ರಾಹುಲ್ ಗಾಂಧಿ ಮತ್ತು ಸೋನಿಯಾ ಗಾಂಧಿ
ಕಾಂಗ್ರೆಸ್ ಪಕ್ಷದ ಉನ್ನತ ಸ್ಥಾನವನ್ನು ಅಲಂಕರಿಸಲು ಪಕ್ಷದ ಹಿರಿಯ ನಾಯಕರುಗಳಲ್ಲಿಬ್ಬರಾದ ರಾಜಸ್ಥಾನದ ಸಿಎಂ ಅಶೋಕ್ ಗೆಹ್ಲೋಟ್ ಹಾಗೂ ಶಶಿ ಥರೂರ್ ಮತದಾನದಲ್ಲಿ ಸ್ಪರ್ಧಿಸಲಿದ್ದಾರೆ. ಈ ಸುದ್ದಿಯು ಈಗಾಗಲೇ ಪಕ್ಷದ ಆಂತರಿಕ ಜನರಲ್ಲಿ ಸಾಕಷ್ಟು ಚರ್ಚಿಸಲ್ಪಡುತ್ತಿದೆ
KannadWWW.publicvahini.com
ಕಾಂಗ್ರೆಸ್ ಪಕ್ಷದಲ್ಲಿ (Congress Party) ಅದರ ಅಧ್ಯಕ್ಷ ಸ್ಥಾನವನ್ನು (President position) 1998 ರ ನಂತರದಿಂದ ಯಾವಾಗಲೂ ಗಾಂಧಿ ಮನೆತನದವರಿಂದಲೇ ನಡೆಸಿಕೊಂಡು ಬಂದಿರುವುದು ಬಹುತೇಕ ಎಲ್ಲರಿಗೂ ಗೊತ್ತಿರುವ ವಿಚಾರವೇ ಆಗಿದೆ. ಆದರೆ, ಈ ಬಾರಿ ಹೊಸ ತಿರುವು ಪಕ್ಷಕ್ಕೆ ಸಿಗಲಿದೆ ಎಂಬ ವಿಚಾರ ಹುಬ್ಬೇರಿಸುವಂತೆ ಮಾಡಿರುವುದು ಸಹ ಅಷ್ಟೇ ಸತ್ಯ. ಸದ್ಯ, ಮುಂದಿನ ತಿಂಗಳಿನಲ್ಲಿ ಕಾಂಗ್ರೆಸ್ ಪಕ್ಷದ ಈ ಉನ್ನತ ಸ್ಥಾನವನ್ನು ಅಲಂಕರಿಸಲು ಪಕ್ಷದ ಹಿರಿಯ ನಾಯಕರುಗಳಲ್ಲಿಬ್ಬರಾದ ರಾಜಸ್ಥಾನದ ಸಿಎಂ ಅಶೋಕ್ ಗೆಹ್ಲೋಟ್ (Rajasthan CM Ashok Gehlot) ಹಾಗೂ ಶಶಿ ಥರೂರ್ ಮತದಾನದಲ್ಲಿ ಸ್ಪರ್ಧಿಸಲಿದ್ದಾರೆ. ಈ ಸುದ್ದಿಯು ಈಗಾಗಲೇ ಪಕ್ಷದ ಆಂತರಿಕ ಜನರಲ್ಲಿ ಸಾಕಷ್ಟು ಚರ್ಚಿಸಲ್ಪಡುತ್ತಿದೆ
ಹಲವರು ಇದರಿಂದ ಮತ್ತೆ ಪಕ್ಷ ತನ್ನ ಗತಕಾಲದ ಬಲಿಷ್ಠತೆಯನ್ನು ಮರಳಿ ಪಡೆಯಬಹುದೆಂಬ ವಿಶ್ವಾಸದಲ್ಲಿದ್ದರೆ ಇನ್ನೂ ಕೆಲವರು ಈ ಬಗ್ಗೆ ಸಾಕಷ್ಟು ಅನುಮಾನವನ್ನು ವ್ಯಕ್ತಪಡಿಸುತ್ತಿದ್ದಾರೆನ್ನಲಾಗಿದೆ. ಏಕೆಂದರೆ, ಗಾಂಧಿ ಕುಟುಂಬವು ತನ್ನ ಅಧ್ಯಕ್ಷೀಯ ಆಡಳಿತದ ಮೂಲಕವೇ ದೇಶವ್ಯಾಪಿ ಹೆಚ್ಚು ವರ್ಚಸ್ಸನ್ನು ಹೊಂದಿದೆ ಎಂಬುದು ಅವರ ನಂಬಿಕೆಯಾಗಿ
