Ghulam Nabi Azad: ಡೆಮಾಕ್ರಟಿಕ್ ಆಜಾದ್ ಪಾರ್ಟಿ ರಾಜಕೀಯ ಕಣಕ್ಕೆ; ವಿರೋಧಿ ಬಿಜೆಪಿಯಾ ಕಾಂಗ್ರೆಸ್ಸಾ?


 ಪ್ರಧಾನಿ ಮೋದಿ, ಗುಲಾಂ ನಬಿ ಆಜಾದ್, ಸೋನಿಯಾ ಗಾಂಧಿ

 ಸ್ವತಂತ್ರ ಆಲೋಚನೆ ಮತ್ತು ಸಿದ್ಧಾಂತಕ್ಕೆ ಡೆಮಾಕ್ರಟಿಕ್ ಆಜಾದ್ ಪಾರ್ಟಿ ಒತ್ತು ನೀಡಲಿದೆ ಎಂದು ಗುಲಾಂ ನಬಿ ಆಜಾದ್ ಘೋಷಿಸಿದ್ದಾರೆ

ದೆಹಲಿ: ಗುಲಾಂ ನಬಿ ಆಜಾದ್ (Ghulam Nabi Azad) ಕೊನೆಗೂ ತಮ್ಮ ಹೊಸ ಪಕ್ಷಕ್ಕೆ ಹೆಸರು ಘೋಷಿಸಿದ್ದಾರೆ. ಹೊಸ ಪಕ್ಷಕ್ಕೆ ಡೆಮಾಕ್ರಟಿಕ್ ಆಜಾದ್ ಪಾರ್ಟಿ ( Democratic Azad Party) ಎಂದು ಅವರು ಹೆಸರಿಟ್ಟಿದ್ದಾರೆ. ಅಲ್ಲದೇ ಈ ಹೊಸ ಪಕ್ಷದ ಧ್ವಜವನ್ನೂ ಅವರು ಅನಾವರಣಗೊಳಿಸಿದ್ದಾರೆ. ಸ್ವತಂತ್ರ ಆಲೋಚನೆ ಮತ್ತು ಸಿದ್ಧಾಂತಕ್ಕೆ ಡೆಮಾಕ್ರಟಿಕ್ ಆಜಾದ್ ಪಾರ್ಟಿ ಒತ್ತು ನೀಡಲಿದೆ ಎಂದು ಗುಲಾಂ ನಬಿ ಆಜಾದ್ ಘೋಷಿಸಿದ್ದಾರೆ. ಕಾಂಗ್ರೆಸ್ ತೊರೆದು ಹೊಸ ಪಕ್ಷದ ಮೂಲಕ ಜಮ್ಮು ಕಾಶ್ಮೀರದಲ್ಲಿ ಚುನಾವಣೆಗೆ ಸ್ಪರ್ಧೆ ನಡೆಸುವುದಾಗಿ ಅವರು ಈ ಮುನ್ನವೇ ಘೋಷಣೆ ಮಾಡಿದ್ದರು.

ಹಿರಿಯ ಕಾಂಗ್ರೆಸ್ ನಾಯಕ ಗುಲಾಂ ನಬಿ ಆಜಾದ್  ಪ್ರಾಥಮಿಕ ಸದಸ್ಯತ್ವ ಸೇರಿದಂತೆ ಕಾಂಗ್ರೆಸ್ ಪಕ್ಷದ ಎಲ್ಲ ಸ್ಥಾನಗಳಿಗೆ ರಾಜೀನಾಮೆ ನೀಡಿದ್ದರು. ಕಾಂಗ್ರೆಸ್ ಅಧ್ಯಕ್ಷೆ ಸೋನಿಯಾ ಗಾಂಧಿ ಅವರನ್ನು ಉದ್ದೇಶಿಸಿ ಪತ್ರ ಬರೆದಿದ್ದ ಗುಲಾಂ ನಬಿ ಆಜಾದ್, ಹಿರಿಯ ನಾಯಕರನ್ನು ಬದಿಗಿರಿಸುವ ಪ್ರವೃತ್ತಿ ಹೆಚ್ಚುತ್ತಿರುವ ಕಾರಣವನ್ನು ಪಕ್ಷದಿಂದ ನಿರ್ಗಮಿಸಲು ಕಾರಣವೆಂದು ಉಲ್ಲೇಖಿಸಿದ್ದ

ಜಿ 23 ಗುಂಪಿನ ಪ್ರಮುಖ ಸದಸ್ಯ

ಆಜಾದ್ ಅವರು ಕಾಂಗ್ರೆಸ್‌ನ 'ಜಿ23' ಗುಂಪಿನ ಪ್ರಮುಖ ಸದಸ್ಯರಾಗಿದ್ದರು. ಈ ಗುಂಪು ಪಕ್ಷದ ನಾಯಕತ್ವವನ್ನು ಟೀಕಿಸುತ್ತಿದೆ. ಸಂಘಟನೆಯ ಬದಲಾವಣೆಗೆ ಒತ್ತಾಯಿಸುತ್ತಿದೆ. ರಾಜ್ಯಸಭೆಯಿಂದ ನಿವೃತ್ತರಾದ ನಂತರ ಆಜಾದ್ ಅವರನ್ನು ಮತ್ತೆ ಮೇಲ್ಮನೆಗೆ ಕಳುಹಿಸಿಲ್ಲ ಎಂಬುವುದು ಉಲ್ಲೇಖನೀ

