Congress President Election: ಗಾಂಧಿ ಕುಟುಂಬದ ಯಾರೂ ಕಾಂಗ್ರೆಸ್ ಅಧ್ಯಕ್ಷರಾಗಲ್ಲ; ಅಶೋಕ್ ಗೆಹ್ಲೋಟ್


  ಎಐಸಿಸಿ ನಾಯಕ ರಾಹುಲ್ ಗಾಂಧಿ

ಗಾಂಧಿ ಕುಟುಂಬದ ಮೊದಲ ಆಯ್ಕೆಯಾಗಿ ಪರಿಗಣಿಸಲ್ಪಟ್ಟಿರುವ ಅಶೋಕ್ ಗೆಹ್ಲೋಟ್ ಅವರು ಮುಂದಿನ ಅಧ್ಯಕ್ಷರಾಗುವ ಪ್ರಬಲ ಅವಕಾಶವನ್ನು ಹೊಂದಿದ್ದಾರೆ,

ದೆಹಲಿ: ಗಾಂಧಿ ಕುಟುಂಬದಿಂದ ಯಾರೂ ಕಾಂಗ್ರೆಸ್ ಪಕ್ಷದ ಅಧ್ಯಕ್ಷರಾಗಬಾರದೆಂದು (Congress President Poll) ಸ್ವತಃ ರಾಹುಲ್ ಗಾಂಧಿಯವರೇ (Rahul Gandhi) ಸ್ಪಷ್ಟಪಡಿಸಿದ್ದಾರೆ ಎಂದು ಕಾಂಗ್ರೆಸ್ ಅಧ್ಯಕ್ಷ ಅಶೋಕ್ ಗೆಹ್ಲೋಟ್ (Ashok Gehlot) ತಿಳಿಸಿದ್ದಾರೆ. ಕಾಂಗ್ರೆಸ್ ಪಕ್ಷದ ಅಧ್ಯಕ್ಷ ಸ್ಥಾನಕ್ಕೆ ಸ್ಪರ್ಧಿಸುವುದಾಗಿ (Congress President Election) ಖಚಿತಪಡಿಸಿದ ಅವರು ರಾಜಸ್ಥಾನದ ಮುಖ್ಯಮಂತ್ರಿಯಾಗಿ ಯಾರನ್ನು ಬದಲಿಸಬೇಕು ಎಂಬುದರ ಕುರಿತು ಯಾವುದೇ ನಿರ್ಧಾರವನ್ನು ಸೋನಿಯಾ ಗಾಂಧಿ (Sonia Gandhi) ನಿರ್ಧರಿಸುತ್ತಾರೆ ಎಂದು ಸಹ ತಿಳಿಸಿದ್ದಾರೆ.

ಸಂಸದ ರಾಹುಲ್ ಗಾಂಧಿ ಅವರನ್ನು ಕೇರಳದಲ್ಲಿ ಭೇಟಿಯಾಗಿದ್ದ ರಾಜಸ್ಥಾನ ಮುಖ್ಯಮಂತ್ರಿ ಅಶೋಕ್ ಗೆಹ್ಲೋಟ್ ಭಾರತ್ ಜೋಡೋ ಯಾತ್ರೆಯಲ್ಲಿ ಪಾಲ್ಗೊಂಡಿದ್ದರು.

 ಚುನಾವಣೆ ಯಾವಾಗ? ಫಲಿತಾಂಶ ಯಾವಾಗ ಸಿಗುತ್ತದೆ?

