವರು ದೆಹಲಿಯ ಏಮ್ಸ್‌ನಲ್ಲಿ ಲೈಫ್ ಸಪೋರ್ಟ್ ಸಿಸ್ಟಮ್‌ನಲ್ಲಿದ್ದರು. ಹಾಸ್ಯನಟ 15 ದಿನಗಳ ನಂತರ ವೆಂಟಿಲೇಟರ್ ಸಪೋರ್ಟ್ನಲ್ಲಿ ಬದುಕಿದ್ದರು. ಆದರೂ ಸೆಪ್ಟೆಂಬರ್ 1 ರಂದು, ಅವರಿಗೆ 100 ಡಿಗ್ರಿಗಳಷ್ಟು ಜ್ವರ ಬಂದ ನಂತರ, ಅವರನ್ನು ಮತ್ತೆ ವೆಂಟಿಲೇಟರ್ ಬೆಂಬಲದಲ್ಲಿ ಇರಿಸಲಾಯಿ

 ಸಿನಿಮಾದಲ್ಲಿಯೂ ನಟನೆ

ಶ್ರೀವಾಸ್ತವ ಅವರು 1980 ರ ದಶಕದಿಂದ ಮನರಂಜನಾ ಉದ್ಯಮದಲ್ಲಿ ಕೆಲಸ ಮಾಡಿದ್ದಾರೆ. 2005 ರಲ್ಲಿ ಸ್ಟ್ಯಾಂಡ್-ಅಪ್ ಕಾಮಿಡಿ ಶೋ "ದಿ ಗ್ರೇಟ್ ಇಂಡಿಯನ್ ಲಾಫ್ಟರ್ ಚಾಲೆಂಜ್" ನ ಮೊದಲ ಸೀಸನ್‌ನಲ್ಲಿ ಭಾಗವಹಿಸಿದ ನಂತರ ಅವರು ಹೆಚ್ಚು ಮನ್ನಣೆ ಪಡೆದರು. ಅವರು 'ಮೈನೆ ಪ್ಯಾರ್ ಕಿಯಾ', 'ಆಮ್ದಾನಿ' ಮುಂತಾದ ಚಲನಚಿತ್ರಗಳಲ್ಲಿ ಕಾಣಿಸಿಕೊಂಡಿದ್ದ

ಇದನ್ನೂ ಓದಿ: Hrithik Roshan: ಕಹೋ ನಾ ಪ್ಯಾರ್ ಹೈ ಚಿತ್ರಕ್ಕೂ ಮೊದಲೇ ಹೃತಿಕ್‍ಗೆ ಡಾಕ್ಟ್ರು ಡ್ಯಾನ್ಸ್ ಮಾಡಬೇಡಿ ಅಂತ ಹೇಳಿದ್ರಂತೆ ರು.ತು..ದೆ.ಳಿದ್ರಂತೆ

Post a Comment

Previous Post Next Post