ಸಾಂದರ್ಭಿಕ ಚಿತ್ರ
Ola Layoff: ಪ್ರಸ್ತುತ ಸಾಫ್ಟ್‌ಬ್ಯಾಂಕ್ ಮತ್ತು ಟೈಗರ್ ಗ್ಲೋಬಲ್ ಬೆಂಬಲಿತ ಕಂಪನಿಯು ತನ್ನ ಎಲೆಕ್ಟ್ರಿಕ್ ಬೈಕುಗಳಿಗೆ ಅಷ್ಟಾಗಿ ಬೇಡಿಕೆ ಪಡೆಯುವಲ್ಲಿ ವಿಫಲವಾಗಿದೆ. ನಾಯಕತ್ವ ತಂಡದಿಂದ ಅನೇಕ ಉನ್ನತ ಹುದ್ದೆಯಲ್ಲಿರುವ ಉದ್ಯೋಗಿಗಳು ಕಂಪನಿಯಿಂದ ಹೊರ ಹೋಗಿದ್ದಾರೆ
ಈ ಖಾಸಗಿ ಕಂಪನಿಗಳಲ್ಲಿ ಕೆಲಸ ಮಾಡುವವರಿಗೆ ಸದಾ ‘ಎಲ್ಲಿ ಆರ್ಥಿಕ ಸಂಕಷ್ಟದ (Economical Problem) ಕಾರಣ ನೀಡಿ ಕೆಲಸದಿಂದ ತೆಗೆದು ಹಾಕುತ್ತಾರೋ ಮಾಲೀಕರು’ ಅಂತ ಒಂದು ಆತಂಕ ಮನಸ್ಸಿನಲ್ಲಿ ಇದ್ದೇ ಇರುತ್ತದೆ ಅಂತ ಹೇಳಿದರೆ ಸುಳ್ಳಾಗುವುದಿಲ್ಲ. ಇತ್ತೀಚೆಗೆ ಓಲಾ ಕಂಪನಿಯು (Ola Company) ತನ್ನ ಕಂಪನಿಯಲ್ಲಿ ಕೆಲಸ ಮಾಡುವ ಇಂಜಿನಿಯರ್ಗಳನ್ನು ಕೆಲಸದಿಂದ ತೆಗೆದು ಹಾಕಲಾಗುತ್ತದೆ ಅಂತ ಹೇಳಿತ್ತು. ಈ ವಿಷಯ ತಿಳಿದ ಉದ್ಯೋಗಿಗಳು ಮುಂದೆ ಹೇಗೆ? ಏನು? ಅಂತ ಆತಂಕದಲ್ಲಿ ಕಾಲ ಕಳೆಯುತ್ತಿದ್ದರು ಅಂತ ಹೇಳಬಹುದು. ಆದರೆ ಇಲ್ಲೊಂದು ಒಳ್ಳೆಯ ಸುದ್ದಿ ಇದೆ ನೋಡಿ, ಅದೇನೆಂದರೆ ಸದ್ಯಕ್ಕೆ ತನ್ನ ಕಂಪನಿಯಲ್ಲಿ ಕೆಲಸ ಮಾಡುತ್ತಿರುವಂತಹ ಇಂಜಿನಿಯರ್ ಗಳನ್ನು ಕೆಲಸದಿಂದ ತೆಗೆದು ಹಾಕಬಾರದು (Layoff Plan) ಅಂತ ಕಂಪನಿ ನಿರ್ಧರಿಸಿದೆ ಎಂದು ತಿಳಿದುಬಂದಿದೆ
ರೈಡ್-ಶೇರಿಂಗ್ ಮತ್ತು ಮೊಬಿಲಿಟಿ ಕಂಪನಿಯ ಹಿರಿಯ ಅಧಿಕಾರಿಗಳು ಹಠಾತ್ ವಜಾ ಯೋಜನೆಗಳಿಂದಾಗಿ ಉಂಟಾದ ಆತಂಕಕ್ಕಾಗಿ ತಮ್ಮ ತಂಡದ ಸದಸ್ಯರಿಗೆ ಕ್ಷಮೆಯಾಚಿಸಿದ್ದಾರೆ ಮತ್ತು ಸದ್ಯಕ್ಕೆ ಯಾವುದೇ ರೀತಿಯ ಉದ್ಯೋಗ ಕಡಿತಗಳು ಇರುವುದಿಲ್ಲ ಎಂದು ಈ ವಿಷಯದ ಬಗ್ಗೆ ತಿಳಿದಿರುವ ಮೂಲಗಳು ಅನಾಮಧೇಯತೆಯ ಷರತ್ತಿನ ಮೇಲೆ ಸುದ್ದಿ ಮಾಧ್ಯಮಕ್ಕೆ ತಿಳಿಸಿದ್ದಾ
ಉದ್ಯೋಗಿಗಳಿಗೆ ಭರವಸೆ