ಕಾಂಗ್ರೆಸ್ ಅಧ್ಯಕ್ಷರ ಆಯ್ಕೆಗೆ ಘೋಷಿತ ವೇಳಾಪಟ್ಟಿಯ ಪ್ರಕಾರ, ಅಧಿಸೂಚನೆ ಹೊರಡಿಸಿದ ನಂತರ, ಈಗ ನಾಮಪತ್ರ ಸಲ್ಲಿಸುವ ಪ್ರಕ್ರಿಯೆಯು ಸೆಪ್ಟೆಂಬರ್ 24 ರಿಂದ 30 ರವರೆಗೆ ನಡೆಯಲಿದೆ. ನಾಮಪತ್ರ ಹಿಂಪಡೆಯಲು ಅಕ್ಟೋಬರ್ 8 ಕೊನೆಯ ದಿನವಾಗಿದೆ. ಒಂದಕ್ಕಿಂತ ಹೆಚ್ಚು ಅಭ್ಯರ್ಥಿಗಳಿದ್ದಲ್ಲಿ ಅಕ್ಟೋಬರ್ 17 ರಂದು ಮತದಾನ ನಡೆಯಲಿದ್ದು, ಅಕ್ಟೋಬರ್ 19 ರಂದು ಫಲಿತಾಂಶ ಪ್ರಕಟವಾಗಲಿದೆ. ಬುಧವಾರ, ಅಧಿಸೂಚನೆ ಹೊರಡಿಸುವ ಒಂದು ದಿನ ಮೊದಲು, ರಾಜಸ್ಥಾನ ಮುಖ್ಯಮಂತ್ರಿ ಗೆಹ್ಲೋಟ್ ಮತ್ತು ಪಕ್ಷದ ಹಿರಿಯ ನಾಯಕ ಶಶಿ ತರೂರ್ ಚುನಾವಣಾ ಕಣಕ್ಕೆ ಇಳಿಯುವ ಸ್ಪಷ್ಟ ಸಂಕೇತ ನೀಡಿದ ಬಳಿಕ 22 ವರ್ಷಗಳ ನಂತರ ದೇಶದ ಅತ್ಯಂತ ಹಳೆಯ ಪಕ್ಷದ ಅಧ್ಯಕ್ಷರನ್ನು ಚುನಾವಣೆ ಮೂಲಕ ಆಯ್ಕೆ ಮಾಡುವುದು ಖಚಿತವಾಗಿದೆ.

WWW.publicvahini.com

ಇದನ್ನೂ ಓದಿ: India China Relationship: ಭಾರತಕ್ಕೆ ಇನ್ನಿಲ್ಲ ಚೀನಾದ ಹಂಗು! ಪ್ರಧಾನಿ ಮೋದಿ ಮಾಸ್ಟರ್​ಪ್ಲಾನ್

ಇತಿಹಾಸ ಹೀಗಿದೆ

2000ನೇ ಇಸವಿಯಲ್ಲಿ ಸೋನಿಯಾ ಗಾಂಧಿ ಮತ್ತು ಜಿತೇಂದ್ರ ಪ್ರಸಾದ್ ನಡುವೆ ಪೈಪೋಟಿ ನಡೆದಿದ್ದು, ಪ್ರಸಾದ್ ಸೋಲನುಭವಿಸಿದ್ದರು. ಈ ಹಿಂದೆ 1997ರಲ್ಲಿ ಅಧ್ಯಕ್ಷ ಸ್ಥಾನಕ್ಕೆ ಸೀತಾರಾಮ್ ಕೇಸರಿ, ಶರದ್ ಪವಾರ್ ಹಾಗೂ ರಾಜೇಶ್ ಪೈಲಟ್ ನಡುವೆ ಪೈಪೋಟಿ ಏರ್ಪಟ್ಟಿದ್ದು, ಕೇಸರಿ ಗೆದ್ದಿದ್ದರು.

ಈ ಸ್ಥಾನದ ರೇಸ್‌ನಲ್ಲಿ ಮುಂಚೂಣಿಯಲ್ಲಿರುವ ರಾಜಸ್ಥಾನ ಮುಖ್ಯಮಂತ್ರಿ ಅಶೋಕ್ ಗೆಹ್ಲೋಟ್ (Ashok Gehlot) ತಮ್ಮ ನಡೆ ಬದಲಾಯಿಸುತ್ತಿದ್ದಾರೆ. ಗಾಂಧಿ ಕುಟುಂಬದ ಮೊದಲ ಆಯ್ಕೆಯಾಗಿ ಪರಿಗಣಿಸಲ್ಪಟ್ಟಿರುವ ಅಶೋಕ್ ಗೆಹ್ಲೋಟ್ ಅವರು ಮುಂದಿನ ಅಧ್ಯಕ್ಷರಾಗುವ ಪ್ರಬಲ ಅವಕಾಶವನ್ನು ಹೊಂದಿದ್ದಾರೆ.

