Kodagu: ಸಿಕ್ಕ ಎಟಿಎಂ ಕಾರ್ಡ್​ನಿಂದ ಹಣ ಡ್ರಾ ಮಾಡಿದ; ತಗ್ಲಾಕೊಂಡಿದ್ದು ಹೇಗೆ ಗೊತ್ತಾ?


  ಕಳೆದುಕೊಂಡ ಹಣ ವಾಪಸ್ ದೊರೆಯುವಲ್ಲಿ ಸಹಕರಿಸಿದ ಆ ವಾಟ್ಸಾಪ್ ಗ್ರೂಪಿಗೂ ಅದರ ಸದಸ್ಯರಿಗೂ  ಮತ್ತು ಸುಂಟಿಕೊಪ್ಪ ಪೊಲೀಸರಿಗು ಹಾಗೆಯೇ ಯೂನಿಯನ್ ಬ್ಯಾಂಕಿನ ಅಧಿಕಾರಿಗಳು ಸುರೇಶ್ ಅವರು ಧನ್ಯವಾದಗಳನ್ನು ಸಲ್ಲಿಸಿದ್ದಾರೆ.

 ಕೊಡಗು: ಕೊಡಗು (Kodagu) ಜಿಲ್ಲೆಯ ಸೋಮವಾರಪೇಟೆ ತಾಲ್ಲೂಕಿನ ಮಾದಾಪುರದ (Madapura, Somavaeapete) ಜಂಬೂರು ಟಾಟಾ ಕಾಫಿ ತೋಟದ ಸಿಬ್ಬಂದಿ (Coffee Plant Staff) ಒಬ್ಬರು ಆಕಸ್ಮಿಕವಾಗಿ ಎಟಿಎಂ ಕೇಂದ್ರದಲ್ಲಿ (ATM Centre) ಬಿಟ್ಟು ಹೋಗಿದ್ದ ಕಾರ್ಡ್ನ್ನು (ATM Card) ಬಳಸಿ 15,000 ರೂಪಾಯಿಯನ್ನು ದೋಚಿದ್ದ ಖದೀಮ ಸಾಮಾಜಿಕ ಜಾಲತಾಣಗಳ ನೆರವಿನಿಂದ ಸಿಕ್ಕಿಬಿದ್ದ ಘಟನೆ ನಡೆದಿದೆ. ಜಂಬೂರು ಟಾಟಾ ಕಾಫಿ ತೋಟದ ಸಿಬ್ಬಂದಿ ಎಂ.ಎನ್.ಸುರೇಶ್ ಅವರು 7ನೇ ಹೊಸಕೋಟೆಯ ಯೂನಿಯನ್ ಬ್ಯಾಂಕ್ ಎಟಿಎಂ (Union Bank ATM) ನಲ್ಲಿ ತಮ್ಮ ಎಟಿಎಂ ಕಾರ್ಡ್ ಮರೆತು ಬಿಟ್ಟು ಹೋಗಿದ್ದರು. ಆ ಎಟಿಎಂ ಕಾರ್ಡ್ ಅನ್ನು ಅಪರಿಚಿತ ವ್ಯಕ್ತಿಯೋರ್ವ ಉಪಯೋಗಿಸಿ ರೂ.15,000 ರೂಪಾಯಿಯನ್ನು  ಡ್ರಾ ಮಾಡಿ (Money Withdraw) ತನ್ನ ಜೇಬಿಗೆ ಇಳಿಸಿಕೊಂಡಿದ್ದನು. ಸುರೇಶ್ ಅವರ ಎಟಿಎಂ  ಕಾರ್ಡ್ ಉಪಯೋಗಿಸಿದ ಆ ಅಪರಿಚಿತ ಹಣ ಡ್ರಾ ಮಾಡಿ ವಂಚಿಸಿರುವುದು ಸಿಸಿ ಕ್ಯಾಮೆರಾದಲ್ಲಿ (CCTV Footage) ಸೆರೆಯಾಗಿತ್ತು. ಈ ದೃಶ್ಯಾವಳಿಯನ್ನು ಕಳೆದ ಬುಧವಾರ ರಾತ್ರಿ ಕ್ಯೂಟ್ ಕೂರ್ಗ್ (Cute Coorg) ಎಂಬ ವಾಟ್ಸಾಪ್ ಗ್ರೂಪಿನಲ್ಲಿ (Whats app Group) ಮಾಹಿತಿ ಸಹಿತ  ಹರಿಬಿಡಲಾಗಿತ್ತು. ಕೆಲವರು ಈ ವಿಡಿಯೋವನ್ನು (Video) ಸೋಶಿಯಲ್ ಮೀಡಿಯಾದಲ್ಲಿಯೂ (Social Media) ಹಂಚಿಕೊಂಡಿದ್ದರು

ಈ ಕೃತ್ಯ ಎಸಗಿದವರ ಮಾಹಿತಿ ನೀಡುವಂತೆ ಮನವಿ ಮಾಡಿಕೊಳ್ಳಲಾಗಿತ್ತು. ಈ ಸುದ್ದಿ ಮತ್ತು ವಿಡಿಯೋ ತುಣುಕುಗಳು ಆ ವಾಟ್ಸಾಪ್ ಗುಂಪಿನಲ್ಲಿ ಹರದಾಡುತ್ತಿರುವ ವಿಷಯ ಕಾರ್ಡ್ ಬಳಸಿ ಎಟಿಎಂ ನಿಂದ ಹಣ ಡ್ರಾ ಮಾಡಿ ಜೇಬಿಗೆ ಇಳಿ ಬಿಟ್ಟವನ ಜೊತೆಯಲ್ಲಿದ್ದವನ ಗಮನಕ್ಕೆ ಹೋಗಿತ್ತು