ಓಲಾ ಕಂಪನಿಯ ಬದಲಾಗುತ್ತಿರುವ ಅವಶ್ಯಕತೆಗಳನ್ನು ಪೂರೈಸಲು ಅನುಕೂಲವಾಗುವಂತೆ ಅವರನ್ನು ಮರು ಕೌಶಲ್ಯಗೊಳಿಸುವ ಮಾರ್ಗಗಳನ್ನು ಕಂಡುಕೊಳ್ಳುವುದಾಗಿ ವ್ಯವಸ್ಥಾಪಕರು ತಮ್ಮ ತಂಡದಲ್ಲಿ ಕೆಲಸ ಮಾಡುವ ಉದ್ಯೋಗಿಗಳಿಗೆ ಭರವಸೆ ನೀಡಿದರು ಎಂದು ಮೂಲಗಳು ತಿಳಿಸಿವೆ
ಓಲಾ ಸಂಸ್ಥಾಪಕರು ವ್ಯವಸ್ಥಾಪಕರಿಗೆ ಹೇಳಿದ್ದೇ
"ಬಿಗ್ ಬಾಸ್ (ಓಲಾ ಸಂಸ್ಥಾಪಕ ಭವಿಶ್ ಅಗರ್ವಾಲ್) ವ್ಯವಸ್ಥಾಪಕರನ್ನು ತಮ್ಮ ತಂಡದಲ್ಲಿರುವ ಇಂಜಿನಿಯರ್ ಗಳ ಕ್ಷಮೆಯಾಚಿಸುವಂತೆ ಮತ್ತು ತಮ್ಮ ತಂಡಗಳಲ್ಲಿರುವ ಸದಸ್ಯರನ್ನು ಶಾಂತಗೊಳಿಸಲು ಕೇಳಿಕೊಂಡಿದ್ದಾರೆ" ಎಂದು ಮೇಲೆ ಉಲ್ಲೇಖಿಸಿದ ಎರಡು ಮೂಲಗಳಲ್ಲಿ ಒಂದು ಮೂಲ ತಿಳಿಸಿದೆ
ಗುರುವಾರ ಟೌನ್‌ಹಾಲ್ ನಲ್ಲಿ ಓಲಾ ಕಂಪನಿಯ ಹಿರಿಯ ಅಧಿಕಾರಿಗಳು ಈ ಸುದ್ದಿಯಿಂದಾಗಿ ಉಂಟಾದ ಒತ್ತಡ ಮತ್ತು ಉದ್ವಿಗ್ನತೆಗೆ ವಿಷಾದಿಸುವುದಾಗಿ ತಮ್ಮ ತಂಡದ ಸದಸ್ಯರಿಗೆ ತಿಳಿಸಿದರು. ಟೌನ್‌ಹಾಲ್ ಬಗ್ಗೆ ಕೇಳಿದಾಗ, ಓಲಾ ತನ್ನ ನಿರ್ಧಾರವು ಉದ್ಯೋಗಿಗಳನ್ನು ಆತಂಕಕ್ಕೀಡು ಮಾಡಿತ್ತು ಎಂದು ಒಪ್ಪಿಕೊಂಡಿ
ಸುದ್ದಿ ಮಾಧ್ಯಮಗಳಿಗೆ ತಿಳಿಸಿದ್ದಿ
"ಉತ್ಪಾದಕತೆಯ ಮೌಲ್ಯಮಾಪನವನ್ನು ನಾವು ನಿರ್ವಹಿಸುತ್ತಿದ್ದ ರೀತಿ ಬಹುಶಃ ನಾವು ಬಯಸಿದಷ್ಟು ಪರಿಣಾಮಕಾರಿಯಾಗಿಲ್ಲ" ಎಂದು ಓಲಾ ಕಂಪನಿ ಸುದ್ದಿ ಮಾಧ್ಯಮಕ್ಕೆ ತಿಳಿಸಿದರು
ಇದನ್ನೂ ಓದಿ: Shocking: ಕಿಸೆಯಲ್ಲಿ ಕಾಂಡೋಮ್ ಸಿಕ್ಕಿದ್ದಕ್ಕೆ ಗುಂಡಿಕ್ಕಿದ ಪೊಲೀಸ್
"ಈ ಪ್ರಕ್ರಿಯೆಯನ್ನು ನಿರ್ವಹಿಸಲು ಉತ್ತಮ ಮಾರ್ಗವನ್ನು ಕಂಡುಹಿಡಿಯಲು" ಪ್ರಯತ್ನಿಸುತ್ತಿದೆ ಎಂದು ಅವರು ಹೇಳಿದರು. ಪುನರ್ರಚನೆಯ ಭಾಗವಾಗಿ ತನ್ನ ಶೇಕಡಾ 10 ರಷ್ಟು ಇಂಜಿನಿಯರ್ ಗಳನ್ನು ಕೆಲಸದಿಂದ ತೆಗೆದು ಹಾಕುವುದಾಗಿ ಕಂಪನಿಯು ಹೇಳಿದ ಕೇವಲ ಮೂರು ದಿನಗಳ ನಂತರ ಈ ಸುದ್ದಿ ಹೊರ ಬಂದಿ
ವಿಷಯ ತಿಳಿದು ಉದ್ಯೋಗಿಗಳು ಭಯಭೀತರಾಗಿದ್ದಾರಂ