ರಾಹುಲ್ ಮಾತಿಗೆ ಗೆಹ್ಲೋಟ್ ಸಹಮತ

'ಒಬ್ಬ ವ್ಯಕ್ತಿ, ಒಂದು ಹುದ್ದೆ' ಪರಿಕಲ್ಪನೆಯ ವಿಚಾರವಾಗಿ ಗುರುವಾರ ರಾಹುಲ್ ಗಾಂಧಿ ಉಲ್ಲೇಖಿಸಿದ್ದರು. ನಾವು ತೆಗೆದುಕೊಂಡ ನಿರ್ಧಾರವು ಉದಯಪುರದಲ್ಲಿ ನಾವು ತೆಗೆದುಕೊಂಡಿರುವುದು ಕಾಂಗ್ರೆಸ್ ಪಕ್ಷದ ಬದ್ಧತೆಯಾಗಿದೆ. ಹಾಗಾಗಿ ಬದ್ಧತೆಯನ್ನು ಉಳಿಸಿಕೊಳ್ಳಲಾಗುವುದು ಎಂದು ನಾನು ಭಾವಿಸುತ್ತೇನೆ ಎಂದು ಅಶೋಕ್ ಗೆಹ್ಲೋಟ್ ಹೇಳಿದ್ದಾರೆ. ಕಾಂಗ್ರೆಸ್ ಅಧ್ಯಕ್ಷರು ಮುಖ್ಯಮಂತ್ರಿ ಆಗಲ್ಲ ಎಂದೂ ತಿಳಿಸಿದ್ದಾರೆ. 22 ವರ್ಷಗಳ ನಂತರ ಕಾಂಗ್ರೆಸ್ ಅಧ್ಯಕ್ಷ ಸ್ಥಾನಕ್ಕೆ ಚುನಾವಣಾ ಸ್ಪರ್ಧೆಯ ಪ್ರಬಲ ಸಾಧ್ಯತೆಯ ನಡುವೆ ಗುರುವಾರ ಅಧಿಸೂಚನೆ ಹೊರಡಿಸಲಾಗಿದೆ. ಇದರೊಂದಿಗೆ ಚುನಾವಣಾ ಪ್ರಕ್ರಿಯೆ ಪ್ರಾರಂಭವಾಯಿತು ಎಂಬುವುದು ಉಲ್ಲೇಖನೀಯ.

ಸ್ವಂತ ನಾಡಿನಲ್ಲೇ ತರೂರ್​ಗೆ ಸಿಗುತ್ತಿಲ್ಲ ಬೆಂಬಲ!

ಕಾಂಗ್ರೆಸ್ ಅಧ್ಯಕ್ಷ ಸ್ಥಾನದ ಚುನಾವಣೆ ಭಾರೀ ಕುತೂಹಲ ಮೂಡಿಸಿದೆ. ಕಾಂಗ್ರೆಸ್ ಸಂಸದ ಶಶಿ ತರೂರ್ (Congress MP Shashi Tharoor) ಚುನಾವಣೆಗೆ ನಿಲ್ಲುವ ಮನಸ್ಸು ಮಾಡಿದ್ದಾರೆ. ಹೀಗಿದ್ದರೂ ಅವರಿಗೆ ತಮ್ಮ ರಾಜ್ಯವಾದ ಕೇರಳದಿಂದ ಬೆಂಬಲ ಸಿಗುತ್ತಿಲ್ಲ.

ಇದನ್ನೂ ಓದಿ: Shocking: ಕಿಸೆಯಲ್ಲಿ ಕಾಂಡೋಮ್ ಸಿಕ್ಕಿದ್ದಕ್ಕೆ ಗುಂಡಿಕ್ಕಿದ ಪೊಲೀಸ್!

ರಾಹುಲ್ ಗಾಂಧಿಯೇಮತ್ತೆ ಅಧ್ಯಕ್ಷರಾಗಬೇಕೆಂದು ಕೇರಳ ಕಾಂಗ್ರೆಸ್ ನಾಯಕರು ಬಯಸುತ್ತಿದ್ದಾರೆ. ಶಶಿ ತರೂರ್‌ಗೆ ಇದು ಹಿನ್ನಡೆಗಿಂತ ಕಡಿಮೆಯಿಲ್ಲ. ಅಂದಹಾಗೆ, ಕೇರಳಕ್ಕೂ ಮುನ್ನ 7 ರಾಜ್ಯಗಳ ಕಾಂಗ್ರೆಸ್ ಸಮಿತಿಗಳೂ ರಾಹುಲ್ ಅವರನ್ನು ಅಧ್ಯಕ್ಷರನ್ನಾಗಿಸಲು ಮುಂದಾಗಿವೆ.

Post a Comment

Previous Post Next Post