 ವಿಡಿಯೋ ನೋಡಿ ಫೋನ್ ಮಾ

ಈ ವಿಷಯ ಅವನಿಗೆ ಗೊತ್ತಾಗುತ್ತಿದ್ದ ಅವನು ಪತರಗುಟ್ಟಿ ಹೋಗಿದ್ದ. ಮಾನಕ್ಕೆ ಅಂಜಿದ ಈತ ನಂತರ ಸುರೇಶ್ ಅವರಿಗೆ ಕರೆ ಮಾಡಿದ್ದಾನೆ. ಎಟಿಎಂನಲ್ಲಿ  ನಾನು ದುಡ್ಡು ತೆಗೆದುಕೊಂಡಿಲ್ಲ. ಡ್ರಾ ಮಾಡಿದ್ದು ಅವನು, ದುಡ್ಡು ತೆಗೆದುಕೊಂಡಿದ್ದು ಅವನು. ನಾನು ಡ್ರಾ ಮಾಡುವುದು ಬೇಡ, ಬ್ಯಾಂಕ್ ಗೆ ಇಲ್ಲವೇ ಪೊಲೀಸ್ ಠಾಣೆಗೆ (Police Station) ಎಟಿಎಂ ಕಾರ್ಡ್ ಒಪ್ಪಿಸುವ ಎಂದು ಹೇಳಿದೆ. ಆದರೆ ಅವನು ನನ್ನ ಮಾತನ್ನು ಕೇಳದೆ ದುಡ್ಡು ಡ್ರಾ ಮಾಡಿ ತೆಗೆದುಕೊಂಡಿದ್ದಾನೆ ಎಂದು ಪ್ರತಿ ವಿಷಯವನ್ನು ಎಳೆ ಎಳೆಯಾಗಿ ಹಣ ಕಳೆದುಕೊಂಡ ಸುರೇಶ್ ಅವರಿಗೆ ಒಪ್ಪಿಸಿದ್ದಾನೆ. ಅಲ್ಲದೇ ಹಣ ಡ್ರಾ ಮಾಡಿದಾತನ ಮಾಹಿತಿ ನೀಡಿದ್ದಾನೆ


. ಡಿದ..ನೆ. ಎಟಿಎಂ ಕೇಂದ್ರ

ಇದನ್ನೂ ಓದಿ: Kodagu: ಮಳೆಗಾಲದಲ್ಲೂ ಬೇಗ ಬಟ್ಟೆ ಒಣಗಿಸಿ! ಇದು ಕೊಡವರ ಐಡಿಯಾ!

15 ಸಾವಿರ ಹಣ ಹಿಂದಿರುಗಿಸಿದ

ಈತ ನೀಡಿದ ಪ್ರತಿ ಮಾಹಿತಿಯನ್ನು ಸುರೇಶ್ ಅವರು ಸುಂಟಿಕೊಪ್ಪ (Suntikoppa Police Station) ಪೊಲೀಸ್ ಠಾಣೆಗೆ ತಿಳಿಸಿದ್ದಾರೆ. ದೂರು ಸ್ವೀಕರಿಸಿದ ಪೊಲೀಸರು ಹಣ ಎಗರಿಸಿದವನನ್ನು ಕರೆಸಿ ವಿಚಾರಣೆಗೆ ಒಳಪಡಿಸಿದ್ದಾರೆ. ಆಗ ಆತ ತನ್ನ ಬಂಡವಾಳವೆಲ್ಲ ಬಯಲಾತೆಂದು ತನ್ನ ತಪ್ಪು ಒಪ್ಪಿಕೊಂಡು ರೂ. 15,000 ವನ್ನು ಸುರೇಶ್ ಅವರಿಗೆ ಹಿಂತಿರುಗಿಸಿದ್ದಾನೆ. ಅಲ್ಲಿಗೆ ಈ ಪ್ರಕರಣ ಸುಖಾಂತ್ಯವಾಗಿದೆ.

ಇದನ್ನೂ ಓದಿ: Mahadeshwara Hill: ಮಹದೇಶ್ವರ ಬೆಟ್ಟದ ಮಾರ್ಗದಲ್ಲಿ ರಾತ್ರಿ 6 ಚಕ್ರದ ವಾಹನಗಳ ಸಂಚಾ


ರ ನಿಷೇಧಸಾಂದರ್ಭಿಕ ಚಿತ್ರ

ವಾಟ್ಸಪ್ ಗ್ರೂಪ್ ನಿಂದ ತಗ್ಲಾಕೊಂ

ಕಳೆದುಕೊಂಡ ಹಣ ವಾಪಸ್ ದೊರೆಯುವಲ್ಲಿ ಸಹಕರಿಸಿದ ಆ ವಾಟ್ಸಾಪ್ ಗ್ರೂಪಿಗೂ ಅದರ ಸದಸ್ಯರಿಗೂ  ಮತ್ತು ಸುಂಟಿಕೊಪ್ಪ ಪೊಲೀಸರಿಗು ಹಾಗೆಯೇ ಯೂನಿಯನ್ ಬ್ಯಾಂಕಿನ ಅಧಿಕಾರಿಗಳು ಸುರೇಶ್ ಅವರು ಧನ್ಯವಾದಗಳನ್ನು ಸಲ್ಲಿಸಿದ್ದಾರೆ. ಅಂದಹಾಗೇ ಹಣ ಡ್ರಾ ಮಾಡಿದವ ಸೆವೆಂತ್ ಮೈಲ್ ಹಾಗೂ ಈತನ ಜೊತೆಗಿದ್ದವ ಸುಂಟಿಕೊಪ್ಪದವನು ಎಂದು ಹೇಳಲಾಗಿದೆ.ಡ

Post a Comment

Previous Post Next Post