"ಉದ್ಯೋಗಿಗಳು ಭಯಭೀತರಾಗಿದ್ದರು, ಪಾರದರ್ಶಕತೆ ಇರಲಿಲ್ಲ ಮತ್ತು ನಮಗೆ ಏನಾಗುತ್ತದೆ ಮುಂದೆ ಅಂತ ಏನು ತಿಳಿದಿರಲಿಲ್ಲ" ಎಂದು ಓಲಾದಲ್ಲಿ ಕೆಲಸ ಮಾಡುತ್ತಿರುವ ಉದ್ಯೋಗಿಯೊಬ್ಬರು ಸುದ್ದಿ ಮಾಧ್ಯಮಕ್ಕೆ ತಿಳಿಸಿದ್ದಾರೆ. ಉದ್ಯೋಗದಲ್ಲಿ ಯಾವುದೇ ರೀತಿಯ ಕಡಿತಗಳು ಇರುವುದಿಲ್ಲ ಮತ್ತು ಅವರು ಸದ್ಯಕ್ಕೆ ಯಾರನ್ನೂ ಕೆಲಸದಿಂದ ತೆಗೆದು ಹಾಕುವುದಿಲ್ಲ" ಎಂದು ಕಂಪನಿ ದೃಢಪಡಿಸಿದೆ ಎಂದು ವ್ಯಕ್ತಿಯೊಬ್ಬರು ಹೇಳಿದರು
ವ್ಯವಸ್ಥಾಪಕರು ತಮ್ಮ ತಂಡಗಳಿಗೆ "ನಾವು ಇನ್ನೂ ಉತ್ತಮವಾಗಿ ಕೆಲಸವನ್ನು ಮಾಡಬೇಕಾಗಿದೆ" ಎಂದು ತಿಳಿಸಿದರು, ಮೇಲೆ ಉಲ್ಲೇಖಿಸಿದ ಮೊದಲ ಮೂಲವು, ಅಪ್ ಸ್ಕಿಲ್ಲಿಂಗ್ ಕಾರ್ಯತಂತ್ರವನ್ನು ಚರ್ಚಿಸಲು ಅವರು ಈಗ ತಮ್ಮ ತಂಡಗಳನ್ನು ಪ್ರತ್ಯೇಕವಾಗಿ ಭೇಟಿಯಾಗಲಿದ್ದಾರೆ ಎಂದು ಹೇಳಿದ
ಉದ್ಯೋಗ ಕಡಿತಗಳು ಸದ್ಯಕ್ಕೆ ಆಗುವುದಿಲ್ಲ ಎಂದ
ತಾನು ಮೊದಲು ತಿಳಿಸಿದ್ದ 200 ಉದ್ಯೋಗ ಕಡಿತಗಳು ಸದ್ಯಕ್ಕೆ ಆಗುವುದಿಲ್ಲ ಎಂದು ಓಲಾ ದೃಢಪಡಿಸಿದರೂ, ಉತ್ಪಾದಕತೆ ಮೌಲ್ಯಮಾಪನದ ಮರು ಮೌಲ್ಯಮಾಪನದ ಆಧಾರದ ಮೇಲೆ ನಂತರದ ಸಮಯದಲ್ಲಿ ಪುನರಾವರ್ತನೆಗಳು ಸಂಭವಿಸುವ ಸಾಧ್ಯತೆಯನ್ನು ಅದು ತಳ್ಳಿ ಹಾಕಲಿಲ್ಲ
ಇದನ್ನೂ ಓದಿ: Uttar Pradesh: ಯೋಗಿ ಸರ್ಕಾರದ ಮಹತ್ವದ ಹೆಜ್ಜೆ: ರೇಪ್ ಕೇಸಲ್ಲಿ ಸಿಗಲ್ಲ ನಿರೀಕ್ಷಣಾ ಜಾಮೀನು, ಮಸೂದೆ ಅಂಗೀಕಾ
ಪ್ರಸ್ತುತ ಸಾಫ್ಟ್‌ಬ್ಯಾಂಕ್ ಮತ್ತು ಟೈಗರ್ ಗ್ಲೋಬಲ್ ಬೆಂಬಲಿತ ಕಂಪನಿಯು ತನ್ನ ಎಲೆಕ್ಟ್ರಿಕ್ ಬೈಕುಗಳಿಗೆ ಅಷ್ಟಾಗಿ ಬೇಡಿಕೆ ಪಡೆಯುವಲ್ಲಿ ವಿಫಲವಾಗಿದೆ. ನಾಯಕತ್ವ ತಂಡದಿಂದ ಅನೇಕ ಉನ್ನತ ಹುದ್ದೆಯಲ್ಲಿರುವ ಉದ್ಯೋಗಿಗಳು ಕಂಪನಿಯಿಂದ ಹೊರ ಹೋಗಿದ್ದಾ
WWW.publicvahini.com ರೆ.ರ!.ಓಲಾರು..ತೆ!ದೆ.!.ಷ್ಟುತು..ನು?.ರೆ
Post a Comment