ಧನಾತ್ಮಕ ಪರಿಣಾಮಗ
ಈಗಾಗಲೇ ಕುಟುಂಬ ರಾಜಕಾರಣದ ಬಗ್ಗೆ ಕಾಂಗ್ರೆಸ್ ಸಾಕಷ್ಟು ಟೀಕೆಗಳನ್ನು ಎದುರಿಸುತ್ತ ಬಂದಿರುವುದು ಎಲ್ಲರಿಗೂ ಗೊತ್ತಿರುವ ವಿಚಾರವೇ ಆಗಿದೆ. ಹಾಗಾಗಿ, 1998ರ ನಂತರ ಇದೇ ಮೊದಲ ಬಾರಿಗೆ ಗಾಂಧಿಯಲ್ಲದ ಕುಟುಂಬದವರು ಪಕ್ಷದ ಉನ್ನತ ಸ್ಥಾನ ಹಿಡಿಯುವ ಅವಕಾಶ ಪಡೆದಿರುವುದರಿಂದ ಪಕ್ಷವು ಈ ಬಾರಿ "ಕುಟುಂಬ ರಾಜಕಾರಣ" ಎಂಬ ಅಂಕಿತದಿಂದ ಹೊರಬರಲು ಇದು ಉತ್ತಮ ಅವಕಾಶವಾಗಿದೆ ಎನ್ನಬಹುದು. ಈ ಅಸ್ತ್ರದ ಮೂಲಕ ಪಕ್ಷವು 2024ರ ಚುನಾವಣೆಯನ್ನು ಇನ್ನಷ್ಟು ಆತ್ಮವಿಶ್ವಾಸದಿಂದ ಎದುರಿಸಬಹುದೆಂದು ಅಭಿಪ್ರಾಯ ವ್ಯಕ್ತವಾಗಿದೆ
ಇದನ್ನೂ ಓದಿ: Congress President Election: ಗಾಂಧಿ ಕುಟುಂಬದ ಯಾರೂ ಕಾಂಗ್ರೆಸ್ ಅಧ್ಯಕ್ಷರಾಗಲ್ಲ; ಅಶೋಕ್ ಗೆಹ್ಲ
71 ರ ಪ್ರಾಯದ ಗೆಹ್ಲೋಟ್ ಅವರು ಹಿಂದುಳಿದ ವರ್ಗದ ಸಮುದಾಯವನ್ನು ಪ್ರತಿನಿಧಿಸುವವರಾಗಿದ್ದು ಕಾಂಗ್ರೆಸ್ ಮುಖಂಡರ ಪ್ರಕಾರ ಅವರು ಸದ್ಯದ ಪ್ರಧಾನಿ ನರೇಂದ್ರ ಮೋದಿ ಅವರಿಗೆ ತಕ್ಕ ಮಟ್ಟಿಗೆ ಪ್ರತಿಸ್ಪರ್ಧೆ ಒಡ್ಡಲಿದ್ದಾರೆ ಎಂಬ ವಿಶ್ವಾಸವಿದೆ. ದೇಶದಲ್ಲಿ ಅತಿ ಹೆಚ್ಚು ಮತದಾರರ ಸಮುದಾಯ ಹಿಂದುಳಿದ ವರ್ಗದವರೇ ಆಗಿರುವುದು ಗೆಹ್ಲೋಟ್ ಅವರನ್ನು ನೆಚ್ಚಿನ ಅಭ್ಯರ್ಥಿಯನ್ನಾಗಿ ಮಾಡಿ
ಬಿಜೆಪಿಯೊಂದಿಗೆ ಪ್ರತಿಸ್ಪರ್ಧಿಸಲು ಹೊಸ ಮಾರ್ಗಗಳನ್ನು ಅನ್ವೇಷಿಸುತ್ತಿರುವ ಕಾಂಗ್ರೆ