ಮೊದಲೇ ಕಾಂಗ್ರೆಸ್ ತ್ಯಜಿಸುವ ಸುಳಿವು ನೀಡಿದ್ದ ಆಜಾ

ಆಗಸ್ಟ್ 16 ರಂದು ಗುಲಾಂ ನಬಿ ಆಜಾದ್ ಜಮ್ಮು ಮತ್ತು ಕಾಶ್ಮೀರ ಕಾಂಗ್ರೆಸ್ ಪ್ರಚಾರ ಸಮಿತಿಯ ಮುಖ್ಯಸ್ಥ ಸ್ಥಾನವನ್ನು ತ್ಯಜಿಸಿದ್ದರು. ಆಗಲೇ ಅವರು ಇನ್ನಷ್ಟು ಮಹತ್ವದ ನಿರ್ಧಾರ ಕೈಗೊಳ್ಳುವ ಸುಳಿವು ಲಭ್ಯವಾಗಿತ್ತು

ಇದನ್ನೂ ಓದಿ: Rajasthan Politics: ಸಚಿನ್ ಪೈಲಟ್ ಸಿಎಂ ಆಗೋ ಹಾದಿಯಲ್ಲಿ ಮುಳ್ಳಾದ ಅಶೋಕ್ ಗೆಹ್ಲೋಟ್ ಆ ಮೂರು ಷರ

ಓಮರ್ ಅಬ್ದುಲ್ಲಾ ಪ್ರತಿಕ್ರಿಯೆ ಹೀಗಿತ್ತು

ಗುಲಾಂ ನಬಿ ಆಜಾದ್ ಅವರ ರಾಜೀನಾಮೆಯ ಕುರಿತು ಪ್ರತಿಕ್ರಿಯೆ ನೀಡಿದ್ದ ಓಮರ್ ಅಬ್ದುಲ್ಲಾ, "ದೀರ್ಘ ಕಾಲದಿಂದಲೂ ಕಾಂಗ್ರೆಸ್‌ಗೆ ಹೊಡೆತ ಬೀಳಲಿದೆ ಎಂದು ವದಂತಿಗಳಿತ್ತು. ಬಹುಶಃ ಇತ್ತೀಚಿನ ದಿನಗಳಲ್ಲಿ ಪಕ್ಷವನ್ನು ತೊರೆದ ಅತ್ಯಂತ ಹಿರಿಯ ನಾಯಕ ಗುಲಾಂ ನಬಿ ಆಜಾದ್. ಅವರ ರಾಜೀನಾಮೆ ಪತ್ರವು ತುಂಬಾ ನೋವಿನಿಂದ ಕೂಡಿದೆ. ಭಾರತದ ಭವ್ಯವಾದ ಹಳೆಯ ಪಕ್ಷವು ಸ್ಫೋಟಗೊಳ್ಳುವುದನ್ನು ನೋಡಲು ದುಃಖಕರವಾಗಿದೆ ಮತ್ತು ಸಾಕಷ್ಟು ಭಯಾನಕವಾಗಿದೆ" ಎಂದು ಟ್ವೀಟ್ ಮಾಡಿದ್ದ

ಇದನ್ನೂ ಓದಿ: Hindu: ಹಿಂದೂವಾಗಲು ಧರ್ಮ ಬದಲಾಯಿಸಬೇಕೆಂದಿಲ್ಲ, ಭಾರತದಲ್ಲಿರುವ ಎಲ್ಲರೂ ಹಿಂದೂಗಳೇ: ಮೋಹನ್ ಭಾಗವ

50 ವರ್ಷಗಳ ಕಾಲ ವಿರೋಧ ಪಕ್ಷದಲ್ಲೇ ಕಾಂಗ್ರೆ

ಪ್ರಜಾಪ್ರಭುತ್ವದ ನಿಯಮದಂತೆ ಕಾಂಗ್ರೆಸ್‌ ಪಕ್ಷದಲ್ಲಿ ಆಂತರಿಕ ಚುನಾವಣೆ ನಡೆಯದಿದ್ದರೆ, ಕಾಂಗ್ರೆಸ್‌ ಪಕ್ಷ ಇನ್ನೂ 50 ವರ್ಷಗಳ ಕಾಲ ವಿರೋಧ ಪಕ್ಷದ ಸ್ಥಾನದಲ್ಲೇ ಇರಬೇಕಾಗುತ್ತದೆ ಎಂದು ರಾಜ್ಯಸಭಾ ಸದಸ್ಯ ಹಾಗೂ ಕಾಂಗ್ರೆಸ್‌ ಪಕ್ಷದ ಹಿರಿಯ ನಾಯಕ ಗುಲಾಂ ನಬಿ ಆಜಾದ್‌ ಎಚ್ಚರಿಕೆ ನೀಡಿದ್ದರು. ಸ್ತ್ರು.ತ್ತು.ದ್ಯ.ರು. . ಎಚ್ಚರಿಕೆ ನೀಡಿದ್ದರು.

Post a Comment

Previous Post Next Post