ಗೆಹ್ಲೋಟ್ ಅವರನ್ನು ಮಂಚೂಣಿಗೆ ತರುವುದರ ಮೂಲಕ ಉತ್ತರ ಭಾರತದಲ್ಲಿ ಕಾಂಗ್ರೆಸ್ ವರ್ಚಸ್ಸನ್ನು ಹೆಚ್ಚಿನ ಮಟ್ಟಿಗೆ ಏರಿಸಬಹುದೆಂಬ ಲೆಕ್ಕಾಚಾರವೂ ಇದ್ದು, ಕಾಂಗ್ರೆಸ್-ಬಿಜೆಪಿ ನೇರವಾಗಿ ಸ್ಪರ್ಧಿಸುವ ಆರು ಪ್ರಮುಖ ರಾಜ್ಯಗಳಲ್ಲಿ ರಾಜಕೀಯ ಸಮೀಕರಣದಲ್ಲಿ ಹೆಚ್ಚಿನ ತಿರುವು ಸಾಧಿಸಬಹುದಾದ ಸಾಧ್ಯತೆ ಇದೆ ಎಂಬುದು ಹಿರಿಯ ನಾಯಕರ ಹಾಗೂ ವಿಶ್ಲೇಷಕರ ಲೆಕ್ಕಾಚಾರವಾಗಿದೆ
ಸದ್ಯ, ಕಾಂಗ್ರೆಸ್ ದಕ್ಷಿಣ ಭಾರತದತ್ತ ಹೆಚ್ಚಿನ ತಿರುವನ್ನು ಹೊಂದಿದೆ. ಏಕೆಂದರೆ ರಾಹುಲ್ ಗಾಂಧಿಯವರು ಕೇರಳದ ವಯನಾಡ್ ಕ್ಷೇತ್ರದಿಂದ ಲೋಕಸಭೆಯನ್ನು ಪ್ರತಿನಿಧಿಸುತ್ತಿದ್ದರೆ, ಪ್ರಮುಖ ವಿರೋಧ ಪಕ್ಷದ ನಾಯಕನಾಗಿರುವ ಖರ್ಗೆಯವರು ಕರ್ನಾಟಕದವರಾಗಿದ್ದಾರೆ. ಅಲ್ಲದೆ, ಪಕ್ಷದ ಎರಡನೇ ದೊಡ್ಡ ಹುದ್ದೆಯನ್ನು ನಿಭಾಯಿಸುತ್ತಿರುವ ವೇಣುಗೋಪಾಲ್ ಅವರೂ ಸಹ ಕೇರಳ ಮೂಲದವರಾಗಿದ್ದಾರೆ
ಇದೀಗ ಮುಂಬರುವ ಸಮಯದಲ್ಲಿ ಪಕ್ಷವು ಹೊಸ ನಾಯಕನ ನೇತೃತ್ವದಲ್ಲಿ ಬಿಜೆಪಿಯೊಂದಿಗೆ ಪ್ರತಿಸ್ಪರ್ಧಿಸಲು ಹೊಸ ಮಾರ್ಗಗಳನ್ನು ಅನ್ವೇಷಿಸಲಿದೆ. ಕಳೆದ ಎರಡು ವರ್ಷಗಳಲ್ಲಿ ಪಕ್ಷವು ಯಾವುದೇ ಅಸ್ಸೆಂಬ್ಲಿ ಚುನಾವಣೆ ಗೆಲ್ಲದೆ ಇರುವುದು ಕಳವಳಕಾರಿ ಸಂಗತಿಯಾಗಿದ್ದು ಅದನ್ನು ಕೊನೆಗೊಳಿಸುವ ನಿರೀಕ್ಷೆಯಲ್ಲಿ ಪಕ್ಷವು ಹೊಸ ಅಧ್ಯಕ್ಷರ ನೇತೃತ್ವದಲ್ಲಿ ಸಜ್ಜಾಗುತ್ತಿದೆ ಎಂದಷ್ಟೇ ಹೇಳಬಹು
ಸಮಸ್ಯೆ
ಹಲವು ಕಾಂಗ್ರೆಸ್ ನಾಯಕರ ಪ್ರಕಾರ, ಕಾಂಗ್ರೆಸ್ ಪಕ್ಷವು ಗಾಂಧಿ ಕುಟುಂಬದ ಸದಸ್ಯರಿಂದಲೇ ವ್ಯಾಪಕವಾಗಿ ಎಲ್ಲೆಡೆ ವರ್ಚಾಸ್ಸನ್ನು ಗಳಿಸಿದ್ದು ಇದೀಗ ಗಾಂಧಿಯಲ್ಲದ ಕುಟುಂಬದವರ ನೇತೃತ್ವದಲ್ಲಿ ಪಕ್ಷವು ತನ್ನ ಮುಂಚಿನ ರೀತಿಯಂತೆ ಎಲ್ಲರಿಂದಲೂ ಸ್ವೀಕರಿಸಲ್ಪಡುವುದೇ ಎಂಬ ಗೊಂದಲದಲ್ಲಿದ್ದಾರೆ ಎನ್ನಲಾಗಿದೆ. ಕಳೆದ 24 ವರ್ಷಗಳಲ್ಲಿ ಗಾಂಧಿ ಕುಟುಂಬದವರು ಪಕ್ಷಕ್ಕೆ ಒಂದು ನಿರ್ದಿಷ್ಟವಾದ ರಚನೆಯನ್ನು ನೀಡಿದ್ದಾರೆ. ಅವರು ಪಕ್ಷದ ನಿರ್ಣಾಯಕ ಅಂಶಗಳನ್ನು ಅನುಷ್ಠಾನಗೊಳಿಸುವ ದೊಡ್ಡ ಸಮಿತಿಯಲ್ಲಿ ಸಕ್ರಿಯವಾಗಿರುವುದು ಇತರರ ಮೇಲೆ ಪ್ರಭಾವ ಬೀರುತ್ತದೆ. ಈ ನಿಟ್ಟಿನಲ್ಲಿ ವಿಶ್ಲೇಷಿಸಿದಾಗ ಹೊಸ ನಾಯಕತ್ವವು ಈ ರೀತಿಯ ಪ್ರಭಾವವನ್ನು ಪಕ್ಷದ ಎಲ್ಲ ಸದಸ್ಯರುಗಳ ಮೇಲೆ ಬೀರುತ್ತದೆಯೇ ಎಂಬ ಪ್ರಶ್ನೆ ಉದ್ಭವಿಸುವಂತೆ ಮಾಡಿದೆ
ಈಗ ಲೋಕಸಭೆ ಚುಣಾವಣೆಗೆ ಕೇವಲ ಎರಡು ವರ್ಷಗಳು ಮಾತ್ರ ಬಾಕಿ ಉಳಿದಿವೆ. ಈ ಕಡಿಮೆ ಅವಧಿಯಲ್ಲೇ ಹೊಸ ಅಧ್ಯಕ್ಷರು ಗಾಂಧಿ ಕುಟುಂಬದ ಸರ್ವ ಬೆಂಬಲವನ್ನು ಗಳಿಸಿ ಕಾಂಗ್ರೆಸ್ ಪರ ಜನರ ನಂಬಿಕೆಯನ್ನೂ ದೇಶವ್ಯಾಪಿಯಾಗಿ ಗಳಿಸಬೇಕಾಗಿದೆ. ಇದು ಒಂದು ದೊಡ್ಡ ಸವಾಲು ಅಂತಲೂ ಸಹ ಹೇಳಬಹುದಾಗಿ
ಇದನ್ನೂ ಓದಿ: Viral Video: ಬರಿಗೈಲಿ ಟಾಯ್ಲೆಟ್ ಕ್ಲೀನ್ ಮಾಡಿದ ಬಿಜೆಪಿ ಸಂಸದ! ವಿಡಿಯೋ ಫುಲ್ ವೈ
ಇನ್ನು, ಚುನಾವಣೆಗಳಲ್ಲಿ ಕಾಂಗ್ರೆಸ್ ಪಕ್ಷ ಸೋತಾಗ ಗಾಂಧಿ ಕುಟುಂಬದವರ ವರ್ಚಸ್ಸಿಗೆ ಅಷ್ಟೊಂದೇನೂ ಘಾಸಿಯಾಗುತ್ತಿಲ್ಲದಿದ್ದುದನ್ನು ನೋಡಬಹುದಾಗಿದೆ. ಏಕೆಂದರೆ, ಆ ಸೋಲನ್ನು ಪಕ್ಷದಲ್ಲಿ ಆಯಾ ಪ್ರದೇಶಗಳಲ್ಲಿ ಕಾಂಗ್ರೆಸ್ ನಾಯಕರಿಂದಾದ ಕಳಪೆ ಪ್ರದರ್ಶನ ಎಂದೇ ಬಿಂಬಿಸಲಾಗುತ್ತಿತ್ತು. ಆದರೆ, ಈ ರೀತಿಯ ಒಂದು ಎಕ್ಸ್ ಕ್ಯೂಸ್ ಹೊಸ ಅಧ್ಯಕ್ಷರಿಗೆ ದೊರಕುವುದು ಅನುಮಾನಾಸ್ಪದವಾಗಿದೆ. ಕಾಂಗ್ರೆಸ್ ಮತ್ತೆ ಸೋತ್ತಿದ್ದೆ ಆದಲ್ಲಿ ಹೊಸ ಅಧ್ಯಕ್ಷರನ್ನೇ ಅದಕ್ಕೆ ಹೊಣೆಗಾರರನ್ನಾಗಿ ಮಾಡಬಹುದಾದ ಎಲ್ಲ ಸಾಧ್ಯತೆಯೂ ಇದೆ. ರಲ್ದೆ..ಗಳುದು...ಸ್ ದೆ.ಟ್.ಳುದೆ.LT:a.ನ್ನಾಗಿ ಮಾಡಬಹುದಾದ ಎಲ್ಲ ಸಾಧ್ಯತೆಯೂ ಇದೆ.
Post a Comment